ಗುರುವಿನ ಅನುಗ್ರಹವು ಶಾಶ್ವತವಾದ ಕೀರ್ತಿಯನ್ನು ತರಬಲ್ಲದು

Print Friendly, PDF & Email

ಗುರುವಿನ ಅನುಗ್ರಹವು ಶಾಶ್ವತವಾದ ಕೀರ್ತಿಯನ್ನು ತರಬಲ್ಲದು

Adi Shankaraಶ್ರೀ ಶಂಕರರು ಶ್ರೇಷ್ಠ ಆಚಾರ್ಯರಾಗಿದ್ದವರು. ಅವರಿಗೆ ನಾಲ್ಕು ಪ್ರಮುಖ ಶಿಷ್ಯರಿದ್ದರು. ತೋಟಕ, ಹಸ್ತಾಮಲಕ, ಸುರೇಶ್ವರ ಹಾಗು ಪದ್ಮಪಾದ. ಇವರಲ್ಲಿ ಪದ್ಮಪಾದನ ಮನಸ್ಸೆಲ್ಲ ಗುರುಸೇವೆಯೊಂದರಲ್ಲಿಯೇ ನೆಲೆನಿಲ್ಲುತಿತ್ತು. ಪಾಠದೆಡೆಗೆ ಅವನ ಗಮನವೇ ಹೋಗುತ್ತಿರಲಿಲ್ಲ. ಪಾಠದಲ್ಲಿ ಹಿಂದೆ ಇದ್ದುದರಿಂದ ಅವನನ್ನು ಇತರರು ಅಪಹಾಸ್ಯ ಮಾಡುತ್ತಿದ್ದರು. ಗುರುವಿನ ಮೇಲೆ ಅವನಿಗಿದ್ದ ಪೂಜ್ಯ ಭಾವನೆಯಿಂದಾಗಿ ಇವುಗಳಿಗೆಲ್ಲ ಅವನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ಒಂದು ದಿನ ಅವನು ತನ್ನ ಗುರುವಿನ ಬಟ್ಟೆ ಬರೆಗಳನ್ನೆಲ್ಲ ಒಗೆದು ನದಿಯ ಮಧ್ಯದಲ್ಲಿರುವ ಬಂಡೆಗಳ ಮೇಲೆ ಒಣಗಿಸಲು ಹಾಕಿದನು. ಆದರೆ ಅವನು ಒಣಗಿದ ಬಟ್ಟೆಗಳನ್ನು ಮಡಚುತ್ತಿರಬೇಕಾದರೆ ನದಿಯಲ್ಲಿ ಒಮ್ಮಿಂದೊಮ್ಮೆಲೆ ಪ್ರವಾಹ ಬಂದು ನೀರು ಉಕ್ಕಿ ಸುತ್ತುವರೆಯಿತು. ಅವನು ಬಟ್ಟೆಗಳನ್ನು ಹಿಡಿದು ಬಂಡೆಯ ತುದಿಯನ್ನೇರಿ ನಿಂತನು. ಆದರೆ ಗುರುಗಳಿಗೆ ಬಟ್ಟೆಯ ಅಗತ್ಯವಿತ್ತು. ಸಮಯ ಮೀರುತ್ತಿತ್ತು. ಗುರುಗಳಿಗೆ ತೊಂದರೆಯಾಗಬಾರದೆಂದು, ಗುರುಗಳ ಅನುಗ್ರಹ ತನ್ನನ್ನು ರಕ್ಷಿಸುವುದೆಂದು ದೃಢ ವಿಶ್ವಾಸದಿಂದ ಹರಿಯುವ ನೀರಿನಲ್ಲೇ ನಡೆದು ದಡ ಸೇರುವುದಾಗಿ ನಿರ್ಧರಿಸಿದನು. ಅವನ ವಿಶ್ವಾಸ ಸತ್ಯವಾಯಿತು. ನದಿಯ ನೀರಿನ ಮೇಲೆ ಅವನು ಎಲ್ಲೆಲ್ಲಿ ಕಾಲೂರಿದನೋ ಅಲ್ಲಲ್ಲಿ ಒಂದು ಪದ್ಮವು ಅರಳಿ ಅದರ ದಳಗಳು ಅವನ ಪಾದಗಳಿಗೆ ಆಸರೆಯಾಯಿತು. ಆದ್ದರಿಂದಲೇ ಅವನ ಹೆಸರು ‘ಪದ್ಮಪಾದ’ ಎಂದಾಯಿತು. ಗುರುಗಳ ಅನುಗ್ರಹದಿಂದ ಮಾತ್ರವೇ ಅವನು ಎಲ್ಲಾ ಜ್ಞಾನಗಳ ಒಡೆಯನಾಗಿ ಮುಂದೊಂದು ದಿನ ಸನಾತನ ಜ್ಞಾನದ ಅದ್ಭುತ ಪ್ರಚಾರಕನಾಗಲು ಸಾಧ್ಯವಾಯಿತು.

Lotus-footed, Padmapada

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ

ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||

[Source: China Katha – Part 1 Pg:2]

 Illustrations by Ms. Sainee &
Digitized by Ms.Saipavitraa
(Sri Sathya Sai Balvikas Alumni)

Leave a Reply

Your email address will not be published. Required fields are marked *

error: