ಶ್ಲೋಕಕ್ಕೆ ಸಂಬಂಧಿಸಿದ ಕತೆ

Print Friendly, PDF & Email
ಶ್ಲೋಕಕ್ಕೆ ಸಂಬಂಧಿಸಿದ ಕತೆ

ಭಗವಂತ ವಿಷ್ಣುವನ್ನು ಶಾಂತಾಕಾರ ಎಂದು ವಣಿ೵ಸಲಾಗಿದೆ, ಯಾವಾಗಲೂ ಶಾಂತಿಯುತವಾಗಿ ಮತ್ತು ಸ್ಥಿರ ಮನಸ್ಸಿನಿಂದ ಇರುವನು ಎಂದು. ಒಮ್ಮೆ ಕಶ್ಯಪ ಋಷಿಯು ಒಂದು ಯಜ್ಞವನ್ನು ಆಚರಿಸುತ್ತಿದ್ದರು, ಆ ಯಜ್ಞದಲ್ಲಿ ಎಲ್ಲಾ ಋಷಿಮುನಿಗಳು ಭಾಗವಹಿಸಲು ಕೂಡಿದ್ದರು. ಅವರ ಮನಸ್ಸಿನಲ್ಲಿ, ಎಲ್ಲಾ ದೇವತೆಗಳಲ್ಲಿ ಯಾರು ಉನ್ನತರು ಎಂಬ ಅನುಮಾನ ಮೂಡಿತು. ಎಲ್ಲಾ ದೇವತೆಗಳಲ್ಲಿ ತ್ರಿಮೂತಿ೵ – ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ, ಇವರು ಶ್ರೇಷ್ಠರು, ಆದರೆ ವಿಷ್ಣು ಸವೋ೵ತ್ತಮನು ಎಂದು ದೇವಷಿ೵ ನಾರದ ಉತ್ತರಿಸಿದರು. ಹೊಗಳಿಕೆ ಅಥವಾ ಆಪಾದನೆಯಿಂದ ವಿಷ್ಣು ಎಂದಿಗೂ ವಿಚಲಿತನಾಗುವುದಿಲ್ಲ. ಎಂದಿಗೂ ಶಾಂತಿಯುತನಾಗಿ ಮತ್ತು ಆನಂದದಲ್ಲಿರುವನು. ಅದನ್ನು ಸಾಬೀತುಪಡಿಸುವಂತೆ ಋಷಿಮುನಿಗಳು ನಾರದರನ್ನು ಕೇಳಿದರು. ನಾರದರು ಋಷಿ ಭೃಗುವನ್ನು ಪಕ್ಕಕ್ಕೆ ಕರೆದು, ಏನೋ ಪಿಸುಗುಟ್ಟಿದರು. ನಾರದರ ಹೇಳಿಕೆಯನ್ನು ಪರಿಶೀಲಿಸಲು ಭೃಗುವನ್ನು ಕಳುಹಿಸಲಾಯಿತು.

ಭೃಗು ಮೊದಲು ಬ್ರಹ್ಮಲೋಕಕ್ಕೆ ಹೋದರು. ಬ್ರಹ್ಮನು ತನ್ನ ಸೃಷ್ಟಿ ಕಾಯ೵ದಲ್ಲಿ ನಿರತನಾಗಿರುವುದನ್ನು ನೋಡಿ, ದೂರದಿಂದ, ಬ್ರಹ್ಮನನ್ನು ಖಂಡಿಸಲು ಪ್ರಾರಂಭಿಸಿದರು. ಅವರು ಹೇಳಿದರು “ಓಹ್! ಬ್ರಹ್ಮ, ನಿಮಗೆ ಸೃಷ್ಟಿಯ ಬಗ್ಗೆ ಸರಿಯಾದ ಜ್ಞಾನವಿಲ್ಲ. ನಿಮ್ಮ ಸೃಷ್ಟಿ, ದೋಷ ಮತ್ತು ಕುಂದು-ಕೊರತೆಗಳಿಂದ ತುಂಬಿದೆ! ಆದ್ದರಿಂದ ನಿಮ್ಮ ಎಲ್ಲಾ ಪರಿಶ್ರಮ ವ್ಯಥ೵ವಾಗಿದೆ. ನಿಮ್ಮ ಸೃಷ್ಟಿಯಲ್ಲಿ ಒಂದು ವಿಷಯವೂ ಪ್ರಶಂಸೆಗೆ ಅಹ೵ವಿಲ್ಲ!”. ಈ ಮಾತುಗಳನ್ನು ಕೇಳಿ ಬ್ರಹ್ಮ ದೇವರು ಕೋಪಗೊಂಡು, ತನ್ನ ಆಸನದಿಂದ ಎದ್ದು ಭೃಗುವನ್ನು ಶಿಕ್ಷಿಸಲು ಮುಂದೆ ಬಂದನು. ಆದರೆ ಭೃಗು ಬ್ರಹ್ಮಲೋಕದಿಂದ ಓಡಿಹೋದರು. ನಂತರ ಭೃಗು ಶಿವಲೋಕನ ಬಳಿಗೆ ಹೋದರು. ಶಿವನು ತಾಂಡವ ನೃತ್ಯದಲ್ಲಿ ತೊಡಗಿರುವುದನ್ನು ಅವರು ನೋಡಿ, ದೂರದಿಂದ ಶಿವನನ್ನು ಟೀಕಿಸಲು ಪ್ರಾರಂಭಿಸಿದರು. ಅವರು, “ಓ ಭಗವಂತ! ನಿಮ್ಮ ಇಲಾಖೆಯನ್ನು ನೀವು ಸರಿಯಾಗಿ ನೋಡಿಕೊಳ್ಳುತಿಲ್ಲ. ನಿಮ್ಮ ಕಾಯ೵ವು ಪ್ರಪಂಚದಲ್ಲಿ ದುಷ್ಟವಾದದ್ದನ್ನು ನಾಶಪಡಿಸುವುದು. ಆದರೆ ಇಂದು ಜಗತ್ತು ದುಷ್ಟತನದಿಂದ ತುಂಬಿದೆ. ನೀವು ಕಾಯ೵ನಿರತವಾಗಿಲ್ಲ. ಇಡೀ ದಿನ ನೃತ್ಯ ಮಾಡುತ್ತಾ, ನಿಮಗೆ ನಿಗದಿಪಡಿಸಿದ ಕೆಲಸವನ್ನು ನಿವ೵ಹಿಸದೆ ಹೋದರೆ ನಾವು ನಿಮ್ಮನ್ನು ಏಕೆ ಪೂಜಿಸಬೇಕು?” ಎಂದರು. ಇದನ್ನು ಕೇಳಿದ ಶಿವನು ಕೋಪಗೊಂಡು, ಋಷಿಯನ್ನು ಸುಡಲು ತನ್ನ ಮೂರನೆಯ ಕಣ್ಣು ತೆರೆಯಲು ಹೊರಟನು, ಆದರೆ ಋಷಿ ಅಲ್ಲಿಂದ ಓಡಿಹೋದರು.

ನಂತರ ಅವರು ವೈಕುಂಠಕ್ಕೆ ಹೋದರು. ವಿಷ್ಣು ಶೇಷನ ಮೇಲೆ ವಿಶ್ರಾಂತಿ ಪಡೆಯುವುದನ್ನು ಅವರು ನೋಡಿದರು. ಭಗವಂತನು ತನ್ನ ಭಕ್ತರಲ್ಲಿ ಆಸಕ್ತಿ ತೋರದೆ, ಸ್ವಯಂ ಆನಂದದಲ್ಲಿ ನಿರತನಾಗಿರುವುದನ್ನು ನೋಡಿ ತುಂಬಾ ಕೋಪವಾಯಿತು. ಭೃಗು ವಿಷ್ಣುವಿನ ಹತ್ತಿರ ಹೋಗಿ ಅವನ ಎದೆಯ ಮೇಲೆ ಗಟ್ಟಿಯಾಗಿ ಒದ್ದರು. ನಂತರ ಭೃಗು, ಅವರು ಮಾಡಿದ ಕೆಲಸದ ಪರಿಣಾಮಕ್ಕೆ ಹೆದರಿ ಓಡಿಹೋಗಲು ನೋಡುತ್ತಿದ್ದರು. ಆದರೆ ವಿಷ್ಣು ತನ್ನ ಆಸನದಿಂದ ಎದ್ದು ಅವರ ಕಾಲುಗಳ ಮೇಲೆ ಬೀಳುವುದನ್ನು ನೋಡಿ ಆಶ್ಚಯ೵ವಾಯಿತು ಅವರಿಗೆ. ಭಗವಂತ “ಓ ಋಷಿ! ನಿಮ್ಮನ್ನು ಗಮನಿಸದೇ ಇದ್ದುದ್ದಕ್ಕಾಗಿ, ನಿಲ೵ಕ್ಷಿಸಿದ್ದಕ್ಕಾಗಿ ದಯವಿಟ್ಟು ನನ್ನನ್ನು ಕ್ಷಮಿಸಿ, ಇದರಿಂದ ನೀವು ಕೋಪಗೊಳ್ಳುವಂತೆ ಮಾಡಿದೆ. ನನ್ನ ಕಬ್ಬಿಣದಂತಹ ಎದೆ ನಿಮ್ಮ ಪಾದಕ್ಕೆ ಗಾಯ ಮಾಡಿರಬಹುದು. ನಾನು ಅದನ್ನು ಪಾದಸೇವೆ ಮಾಡಿ, ಒತ್ತಿ ನಿಮಗೆ ಸಾಂತ್ವನ ನೀಡುತ್ತೇನೆ” ಎಂದನು. ಎಂತಹ ಅಗಾಧ ಸಹನೆ! ಎಂತಹ ಶಾಂತಿಯುತ ಸ್ಥಿತಿ! ಈ ಮಾತುಗಳನ್ನು ಕೇಳಿ ಹಿಮ್ಮೆಟ್ಟಿ, ಭಗವಂತನನ್ನು ಕ್ಷಮಿಸುವಂತೆ ಕೇಳಿಕೊಂಡರು.

ನಂತರ ಋಷಿಯು ಹಿಂತಿರುಗಿ, ಯಜ್ಞದಲ್ಲಿ ಋಷಿಮುನಿಗಳ ಪರಿಷತ್ತಿಗೆ ಒಂದು ಇಡೀ ಕಥೆಯನ್ನು ನಿರೂಪಿಸಿದರು. ಅದನ್ನು ಕೇಳಿದ ಎಲ್ಲಾ ಋಷಿಮುನಿಗಳು ವಿಷ್ಣು ಮಾತ್ರ ಶಾಂತಕರಂ ಎಂದು ನಂಬಿದರು ಮತ್ತು ಅವರ ಅನುಮಾನವು ನಿವಾರಣೆಯಾಯಿತು.

Leave a Reply

Your email address will not be published. Required fields are marked *