ಗೆಳೆತನ ಮತ್ತು ಸ್ವಾಥ೵ ತ್ಯಾಗ

Print Friendly, PDF & Email
ಗೆಳೆತನ ಮತ್ತು ಸ್ವಾಥ೵ ತ್ಯಾಗ

Anil and Sunil are walking together.

ಅನಿಲ ಮತ್ತು ಸುನಿಲರು ಪ್ರತಿಭಾವಂತ ಹುಡುಗರು. ಕಲಕತ್ತಾದ ಪ್ರಸಿದ್ದ ಶಾಲೆಯೊಂದರಲ್ಲಿ ಐದನೆಯ ತರಗತಿಯಲ್ಲಿ ಕಲಿಯುತ್ತಿದ್ದರು. ಅವರಿಬ್ಬರೂ ಅತ್ಯಂತ ನಿಕಟ ಸ್ನೇಹಿತರಾಗಿದ್ದರು. ಅಣ್ಣ ತಮ್ಮಂದಿರಂತೆ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ತರಗತಿಯ ಪರೀಕ್ಷೆಗಳಲ್ಲಿ ಸುನಿಲನು ಸದಾ ಮೊದಲನೆ ಸ್ಧಾನವನ್ನೂ ಅನಿಲನು ಎರಡನೆಯ ಸ್ಧಾನವನ್ನೂ ಪಡೆಯುತ್ತಿದ್ದರು. ಎಷ್ಟೇ ಪರೀಕ್ಷೆಗಳು ನಡೆದರೂ ಈ ಸ್ಧಾನಗಳು ಬದಲಾಗುತ್ತಿರಲಿಲ್ಲ.

ಹೀಗಿರುವಾಗ ಸುನಿಲನ ತಾಯಿಗೆ ದೊಡ್ಡ ಕಾಯಿಲೆ ಬಂದಿತು. ಅವನಿಗೆ ತಾಯಿ ಹೊರತು ಬೇರೆ ಬಂಧುಗಳಿರಲಿಲ್ಲ. ತಂದೆ ತೀರಿಹೋಗಿದ್ದರು. ತಾಯಿಯನ್ನು ಈ ಕಾಯಿಲೆಯಿಂದ ಪಾರು ಮಾಡಲು ಸುನಿಲನು ಹಗಲೂ, ಇರಳೂ ಸೇವೆ ಮಾಡಿದನು. ಆದರೂ ಪ್ರಯೋಜನವಾಗಲಿಲ್ಲ. ಎರಡು ತಿಂಗಳ ನಂತರ ಒಂದು ದಿನ ಆಕೆಯು ತನ್ನ ಪ್ರೀತಿಯ ಮಗನನ್ನು ದೇವರೇ ಕಾಪಾಡಬೇಕೇಂದು ಪ್ರಾರ್ಥಿಸುತ್ತಾ ತೀರಿಕೊಂಡಳು.

ಈ ಪರಿಸ್ಧಿತಿಯಲ್ಲಿ ಸುನಿಲನಿಗೆ ಸುಮಾರು ಎರಡು ತಿಂಗಳು ಶಾಲೆಗೆ ಹೋಗಲು ಸಾದ್ಯವಾಗಲಿಲ್ಲ. ಅವನು ಬಹು ಕಷ್ಟಪಟ್ಟು ವ್ಯಾಸಂಗ ಮಾಡಿದನು. ತನ್ನ ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕಾಗಿ ಅವನು ಬಹಳ ಕಷ್ಟಪಟ್ಟನು. ಆದರೆ ಮತ್ತೆ ಮತ್ತೆ ತಾಯಿಯ ನೆನಪು ಬಂದು ಓದಿಗೆ ತಡೆಯಾಗುತ್ತಿತ್ತು. ಹಾಗಾಗಿ ಈ ಸಾರಿ ಪರೀಕ್ಷೆಯಲ್ಲಿ ಅನಿಲನಿಗೆ ಪ್ರಥಮ ಸ್ಥಾನ ದೊರಕುವುದೆಂದು ಎಲ್ಲರೂ, ಸುನಿಲನೂ ಸಹ ಹೇಳುತ್ತಿದ್ದರು.

ಪರೀಕ್ಷೆ ಮುಗಿಯಿತು, ಅನಿಲನ ಉತ್ತರ ಪತ್ರಿಕೆಗಳನ್ನು ನೋಡಿದ ಉಪಾಧ್ಯಾಯರಿಗೆ ಆಶ್ಚರ್ಯವಾಯಿತು. ಪ್ರಶ್ನೆಗಳು ಸುಲಭವಾಗಿದ್ದರೂ ಕೆಲವು ಪ್ರಶ್ನೆಗಳಿಗೆ ಅನಿಲನು ಉತ್ತರಿಸಿಯೇ ಇರಲಿಲ್ಲ. ಅವರು ಅನಿಲನನ್ನು ಕರೆ ಕಳಿಸಿದರು. ಎಲ್ಲ ಪ್ರಶ್ನೆಗಳಿಗೂ ಅವನು ಏಕೆ ಉತ್ತರ ಬರೆಯಲಿಲ್ಲವೆಂದು ಕೇಳಿದರು.
ಅನಿಲನು ಒಂದು ಕ್ಷಣ ಸುಮ್ಮನೆ ನಿಂತುಕೊಂಡನು. ಗುರುಗಳೆದುರಿಗೆ ಗುಟ್ಟನ್ನು ಬಿಟ್ಟುಕೊಡಬೇಕೇ-ಬೇಡವೇ ಎಂದು ಯೋಚಿಸಿದನು.

Teacher questioning Anil.

ಕೊನೆಗೆ ದುಃಖದಿಂದ ನುಡಿದನು, “ಗುರುಗಳೇ, ಇಲ್ಲಿಯವರೆಗೆ ಪ್ರತಿವರ್ಷ ಸುನಿಲನಿಗೆ ಪ್ರಥಮ ಸ್ಥಾನ ದೊರಕುತ್ತಿರುವುದು ತಮಗೆ ಗೊತ್ತೇ ಇದೆ. ಈ ವರ್ಷ ಅವನ ಪ್ರೀತಿಯ ತಾಯಿ ತೀರಿಕೊಂಡರು. ಅವನೀಗ ಅನಾಥನು. ನನಗೆ ತಂದೆ ತಾಯಿ ಇದ್ದಾರೆ. ಇಂಥ ಪ್ರಸಂಗದಲ್ಲಿ ಪ್ರಥಮ ಸ್ಥಾನ ಕೈತಪ್ಪಿ ಹೋದರೆ ಸುನಿಲನಿಗೆ ಅದು ಇನ್ನೊಂದು ದೊಡ್ಡ ಆಘಾತವಾಗುತ್ತದೆ. ಆದ್ದರಿಂದಲೇ ನಾನು ಎರಡು ಪ್ರಶ್ನೆಗಳಿಗೆ ಉತ್ತರ ಬರೆಯಲಿಲ್ಲ. ಪ್ರಥಮ ಸ್ಥಾನವು ಸಿಕ್ಕುವುದು ಅಗತ್ಯವಲ್ಲ. ಸುನಿಲನಿಗೇ ಅದು ದೊರಕಬೇಕೆಂಬುದೇ ನನ್ನ ಆಸೆ. ಆದರಿಂದ ಅವನಿಗೆ ಉಲ್ಲಾಸ ಉಂಟಾಗಿ ತಾಯಿ ತೀರಿಕೊಂಡ ದುಃಖ ಸ್ವಲ್ಪವಾದರೂ ಕಡಿಮೆಯಾಗಬಹುದು. ಆದರೆ, ಗುರುಗಳೇ, ಈ ಗುಟ್ಟನ್ನು ದಯವಿಟ್ಟು ನಿಮ್ಮಲ್ಲೇ ಇಟ್ಟುಕೊಳ್ಳಬೇಕು ಯಾರೆದುರಿಗೂ ಬಿಟ್ಟುಕೊಡಬಾರದು. ನಾನು ಹೀಗೆ ಮಾಡಿರುವುದು ಸುನಿಲನಿಗೇನಾದರೂ ತಿಳಿದರೆ ತುಂಬಾ ದುಃಖಪಡುತ್ತಾನೆ. ಅವನು ನನ್ನ ಪ್ರೀತಿಯ ಗೆಳೆಯ. ಅವನು ಸದಾ ಸುಖಿಯಾಗಿರಬೇಕು. “ಗುರುಗಳಿಗೆ ಅನಿಲನ ಮಾತು ಕೇಳಿ ತುಂಬಾ ಸಂತೋಷವಾಯಿತು. ಅವನ ಬೆನ್ನು ತಟ್ಟಿ ಹೇಳಿದರು, “ಭೇಷ್, ಅನಿಲ, ನಿನ್ನ ವಿಷಯದಲ್ಲಿ ನನಗಿಂದು ಹಿಂದೆಂದಿಗಿಂತಲೂ ಹೆಚ್ಚಿನ ಅಭಿಮಾನ ಉಕ್ಕಿ ಬರುತ್ತಿದೆ. ನಿನ್ನ ಗೆಳೆತನ, ಪ್ರೀತಿ ತ್ಯಾಗ ತುಂಬ ಬೆಲೆಯುಳ್ಳವು. ಇವುಗಳಿಂದಲೇ ನೀನು ಒಂದು ದಿನ ದೊಡ್ಡ ವ್ಯಕ್ತಿಯಾಗುವೆ.”

ಪ್ರಶ್ನೆಗಳು:
  1. ಅನಿಲನು ಏಕೆ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಅವಕಾಶವನ್ನು ಕಳೆದುಕೊಂಡನು?
  2. ಅನಿಲನು ಏಕೆ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಅವಕಾಶವನ್ನು ಕಳೆದುಕೊಂಡನು?
  3. ಅನಿಲನು ತಾನು ಹೇಳಿದ ಗುಟ್ಟನ್ನು ಯಾರಿಗೂ ಹೇಳಬಾರದೆಂದು ಗುರುಗಳಲ್ಲಿ ಏಕೆ ಕೇಳಿಕೊಂಡನು?
  4. ಯಾರು ನಿಜವಾದ ಗೆಳೆಯರು ಎಂದು ಹೇಗೆ ಕಂಡುಹಿಡಿಯಬಹುದು? ನಿಮ್ಮ಻ಅನುಭವದಿಂದ ಕೆಲವು ಉದಾಹರಣೆಗಳನ್ನು ಕೊಡಿ.
  5. ನೀವು ಯಾವಾಗಲಾದರೂ ನಿಮ್ಮ ಗೆಳೆಯರು, ಸಹೋದರ/ಸಹೋದರಿಯರು, ಅಥವಾ ಮನೆಯ ಇತರ ಸದಸ್ಯರಿಗೋಸ್ಕರ ಏನನ್ನಾದರೂ ತ್ಯಾಗ ಮಾಡಿರುವಿರಾ? ಮಾಡಿದ್ದರೆ, ನಿಮ್ಮ ಻ಅನುಭವವನ್ನು ತಿಳಿಸಿ.

Leave a Reply

Your email address will not be published. Required fields are marked *