ರಾಷ್ಟ್ರ ಧ್ವಜ & ರಾಷ್ಟ್ರಲಾಂಛನ

Print Friendly, PDF & Email
ರಾಷ್ಟ್ರ ಧ್ವಜ & ರಾಷ್ಟ್ರಲಾಂಛನ

National Flag

ರಾಷ್ಟ್ರ ಧ್ವಜ
  • ಹೆಮ್ಮೆಯ ಸಂಕೇತವಾದ ರಾಷ್ಟ್ರಧ್ವಜವನ್ನು ‘ತಿರಂಗ’ ಎಂದೂ ಕರೆಯುತ್ತಾರೆ. ಅಂದರೆ ಮೂರು ಬಣ್ಣಗಳಿರುವ ಧ್ವಜ ಎಂದರ್ಥ. ಸಮತಲವಾದ ಮೂರು ತ್ರಿವರ್ಣವು ಸಮಾನ ಅನುಪಾತವನ್ನು ಹೊಂದಿವೆ.
    • ಮೇಲ್ಭಾಗದಲ್ಲಿ ಕಡುಕೇಸರಿ
    • ಮಧ್ಯ ಭಾಗದಲ್ಲಿ ಬಿಳಿ ಮತ್ತು
    • ಕೆಳಭಾಗದಲ್ಲಿ ಹಸಿರು ಬಣ್ಣವನ್ನು ಹೊಂದಿದೆ.
  • ಧ್ವಜದ ಉದ್ದ ಅಗಲವು ೨:೩ ಅನುಪಾತವನ್ನು ಹೊಂದಿದೆ.
  • ಮಧ್ಯಭಾಗದಲ್ಲಿರುವ ಬಿಳಿಬಣ್ಣದ ಮಧ್ಯದಲ್ಲಿ ಚಕ್ರವನ್ನು ಹೊಂದಿದ್ದು ಅದನ್ನು ಅಶೋಕ ಚಕ್ರ ಎನ್ನುತ್ತಾರೆ.
  • ಮಧ್ಯಭಾಗದಲ್ಲಿರುವ ಬಿಳಿಬಣ್ಣದ ಮಧ್ಯದಲ್ಲಿ ಚಕ್ರವನ್ನು ಹೊಂದಿದ್ದು ಅದನ್ನು ಅಶೋಕ ಚಕ್ರ ಎನ್ನುತ್ತಾರೆ.
  • ಕೇಸರಿ ಬಣ್ಣವು ಧೈರ್ಯ ಮತ್ತು ತ್ಯಾಗದ ಸಂಕೇತವಾಗಿದೆ.
  • ಬಿಳಿಬಣ್ಣವು ಸತ್ಯ, ಶಾಂತಿ ಮತ್ತು ಶುದ್ಧತೆಯ ಸಂಕೇತ.
  • ಅಶೋಕ ಚಕ್ರದ ವ್ಯಾಸ ಸರಿಸುಮಾರು ಬಿಳಿಯ ಬಣ್ಣದ ಅಗಲಕ್ಕೆ ಸಮಾನವಾಗಿದೆ.
  • ಚಕ್ರವು ನೀಲಿಬಣ್ಣದ ೨೪ ಕಡ್ಡಿಗಳನ್ನು ಹೊಂದಿದೆ. ಅಶೊಕಚಕ್ರದ ವಿನ್ಯಾಸವು ೩ ನೇ ಶತಮಾನದ ಸಾರಾನಾಥದ ಅಶೋಕ ಸ್ತಂಭದ ಮೇಲಿರುವಂತೆ ಇರುವುದು. ಈ ಧ್ವಜವನ್ನು ಬರಹಗಾರ ಪಿಂಗಾಲಿ ವೆಂಕಯ್ಯನವರು ವಿನ್ಯಾಸ ಮಾಡಿದ್ದರು.
  • ಇದು ಉರುಳುವ ಕಾಲ ಮತ್ತು ಸಾವಿನ ನಿಶ್ಚಲತೆಯ ಸಂಕೇತ.
  • ಹಸಿರು ಬಣ್ಣವು ನಂಬಿಕೆ, ಅಭ್ಯುದಯ, ಸಮೃದ್ಧತೆ ಮತ್ತು ಭೂಮಿಯ ಮಂಗಳ ಸ್ವರೂಪವನ್ನು ಸೂಚಿಸುತ್ತದೆ.
  • ೧೯೪೭ ಜುಲೈ ೨೨ ರಂದು ಸಂವಿಧಾನ ರಚನಾ ಸಭೆಯಲ್ಲಿ ರಾಷ್ಟ್ರಧ್ವಜದ ಈ ವಿನ್ಯಾಸವನ್ನು ಅಂಗೀಕರಿಸಲಾಯಿತು.
ರಾಷ್ಟ್ರಲಾಂಛನ

National Emblem

  • ಸಾರಾನಾಥದಲ್ಲಿನ ಅಶೋಕ ಸ್ತಂಭದ ಮೇಲು ತುದಿಯಲ್ಲಿರುವ ನಾಲ್ಕು ಸಿಂಹಗಳ ಪ್ರತಿಮೆಯನ್ನು ನಮ್ಮ ರಾಷ್ಟ್ರಲಾಂಛನವಾಗಿ ಅಂಗೀಕರಿಸಲಾಗಿದೆ.
  • ಅದರಲ್ಲಿ ನಾಲ್ಕು ಸಿಂಹಗಳು ಬೆನ್ನಿಗೆ ಬೆನ್ನು ಆನಿಸಿ ಮಣಿಗಳಂತಿರುವ ಚೌಕಟ್ಟಿನ ಮೇಲೆ ಇವೆ.
  • ಕೆಳಗಿನ ಪೀಠದಲ್ಲಿ ಆನೆ, ಓಡುವ ಕುದುರೆ, ಗೂಳಿ, ಮತ್ತು ಸಿಂಹಗಳಿವೆ. ಅವುಗಳ ನಡುವಿನ ಅವಕಾಶದಲ್ಲಿ ಚಕ್ರಗಳಿವೆ. ಎಲ್ಲವೂ ಗಂಟೆಯಾಕಾರದ ಕಮಲದ ಮೇಲೆ ನಿಂತಿವೆ.
  • ಭಾರತಸರ್ಕಾರವು ೨೬ ನೇ ಜನವರಿ ೧೯೫೦ ರಲ್ಲಿ ಒಪ್ಪಿಕೊಂಡ ರಾಷ್ಟ್ರೀಯ ಲಾಂಛನದಲ್ಲಿ ಮೂರು ಸಿಂಹಗಳು ಮಾತ್ರ ಕಾಣುತ್ತವೆ. ಮಣಿಗಳ ಚೌಕಟ್ಟಿನ ಕೆಳಗಿನ ಜಾಗದ ನಡುವೆ ಬಲಗಡೆ ಗೂಳಿ ಮತ್ತು ಎಡಗಡೆ ಕುದುರೆ ,ಪೂರ್ತಿ ಅಂಚಿನಲ್ಲಿ ಇತರ ಚಕ್ರಗಳ ಪರಿಧಿ ಕಾಣುವುದು. ಗಂಟೆಯಾಕಾರದ ಕಮಲವನ್ನು ಕೈ ಬಿಡಲಾಗಿದೆ.
  • ಮಂಡೂಕ ಉಪನಿಷತ್ತಿನ ‘ ಸತ್ಯಮೇವ ಜಯತೇ’ ಎಂಬ ವಾಕ್ಯವನ್ನು ದೇವನಾಗರಿಲಿಪಿಯಲ್ಲಿ ಮಣಿಕಟ್ಟಿನ ಕೆಳಗೆ ಕೆತ್ತಲಾಗಿದೆ. ಅದರ ಅರ್ಥವು ‘ಸತ್ಯ ಮಾತ್ರ ಗೆಲ್ಲುತ್ತದೆ’ ಎಂದು.
Sತರಗತಿ ಚಟುವಟಿಕೆಗೆ ಸಲಹೆಗಳು:

“ಸತ್ಯಂ ವದ; ಧಮ೵ಂ ಚರ” ಎಂಬ ವೈದಿಕ ಆದೇಶದ ಬಗ್ಗೆ ತರಗತಿಯಲ್ಲಿ ಚಚಿ೵ಸಿ. ಮಕ್ಕಳಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಲಾಂಛನವನ್ನು ತೋರಿಸಿ ಹಾಗೂ ಅವುಗಳು ಮತ್ತು ಈ ವೈದಿಕ ಆದೇಶದ ನಡುವಿನ ಸಂಬಂಧದ ಬಗ್ಗೆ ತಿಳಿಸಿ.

Leave a Reply

Your email address will not be published. Required fields are marked *