ಕುಟ್ಟನ್

Print Friendly, PDF & Email
ಕುಟ್ಟನ್

ನೀಲಗಿರಿ ಪರ್ವತದ ಪ್ರಾಂತದ ಬಿಕ್ಕಟ್ಟಿ ಎಂಬ ಹಳ್ಳಿಯಲ್ಲಿ ‘ಕುಟ್ಟನ್’ ಎಂಬ ಹೆಸರಿನ ಕುಂಟು ನಾಯಿ ಇದ್ದಿತು. ಕುಟ್ಟನ್ ಎಂದರೆ ಕುಂಟ ಎಂದರ್ಥ. ಅದು ವಯಸ್ಸಾದ ಮುದ್ದಾದ ನಾಯಿ. ಆದರೂ ಅದು ಚುರುಕಾಗಿತ್ತು. ಅಪರಿಚಿತರೆಂದರಂತೂ ಬಹಳ ಹುಷಾರು.

ಬಾಬಾರವರು ಆ ಗ್ರಾಮಕ್ಕೆ ಭೇಟಿ ನೀಡಿದರು. ಅವರಿಗಾಗಿ ಹಾಸಿದ್ದ ಕಂಬಳಿಯ ಮೇಲೆ ನಡೆದರು. ಬಾಬಾರವರ ಮೇಲೆ ಎಲ್ಲಿ ಎಗರಿ ಬಿಡುತ್ತದೊ ಎಂದು, ಕುಟ್ಟನ್‌ನನ್ನು ಒಂದು ಪಕ್ಕದಲ್ಲಿ ಕಟ್ಟಿ ಹಾಕಿದ್ದರು. ಅದು ಕೊರಳು ಪಟ್ಟಿಯಿಂದ ವಿಮುಕ್ತವಾಗಲು ಪ್ರಯತ್ನಿಸಿ ಒದ್ದಾಡುತ್ತಿತ್ತು. ಬಾಬಾ ಅವರು ಅದರ ಬಳಿ ನಿಂತು, ಬೆನ್ನು ತಟ್ಟಿದರು. “ಬಂಗಾರು! ಅವನ ಪಾಡಿಗೆ ಬಿಡಿ. ಅವನೊಬ್ಬ ಪರಿಶುದ್ಧವಾದ ಆತ್ಮ,” ಎಂದರು. “ಬಿಚ್ಚಿಬಿಡಿ,” ಎಂದು ಆದೇಶಿಸಿದರು. ಬಿಚ್ಚಿದ ಮೇಲೆ ಕುಟ್ಟನ್ ಬಾಬಾರವರನ್ನು ಹಿಂಬಾಲಿಸಿ ವೇದಿಕೆಯನ್ನು ಹತ್ತಿ ಕುಳಿತನು. ಭಜನೆಯನ್ನು ಕೇಳಿಸಿಕೊಂಡನು. ಆ ಬಳಿಕ ಬಾಬಾರವರೊಡನೆ, ಪಾಕಶಾಲೆಗೂ ಹೋದನು. ಬಾಬಾರವರು ಆಹಾರವನ್ನು ಗಮನಿಸಿ, ಆಶೀರ್ವದಿಸಿ, ಕುಟ್ಟನ್‌ಗೆ ಮೊದಲು ಊಟಕ್ಕೆ ಬಡಿಸಲು ಹೇಳಿದರು. ಊಟವಾದ ಬಳಿಕ, ಸಾಲಂಕೃತ ವೇದಿಕೆಯನ್ನೇರಿ, ಬಾಬಾರವರ ಕುರ್ಚಿಯ ಬಳಿ, ಕುಟ್ಟನ್ ಕುಳಿತನು. ಗ್ರಾಮಸ್ಥರೆಲ್ಲರೂ ಸಾಲು ಸಾಲಾಗಿ ಕುಳಿತು ಊಟ ಮಾಡುವುದನ್ನು ನೋಡಿದನು. ಸ್ವಲ್ಪ ಸಮಯದ ನಂತರ ಬಾಬಾರವರ ಕಾಲುಮಣಿಯ ಮೇಲೆ ತಲೆ ಇಟ್ಟು ಕೆಲವು ನಿಮಿಷಗಳಲ್ಲಿ ಪ್ರಾಣಬಿಟ್ಟನು.

ಕುಟ್ಟನ್ ಪವಿತ್ರಾತ್ಮನೆಂದು ಎಲ್ಲರಿಗೂ ಗೊತ್ತಿತ್ತು. ಅವನ ಪಾರ್ಥಿವ ಶರೀರವನ್ನು ವೇದಿಕೆಯ ಬಳಿ, ಹೂವುಗಳಿಂದ ಅಲಂಕರಿಸಿದ ವಸ್ತ್ರದಲ್ಲಿ ಮರೆ ಮಾಡಿ ಸಮಾಧಿ ಮಾಡಿದರು.

[Source : Lessons from the Divine Life of Young Sai, Sri Sathya Sai Balvikas Group I, Sri Sathya Sai Education in Human Values Trust, Compiled by: Smt. Roshan Fanibunda]

Leave a Reply

Your email address will not be published. Required fields are marked *