ವೈಕುಂಠ ಎಷ್ಟು ದೂರವಿದೆ?

Print Friendly, PDF & Email

ವೈಕುಂಠ ಎಷ್ಟು ದೂರವಿದೆ?

Pandit narrating Gajendra Mokshamಒಂದು ದಿನ ಮಹಾರಾಜರ ಆಸ್ಥಾನದ ಸಭೆಯಲ್ಲಿ ಪಂಡಿತರೊಬ್ಬರು, ಭಾಗವತ ಪುರಾಣದ ಗಜೆಂದ್ರ ಮೋಕ್ಷ ಕಥೆಯ ಕುರಿತು ತನ್ನ ವಿದ್ವತ್ಪೂರ್ಣ ವಿಷಯ ಮಂಡನೆಯನ್ನು ಮಾಡುತ್ತಿದ್ದರು. ಆನೆಯೊಂದು ರಾಕ್ಷಸ ಮೊಸಳೆಯ ಬಾಯಿಗೆ ಸಿಲುಕಿ ಸಹಾಯಕ್ಕಾಗಿ ದೇವರ ಮೊರೆಹೋದಾಗ ಹೇಗೆ ವೈಕುಂಠಪತಿಯು ತಾನು ಎಲ್ಲಿಗೆ, ಯಾಕಾಗಿ ಹೋಗುತ್ತಿದ್ದೇನೆ ಎಂಬುದನ್ನು ತನ್ನ ಮಡದಿಗೂ ತಿಳಿಸದೇ ಕಾರ್ಯ ಪ್ರವೃತ್ತನಾದ ಎಂಬುದನ್ನು ಪಂಡಿತರು ವಿವರಿಸಿದರು. ಆಗ ಮಾತಿನ ಮಧ್ಯದಲ್ಲಿ ಮಹಾರಾಜರು “ಪಂಡಿತರೇ, ವೈಕುಂಠಕ್ಕೆ ಎಷ್ಟು ದೂರವಿದೆ? ಹೇಳಿ” ಎಂದು ಕೇಳಿದರು. ಪಂಡಿತರಿಗೆ ವೈಕುಂಠಕ್ಕೆ ಎಷ್ಟು ದೂರವಿದೆ ಎಂಬುದು ತಿಳಿದಿರಲಿಲ್ಲ ಹಾಗಾಗಿ ಅವರು ಮಹಾರಾಜರ ಪ್ರಶ್ನೆಗೆ ಗಲಿಬಿಲಿಗೊಂಡರು. ಅಲ್ಲದೆ ಆಸ್ಥಾನದಲ್ಲಿದ್ದ ಯಾರಿಗೂ ಈ ಪ್ರಶ್ನೆಗೆ ಉತ್ತರ ಗೊತ್ತಿರಲಿಲ್ಲ. ಆಗ ಆಸ್ಥಾನದಲ್ಲಿ ಮಹಾರಾಜರಿಗೆ ಹಿಂದಿನಿಂದ ಚಾಮರ ಬೀಸುತ್ತಿದ್ದ ಸೇವಕನು ಉತ್ತರಿಸಲು ಮುಂದಾದನು. ಇದರಿಂದ ಪಂಡಿತರಿಗೆ ಒಂದು ರೀತಿಯ ಅವಮಾನವಾದಂತಾಯಿತು. ಆದರೆ ಮಹಾರಾಜರು ಆ ಸೇವಕನಿಗೆ ಮಾತನಾಡಲು ಅವಕಾಶ ನೀಡಿದರು. ಸೇವಕನು, ”ಮಹಾರಾಜರೇ ವೈಕುಂಠವು, ಆನೆ ತನ್ನ ಸಹಾಯಕ್ಕಾಗಿ ದೇವರಲ್ಲಿ ಮೊರೆ ಇಟ್ಟಾಗ, ಆ ಕೂಗು ಕೇಳಿಸುವಷ್ಟು ದೂರದಲ್ಲಿದೆ.” ಎಂದನು.

ಹೌದು, ಭಕ್ತನು ತನ್ನ ಹೃದಯದ ಯಾತನೆಯನ್ನು ಅಳುವಿನ, ಆರ್ತನಾದದ ಅಥವಾ ನಿಟ್ಟುಸಿರಿನ ಮೂಲಕ ವ್ಯಕ್ತಪಡಿಸಿದರೆ, ಆ ಕೂಗಿನ ಶಬ್ದ ಕೇಳಿಸುವಷ್ಟು ದೂರದಲ್ಲಿರುವ ಭಗವಂತನು ತನ್ನ ಮಕ್ಕಳ ಕರೆ ಕೇಳಲು ಸದಾ ಸನ್ನದ್ಧನಾಗಿರುತ್ತಾನೆ. ಅವನ ನಿವಾಸ ವೈಕುಂಠವು ಭಕ್ತರ ಪ್ರತಿಯೊಂದು ಮೊರೆ, ಪ್ರತಿಯೊಂದು ಸಂಕಟ ಕೇಳುವಷ್ಟು ದೂರದಲ್ಲಿದೆ. ಆ ಅನಕ್ಷರಸ್ಥ ಸೇವಕನು ಭಗವಂತನ ಸರ್ವಾಂತರ್ಯಾಮಿತ್ವ ಹಾಗೂ ಅಪಾರ ಕರುಣೆಯ ಬಗ್ಗೆ ಕ್ಷಣ ಮಾತ್ರದಲ್ಲಿ ಅರಿತನು.

Servant giving the answer

ಭಗವಂತನು ಸರ್ವಾಂತರ್ಯಾಮಿ ಹಾಗೂ ಕರುಣಾಮಯಿ.

[Ref: China Katha – Part 1 Pg:130]

 Illustrations by Ms. Sainee &
Digitized by Ms.Saipavitraa
(Sri Sathya Sai Balvikas Alumni)

Leave a Reply

Your email address will not be published. Required fields are marked *

error: