ಬೆಣಚು ಕಲ್ಲುಗಳು ಅಥವಾ ನಾಣ್ಯಗಳು
ಬೆಣಚು ಕಲ್ಲುಗಳು ಅಥವಾ ನಾಣ್ಯಗಳು
ಚಟುವಟಿಕೆಯ ಉದ್ದೇಶ
ಲಕ್ಷ್ಮಿಯ ಕೈಗಳಲ್ಲಿರುವ ಶಂಖ, ಚಕ್ರ, ಗದಾ ಈ ಆಯುಧಗಳು ಕಾಲ (ಚಕ್ರ), ಶಬ್ದ (ಶಂಖ) ಹಾಗು ಗದಾ (ಶಕ್ತಿ)ಯನ್ನು ಪ್ರತಿನಿಧಿಸುತ್ತವೆ. ಇದರ ಬಗ್ಗೆ ಗ್ರೂಪ್ ಒಂದನೇ ಮಕ್ಕಳಿಗೆ ಅರಿವು ಮೂಡಿಸಲು ಹಾಗೂ ಈ ಅಮೂಲ್ಯ ಸಂಪತ್ತನ್ನು ಯಾವಾಗಲೂ ಹಾಳು ಮಾಡಬಾರದು ಎಂದು ತಿಳಿಸುವುದು ಈಚಟುವಟಿಕೆಯ ಉದ್ದೇಶ.
ಬೇಕಾಗುವ ಸಾಮಗ್ರಿಗಳು
ಬೆಣಚು ಕಲ್ಲುಗಳು ಅಥವಾ ನಾಣ್ಯಗಳು
ಆಡುವ ವಿಧಾನ:
- ಮಕ್ಕಳು ಗುರುವಿಗೆ ಬೆನ್ನು ತೋರಿಸುವ ಹಾಗೆ ವೃತ್ತಾಕಾರದಲ್ಲಿ ಕುಳಿತುಕೊಳ್ಳಬೇಕು. ಗುರುವು ವೃತ್ತದ ಮಧ್ಯದಲ್ಲಿ ಇರಬೇಕು.
- ಮಕ್ಕಳಿಗೆ ಕಣ್ಣು ಮುಚ್ಚಿಕೊಳ್ಳಲು ತಿಳಿಸಿ ಹಾಗೂ ಗಮನವಿಟ್ಟು ಕೇಳಿಸಿಕೊಳ್ಳಲು ಹೇಳಿ.
- ಈಗ ಗುರುವು ಒಂದು ಟಿನ್ ಡಬ್ಬದಲ್ಲಿ ಮೇಲಿಂದ ಒಂದೊಂದೇ ನಾಣ್ಯಗಳನ್ನು ಹಾಕುತ್ತಾ ಹೋಗಬೇಕು.
- ಡಬ್ಬದಲ್ಲಿ ಬೀಳುತ್ತಿರುವ ನಾಣ್ಯಗಳನ್ನು ಮಕ್ಕಳಿಗೆ, ಒಂದೊಂದಾಗಿ ಎಣಿಸುತ್ತಿರಬೇಕೆಂದು ಹೇಳಿ.
- ಪ್ರಾರಂಭದಲ್ಲಿ ಎಲ್ಲ ಮಕ್ಕಳು ಒಟ್ಟಾಗಿ, ಜೋರಾಗಿ ಎಣಿಸಲಿ.
- ಸ್ವಲ್ಪ ಸಮಯದ ನಂತರ ಮಕ್ಕಳಿಗೆ ತಮ್ಮ ತಮ್ಮ ಮನಸ್ಸಿನಲ್ಲೇ ಡಬ್ಬದಲ್ಲಿ ಬೀಳುತ್ತಿರುವ ನಾಣ್ಯಗಳನ್ನು ಎಣಿಸುತ್ತಿರಲು ಹೇಳಿ. ಕೆಲವು ಕಲ್ಲುಗಳನ್ನು ಗುರುವು ಡಬ್ಬದ ಹತ್ತಿರದಿಂದ ನಿಧಾನವಾಗಿ (ಹೆಚ್ಚು ಶಬ್ದ ಬರದ ಹಾಗೆ) ಬೀಳಿಸಲಿ.
- ಮಕ್ಕಳ ಆಲಿಸುವಿಕೆ ಮತ್ತು ಏಕಾಗ್ರತೆ ಹೆಚ್ಚುತ್ತಿದೆ ಅನಿಸಿದಾಗ ಗುರುವು ಸ್ವಲ್ಪ ಬೇಗ ಬೇಗ ನಾಣ್ಯಗಳನ್ನು ಹಾಕಲಿ. ಅಂದರೆ 2 ಅಥವಾ 3 ಕಲ್ಲುಗಳನ್ನು ಒಟ್ಟೊಟ್ಟಿಗೆ ಹಾಕಬಹುದು.
- ಮಕ್ಕಳಿಗೆ ನೆನಪು ಮಾಡಿ… ಮಕ್ಕಳೇ ನೀವು ಬೇರೆ ಯಾರ ಜೊತೆಗೂ ಸ್ಪರ್ಧಿಸುತ್ತಿಲ್ಲ, ನಿಮ್ಮೊಂದಿಗೆ (ನಿಮ್ಮ ಮನಸ್ಸಿನೊಂದಿಗೇ) ಸ್ಪರ್ಧಿಸುತ್ತಿದ್ದೀರಿ ಎಂದು.
ತರಗತಿಯಲ್ಲಿ ಚರ್ಚಿಸಬಹುದಾದ ಅಂತಹ ಪ್ರಶ್ನೆಗಳು
- ನಿಮಗೆಲ್ಲ ಈ ಚಟುವಟಿಕೆ ಇಷ್ಟವಾಯಿತೇ? ಏಕೆ?
- ಪ್ರಾರಂಭದಲ್ಲಿ ಏಕೆ ಬೇರೆ ಬೇರೆ ಉತ್ತರಗಳು ಬಂದವು?
- ಮಾತನಾಡುವುದನ್ನು ನಿಲ್ಲಿಸಿ ಗಮನವಿಟ್ಟು ಕೇಳಿದ್ದರಿಂದ ಏನಾದರೂ ಪ್ರಯೋಜನವಾಯಿತೇ? ಗಮನವಿಟ್ಟು ಕೇಳುವುದು ಕಷ್ಟವಾಯಿತೇ?
- ಮನಸ್ಸನ್ನು ಕೇಂದ್ರೀಕರಿಸುವಲ್ಲಿ ಮೌನವು ಅಷ್ಟೊಂದು ಮುಖ್ಯವಾಗುತ್ತದೆಯೇ?
- ಯಾವ ಯಾವ ರೀತಿಯಲ್ಲಿ ನಾವು ಕಾಲ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತಿದ್ದೇವೆ?
- ಭವಿಷ್ಯದಲ್ಲಿ ಕಾಲ ಮತ್ತು ಶಕ್ತಿಯನ್ನು ವ್ಯರ್ಥ ಮಾಡುವುದಿಲ್ಲ ಎಂದು ಯಾವ ರೀತಿಯಲ್ಲಿ ಭರವಸೆ ಕೊಡುತ್ತೀರಿ?
Inference:
ಗುರುವು ಚರ್ಚೆಯ ನಂತರ ಮಕ್ಕಳಿಗೆ ಕಾಲ (time), ಶಬ್ದ (sound) ಮತ್ತು ಶಕ್ತಿ (energy) ಯ ಬಗ್ಗೆ ವಿವರವಾಗಿ ತಿಳಿಸಿ, ಇವುಗಳು ದೇವರು ನಮಗೆ ಕೊಟ್ಟ ಅಮೂಲ್ಯ ಕೊಡುಗೆಗಳೆಂದು ವಿವರಿಸಿ, ಅವುಗಳನ್ನು ಹೇಗೆ ಒಳ್ಳೆಯ ರೀತಿಯಲ್ಲಿ ಉಪಯೋಗಿಸಬಹುದೆಂದು ತಿಳಿಸಿ ಹೇಳಬೇಕು.