ಕರಚರಣ ಶ್ಲೋಕ – ಚಟುವಟಿಕೆ
ಕರಚರಣ ಶ್ಲೋಕ – ಚಟುವಟಿಕೆ
ಮಲಗುವ ಮುನ್ನ ಆತ್ಮಾವಲೋಕ:
ಮುದ್ದು ಮಕ್ಕಳೇ….ದಿನವು ಮುಗಿದು ರಾತ್ರಿಯಾಯಿತು. ಹೇಗಿತ್ತು ನಿಮ್ಮ ಈ ದಿನ? ಏನು ಮಾಡಿದಿರಿ? ಒಳ್ಳೆಯ ಕೆಲಸಗಳನ್ನು ಮಾಡಿದಿರಾ? ಗೊತ್ತಿದ್ದೋ, ಗೊತ್ತಿಲ್ಲದೆಯೋ, ಯಾರಿಗಾದರೂ ನೋವುಂಟುಮಾಡಿದಿರಾ? ಇದನ್ನೆಲ್ಲ ಯಾರಿಗೆ ಹೇಳುತ್ತೀರಿ? ನಿಮ್ಮ ಆತ್ಮೀಯ ಗೆಳೆಯನ ಜೊತೆ ಹಂಚಿಕೊಳ್ಳುತ್ತೀರಾ? ಯಾರು ನಿಮ್ಮ ನಿಜವಾದ ಸ್ನೇಹಿತ?–“ದೇವರು”. ದೇವರೇ ನಿಮ್ಮ ನಿಜವಾದ ಸ್ನೇಹಿತ. ದೇವರು ಸದಾ ನಿಮ್ಮ ಜೊತೆಗಿರುತ್ತಾನೆ. ಎಂದಿಗೂ ಕೈ ಬಿಡುವುದಿಲ್ಲ. ನೀವು ಹೇಳುವುದನ್ನೆಲ್ಲಾ ಕೇಳಿಸಿಕೊಳ್ಳಲು ಸಿದ್ಧನಿರುತ್ತಾನೆ. ದಿನವು ಮುಗಿದು, ರಾತ್ರಿ ಮಲಗುವ ಮುಂಚೆ ಬೆಳಗ್ಗೆಯಿಂದ ನಡೆದ ಎಲ್ಲ ಘಟನೆಗಳನ್ನು ಅವನೊಂದಿಗೆ ಹಂಚಿಕೊಳ್ಳಿ. ನಿಮ್ಮಿಂದ ಆದ ತಪ್ಪುಗಳನ್ನೂ ಅವನ ಜೊತೆ ಹಂಚಿಕೊಳ್ಳಿ. ಯಾವ ಭಾಷೆಯಲ್ಲಿ ಬೇಕಾದರೂ ನೀವು ದೇವರ ಜೊತೆ ಮಾತನಾಡಬಹುದು. ಏಕೆಂದರೆ ಇರುವುದು ಒಂದೇ ಭಾಷೆ, ಅದು ಹೃದಯದ ಭಾಷೆ. ದೇವರು ಯಾವಾಗಲೂ ನಿಮಗೆ ಮಾರ್ಗದರ್ಶನ ಮಾಡುತ್ತಿರುತ್ತಾನೆ. ಆಗ ನಿಮ್ಮ ಬದುಕು ಸುಂದರವಾಗಿ, ಎಲ್ಲೆಡೆಯೂ ಅದರ ಪರಿಮಳವನ್ನು ಹರಡುತ್ತೀರಿ. ಗುರುವು ಮಕ್ಕಳಿಗೆ ರಾತ್ರಿ ಮಲಗುವ ಮುಂಚೆ ‘ಆತ್ಮಾವಲೋಕನ’ ಹೇಗೆ ಮಾಡಿಕೊಳ್ಳಬಹುದೆಂದು ಕೆಳಗೆ ಕೊಟ್ಟಿರುವ ಚಿತ್ರದ ಸಹಾಯದಿಂದ ವಿವರಿಸಬಹುದು: