ಈ ಚಟುವಟಿಕೆಯು, ತರಗತಿಯ ಎಲ್ಲಾ ಮಕ್ಕಳ ಭಾಗವಹಿಸುವಿಕೆಯ ಭರವಸೆಯನ್ನು ನೀಡುತ್ತದೆ.
ವಿಕಿರಣ ಆಲೋಚನೆಯ ಅಭ್ಯಾಸವು ಸೃಜನಶೀಲ ಚಿಂತನೆಯನ್ನು ಉತ್ತೇಜಿಸುತ್ತದೆ. ವಿಚಾರಗಳು ಮತ್ತು ಪರಿಕಲ್ಪನೆಗಳಿಗೆ ಯಾವುದೇ ಅಡಚಣೆಗಳಿಲ್ಲದೆ, ಯೋಚನಾ ಪ್ರಕ್ರಿಯೆಗಳಿಗೆ ಮಿತಿಕಲ್ಪಿಸದೆ, ಮುಕ್ತವಾದ ಹರಿವನ್ನು ಸಾಧ್ಯವಾಗಿಸುತ್ತದೆ.
ವಿಕಿರಣ ಆಲೋಚನೆಯ ಹಂತದ ನಂತರದ ಮನೋ ನಿರೂಪಣಾ ಪಟ ಮತ್ತು ಜಾಲನಕ್ಷೆಯ ತಯಾರಿ ಕಾರ್ಯವು ವ್ಯವಸ್ಥಿತ ವಿಶ್ಲೇಷಣೆ ಮತ್ತು ಪರಿಷ್ಕರಣೆಗೆ ಸಹಾಯಕವಾಗುತ್ತದೆ. ಮಕ್ಕಳ ಗುಂಪು ಪದಗಳನ್ನು ಬೇರೆ ಬೇರೆ ಶಿರೋನಾಮೆಗಳ ಕೆಳಗೆ ವಿಂಗಡಿಸುವಂತೆ ಮಾಡುವುದರಿಂದ ಅವರ ಕ್ರಮಬದ್ಧವಾದ ಚಿಂತನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.
ಈ ಅಭ್ಯಾಸವು, ಮಕ್ಕಳಿಗೆ ಮುಂದಿನ ದಿನಗಳಲ್ಲೂ ಅವರ ಆಲೋಚನೆಗಳನ್ನು ಶಿಸ್ತುಬದ್ಧಗೊಳಿಸುವುದು ಮಾತ್ರವಲ್ಲದೆ ಕಾರ್ಯಗಳನ್ನೂ ಹೆಚ್ಚು ವ್ಯವಸ್ಥಿತವಾದ ರೀತಿಯಲ್ಲಿ ಮಾಡಿಕೊಳ್ಳಲು ಸಾಧ್ಯವಾಗಿಸುತ್ತದೆ.<l/li>
ಅವರು ತೀವ್ರವಾಗಿ ಗಮನವಹಿಸಲು, ವಿಶ್ಲೇಷಿಸಲು ಕಲಿಯುತ್ತಾರೆ ಮತ್ತು ಅತ್ಯುತ್ತಮ ಸಂಗತಿಯ ಸನ್ನಿವೇಶಕ್ಕೆ ತಲಪುತ್ತಾರೆ.
ಈ ಚಟುವಟಿಕೆಯು, ಸಹಕಾರ, ಸಮನ್ವಯ, ಆಲೋಚನೆಗಳ ವಿನಿಮಯ ಮತ್ತು ತಾರ್ಕಿಕ ಆಲೋಚನೆಗಳನ್ನೂ ಸಹ ಉತ್ತೇಜಿಸುತ್ತದೆ.