ಈಶ್ವರಮ್ಮ ಮತ್ತು ಅವಳ ದೈವೀಪುತ್ರ

Print Friendly, PDF & Email
ಈಶ್ವರಮ್ಮ ಮತ್ತು ಅವಳ ದೈವೀಪುತ್ರ

“ನಾನು ಅವತಾರ ತಾಳಲು ಸಂಕಲ್ಪಿಸಿದಾಗ, ನನ್ನ ತಾಯಿ ಯಾರಾಗಬೇಕೆಂದು ನಾನು ನಿರ್ಧರಿಸಿದೆ.” ಬಾಬಾ ನಿರ್ಧರಿಸಿದ ತಾಯಿ ಈಶ್ವರಮ್ಮ ಮತ್ತು ಆದ್ದರಿಂದ ಅವಳನ್ನು “ಆಯ್ಕೆ ಮಾಡಿದ ತಾಯಿ” ಎಂದು ವರ್ಣಿಸಲಾಗಿದೆ. ಅವಳು ಬಡತನದ ಹಿನ್ನೆಲೆಯ, ಮೃದು ಮನಸ್ಸಿನ, ಧರ್ಮನಿಷ್ಠ, ಅನಕ್ಷರಸ್ಥ, ಹಳ್ಳಿಯ ಗೃಹಿಣಿ. ಪವಾಡದ ಘಟನೆಗಳು ಸಾಮಾನ್ಯವಾಗಿ ಅವತಾರಗಳು ಮತ್ತು ಪ್ರವಾದಿಗಳ ಜನನದ ಸೂಚಕವಾಗಿ ಮುಂಚಿತವಾಗಿ ಗೋಚರಿಸುತ್ತದೆ. ಈಶ್ವರಮ್ಮನ ಅತ್ತೆಗೆ ಸತ್ಯನಾರಾಯಣ ದೇವರು ಕನಸಿನಲ್ಲಿ ಬಂದು ಅವಳಿಗೆ ಏನಾದರೂ ಅಸಾಮಾನ್ಯ ಅನುಭವ ಆದರೆ ಭಯಪಡಬೇಡ ಎಂದು ಹೇಳಿದನು. ಒಂದು ದಿನ ಈಶ್ವರಮ್ಮ ಬಾವಿಯ ಬಳಿ ನೀರು ಎಳೆಯುತ್ತಿದ್ದಾಗ, ಆಕಾಶದಿಂದ ನೀಲಿ ಬೆಳಕಿನ ಒಂದು ದೊಡ್ಡ ಚೆಂಡು ಅವಳ ಕಡೆಗೆ ಉರುಳಿತು, ಅದು ಅವಳೊಳಗೆ ಹರಿಯಿತು. ಇದರಿಂದ ಅವಳಿಗೆ ಭಯವಾಗಿ ಮೂರ್ಛೆ ಹೋದಳು. ಹೌದು —- ಭಗವಾನ್ ಬಾಬಾ, ಅವರ ತಾಯಿಯನ್ನು ಆರಿಸಿದ್ದರು.

ಪುಟ್ಟ ಸತ್ಯನಿಗೆ ಒಂಬತ್ತು ತಿಂಗಳ ವಯಸ್ಸಾಗಿತ್ತು —- ಒಂದು ದಿನ ಈಶ್ವರಮ್ಮ ಪುಟ್ಟ ಸತ್ಯನಿಗೆ ಸ್ನಾನ ಮಾಡಿಸಿ ಬಟ್ಟೆ ತೊಡಿಸಿ, ಅವನ ಕಣ್ಣಿಗೆ ಕಾಡಿಗೆ, ಹಣೆಗೆ ವಿಭೂತಿ ಮತ್ತು ಕುಂಕುಮ ಹಚ್ಚಿ ಅಲಂಕರಿಸಿದ ನಂತರ, ಅವಳು ಅವನನ್ನು ತೊಟ್ಟಿಲಲ್ಲಿ ಇರಿಸಿ ತೂಗಿದಳು. ನಂತರ ಅವಳು ಹಾಲು ಕುದಿಯಲು ಬಂದಿದ್ದ ಕಾರಣ ಒಲೆಯ ಕಡೆಗೆ ತಿರುಗಿದಳು. ಇದ್ದಕ್ಕಿದ್ದಂತೆ ಅವಳು ಸತ್ಯ ಅಳುವುದನ್ನು ಕೇಳಿದಳು. ಅವಳಿಗೆ ತುಂಬಾ ಆಶ್ಚರ್ಯವಾಯಿತು, ಏಕೆಂದರೆ ಅವನು ಹುಟ್ಟಿನಿಂದ ಯಾವುದೇ ಕಾರಣಕ್ಕೂ ಅಳಲಿಲ್ಲ, ಅದು ಹಸಿವು, ನೋವು ಅಥವಾ ಅಸ್ವಸ್ಥತೆ ಏನೇ ಇರಲಿ.

ಅವಳು ಅವನನ್ನು ಎತ್ತಿಕೊಂಡು ತನ್ನ ಮಡಿಲಲ್ಲಿ ಇಟ್ಟುಕೊಂಡಳು. ಮಗು ಅಳುವುದು ನಿಲ್ಲಿಸಿತು ಮತ್ತು ಈಶ್ವರಮ್ಮನ ಆಶ್ಚರ್ಯಕ್ಕೆ ಅವಳು ಅವನ ಸುತ್ತಲೂ ತಂಪಾದ, ಹೊಳೆಯುವ ಬೆಳಕನ್ನು ನೋಡಿದಳು. ಇದರಿಂದ ಅವಳು ಸಂತೋಷದಲ್ಲಿ ಮೈಮರೆತು ಹೋದಳು.

ಸತ್ಯ ಶೀಘ್ರದಲ್ಲೇ ಹಳ್ಳಿಯ ಎಲ್ಲರ ಗಮನ ಮತ್ತು ಮೆಚ್ಚುಗೆಗೆ ಪಾತ್ರನಾದನು, ಆದರೆ ಈಶ್ವರಮ್ಮ ಜನರ ಅಸೂಯೆ ಮತ್ತು ದ್ವೇಷದ ‘ದುಷ್ಟ ಕಣ್ಣಿಗೆ’ ಭಯಪಡತೊಡಗಿದಳು. ಸಾಂಕೇತಿಕವಾಗಿ ತೆಂಗಿನಕಾಯಿ ನಿವಾಳಿಸುವುದು ಮತ್ತು ಕರ್ಪೂರ ಜ್ವಾಲೆಯ ಬೆಳಕಿನಿಂದ ಅವಳು ಅದನ್ನು ಹೋಗಲಾಡಿಸಲು ಪ್ರಯತ್ನಿಸಿದಳು. ಆದರೆ ಸತ್ಯ ಇದನ್ನು ನೋಡಿದಾಗ ಅವನು “ಯಾರ ಕಣ್ಣುಗಳು ನನಗೆ ಏನು ಮಾಡಬಹುದು?” ಎಂದು ಹೇಳುತ್ತಾ ಓಡಿಹೋಗುತ್ತಿದ್ದನು. ಅವನು ಉತ್ತರ ಕೊಡುವ ರೀತಿ, ದಿಟ್ಟತನ, ಧೈರ್ಯ ಕೃಷ್ಣ ಯಶೋದೆಯ ಹಳೆಯದಾದ ಒಂದು ಘಟನೆ ನೆನಪಿಸುತ್ತದೆ. ಅವನು ಬಾಯಿಗೆ ಸ್ವಲ್ಪ ಮರಳನ್ನು ಹಾಕಿದ್ದಕ್ಕಾಗಿ ಖಂಡಿಸಿದಾಗ, ಬಾಲಕೃಷ್ಣ , “ನಾನು ಕೇವಲ ಮಗು, ಚೇಷ್ಟೆ ಮತ್ತು ಹುಚ್ಚು ಎಂದು ತಪ್ಪಾಗಿ ನಂಬಬೇಡಿ!” ಅಪರಿಚಿತರು ಕೃಷ್ಣನಿಗೆ ಅವರ ಹೆಸರನ್ನು ಕೇಳಿದಾಗ ಅವರು, “ನನ್ನ ಯಾವ ಹೆಸರುಗಳಲ್ಲಿ ನಾನು ನಿಮಗೆ ಹೇಳಲಿ?” ಎಂದು ಉತ್ತರಿಸಿದನು. ಬಾಬಾ ಹೇಳುತ್ತಾರೆ, “ಎಲ್ಲಾ ಹೆಸರುಗಳು ನನ್ನದು, ಎಲ್ಲಾ ರೂಪಗಳು ನನ್ನದು.” ಸತ್ಯನು ಈಶ್ವರಮ್ಮನನ್ನು ಕೃಷ್ಣನ ಹಾಗೆ ದಿನಕ್ಕೆ ಹಲವು ಬಾರಿ ನೆನಪಿಸಿದನು (ಅವನೂ ಎಂಟನೇ ಮಗುವಾಗಿ ಜನಿಸಿದವನು) ಮತ್ತು ಅವಳು ಸತ್ಯನು ಹಾಗೇ ಉಳಿಯಬೇಕೆಂದು ಅವಳು ಹಾತೊರೆಯುತ್ತಿದ್ದಳು.

ಸತ್ಯ ಹೊರಾಂಗಣದಲ್ಲಿ ಇರುವುದು, ಬೆಟ್ಟಗಳನ್ನು, ನಕ್ಷತ್ರಗಳು ಮತ್ತು ಆಕಾಶವನ್ನು ಮೌನವಾಗಿ ಸಂತೋಷದಿಂದ ನೋಡುವುದು ಇಷ್ಟಪಡುತ್ತಿದ್ದನು. ಅವನು ದೊಡ್ಡವನಾದ ಮೇಲೆ ಇತರ ಮಕ್ಕಳೊಂದಿಗೆ ಬೀದಿಗಳಲ್ಲಿ ಆಡುತ್ತಿದ್ದಾಗ, ಮರೆಮಾಚುವಿಕೆ ಮತ್ತು ಕಣ್ಣಾ ಮುಚ್ಚಾಲೆ ಆಡುತ್ತ, ಹಾದುಹೋಗುವ ಪ್ರತಿಯೊಬ್ಬ ಹಸು ಮತ್ತು ಎಮ್ಮೆ ಅವನ ದಿವ್ಯ ಕೈಯಿಂದ ಪ್ರೀತಿಯ ಸ್ಪರ್ಶ ಪಡೆಯುತ್ತಿದ್ದವು ಎಂದು ಈಶ್ವರಮ್ಮ ನೆನಪಿಸಿಕೊಳ್ಳುತ್ತಾರೆ. ಒಂದು ದಿನ ಒಂದು ಮಗು ಬಟ್ಟೆಯಿಲ್ಲದೆ ಶೀತದಲ್ಲಿ ನಡುಗುತ್ತಾ ಬೀದಿಯಲ್ಲಿ ನಿಂತಿತು. ಸತ್ಯ ಅವನನ್ನು ಗಮನಿಸಿದ ಕೂಡಲೇ ತನ್ನ ಅಂಗಿಯನ್ನು ತೆಗೆದು ಮಗುವಿನ ಮೇಲೆ ಹಾಕಿದನು. ಈಶ್ವರಮ್ಮ ಹೇಳುತ್ತಾರೆ, “ಅವನು ಯಾರನ್ನಾದರೂ ನೋಡಿದ ಕೂಡಲೇ ಅವರ ನೋವು ಮತ್ತು ಸಂಕಟಗಳನ್ನು ನಿವಾರಿಸಬೇಕಾಗಿತ್ತು.” ಅವನ ಮಾತುಗಳು ಅವಳು ತಿಳಿದಿರುವ ಯಾವುದೇ ಮಗುವಿನ ಮಾತುಗಳಿಗಿಂತ ಹೆಚ್ಚು ಮೃದು ಮತ್ತು ಸಿಹಿಯಾಗಿತ್ತು.

ಆಗಾಗ್ಗೆ ಅವಳು “ಸತ್ಯಂ, ನಿನಗೆ ಏನು ಬೇಕು ಹೇಳು” ಎಂದು ಮನವಿ ಮಾಡುತ್ತಿದ್ದಳು. ಅವಳು ಅವನಿಗೆ ಈ ಪ್ರಶ್ನೆಯನ್ನು ಏಕೆ ಕೇಳಿದಳು ಎಂದರೆ ಅವನಿಗೆ ಇಷ್ಟ ಅಥವಾ ಇಷ್ಟಪಡದಿರುವಿಕೆ ಅಥವಾ ಆದ್ಯತೆಗಳು ಯಾವುದೂ ಇರಲಿಲ್ಲ. ಆದರೆ ಅವನ ಸುತ್ತಲಿನ ಮಕ್ಕಳು ಸಂತೋಷವಾಗಿರುವುದನ್ನು ನೋಡಿದ ಅವನ ಮುಖವು ತಕ್ಷಣ ನಗುವಿನೊಂದಿಗೆ ಬೆಳಗುತ್ತಿತ್ತು. ಸತ್ಯ ಹದಿನಾಲ್ಕು ವರ್ಷದವನಾದಾಗ, ಈಶ್ವರಮ್ಮಗೆ ತನ್ನ ಅವತಾರದ ಜೀವನದಲ್ಲಿ ನಂತರ ಅವಳು ವಹಿಸಬೇಕಾದ ಪಾತ್ರಕ್ಕಾಗಿ ತರಬೇತಿ ನೀಡಲು ಮೊದಲ ಹೆಜ್ಜೆ ಇಟ್ಟನು. ಅವನ ಭಕ್ತರು ಅವನನ್ನು ಕರೆಯುತ್ತಿದ್ದಾರೆ ಮತ್ತು ಅವನು ಇನ್ನು ಮುಂದೆ ಅವಳಿಗೆ ಸೇರಿಲ್ಲ ಎಂಬ ಕಹಿ ಸತ್ಯವನ್ನು ಅವನು ಅವಳಿಗೆ ಹೇಳಿದನು. ತಾಯಿ, “ಹಾಗಾದರೆ ನಾನು ಯಾರಿಗೆ ಸೇರಿದವಳು?” ಎಂದು ಕೇಳಿದಳು. “ಜಗತ್ತಿಗೆ ಮತ್ತು ಅದರ ಜನರಿಗೆ” ಎಂಬುದು ಉತ್ತರವಾಗಿತ್ತು. ಹೀಗೆ ಪ್ರಶಾಂತಿ ನಿಲಯಕ್ಕೆ ಭೇಟಿ ನೀಡಿದ ನೂರಾರು ಭಕ್ತರಿಗೆ ತಾಯಿಯ ಪಾತ್ರವನ್ನು ಈಶ್ವರಮ್ಮಗೆ ವಹಿಸಲಾಯಿತು. ಅವಳು ಅನಾರೋಗ್ಯ ಮತ್ತು ತೊಂದರೆಗೀಡಾದವರನ್ನು ಪ್ರೀತಿಯಿಂದ ನೋಡಿಕೊಂಡಳು.

ಯುವ ಸತ್ಯನ ಅಸಾಧಾರಣ ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ವಿಷಯಗಳ ಕುರಿತು ಅವನು ಮಾತನಾಡುವ ಶೈಲಿಗೆ ಈಶ್ವರಮ್ಮ ಯಾವಾಗಲೂ ಗೊಂದಲಕ್ಕೊಳಗಾಗಿದ್ದರು. ಅವಳು ತುಂಬಾ ಮುಗ್ಧಳಾಗಿದ್ದಳು, ನಂತರದ ವರ್ಷಗಳಲ್ಲಿ ಸ್ವಾಮಿ ವೇದದ ಸಾಲುಗಳನ್ನು ಉಲ್ಲೇಖಿಸಿದಾಗ ಅವಳು ಪ್ರೊಫೆಸರ್ ಕಸ್ತೂರಿಯನ್ನು ಸಂಪರ್ಕಿಸಿ, “ಸ್ವಾಮಿ ಹೇಳುತ್ತಿರುವುದು ಎಲ್ಲವೂ ಸರಿಯಾಗಿದೆಯೇ?” ಎಂದು ವಿಚಾರಿಸುತ್ತಿದ್ದಳು.

ಬಾಬಾ ಈಶ್ವರಮ್ಮಳ ಮುಗ್ಧತೆಯನ್ನು ಕೀಟಲೆ ಮಾಡಲು ಮತ್ತು ಆಡಲು ಇಷ್ಟಪಡುತ್ತಿದ್ದರು. ಉದಾಹರಣೆಗೆ, ಬಾಬಾ ಪೂರ್ವ ಆಫ್ರಿಕಾಕ್ಕೆ ಹೋಗುವ ಮೊದಲು, ಸಮುದ್ರಗಳ ಮೇಲೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಅವಳು ತುಂಬಾ ಅಸಮಾಧಾನಗೊಂಡಿದ್ದಳು. ಆದರೆ ಸ್ವಾಮಿ ಆಕೆಯ ಭಯವನ್ನು ಶಾಂತಗೊಳಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಬದಲಾಗಿ ಆಫ್ರಿಕಾವು ಮನುಷ್ಯ-ತಿನ್ನುವ ಬುಡಕಟ್ಟು ಜನಾಂಗದವರು ಮತ್ತು ಚಿನ್ನವು ಖರ್ಜೂರದಂತೆ ಅಗ್ಗವಾಗಿದೆ ಎಂದು ಹೇಳುವ ಮೂಲಕ ಅವರು ಅವಳನ್ನು ಇನ್ನಷ್ಟು ಹೆದರಿಸಿದರು! ಇದು ನಾಲ್ಕು ಗಂಟೆ ಹಿಂದೆ ಹೋಗುವ ಪ್ರಯಾಣ ಎಂದು ಅವರು ಬೆರಗುಗೊಳಿಸುವ ಮಾಹಿತಿಯನ್ನು ನೀಡಿದರು. ಅವರು ಮಧ್ಯಾಹ್ನದ ಚಹಾ ಕುಡಿದು 3 ಗಂಟೆಗೆ ಬಾಂಬೆಯಿಂದ ಹೊರಟು, ಆ ದಿನದ ಬೆಳಿಗ್ಗೆ 11 ಗಂಟೆಗೆ ಆಫ್ರಿಕಾವನ್ನು ತಲುಪುತ್ತಾರೆ. ತೀವ್ರವಾಗಿ ಗಾಬರಿಗೊಂಡ ಈಶ್ವರಮ್ಮ ಈ ದೇಶಕ್ಕೆ ಭೇಟಿ ನೀಡುವುದನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದರು. ಆದರೆ ಬಾಬಾ ಅವಳ ಅರಿವಿನ ಪರಿಧಿಯನ್ನು ವಿಸ್ತರಿಸುತ್ತಿದ್ದರು.

ತಾಯಿ ಈಶ್ವರಮ್ಮ ಪವಿತ್ರ ಆಲೋಚನೆಗಳು ಮತ್ತು ಉದಾತ್ತ ಭಾವನೆಗಳಿಂದ ತುಂಬಿದ್ದಳು. ಒಂದು ದಿನ ಅವಳು, “ಸ್ವಾಮಿ, ಪುಟ್ಟಪರ್ತಿ ಒಂದು ಸಣ್ಣ ಹಳ್ಳಿ, ಇಲ್ಲಿ ಯಾವುದೇ ಶಾಲೆ ಇಲ್ಲ ಮತ್ತು ಮಕ್ಕಳು ಪಕ್ಕದ ಹಳ್ಳಿಗಳಲ್ಲಿನ ಶಾಲೆಗಳಿಗೆ ಹಾಜರಾಗಲು ಬಹಳ ದೂರ ನಡೆದು ಹೋಗಬೇಕು. ದಯವಿಟ್ಟು ಇಲ್ಲಿ ಶಾಲೆಯನ್ನು ನಿರ್ಮಿಸಿ.” ಎಂದು ಕೇಳೀಕೊಂಡರು. ಸ್ವಾಮಿ ತಾಯಿಯನ್ನು ತುಂಬಾ ಸಂತೋಷಪಡಿಸಿದರು. ನಂತರ, ಅವರು ಹಳ್ಳಿಯಲ್ಲಿ ಆಸ್ಪತ್ರೆಯನ್ನೂ ನಿರ್ಮಿಸಬೇಕೆಂದು ಸ್ವಾಮಿಗೆ ತಿಳಿಸಿದರು. ಈಶ್ವರಮ್ಮ ಆಯೋಜಿಸಿದ ಶ್ರೀ ಸತ್ಯಸಾಯಿ ಆಸ್ಪತ್ರೆಯ ಗೋಡೆಗಳನ್ನು ಸ್ವಯಂಸೇವಕರು ಬಹಳ ಮುತುವರ್ಜಿಯಿಂದ ನಿರ್ಮಿಸಿದ್ದಾರೆ. ನಂತರ ಬಾಬಾ ಅವರು, “ಆಸ್ಪತ್ರೆಯಲ್ಲಿ ಗುಣಪಡಿಸುವಿಕೆಯ ಪವಾಡವು ಆಸ್ಪತ್ರೆಯನ್ನು ನಿರ್ಮಿಸಿದ ಸ್ವಯಂಸೇವಕರ ಪ್ರೇಮದಿಂದಾಗಿ ನಡೆಯುತ್ತಿದೆ” ಎಂದು ಹೇಳಿದರು. ಇದರ ನಂತರ, ತಾಯಿ ಸ್ವಾಮಿಗೆ, “ನನಗೆ ಹೆಚ್ಚು ಚಿಂತೆ ಇಲ್ಲ, ನೀವು ನನ್ನ ಆಸೆಗಳನ್ನು ಈಡೇರಿಸಿದ್ದೀರಿ ಮತ್ತು ಗ್ರಾಮಸ್ಥರ ಸಂಕಟಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ” ಎಂದು ಹೇಳಿದರು. ಬಾಬಾ ಮುಗುಳ್ನಕ್ಕು, “ನಿಮಗೆ ಇನ್ನೂ ಹೆಚ್ಚಿನ ಆಸೆಗಳಿದ್ದರೆ, ನನ್ನನ್ನು ಕೇಳಿ.” ಎಂದರು. ಈಶ್ವರಮ್ಮ ಮೃದುವಾಗಿ ಉತ್ತರಿಸುತ್ತಾ, “ಸ್ವಾಮಿ, ಚಿತ್ರಾವತಿ ನದಿ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ ಎಂದು ನಿಮಗೆ ತಿಳಿದಿದೆ; ಆದರೆ ಬೇಸಿಗೆಯಲ್ಲಿ ಇದು ಒಣಗುತ್ತದೆ ಮತ್ತು ಜನರಿಗೆ ಕುಡಿಯುವ ನೀರು ಇಲ್ಲ, ಆದ್ದರಿಂದ ದಯವಿಟ್ಟು ಹಳ್ಳಿಯಲ್ಲಿ ಕೆಲವು ಬಾವಿಗಳನ್ನು ತೋಡಿಸಿ.” ಎಂದರು. ಸ್ವಾಮಿ, “ನಾನು ಈ ಸಣ್ಣ ಬಾವಿಗಳೊಂದಿಗೆ ನಿಲ್ಲಿಸುವುದಿಲ್ಲ, ಇಡೀ ರಾಯಲ್ ಸೀಮಾ ಪ್ರದೇಶಕ್ಕೆ ಕುಡಿಯುವ ನೀರನ್ನು ಒದಗಿಸುತ್ತೇನೆ” ಎಂದು ಹೇಳಿದರು.

ಅವತಾರದ ಒಡನಾಟದ ಮೂಲಕ ಈಶ್ವರಮ್ಮ ಮಹಿಳೆಯರಿಗೆ ಶಿಕ್ಷಣದ ಮಹತ್ವವನ್ನು ಅರಿತುಕೊಂಡಳು; ಮತ್ತು ಸ್ವಾಮಿ ಅನಂತಪುರದಲ್ಲಿ ಮಹಿಳೆಯರಿಗಾಗಿ ಕಾಲೇಜನ್ನು ಸ್ಥಾಪಿಸಿದಾಗ ಅವಳು ಸಂತೋಷಪಟ್ಟಳು.

ಅಂದು, ತಾಯಿಯ ಮೂರು ಆಸೆಗಳನ್ನು ಈಡೇರಿಸುವುದರೊಂದಿಗೆ ಪ್ರಾರಂಭವಾದದ್ದು, ಇಂದು ಪುಟ್ಟಪರ್ತಿ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮಾತ್ರವಲ್ಲ, ಜಗತ್ತಿಗೆ ವರದಾನದವನ್ನು ನೀಡಿದೆ. ಸ್ವಾಮಿ ನಮಗೆ ಶಾಲೆಗಳನ್ನು ಮತ್ತು ವಿಶ್ವವಿದ್ಯಾಲಯವನ್ನು ಕೆ.ಜಿ. ಯಿಂದ ಪಿ.ಜಿ.ವರೆಗೆ ಉಚಿತ ಶಿಕ್ಷಣ ನೀಡಿದ್ದಾರೆ ಮತ್ತು ಅಲ್ಲಿ ಮಾನವೀಯ ಮೌಲ್ಯಗಳ ಬೀಜಗಳನ್ನು ಬಿತ್ತಲಾಗುತ್ತದೆ ಮತ್ತು ಪೋಷಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಆದರ್ಶ ಪ್ರಜೆಗಳಾಗುತ್ತಾರೆ. ನಂತರ ಪ್ರತಿ ಸೌಲಭ್ಯವನ್ನು ಸಂಪೂರ್ಣ ಉಚಿತವಾಗಿ ನೀಡುವ ಭವ್ಯವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಸಾವಿರಾರು ಗ್ರಾಮಸ್ಥರಿಗೆ ಅನುಕೂಲವಾಗುವ ಕುಡಿಯುವ ನೀರಿನ ಯೋಜನೆ ನೀಡಿದ್ದಾರೆ. ಸಣ್ಣ ಮನೆಗಳ ನಿರ್ಮಾಣ ಮತ್ತು ವಿಧವೆಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ಸ್ವಾಮಿಯವರ ಪ್ರೀತಿಯ ಉಡುಗೊರೆಗಳ ಭಾಗವಾಗಿದೆ.

ಅವಳ ದೇಹತ್ಯಾಗದ ಕೆಲವು ದಿನಗಳ ಮೊದಲು, ಈಶ್ವರಮ್ಮ ಬೃಂದಾವನದಲ್ಲಿದ್ದಾಗ, ಅವಳು ಸಂಪೂರ್ಣವಾಗಿ ಎಚ್ಚರವಾಗಿರುವಾಗ ಸ್ವಾಮಿಯನ್ನು ಶ್ರೀ ರಾಮನಂತೆ ನೋಡಿದ್ದಳು. ಮೇ 6, 1972 ರಂದು, ಈಶ್ವರಮ್ಮ ಎಂದಿನಂತೆ ಸ್ನಾನ ಮತ್ತು ಬೆಳಿಗ್ಗೆ ಕಾಫಿ ಸೇವಿಸಿದರು. ಇದ್ದಕ್ಕಿದ್ದಂತೆ ಸ್ನಾನಕ್ಕೆ ಹೋಗುವಾಗ ಅವಳು “ಸ್ವಾಮಿ, ಸ್ವಾಮಿ, ಸ್ವಾಮಿ” ಎಂದು ಕೂಗಿದಳು ಮತ್ತು ಬಾಬಾ “ಬರುತ್ತಿದ್ದೇನೆ, ಬರುತ್ತಿದ್ದೇನೆ, ಬರುತ್ತಿದ್ದೇನೆ” ಎಂದು ಪ್ರತಿಕ್ರಿಯಿಸಿದರು. ಆ ಅವಧಿಯಲ್ಲಿ ಅವಳು ತನ್ನ ಮಗನಾದ ದೈವಿಕ ಅವತಾರದ ಉಪಸ್ಥಿತಿಯಲ್ಲಿ ಕೊನೆಯುಸಿರೆಳೆದಳು. ಬಾಬಾ ಹೇಳುತ್ತಾರೆ, “ಒಬ್ಬರು ಸಾಯುವ ರೀತಿ ಒಬ್ಬರ ಒಳ್ಳೆಯತನಕ್ಕೆ ಪುರಾವೆಯಾಗಿದೆ.” (ಶರಣರ ಗುಣ ಮರಣದಲಿ ಕಾಣು).

Leave a Reply

Your email address will not be published. Required fields are marked *