ನಮಸ್ತೇಸ್ತು ಶ್ಲೋಕ – ಹೆಚ್ಚಿನ ಓದುವಿಕೆ

Print Friendly, PDF & Email
ನಮಸ್ತೇಸ್ತು ಶ್ಲೋಕ – ಹೆಚ್ಚಿನ ಓದುವಿಕೆ
ಕಥೆ

ದೇವರುಗಳು ಮತ್ತು ರಾಕ್ಷಸರು ಸಾಗರವನ್ನು ಮಂಥನ ಮಾಡುತ್ತಿದ್ದಾಗ, ಅಮರತ್ವದ ದೈವಿಕ ಅಮೃತವನ್ನು ಹುಡುಕುತ್ತಾ, ಅವರು ಒಂದರ ನಂತರ ಒಂದರಂತೆ ಹದಿನಾಲ್ಕು ರತ್ನಗಳನ್ನು ಕಂಡುಕೊಂಡರು. ಒಂದು ಹಂತದಲ್ಲಿ, ಅವರು ಮಂಥನ ಮಾಡುತ್ತಿದ್ದಾಗ, ಸಾಗರದ ಮಗಳಾದ ಲಕ್ಷ್ಮೀ ದೇವಿಯು ಕಾಣಿಸಿಕೊಂಡಳು, ಅವಳು ಸೌಂದಯ೵ವೇ ಮೈವೆತ್ತಂತೆ ಇದ್ದಳು, ಸುಂದರವಾದ ಆಭರಣಗಳಿಂದ ಸಂಪೂರ್ಣವಾಗಿ ಅಲಂಕರಿಸಲ್ಪಟ್ಟಿದ್ದಳು. ಆಕೆಯ ಕೈಯಲ್ಲಿ ವೈಜಯಂತಿಮಾಲಾ, ವೈಜಯಂತಿ ಹೂವುಗಳ ಮಾಲೆ (ಕಮಲದಂತಹ ಪುಷ್ಪ) ಇತ್ತು. ದೇವತೆಗಳು ಮತ್ತು ರಾಕ್ಷಸರು ಅವಳನ್ನು ನೋಡಿದ ತಕ್ಷಣ, ಅವಳನ್ನು ಮದುವೆಯಾಗುವ ಬಯಕೆಯನ್ನು ಹೊಂದಿದ್ದರು. ಅವಳು ತನ್ನ ಗಂಡನನ್ನಾಗಿ ಯಾರನ್ನು ಆರಿಸಿಕೊಳ್ಳುತ್ತಾಳೆ ಎಂದು ಕಂಡುಹಿಡಿಯಲು ಅವರು ಅವಳನ್ನು ಕಾತರದಿಂದ ನೋಡುತ್ತಿದ್ದರು. ದೇವಿಯು ಸುತ್ತಲೂ ನೋಡಿದಳು, ಆದರೆ ಅವರಲ್ಲಿ ಯಾರ ಮೇಲೂ ತನ್ನ ಹೃದಯವನ್ನು ಇಡಲಿಲ್ಲ. ನಂತರ ಅವಳು ಶೇಷನ ಮೇಲೆ ವಿಶ್ರಮಿಸುತ್ತಿರುವ ಭಗವಂತ ವಿಷ್ಣುವನ್ನು ನೋಡಿದಳು. ಅವನಿಗೆ ಲೌಕಿಕ ವಿಷಯಗಳ ಬಗ್ಗೆ ಆಸಕ್ತಿ ಇರಲಿಲ್ಲ.

ಅವನು ಅವಳನ್ನು ಬಯಸುವುದಿರಲಿ, ನೋಡಲೂ ಆಸಕ್ತಿ ತೋರಲಿಲ್ಲ, ಆತನು ಸ್ವಯಂ ಸುಖಿಯಾಗಿದ್ದನು ಮತ್ತು ಸದಾನಂದವನ್ನು ಹೊಂದಿದ್ದನು. ಭಗವಾನ್ ವಿಷ್ಣುವು ಲೌಕಿಕ ವಿಷಯಗಳಿಗೆ ವಿರಕ್ತನಾಗಿರುವುದನ್ನು ನೋಡಿ, ಲಕ್ಷ್ಮೀ ದೇವಿಯು ತನ್ನ ಪತಿಯಾಗಲು ಸರಿಯಾದ ವ್ಯಕ್ತಿ ಅವನೇ ಎಂದು ಭಾವಿಸಿದಳು. ಆದ್ದರಿಂದ, ಅವಳು ಅವನ ಬಳಿಗೆ ಹೋದಳು ಮತ್ತು ಅವನ ಕೊರಳಿಗೆ ತನ್ನ ಹಾರವನ್ನು ಹಾಕಿದಳು. ಅವನನ್ನು ತನ್ನ ಗಂಡನನ್ನಾಗಿ ಸ್ವೀಕರಿಸಿದಳು. ಹೀಗೆ ಅವಳು ಶ್ರೀ (ಸಂಪತ್ತು) ಸ್ಥಾನವನ್ನು ಪಡೆದಳು. ಭಗವಾನ್ ವಿಷ್ಣು ಭಾಗ್ಯಶ್ರೀ, ರಾಜಶ್ರೀ, ಜಯಶ್ರೀ ಮೊದಲಾದ ಎಲ್ಲಾ ಶ್ರೀಗಳನ್ನು ಹೊಂದಿದ್ದರಿಂದ, ವಿಷ್ಣುವಿನ ಪತ್ನಿಯಾದ ಲಕ್ಷ್ಮಿಯು ಶಂಖದ ನಿಯಂತ್ರಕಳಾದಳು, ಅಂದರೆ ಶಬ್ದಗಳನ್ನು ಸೃಷ್ಟಿಸುವ ಶಕ್ತಿ, ಚಕ್ರ – ಕಾಲಚಕ್ರದ ಮೇಲೆ ನಿಯಂತ್ರಣ; ಪದ್ಮ ಅಥವಾ ಕಮಲವು ಎಲ್ಲಾ ಜೀವಿಗಳ ಮನಸ್ಸು ಮತ್ತು ಹೃದಯಗಳು ಮತ್ತು ಗದೆ – ಇದು ಜಗತ್ತನ್ನು ರಕ್ಷಿಸುವ ಶಕ್ತಿ. ಅಂದಿನಿಂದ ಆಕೆಯನ್ನು ಭಗವಂತನ ಮಾಯೆ ಎಂದು ಕರೆಯಲಾಯಿತು. ಅದು ಪುರುಷನ ಸ್ತ್ರೀಲಿಂಗ ಪ್ರಕೃತಿ ಅಂಶವಾಗಿದೆ. ಹೀಗಾಗಿ ಆಕೆಯನ್ನು ದೇವರು ಮತ್ತು ಋಷಿಗಳು ಕೂಡ ಪೂಜಿಸುತ್ತಾರೆ.

[Illustrations by Sainee, Sri Sathya Sai Balvikas Student]
[ಮೂಲ: ಶ್ರೀ ಸತ್ಯಸಾಯಿ ಬಾಲವಿಕಾಸ ಗುರು ಕೈಪಿಡಿ]

Leave a Reply

Your email address will not be published. Required fields are marked *

error: