ಧ್ಯಾನ

Print Friendly, PDF & Email
ಧ್ಯಾನ – ಬಾಲವಿಕಾಸ ಗುರುಗಳ ಕೈಪಿಡಿ
ಪ್ರಾರ್ಥನೆ ಮತ್ತು ಧ್ಯಾನ

“ಅಧ್ಯಾತ್ಮದ ಗುರಿ ತಲುಪಲು ಎರಡು ಹಾದಿಗಳಿವೆ ಪ್ರಾರ್ಥನೆ ಮತ್ತು ಧ್ಯಾನ. ಪ್ರಾರ್ಥನೆಯು ದೇವರ ಪದತಳದಲ್ಲಿ ನಿಮ್ಮ ಶರಣಾಗತಿಯನ್ನು ಸೂಚಿಸುತ್ತದೆ. ಧ್ಯಾನ ದೇವರನ್ನು ನಿಮ್ಮ ಬಳಿಗೆ ಬರಲು ಆಹ್ವಾನಿಸುತ್ತದೆ ಮತ್ತು ನಿಮ್ಮನ್ನು ದೈವತ್ವಕ್ಕೆ ಏರಲು ಪ್ರೇರೇಪಿಸುತ್ತದೆ; ಧ್ಯಾನವು ಭಗವಂತ ಮತ್ತು ನಿಮ್ಮನ್ನು ಒಟ್ಟಿಗೆ ಸೇರುವಂತೆ ಮಾಡುತ್ತದೆ ವಿನಹ, ಒಂದನ್ನು ಕೆಳಮಟ್ಟದಲ್ಲಿ ಮತ್ತು ಇನ್ನೊಂದನ್ನು ಉನ್ನತ ಮಟ್ಟದಲ್ಲಿ ಇಡುವುದಿಲ್ಲ”

[Sri Sathya Sai Speaks Vol -V, ‘Lamps Lit from the Same Flame’]

ಧ್ಯಾನದ ಬೋಧನೆ

“ಯಾರಾದರೂ ಧ್ಯಾನದಲ್ಲಿ ಇನ್ನೊಬ್ಬರಿಗೆ ತರಬೇತಿ ನೀಡಬಹುದೇ? ಅಥವಾ ತರಬೇತಿ ನೀಡುವುದಾಗಿ ಹೇಳಿಕೊಳ್ಳಬಹುದೇ? ಒಬ್ಬ ವ್ಯಕ್ತಿಗೆ ಕೂರುವ ರೀತಿ, ಭಂಗಿ, ಕಾಲುಗಳು, ಪಾದಗಳು ಅಥವಾ ಕೈಗಳ ಆಸನ ಮತ್ತು ಮುದ್ರೆಗಳ ಪರಿಚಯ, ಕುತ್ತಿಗೆ, ತಲೆ ಅಥವಾ ಬೆನ್ನಿನ ಸ್ಥಿರತೆ, ಉಸಿರಾಟದ ಶೈಲಿ ಮತ್ತು ಅದರ ವೇಗ ಇವೆಲ್ಲವನ್ನೂ ಹೇಳಿಕೊಡಬಹುದು. ಆದರೆ ಧ್ಯಾನವು ಅಂತರಂಗದ ಕಾರ್ಯವಾಗಿದೆ; ಇದು ಗಾಢವಾದ ಮೌನ ಮತ್ತು ಸ್ತಬ್ಧತೆ, ಮನಸ್ಸಿನಲ್ಲಿ ಯಾವುದೇ ವಿಚಾರ ಇಲ್ಲದಿರುವುದು ಮತ್ತು ಅಂತರಂಗದ ದೈವೀ ಚೈತನ್ಯದಿಂದ ಹೊರಹೊಮ್ಮುವ ಬೆಳಕಿನಿಂದ ಆ ಸ್ಥಳವನ್ನು ತುಂಬಿಕೊಳ್ಳುವುದು. ಇದು ಯಾವುದೇ ಪಠ್ಯ ಪುಸ್ತಕವು ಕಲಿಸುವ ಅಥವಾ ಯಾವುದೇ ತರಗತಿಯಲ್ಲಿ ಹೇಳಿಕೊಡುವ ವಿಷಯವಲ್ಲ”.

[Sri Sathya Sai Speaks VII, ‘Questions Answered’]

“ಧ್ಯಾನದ ಪ್ರಕ್ರಿಯೆ ಕರಗತವಾಗಲು ಮತ್ತು ಭಗವನ್ನಾಮ ಸ್ಮರಣೆಗಾಗಿ ನೀವು ಇನ್ನೊಬ್ಬರನ್ನು ಅವಲಂಬಿಸಬೇಕಾಗಿಲ್ಲ ಮತ್ತು ಪಠಣಕ್ಕಾಗಿ ಒಂದು ಮಂತ್ರವನ್ನು ಪಡೆಯಲು ಕೆಲವು ಋಷಿಗಳೊಂದಿಗೆ ಸಂಪರ್ಕಕ್ಕಾಗಿ ಕಾಯಬೇಕಾಗಿಲ್ಲ. ಅಂತರ್ಯಾಮಿ ದೇವರನ್ನು ಪ್ರಾರ್ಥಿಸಿ, ಮತ್ತು ನೀವು ಅವನ ಮಾರ್ಗದರ್ಶನ ಪಡೆಯುತ್ತೀರಿ”.

[Sathya Sai Speaks VII,‘The Commentary on the Message’]

ಧ್ಯಾನಕ್ಕಾಗಿ ವೇಳಾಪಟ್ಟಿ

ಅತ್ಯಂತ ಪ್ರಶಸ್ತ ಸಮಯವು ಮುಂಜಾನೆಯ ಬ್ರಾಹ್ಮೀ ಮುಹೂರ್ತದ ಸಮಯ (ಮುಂಜಾನೆ ೩ ರಿಂದ ೬ ಗಂಟೆಯ ನಡುವೆ, ‘ಶುಭವಾದ ಸಮಯ — ೪:೩೦-೫:೧೫ ಗಂಟೆ)

[Sathya Sai Speaks VI, ‘Eyelids & The Pupil’]

ಆದರೆ ನಿತ್ಯವೂ ಇದನ್ನು ತಪ್ಪದೇ ಮಾಡುವುದು ಅತ್ಯಂತ ಮುಖ್ಯ. ಮುಸ್ಸಂಜೆಯ ನಂತರ ಸಂಜೆ ಕೆಲವು ನಿಮಿಷಗಳ ಧ್ಯಾನವನ್ನು ಸ್ವಾಮಿ ಶಿಫಾರಸು ಮಾಡುತ್ತಾರೆ.

ಭಗವದ್ ರೂಪದ ಧ್ಯಾನ ಮತ್ತು ಸ್ವಾಮಿ:

ಸ್ವಾಮಿ ವಿದ್ಯಾರ್ಥಿಗಳಿಗೆ –“ನೀವು ಜ್ಯೋತಿ, ದೇವರ ವಿಗ್ರಹ ಅಥವಾ ದೇವರ ಚಿತ್ರವನ್ನು ೧೨ ಸೆಕೆಂಡುಗಳ ಕಾಲ ನೋಡಬೇಕು”, ಎಂದು ಹೇಳಿದರು– ಫ್ಲೇಮ್, ವಿಗ್ರಹ ಅಥವಾ ಚಿತ್ರವನ್ನು ಒಮ್ಮನಸ್ಸಿನಿಂದ ಮತ್ತು ಕಣ್ಣುರೆಪ್ಪೆಗಳನ್ನು ಮಿಟುಕಿಸದೆ ನೋಡಬೇಕು. ಇದು ಏಕಾಗ್ರತೆ (ಧಾರಣ). ಹನ್ನೆರಡು ಧಾರಣಾ ಸಮಯವು ಒಂದು ಧ್ಯಾನ ಆಗುತ್ತದೆ. ಇದರರ್ಥ ಧ್ಯಾನವು ೧೨x೧೨=೧೪೪ ಸೆಕೆಂಡುಗಳವರೆಗೆ ಇರುತ್ತದೆ. ಹೀಗಾಗಿ, ಸರಿಯಾದ ಧ್ಯಾನವು ೨ ನಿಮಿಷ ೨೪ ಸೆಕೆಂಡುಗಳಿಗಿಂತ ಹೆಚ್ಚು ಕಾಲ ಇರಬೇಕಾಗಿಲ್ಲ. ಹನ್ನೆರಡು ಧ್ಯಾನಗಳು ಒಂದು ಸಮಾಧಿಗೆ ಸಮನಾಗಿವೆ, ಅದು ೧೨x೧೪೪ ಸೆಕೆಂಡುಗಳು = ೨೮ ನಿಮಿಷಗಳು ೪೮ ಸೆಕೆಂಡುಗಳು.

ಆದರೆ, ಧ್ಯಾನವು ಒಂದೆರಡು ನಿಮಿಷ ಅಥವಾ ಗಂಟೆಗಳ ಕಾಲ ಕುಳಿತುಕೊಳ್ಳುವ ಮೂಲಕ ಮಾಡುವ ಕೆಲಸವಲ್ಲ. ಭಗವಂತನ ಚಿಂತನೆ ಯಾವಾಗಲೂ ಎಲ್ಲ ಸ್ಥಳಗಳಲ್ಲಿಯೂ ಇರಬೇಕು.

ಶ್ರೀ ರಮಣ ಮಹರ್ಷಿಯನ್ನು ಒಬ್ಬರು ಒಮ್ಮೆ ಹೀಗೆ ಕೇಳಿದರು, “ದಿನಕ್ಕೆ ಎಷ್ಟು ಕಾಲ ಧ್ಯಾನವನ್ನು ಅಭ್ಯಾಸ ಮಾಡಬೇಕು? ೧೫ ಅಥವಾ ೩೦ ಅಥವಾ ೪೫ ನಿಮಿಷಗಳು ಅಥವಾ ಒಂದು ಗಂಟೆ?” ಅವರ ಉತ್ತರವೆಂದರೆ, ‘ನೀವು ಧ್ಯಾನ ಮಾಡುತ್ತಿದ್ದೀರಿ ಎಂಬುದನ್ನು ನೀವು ಮರೆತುಹೋಗುವವರೆಗೂ ನೀವು ಅದನ್ನು ಮುಂದುವರಿಸಬೇಕು. ನೀವು ಧ್ಯಾನ ಮಾಡುತ್ತಿದ್ದೀರಿ ಎಂದು ನೀವು ತಿಳಿದುಕೊಂಡಿದ್ದರೆ (ದೈಹಿಕವಾಗಿ ಜಾಗೃತರಾಗಿರುವವರೆಗೆ), ಅದು ಧ್ಯಾನವಲ್ಲ.

ದೇಹ ಮತ್ತು ಮನಸ್ಸಿನ ಪ್ರಜ್ಞೆ ಮತ್ತು ನಿಮ್ಮ ಆಲೋಚನೆ ಸಂಪೂರ್ಣವಾಗಿ ಅಳಿದುಹೋಗಬೇಕು. ನಿಮ್ಮ ಧ್ಯಾನದ ವಸ್ತುವಿನ ಅನುಭವವು ಉಳಿದುಕೊಳ್ಳಬೇಕು, ಅಂದರೆ ದೈವತ್ವದ ಉಪಸ್ಥಿತಿಯನ್ನು ಹೊರತುಪಡಿಸಿ ಬೇರೇನೂ ಇರಬಾರದು. ಧ್ಯಾನದ ಸ್ಥಿತಿ ಏನೆಂದರೆ ನಿಮ್ಮ ಪ್ರಜ್ಞೆ ಇಲ್ಲದೆಯೇ ಧ್ಯಾನದ ಅನುಭವವನ್ನು ಅನುಭವಿಸುವುದು.

ಧ್ಯಾನಕ್ಕೆ ಕೂರುವ ವಿಧಾನ

ನೀವು ಪ್ರಾರ್ಥನೆಗಾಗಿ ಚಾಪೆ/ಬಟ್ಟೆ/ಮೆದು ಹಾಸಿನ ಮೇಲೆ ಕುಳಿತುಕೊಳ್ಳಿ. ಇದು ದೇಹದಲ್ಲಿ ಉಂಟಾಗುವ ಶಕ್ತಿಯು ಭೂಮಿಗೆ ಪ್ರವಹಿಸದಂತೆ ನಿರೋಧನವಾಗಿ ಕಾರ್ಯನಿರ್ವಹಿಸುತ್ತದೆ.

“ದೇಹವು ನೇರವಾಗಿ ಮತ್ತು ಶಾಂತವಾಗಿದ್ದಾಗ, ಮನಸ್ಸು ಸಹ ನೇರವಾಗಿ ಮತ್ತು ಶಾಂತವಾಗಿರುತ್ತದೆ. ನಿಮ್ಮ ದೇಹವನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಮನಸ್ಸನ್ನು ಹೇಗೆ ನಿಯಂತ್ರಿಸಬಲ್ಲಿರಿ?”

ಕೈಗಳ ಮುದ್ರೆ ಈ ರೀತಿ ಇರಲಿ:

(ಎ) ಎರಡೂ ಕೈಗಳನ್ನು ಮಡಿಲಲ್ಲಿ ಇರಿಸಿ, ಒಂದು ಅಂಗೈ ಇನ್ನೊಂದರ ಮೇಲೆ ಬರುವಂತೆ ಮತ್ತು ಹೆಬ್ಬೆರಳು ತುದಿಗಳಲ್ಲಿ ಸ್ಪರ್ಶಿಸುವಂತೆ ಅಥವಾ.

(ಬಿ) ನಿಮ್ಮ ಮೊಣಕಾಲುಗಳ ಮೇಲೆ ನಿಮ್ಮ ತೋಳುಗಳನ್ನು ವಿಶ್ರಾಂತಿ ಮಾಡಿ, ಅಂಗೈಗಳನ್ನು ಹೊರಮುಖಕ್ಕೆ ಎದುರಾಗಿ ಮತ್ತು ಬೆರಳುಗಳನ್ನು ಚಿನ್ಮುದ್ರಾ ಭಂಗಿಯಲ್ಲಿ ಇಡಬೇಕು.

ಸೋಹಮ್ ಧ್ಯಾನಕ್ಕಾಗಿ ಉಸಿರಾಟವನ್ನು ನಿಯಂತ್ರಿಸಲು, “ನಾಲಿಗೆಯ ತುದಿಯನ್ನು ಹಲ್ಲುಗಳ ಹಿಂಭಾಗದಲ್ಲಿ ನಿಧಾನವಾಗಿ ಇರಿಸಿ.”

[Sathya Sai Speaks XI, “Bhakti, Stage by Stage”]

[source: http://www.sathyasai.org/devotion/meditation.html]

Leave a Reply

Your email address will not be published. Required fields are marked *

error: