ಶಾಂತಾಕಾರಂ – ಹೆಚ್ಚಿನ ಓದುವಿಕೆ
ಶ್ಲೋಕದ ಅಥ
ಶಾಂತ ಸ್ವರೂಪನೂ, ಆದಿಶೇಷನ ಮೇಲೆ ಮಲಗಿರುವವನೂ, ನಾಭಿಯಲ್ಲಿ ಕಮಲವುಳ್ಳವನೂ, ದೇವತೆಗಳಿಗೆ ಒಡೆಯನೂ, ವಿಶ್ವಕ್ಕೆ ಆಧಾರವಾಗಿರುವವನೂ, ಆಕಾಶದಂತೆ ವ್ಯಾಪಕನೂ, ಮೋಡದಂತೆ ಶ್ಯಾಮಲವಣನೂ, ಶುಭಕರವಾದ ದೇಹವುಳ್ಳವನೂ, ಲಕ್ಷ್ಮಿಯ ಪತಿಯೂ, ಕಮಲದಂತೆ ಕಣ್ಣುಳ್ಳವನೂ, ಯೋಗಿಗಳ ಹೃದಯದಲ್ಲಿ ಧ್ಯಾನದ ಮೂಲಕ ಗೋಚರವಾಗುವವನೂ, ಸಂಸಾರದ ಭಯವನ್ನು ಹೋಗಲಾಡಿಸುವವನೂ, ಸವಲೋಕಗಳಿಗೂ ಏಕೈಕ ಪ್ರಭುವೂ ಆದ ಮಹಾವಿಷ್ಣುವನ್ನು ಒಂದಿಸುತ್ತೇನೆ.
ಶಾಂತಾಕಾರಂ:
“ಶಾಂತಂ” ಎಂದರೆ ಸಮಚಿತ್ತತೆ, ಸ್ಥಿರತೆ, ಭಾವನೆಗಳ ಏರಿಳಿತಕ್ಕೆ ಒಳಗಾಗದಿರುವುದು. ಭಗವಂತನ ಮುಖಭಾವವು ಸದಾ ಆಂತರಿಕ ಶಾಂತತೆ, ಸಂತೋಷ, ಸಮಚಿತ್ತತೆ, ಆಂತರಿಕ ಸೊಬಗು ಮತ್ತು ಕರುಣೆಯನ್ನು ಬಿಂಬಿಸುತ್ತಿರುತ್ತದೆ ಹಾಗೂ ಶಕ್ತಿ, ಸಾವಭೌಮತ್ವವನ್ನು ಚಿತ್ರಿಸುತ್ತಿರುತ್ತದೆ. – ಶಾಂತಿಯುತ, ನೆಮ್ಮದಿಯ ಚಿತ್ರದ ಹಾಗೆ. (ಎಲ್ಲಾ ದೇವತೆಗಳೂ ತಮ್ಮ ಭಾವವನ್ನು ಅವರ ಮುಖದ ಮೇಲೆ ಮತ್ತು ಅವರ ನಿಲುವು, ಭಂಗಿಯಲ್ಲಿ ಪ್ರದಶಿಸುತ್ತಾರೆ.
ಭುಜಗಶಯನಂ:
ಒಂದು ಸಾವಿರ ಹೆಡೆಯ ಹಾವಿನ ಮೇಲೆ ಒರಗಿ ಪವಡಿಸಿದ್ದರೂ, ಭಗವಂತನು ಶಾಂತಿ, ನೆಮ್ಮದಿಯ ಸಾಕಾರವಾಗಿದ್ದಾನೆ. ವಿಷಕಾರಿ ಕೋರೆಹಲ್ಲುಗಳನ್ನು ಹೊಂದಿರುವ ಆ ಹಾವು ಭೌತಿಕ ಪ್ರಪಂಚದ ಸಂಕೇತವಾಗಿದೆ. (ಅದೂ ಕೂಡ ವಿಷಕಾರಿ). ಜಗತ್ತಿನಲ್ಲಿ ಇದ್ದರೂ, ಅದರೊಳಗೆ ಮುಳುಗಿಲ್ಲ. ಅದಕ್ಕೆ ಬದ್ಧವಾಗಿಲ್ಲ. – ಇದುವೇ ಭಗವಂತನ ರಹಸ್ಯ. ವಿಶ್ವದಲ್ಲಿ ಅಂತಗತನಾದರೂ ಅದನ್ನು ಮೀರಿದವನು. ಅವನು ಯಾವ ಸಾಗರದಲ್ಲಿ ಇರುವನೋ, ಅದೇ ಭವಸಾಗರದ ಸಂಕೇತ. (SSS V/p 224)
ಪದ್ಮನಾಭಂ:
ಇದು ಭಗವಂತನ ನಾಭಿಯಿಂದ ಉದ್ಭವಿಸಿರುವ ಕಮಲವನ್ನು ಸೂಚಿಸುತ್ತದೆ. ಬ್ರಹ್ಮನನ್ನು ಕಮಲದ ಮೇಲೆ ಕುಳಿತಂತೆ ಚಿತ್ರಿಸಲಾಗುತ್ತದೆ. ಬ್ರಹ್ಮ ಸೃಷ್ಟಿಯ ಪ್ರತೀಕ. ಕಮಲದ ಕಾಂಡವು ಹೊಕ್ಕಳ ಬಳ್ಳಿಯನ್ನು ಸೂಚಿಸುತ್ತದೆ. ಗಭದಲ್ಲಿರುವ ಮಗು ಹೊಕ್ಕಳ ಬಳ್ಳಿಯ ಮೂಲಕ ತಾಯಿಯಿಂದ ಪೌಷ್ಟಿಕತೆಯನ್ನು ಪಡೆಯುವಂತೆ, ಸೃಷ್ಟಿಯು ಭಗವಂತನಿಂದ ಪೋಷಿಸಲ್ಪಡುತ್ತದೆ. ಈ ಭಗವಂತನೇ “ವಿಶ್ವಾಧಾರಂ’ ಅಥವಾ ಬ್ರಹ್ಮಾಂಡಕ್ಕೆ ಆಧಾರ.
ಗಗನಸದೃಶಂ:
ಭಗವಂತನು ಆಕಾಶದಂತೆ ಸವವ್ಯಾಪಿ, ಅವನು ಎಲ್ಲಾ ಸಮಯದಲ್ಲೂ ಎಲ್ಲೆಡೆಯಲ್ಲಿಯೂ ತನ್ನ ಮಕ್ಕಳ ಜೊತೆಯಲ್ಲಿಯೇ ಇರುತ್ತಾನೆ. ಅವನು ಅತ್ಯಂತ ದೂರದ ನಕ್ಷತ್ರದಲ್ಲಿಯೂ ಇದ್ದಾನೆ ಹಾಗೆಯೇ ಹುಲ್ಲಿನ ಗರಿಕೆಯಲ್ಲಿಯೂ ಕೂಡ. ಹಾಲಿನ ಪ್ರತಿಹನಿಯಲ್ಲಯೂ ಬೆಣ್ಣೆಯು ಅಡಗಿರುವಂತೆ ಅವನು ಈ ಪ್ರಪಂಚದಲ್ಲಿರುವ ಎಲ್ಲದರ ತಿರುಳು. ಇದನ್ನು ಅರಿತ ವ್ಯಕ್ತಿ ನಿಭಯನಾಗುತ್ತಾನೆ. ಆದ್ದರಿಂದ ಭಗವಂತನನ್ನು ಭವಭಯಹರ ಎಂದು ಕರೆಯಲಾಗುತ್ತದೆ. ಹತಾಶೆ ಎಂಬುದು ದೈವದ್ರೋಹಕ್ಕೆ ಸಮಾನ. ಅವನು ನಿಮ್ಮ ಹೃದಯದಲ್ಲಿರುವಾಗ, ನೀವೇಕೆ ಭರವಸೆಯನ್ನು ಕಳೆದುಕೊಳ್ಳುವಿರಿ? ಆದ್ದರಿಂದ ಭಗವಂತನು ಹೇಳುತ್ತಾನೆ, “ನಾನಿರುವಾಗ ನಿಮಗೇಕೆ ಭಯ? ಯಾವಾಗಲೂ ಸಂತೋಷದಿಂದ, ಆಶಾವಾದದಿಂದ ಮತ್ತು ಧೈಯದಿಂದಿರಿ.” – ಬಾಬಾ
ಮೇಘವಣಂ:
ಭಗವಂತನ ಕಡುವಣವು ಆಳವಾದ ಸಮುದ್ರ ಮತ್ತು ವಿಶಾಲವಾದ ಆಕಾಶದ ಬಣ್ಣವಾಗಿದೆ. ಇದು ಅಗಾಧ, ಆಗ್ರಾಹ್ಯತೆಯನ್ನು ಸೂಚಿಸುತ್ತದೆ. ಅವನ ರಹಸ್ಯವು ನಮ್ಮ ಊಹೆಗೂ ಮೀರಿದುದು. (SSS IV/p.168). ನೀವು ಎಷ್ಟೇ ಪ್ರಯತ್ನ ಪಟ್ಟರೂ, ಯಾವುದೇ ವಿಧಾನಗಳನ್ನು ಅನುಸರಿಸಿದರೂ, ಅವನ ಮಹಿಮೆಯ ರಹಸ್ಯವನ್ನು ಅರಿಯುವುದು ಸಾಧ್ಯವಿಲ್ಲ. ಕೇವಲ ಅಪಾರ ಭಕ್ತಿ ಮತ್ತು ಶ್ರದ್ಧೆಯಿಂದ ಗ್ರಂಥಗಳ ಅಧ್ಯಯನದ ಮೂಲಕ ನನ್ನ ಮಹಿಮೆಯ ತುಣುಕನ್ನು ನೀವು ಕಾಣಬಹುದು. “ಯೋಗಿಹೃಧ್ಯಾನಗಮ್ಯಂ”
ಶುಭಾಂಗಂ:
ಅವನ ರೂಪವು ಸುಂದರತೆ ಹಾಗೂ ಮೋಹದಿಂದ ಕೂಡಿದೆ. ಅದು ಎಲ್ಲೆಡೆ ಶುಭವನ್ನು ಹೊರಸೂಸುತ್ತದೆ. (SSS V/p.329)
ಲಕ್ಷ್ಮೀಕಾಂತಂ:
ಅವನು ಸಂಪತ್ತಿನ ಮೂಲ. ಅವನು ವಿಶ್ವದಾತ.
ಲಕ್ಷ್ಮೀ ಎಂದರೆ:
- ಜೀವನವನ್ನು ಪೋಷಿಸುವ ಪಂಚಮಹಾಭೂತಗಳು – ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ
- ಸ್ವಸ್ಥ ಇಂದ್ರಿಯ ಹಾಗೂ ಆರೋಗ್ಯವೇ ಸಂಪತ್ತು.
- ಸದ್ಗುಣಗಳ ಸಂಪತ್ತು.
- ಭಗವಂತನು ಪಂಚಮಹಾಭೂತಗಳ ಒಡೆಯ. ಅವನೇ ಎಲ್ಲಾ ಸದ್ಗುಣಗಳ ಮೂಲ. ಅವನೇ ಸ್ವಸ್ಥ ದೇಹ, ಮನಸ್ಸು ಮತ್ತು ಬುದ್ಧಿಯನ್ನು ಅನುಗ್ರಹಿಸುವವನು.
ಕಮಲನಯನಂ:
ಭಗವಂತನು ಕಮಲದಂತಿದ್ದಾನೆ. ಅವನು ತನ್ನ ಪರಿಸರದಿಂದ ಪ್ರಭಾವಿತನಾಗುವುದಿಲ್ಲ. (ಕಮಲವು ಕೆಸರಿನಲ್ಲೇ ಬೆಳೆದರೂ ಶುದ್ಧವಾಗಿರುವಂತೆ). ಅದೇ ಕಾರಣಕ್ಕೆ ಅವನ ಕಣ್ಣುಗಳು ಮತ್ತು ಪಾದಗಳನ್ನು ಕಮಲಕ್ಕೆ ಹೋಲಿಸಲಾಗಿದೆ. (SSS V/p.73)
ಸವಲೋಕೈಕನಾಥಂ:
ಲೋಕವನ್ನು ಪೋಷಿಸುವವನು
ಶಾಂತಾಕಾರಂ ಭುಜಗಶಯನಂ:
ಭಗವಂತನು ಚಿಕ್ಕ ಅಣುವಿನಿಂದ ಹಿಡಿದು ಪ್ರತಿಯೊಂದು ವಸ್ತುವಿನಲ್ಲಿ ಇದ್ದರೂ, ಯಾವುದರಿಂದಲೂ ಪ್ರಭಾವಿತನಾಗಿರುವುದಿಲ್ಲ.
ಗಗನಸದೃಶಂ:
ಆ ವಿಶ್ವ ಪ್ರಜ್ಞೆಯು (ವಿಷ್ಣು) ಸೃಷ್ಟಿಯನ್ನೆಲ್ಲಾ ವ್ಯಾಪಿಸಿದೆ.
ಶುಭಾಂಗಂ:
ಅವನು ಬಿಳಿಯ ಹಿಮಕ್ಕಿಂತ ಶುದ್ಧನಾಗಿದ್ದಾನೆ.
ಲಕ್ಷ್ಮೀಕಾಂತಂ ಸವಲೋಕೈಕನಾಥಂ:
ಆ ವಿಶ್ವ ಪ್ರಜ್ಞೆಯು ಮೂರು ಲೋಕಗಳನ್ನು ಬೆಳಗುತ್ತದೆ ಹಾಗೂ ರಕ್ಷಿಸುತ್ತದೆ.