ಭಗವದ್ ರೂಪದ ಧ್ಯಾನ
ಭಗವದ್ ರೂಪದ ಧ್ಯಾನ
ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ, ಏಕಾಗ್ರತೆಯನ್ನು ಉತ್ತೇಜಿಸಲು, ಇಂದ್ರಿಯಗಳನ್ನು ನಿಯಂತ್ರಿಸುವುದು ಅವಶ್ಯಕ. ಇದಕ್ಕಾಗಿ ಗುಂಪು 1 ವಯಸ್ಸಿನ ಬಾಲವಿಕಾಸದ ಮಕ್ಕಳಿಗೆ “ಮನೋ-ದೃಶ್ಯೀಕರಣ” ದ ವಿಧಾನವು ಅತ್ಯುತ್ತಮವಾದದ್ದು. ಬಾಲವಿಕಾಸದ ಗುರುಗಳು ದೇವರ ಭೌತಿಕ ರೂಪ ಲಕ್ಷಣಗಳನ್ನು ಮಕ್ಕಳ ಮನಸ್ಸಿನಲ್ಲಿ ಛಾಪು ಮೂಡುವ ರೀತಿಯಲ್ಲಿ ವಿವರಿಸಬಹುದು.
ನಿರ್ದೇಶಿತ ದೃಶ್ಯೀಕರಣ – ಇದರ ಒಂದು ಪ್ರಾತ್ಯಕ್ಷಿಕೆ
ಸಾಯಿರಾಮ್ ಪ್ರೀತಿಯ ಮಕ್ಕಳೇ!
ನಮ್ಮ ಪ್ರೀತಿಯ ಸ್ವಾಮಿಯ ಚಿತ್ರವನ್ನು ನಾನು ನಿಮಗೆ ತೋರಿಸುತ್ತೇನೆ. ಈಗ, ನೀವೆಲ್ಲರೂ ಈ ಚಿತ್ರವನ್ನು ಗಮನವಿಟ್ಟು ನೋಡಿರಿ. ಮಕ್ಕಳೇ, ಈಗ ನಿಧಾನವಾಗಿ ನಿಮ್ಮ ಕಣ್ಣುಗಳನ್ನು ಮುಚ್ಚಿ, ನಿಮ್ಮ ಕೈಗಳನ್ನು ಮುಂದೆ ಚಾಚಿ. ಇತರರನ್ನು ಮುಟ್ಟಬೇಡಿ. ನಿಮ್ಮ ಬೆರಳುಗಳನ್ನು ಚಿನ್ಮುದ್ರೆಯಲ್ಲಿ ನಿಮ್ಮ ತೊಡೆಯ ಮೇಲೆ ಇರಿಸಿ.
ನೇರವಾಗಿ ಕುಳಿತುಕೊಳ್ಳಿ ಮತ್ತು ನಿಮ್ಮ ಬೆನ್ನುಹುರಿ ನೆಟ್ಟಗೆ ಇರಲಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ.…ಎಲ್ಲಾ ಆಲೋಚನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿ… ಇನ್ನೊಂದು ಆಳವಾದ ಉಸಿರನ್ನು ತೆಗೆದುಕೊಳ್ಳಿ.
ಈಗ, ನೀವೆಲ್ಲರೂ ಸಾಯಿ ಕುಲ್ವಂತ್ ಹಾಲ್‍ನಲ್ಲಿ ಸ್ವಾಮಿಯ ಸುಂದರ ರೂಪವನ್ನು ನೋಡಲು ಕಾಯುತ್ತಿದ್ದೀರಿ ಎಂದು ನಿಧಾನವಾಗಿ ಮನಸ್ಸಿನಲ್ಲಿ ದೃಶ್ಯೀಕರಿಸಿ.
ನೋಡಿ! ಸ್ವಾಮಿ ನಿಧಾನವಾಗಿ ನಿಮ್ಮ ಮುಂದೆ ನಡೆಯುತ್ತಿದ್ದಾರೆ.
̧ಸ್ವಾಮಿಯ ಮುಖದಿಂದ ಪ್ರೇಮ ಮತ್ತು ದಿವ್ಯ ತೇಜಸ್ಸು ಹರಿಯುತ್ತಿದೆ. ಸ್ವಾಮಿಯ ಶಿರವನ್ನು ಕಿರೀಟದಂತೆ ಸುತ್ತುವರೆದಿರುವ ಮೃದುವಾದ ಕೂದಲಿನ ಪ್ರಭೆ ಅಲೌಕಿಕವಾಗಿದೆ. ಸ್ವಾಮಿಯ ಪ್ರಕಾಶಮಾನವಾದ ಕಣ್ಣುಗಳು ಈಗ ನಿಮ್ಮ ಕಡೆಗೆ ತಿರುಗುತ್ತವೆ. ಸ್ವಾಮಿಯು ಈಗ ನಿಮ್ಮನ್ನು
̧ನೋಡುತ್ತಾರೆ ಮತ್ತು ನೀವು ತುಂಬಾ ಸಂತೋಷಗೊಂಡಿದ್ದೀರಿ. ಅವರ ಕಣ್ಣುಗಳು ಕೆಲವೇ ಸೆಕೆಂಡುಗಳ ಕಾಲ ನಿಮ್ಮ ಕಣ್ಣುಗಳೊಂದಿಗೆ ಬೆಸೆದುಕೊಂಡಿದ್ದರೂ ಸಹ, ಸ್ವಲ್ಪ ಸಮಯದವರೆಗೆ ನಿಮ್ಮನ್ನು ಆಳವಾಗಿ ನೋಡುತ್ತಿದ್ದಂತೆ ಭಾಸವಾಗುತ್ತಿದೆ. ಅವರು ನಿಮ್ಮನ್ನು ನೋಡಿ ಮುಗುಳ್ನಗುತ್ತಾರೆ ಮತ್ತು ನೀವು ಪ್ರೀತಿಯಿಂದ ಆನಂದತುಂದಿಲರಾಗುತ್ತೀರಿ..
ಸ್ವಾಮಿಯು ಪ್ರೇಮಸ್ವರೂಪಿ. ಅವರು ನಡೆದಾಡುವ ಪ್ರೇಮದ ಸಾಕಾರಮೂರ್ತಿ ಸ್ವಾಮಿಯ ಉದ್ದನೆಯ ಕೇಸರಿ ಬಣ್ಣದ ನಿಲುವಂಗಿಯು ಗಾಳಿಯಲ್ಲಿ ಹರಿದಾಡುತ್ತಿದೆ ಮತ್ತು ಮೃದುವಾದ ಪಾದಗಳು ಉಡುಪಿನ ತಳದಲ್ಲಿ ಭಾಗಶಃ ಗೋಚರಿಸುತ್ತಿದೆ.
̈ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ಈ ದೈವೀ ದರ್ಶನದಿಂದ ನಾವೆಲ್ಲರೂ ವಿಶೇಷವಾಗಿ ಅನುಗ್ರಹಿತರಾಗಿದ್ದೇವೆ. ಈಗ ನಾವು ಈ ಪ್ರಾರ್ಥನೆಯನ್ನು ಅವರ ಪಾದಕಮಲದಲ್ಲಿ ಭಕ್ತಿ ಮತ್ತು ನಂಬಿಕೆಯೊಂದಿಗೆ ಅರ್ಪಿಸೋಣ…
ಓ ಸ್ವಾಮಿ! ನನ್ನ ಪೋಷಕರು, ಗುರುಗಳು, ನನ್ನ ಸಂಬಂಧಿಕರು ಮತ್ತು ಸ್ನೇಹಿತರು ಉತ್ತಮ ಆರೋಗ್ಯದಿಂದ ಇರುವಂತೆ ಆಶೀರ್ವದಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ.
ಓ ಸ್ವಾಮಿ! ದಯವಿಟ್ಟು ನನ್ನ ವಿದ್ಯಾಭ್ಯಾಸದಲ್ಲಿ ಗಮನಹರಿಸಲು ಸಹಾಯ ಮಾಡಿ.
ಓ ಸ್ವಾಮಿ! ನಿನ್ನ ಪಾದಕಮಲಗಳನ್ನು ನಾನು ಯಾವಾಗಲೂ ಸ್ಮರಿಸಿಕೊಳ್ಳುತ್ತೇನೆ…
ಸಮಸ್ತ ಲೋಕಾ ಸುಖಿನೋ ಭವಂತು
ಈಗ ನಿಧಾನವಾಗಿ ಕಣ್ಣು ತೆರೆಯಿರಿ.
ನಿರ್ದೇಶಿತ ದೃಶ್ಯೀಕರಣದ ಪ್ರಾತ್ಯಕ್ಷಿಕೆಯ ನಂತರ ತರಗತಿಯಲ್ಲಿ ಚಿಂತನೆಗೆ ಸೂಚಿಸಲಾದ ಪ್ರಶ್ನೆಗಳು
- ಸ್ವಾಮಿ ನೋಡಲು ಹೇಗಿದ್ದಾರೆ?
- ನೀವು ಈ ಅನುಭವವನ್ನು ಹೇಗೆ ಹಂಚಿಕೊಳ್ಳುವಿರಿ?