ಮನೋಜವಂ ಶ್ಲೋಕ – ಹೆಚ್ಚಿನ ಓದುವಿಕೆ

Print Friendly, PDF & Email
ಕಥೆ (ಸ್ತೋತ್ರಕ್ಕೆ ಸಂಬಂಧಿಸುದುದು)

ಅಂಜನಿ ಮತ್ತು ವಾಯುವಿನ ಪುತ್ರನಾದ ಹನುಮಂತನು ಶ್ರೀರಾಮನ ದೂತ ಎಂದು ಪ್ರಸಿದ್ಧನಾಗಿದ್ದಾನೆ. ಹನುಮಂತನ ಅತ್ಯಂತ ನಿಣಾ೵ಯಕ, ಕ್ಲಿಷ್ಟಕರವಾದ ಸಮಯದಲ್ಲಿ ಬೇರೆ ಯಾರಿಂದಲೂ ಮಾಡಲಾಗದ ಕೆಲಸವನ್ನು ಮಾಡಿದನು. ಶ್ರೀರಾಮನ ಸಂದೇಶವನ್ನು ಸೀತಾಮಾತೆಗೆ ತಲುಪಿಸಿದನು. ಆದ್ದರಿಂದ ಅವನನ್ನು “ರಾಮದೂತಂ” ಶ್ರೀರಾಮನ ದೂತ ಎಂದು ಕರೆಯಲಾಗುತ್ತದೆ. ರಾಮನು ಹನುಮಂತನನ್ನೇ ಏಕೆ ದೂತನಾಗಿ ಆಯ್ಕೆ ಮಾಡಿದನು? ಅವನ ಸೇವೆಯಲ್ಲಿ ಇತರೆ ಅನೇಕ ವಾನರರಿದ್ದರು. ಆದರೆ ಹನುಮಂತನು “ಬುದ್ಧಿಮತಾಂ ವರಿಷ್ಕೃತಾಮ್” ಅಂದರೆ ಬುದ್ಧಿವಂತರಲ್ಲಿ ಅತೀ ಬುದ್ಧಿವಂತನಾಗಿದ್ದನು ಎಂದು.

ವಿಭೀಷಣನು ಶ್ರೀ ರಾಮನಿಗೆ ಶರಣಾದಾಗ ಮತ್ತು ಮತ್ತು ಯುದ್ಧದಲ್ಲಿ ರಾಮನ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸಿದಾಗ, ರಾಮನು ಹನುಮಂತನ ಸಲಹೆ ಕೇಳಿದನು. ವಿಭೀಷಣನೊಂದಿಗೆ ಏನು ಮಾಡಬೇಕೆಂದು ರಾಮನು ಹನುಮಂತನನ್ನು ಕೇಳಿದನು.

ಲಕ್ಷ್ಮಣ ಮೂಛೆ೵ ಹೋದಾಗ, ಅವನನ್ನು ಉಪಚರಿಸಲು ಸಂಜೀವಿನಿ ಎಂಬ ಗಿಡಮೂಲಿಕೆಯನ್ನು ದ್ರೋಣಾಚಲ ಪವ೵ತದಿಂದ ಸೂಯೋ೵ದಯಕ್ಕೆ ಮುಂಚಿತವಾಗಿಯೇ ತರಬೇಕಾಗಿತ್ತು. ಹನುಮಂತನೊಬ್ಬನೇ ಅತಿ ವೇಗವಾಗಿ, ಮನಸ್ಸಿನ ಗತಿಯಂತೆ ಪ್ರಯಾಣಿಸಬಲ್ಲವನು ಮತ್ತು ಆ ಪವ೵ತವನ್ನು ತಲುಪಿ ತಕ್ಕ ಸಮಯಕ್ಕೆ ಹಿಂತಿರುಗಿ ಬರಬಹುದಾದವನು ಆಗಿದ್ದನು. ಅವನೊಬ್ಬನೇ ಸೀತೆಯನ್ನು ಹುಡುಕಬೇಕಾಗಿ ಬಂದಾಗಲೂ ಸಹ ಹನುಮಂತನು ಒಂದೇ ಜಿಗಿತದಲ್ಲಿ ಸಾಗರವನ್ನು ದಾಟಿ, ಲಂಕೆಯನ್ನು ತಲುಪಿ ಸಾಹಸವನ್ನು ಮೆರೆದನು.

ಆದರೆ ಹನುಮಂತನು ಮಾಡಿದ ಅದ್ಭುತ ಕೆಲಸವೆಂದರೆ ಭರತನಿಗೆ ಒಂದು ಸಂದೇಶವನ್ನು ನೀಡಿದ್ದು. ರಾಮನು ಅಯೋಧ್ಯೆಗೆ ಹಿಂದಿರುಗುತ್ತಿರುವಾಗ ಕಿಷ್ಕಿಂದೆಗೆ ಹೋಗಿ, ಸುಗ್ರೀವನ ಆತಿಥ್ಯ ಸ್ವೀಕರಿಸಬೇಕಾಯಿತು. ಇದರಿಂದ ರಾಮ ಅಯೋಧ್ಯೆ ತಲುಪುವುದು ವಿಳಂಬವಾಗುತ್ತಿತ್ತು. ಅಯೋಧ್ಯೆಯಲ್ಲಿ ಭರತನು ರಾಮನಿಗಾಗಿ ಹದಿನಾಲ್ಕು ವಷ೵ಗಳ ಕಾಲ ಕಾಯುತ್ತಿದ್ದು, ಒಂದೇ ಒಂದು ಕ್ಷಣ ಹೆಚ್ಚು ಕಾಯಲು ಸಿದ್ಧನಾಗಿರಲಿಲ್ಲ. ಅವನು ಬೆಂಕಿಯನ್ನು ಪ್ರವೇಶಿಸಿ ತನ್ನ ಜೀವನವನ್ನು ಕೊನೆಗೊಳ್ಳಿಸಲು ಸಿದ್ಧನಾಗಿದ್ದನು. ಅಂತಹ ನಿಣಾ೵ಯಕ ಕ್ಷಣದಲ್ಲಿ ಅತ್ಯಂತ ಅಲ್ಪಾವಧಿಯಲ್ಲೇ ಅಲ್ಲಿಗೆ ತಲುಪಿ, ಭರತನ ಜೀವ ಉಳಿಸುವುದು ಹನುಮಂತನಿಂದ ಮಾತ್ರ ಸಾಧ್ಯವಾಗಿತ್ತು. ಆದ್ದರಿಂದ ಹನುಮಂತನಿಗೆ ಆ ಕೆಲಸವನ್ನು ನಿವ೵ಹಿಸಲಾಯಿತು. ಹನುಮಂತನು ಅದನ್ನು ಸಮಥ೵ವಾಗಿ ನಿಭಾಯಿಸಿದನು.

ಇಂತಹ ಮಹಾಪುರುಷನಾದ ಹನುಮಂತನನ್ನು ನಾವು ಪ್ರತಿನಿತ್ಯ ಮುಂಜಾನೆ ಸ್ಮರಿಸಬೇಕು.

ಹನುಮಂತನ ಭಕ್ತಿ:

ಒಂದು ದಿನ, ರಾಮನ ಪಟ್ಟಾಭಿಷೇಕದ ನಂತರ, ಸೀತೆ ಮತ್ತು ರಾಮನ ಮೂವರು ಸಹೋದರರು ಭೇಟಿಯಾಗಿ, ಹನುಮಂತನನ್ನು ರಾಮನ ಸೇವೆಯಿಂದ ಹೊರಗಿಡಲು ಯೋಚಿಸಿದರು. ರಾಮನ ಎಲ್ಲಾ ಸೇವೆಗಳನ್ನು ತಮ್ಮಲ್ಲೇ ವಿಂಗಡಿಸಿಕೊಳ್ಳಬೇಕೆಂದು ಆಲೋಚಿಸಿದರು. ಏಕೆಂದರೆ, ಈಗಾಗಲೇ ಹನುಮಂತನಿಗೆ ಸಾಕಷ್ಟು ರಾಮ ಸೇವೆಯ ಅವಕಾಶ ದೊರಕಿದೆ ಎಂಬುದು ಅವರ ಭಾವನೆ. ಆದ್ದರಿಂದ ಅವರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಒಂದು ನಿಮಿಷವೂ ಬಿಡದೆ ರಾಮನಿಗೆ ಬೇಕಾಗಬಹುದಾದ ಎಲ್ಲಾ ಸೇವೆಗಳನ್ನು ಪಟ್ಟಿ ಮಾಡಿದರು. ನಂತರ ಪ್ರತಿಯೊಂದು ಸೇವೆಯನ್ನು ತಮ್ಮಲ್ಲೇ ಒಬ್ಬೊಬ್ಬರಿಗೆ ನಿಯೋಜಿಸಿಕೊಂಡರು. ಅವರು ಆ ಪಟ್ಟಿಯನ್ನು ರಾಮನಿಗೆ ಸಲ್ಲಿಸಿದರು. ಆಗ ಹನುಮಂತನೂ ಉಪಸ್ಥಿತನಿದ್ದನು. ರಾಮನು ಪಟ್ಟಿಯನ್ನು ಓದಿದನು ಹಾಗೂ ನಗುಮೊಗದಿಂದ ಅವರಿಗೆ ಅನುಮತಿ ನೀಡಿದನು. ರಾಮ ಹನುಮಂತನಿಗೆ, “ಎಲ್ಲಾ ಸೇವಾಕಾಯ೵ಗಳನ್ನೂ ಇತರರಿಗೆ ವಹಿಸಲಾಗಿದೆ. ಆದುದರಿಂದ ನೀನು ಇನ್ನು ವಿಶ್ರಾಂತಿ ಪಡೆಯಬಹುದು” ಎಂದು ಸೂಚಿಸಿದನು. ಹನುಮಂತನು ಪಟ್ಟಿಯನ್ನು ಓದಬೇಕೆಂದು ಕೇಳಿಕೊಂಡು, ಓದಿ, ಒಂದು ಕಾಯ೵ಲೋಪವನ್ನು ಗಮನಿಸಿದನು. ಅದುವೇ ರಾಮನು ‘ಆಕಳಿಸಿದಾಗ ಬೆರಳಿನಿಂದ ಚಿಟಿಕೆ ಹೊಡೆಯುವುದು.’ ರಾಮನು ಚಕ್ರವತಿ೵ಯಾಗಿರುವುದರಿಂದ, ಅದನ್ನು ಸ್ವತಃ ಮಾಡಲು ಬಿಡಬಾರದು. ಅದು ಸೇವಕ ಮಾಡಬೇಕಾಗಿರುವ ಕೆಲಸವೆಂದು ಹನುಮಂತನು ರಾಮನಲ್ಲಿ ಮನವಿ ಮಾಡಿದನು. ಆ ಕೆಲವನ್ನು ಹನುಮಂತನಿಗೆ ನೀಡಲು ರಾಮನು ಒಪ್ಪಿದನು.

ಇದು ಹನುಮಂತನ ಅದೃಷ್ಟವೇ ಸರಿ. ಏಕೆಂದರೆ ಈ ಕಾಯ೵ವು ಅವನಿಗೆ ನಿರಂತರ ತನ್ನ ಪ್ರಭುವಿನ ಬಳಿ ಇರುವ ಅವಕಾಶ ಮಾಡಿಕೊಟ್ಟಿತು. ಏಕೆಂದರೆ ಆಕಳಿಕೆ ಯಾವಾಗ ಬರುತ್ತದೆ ಎಂದು ಯಾರಾದರೂ ಊಹಿಸಬಲ್ಲರೇ? ಈ ಅವಕಾಶದಿಂದಾಗಿ ಹನುಮಂತನಿಗೆ ಸದಾ ತನ್ನ ಪ್ರಭುವಿನ ಮುಖಾರವಿಂದವನ್ನು ನೋಡುತ್ತಿರುವ ಅವಕಾಶ ದೊರಕಿತು. ಅವನಿಗೆ ಶ್ರೀರಾಮನನ್ನು ಅಗಲಿ ಅರೆಕ್ಷಣವೂ ದೂರವಿರಲು ಸಾಧ್ಯವಿರಲಿಲ್ಲ. ರಾಮ ಸೇವೆಯಿಂದ ಒಂದು ಕ್ಷಣವೂ ವಿಶ್ರಾಂತಿ ಪಡೆಯಲು ಇಷ್ಟವಿರಲಿಲ್ಲ. ಭಗವಂತನ ಸೇವೆಯು ನಮ್ಮನ್ನು ಯಾವಾಗಲೂ ಆತನ ಸನ್ನಿಧಿಯಲ್ಲಿ ಇರಿಸುತ್ತದೆ ಮತ್ತು ಆತನ ಆಜ್ಞೆಗಳನ್ನು ನಿವ೵ಹಿಸಲು ಸದಾ ಜಾಗರೂಕರಾಗಿ ಇರಿಸುತ್ತದೆ ಎಂಬುದಕ್ಕೆ ನಾವು ಸಂತೋಷ ಪಡಬೇಕು.

Leave a Reply

Your email address will not be published. Required fields are marked *

error: