ಪೂವ೵ರಾಮಂ ಶ್ಲೋಕ – ಹೆಚ್ಚಿನ ಓದುವಿಕೆ

Print Friendly, PDF & Email
ರಾಮನ ಕಥೆ

ರಾಮ ಕಥೆ ದಿವ್ಯ ಮಧುರತೆಯ ಝರಿಯಾಗಿ, ನಿರಂತರವಾಗಿ, ಪುರುಷ, ಮಹಿಳೆ, ಮಕ್ಕಳಿಗೆ ಸಾವಿರಾರು ವಷ೵ಗಳಿಂದ ಈ ಮಧುರತೆಯನ್ನು ಉಣಬಡಿಸುತ್ತಿದೆ. ಇದು ದುಃಖದಲ್ಲಿದ್ದಾಗ, ಸಾಂತ್ವಾನದ ಮೂಲವಾಗಿದೆ, ನಿವಾ೵ತದಿಂದ ನೆಲಸಮವಾದಾಗ (ಸರಿ-ತಪ್ಪುಗಳ ಅಯ್ಕೆಗಳ ಗೊಂದಲದಿಂದಾಗಿ ಚಂಚಲತೆಯಲ್ಲಿದ್ದಾಗ) ಚೈತನ್ಯದ ಚಿಲುಮೆಯಾಗಿದೆ. ಗೊಂದಲದಲ್ಲಿದ್ದಾಗ ದಾರಿದೀಪವಾಗಿ, ನಿರಾಶಾಭಾವದಲ್ಲಿದ್ದಾಗ, ಸ್ಫೂತಿ೵ಯಾಗಿ, ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಗ೵ದಶ೵ಕವಾಗಿದೆ. ರಾಮ ಕಥೆಯು ಮಾನವತೆಯ ಬಲಸತ್ವದ ತೀವ್ರತೆಯುಳ್ಳ ಕಥೆಯಾಗಿದೆ. ಇಲ್ಲಿ ದೇವರು ಮಾನವನಾಗಿ ಅವತರಿಸಿ, ಅವನ ಸುತ್ತಲೂ ವಿಶಾಲವಾದ ವಿಶ್ವರಂಗದಲ್ಲಿ ಪರಿಪೂಣ೵ರಾದ ಮತ್ತು ಅಪರಿಪೂಣ೵ರಾದ, ಮಾನವ ಮತ್ತು ಉಪಮಾನವ, ಮೃಗ ಮತ್ತು ರಾಕ್ಷಸ ಇವರೆಲ್ಲರನ್ನೂ ಒಟ್ಟುಗೂಡಿಸಿ, ನಮ್ಮ ಗ್ರಹಿಕೆಗೆ ಎಟಕುವಂತೆ ದೇವರು ತಾನೂ ನಾಟಕವಾಡಿ, ಬೇರೆಯವರಿಂದಲೂ ಆಡಿಸಿದ್ದಾನೆ. ಈ ಕಥೆಯನ್ನು ಸವೋ೵ಚ್ಛ ಜ್ಞಾನದ ವರವಾಗಿ ನಮಗೆ ಕರುಣಿಸಿದ್ದಾನೆ. ಇದು ಮನುಷ್ಯನ ಹೃದಯದ ತಂತಿಗಳ ಮೇಲೆ ತನ್ನ ಕೋಮಲ ಬೆರಳನ್ನಾಡಿಸುವ ಕಥೆ. ಈ ಕಥೆಯು ಲಲಿತ ನಿಮ೵ಲವಾದ ಕಾರುಣ್ಯ, ಅನುಕಂಪ, ವಿಜೃಂಭಣೆ, ಆರಾಧನೆ, ಭಾವಪರವಶತೆ ಮತ್ತು ಶರಣಾಗತಿ ಮುಂತಾದ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ. ನಮ್ಮನ್ನು ಪಶುತ್ವದಿಂದ ಮಾನವತ್ವದೆಡೆಗೆ ಹಾಗೂ ಅಲ್ಲಿಂದ ನಮ್ಮ ಅಂತಃಸತ್ಯ ಹಾಗೂ ತಿರುಳಾದ ದೈವತ್ವಕ್ಕೆ ರೂಪಾಂತರಗೊಳಿಸುತ್ತದೆ.

ಮಾನವ ಇತಿಹಾಸದಲ್ಲಿ ಬೇರೆಯಾವುದೇ ಕಥೆಯು ಮನುಷ್ಯನ ಮನಸ್ಸಿನ ಮೇಲೆ ಇಂತಹ ಆಳವಾದ ಪ್ರಭಾವ ಬೀರಿಲ್ಲ. ಇದು ಭೌಗೋಳಿಕ ಗಡಿಗಳನ್ನೂ ಮತ್ತು ಇತಿಹಾಸದ ಎಲ್ಲಾ ಘಟ್ಟಗಳನ್ನೂ ಮೀರಿದೆ. ಇದು ತಲತಲಾಂತರಗಳ ಜನರ ಜೀವನಾಭ್ಯಾಸ ಮತ್ತು ವತ೵ನೆಗಳನ್ನು ರೂಪಿಸಿ, ಸಂಸ್ಕರಿಸಿದೆ. ರಾಮನ ಕಥೆಯಾದ ರಾಮಾಯಣವು ಭೂಗೋಳದ ವಿಸ್ತಾರವಾದ ನಾನಾ ಪ್ರದೇಶಗಳಲ್ಲಿ ಮಾನವ ಕುಲದ ನರನಾಡಿಯಲ್ಲಿ ಒಂದು ರಕ್ಷಣಾ ಕವಚವಾಗಿ ಮಾಪ೵ಟ್ಟಿದೆ. ಇದು ಜನರ ಆತ್ಮಸಾಕ್ಷಿಯಲ್ಲಿ ಬೇರು ಬಿಟ್ಟಿದೆ. ಸತ್ಯ, ಧಮ೵, ಶಾಂತಿ ಮತ್ತು ಪ್ರೇಮದ ಹಾದಿಗಳಲ್ಲಿ ಅವರನ್ನು ಪ್ರಚೋದಿಸಿ, ಪ್ರೇರೇಪಿಸುತ್ತದೆ.

ದಂತಕಥೆಗಳಲ್ಲಿ, ಜೋಗುಳಗಳಲ್ಲಿ, ಪುರಾಣ ಕಥೆಗಳಲ್ಲಿ ನೃತ್ಯ ನಾಟಕಗಳ ಮೂಲಕ ಶಿಲ್ಪಕತೆ, ಸಂಗೀತ ಮತ್ತು ಚಿತ್ರಕತೆಗಳ ಮೂಲಕ ನಿತ್ಯ ಚರಣೆಯಲ್ಲಿ ಕವನ ಮತ್ತು ಚಿಹ್ನೆ, ಕುರುಹುಗಳ ಮೂಲಕ ರಾಮನು ಅಸಂಖ್ಯಾತ, ಅನ್ವೇಷಕರು ಮತ್ತು ಸಾಧಕರ ಉಸಿರಾಗಿದ್ದಾನೆ. ಅವರ ಆನಂದ ನಿಧಿಯಾಗಿ ಮಾಪಾ೵ಟಾಗಿದ್ದಾನೆ. ರಾಮಾಯಣದಲ್ಲಿನ ಪಾತ್ರಗಳು ಜನರು ತಮ್ಮನ್ನು ಅನುಸರಿಸಿ ಉನ್ನತ ಸ್ಥಿತಿ ತಲುಪಲು ಆಹ್ವಾನಿಸುತ್ತವೆ. ಅವರು ಅದ್ಭುತವಾದ ಸಾಹಸ ಮತ್ತು ಸಾದನೆಯ ಉಜ್ವಲ ದೃಷ್ಟಾಂತಗಳನ್ನು ನೀಡಿದ್ದಾರೆ. ನಿಷ್ಠೆಯಲ್ಲಿ ಅಸ್ಥಿರವಾಗಿರುವವರಿಗೆ ಅನೀತಿ, ಹಿಂಸೆ, ಗವ೵ ಮತ್ತು ಕ್ಷುಲ್ಲಕತೆಯ ಪರಿಣಾಮಗಳನ್ನು ವಿವರಿಸಿ, ಎಚ್ಚರಿಸಿದ್ದಾರೆ. ಅವರು ತಮ್ಮ ತತ್ವನಿಷ್ಠೆ ಮತ್ತು ಸ್ಥ್ಯೆಯ೵ದಿಂದ ಜನರನ್ನು ಪ್ರೋತ್ಸಾಹಿಸಿದ್ದಾರೆ. ಮನುಷ್ಯನ ನಾಲಿಗೆ ತನ್ನ ಭಾವನೆ, ಆಸೆಗಳನ್ನು ವ್ಯಕ್ತಪಡಿಸಲು ರೂಪಿಸುವ ಪ್ರತಿಯೊಂದು ಭಾಷೆ ಮತ್ತು ಉಪಭಾಷೆಗೆ ರಾಮನ ಕಥೆಯು ಒಂದು ವಿಶಿಷ್ಟವಾದ ನಿರಂತರ ಮಾಧುಯ೵ವನ್ನು ಸೇರಿಸುತ್ತಿದೆ.

“Science”, ವಿಜ್ಞಾನ ಈ ಭೂಮಿಯನ್ನು ಆಕಾಶ ನೌಕೆಯಂತೆ ಮಾಡಿದೆ. ಆಕಾಶ ನೌಕೆಯು ಒಂದು ದಟ್ಟ, ನಿಬಿಡವಾದ ವ್ಯವಸ್ಥೆ. ಅದರಲ್ಲಿನ ಎಲ್ಲಾ ಭಾಗಗಳೂ, ಚಟುವಟಿಕೆಗಳೂ ಅತೀ ಮುಖ್ಯ. ಇಂತಹ ನಾಜೂಕಿನ ಜಗತ್ತಲ್ಲಿ ಮಾನವತೆಯು ಸುದೀಘ೵ ಕಾಲದವರೆಗೂ ತನ್ನ ನಿದಿ೵ಷ್ಟಾವಧಿ ಪೂರೈಸಬೇಕು. “Sai-ence”, ನಮಗೆ ತಿಳಿದಿರುವ ಹಾಗೆ ಅತಿ ವೇಗವಾಗಿ ಈ ಆಕಾಶ ನೌಕೆಯನ್ನು ಪ್ರೇಮದ, ಆನಂದದ ಮನೆಯನ್ನಾಗಿ ರೂಪಿಸುತ್ತಿದೆ. ಈ ಪುಸ್ತಕವನ್ನು ಸಾಯಿಯು ತಮ್ಮ ಸಂಕಲ್ಪದಿಂದ, ಜಾಗತಿಕ ಪ್ರೇಮಕ್ಕೆ ಅಡ್ಡಿ ಉಂಟು ಮಾಡುವ ದುಷ್ಟತೆಗಳನ್ನು ತೆಗೆದುಹಾಕಲು ಒಂದು ಪ್ರಮುಖ ಸವ೵ರೋಗ ನಿವಾರಕವಾದ ರಾಮಬಾಣವನ್ನಾಗಿ ಮಾಡಿದ್ದಾರೆ.

ನವೆ-ತುರುಕೆಯು ನಮ್ಮನ್ನು ಕಾಡುವ ಹಾಗೆ ಇಂದ್ರಿಯ ಸುಖಗಳು ನಮ್ಮನ್ನು ಈ ಜಗತ್ತಿನಲ್ಲಿ ಕಾಡುತ್ತಿದೆ. ಪೋಷಕರು, ಶಿಕ್ಷಕರು, ಹಿರಿಯರು. ಆಧ್ಯಾತ್ಮಿಕ ಮುಖಂಡರು ಮತ್ತು ಮಾರ್ಗದರ್ಶಕರ ಬಗ್ಗೆ ಸಮಾಜದಲ್ಲಿ ಉದಾಸೀನತೆ, ಅಸಡ್ದೆ ಹೆಚ್ಚುತ್ತಿದೆ. ಸಾಮಾಜಿಕ, ವೈವಾಹಿಕ ಮತ್ತು ಕೌಟುಂಬಿಕ ಸಂಬಂಧಗಳ ವಿಚಾರದಲ್ಲಿ ಗಂಭೀರತೆ ಇಲ್ಲದೆ, ಹುಡುಗಾಟಿಕೆಯಿಂದ ವಿನಾಶಕಾರಿ ಬೆಳವಣಿಗೆಯಾಗುತ್ತಿದೆ. ಜನರು ತಮ್ಮ ತಮ್ಮ ಸ್ವಾರ್ಥ ಗುರಿಗಳನ್ನು ಸಾಧಿಸಲು, ರಾಕ್ಷಸೀ ರೀತಿಯಲ್ಲಿ ಹಿಂಸಾಚಾರವನ್ನು ಅವಲಂಬಿಸಿದ್ದಾರೆ. ತಮಗಷ್ಟೇ ಮತ್ತು ತಮ್ಮ ಬಳಗದವರಿಗೇ ಲಾಭಗಳಿಸುವುದಕ್ಕಾಗಿ ಭಯೋತ್ಪಾದನೆ ಮತ್ತು ಚಿತ್ರಹಿಂಸೆಗಳಿಗೆ ಸದಾ ಸಿದ್ಧವಾದವರು ಇಲ್ಲಿದ್ದಾರೆ. ಇಷ್ಟೇ ಅಲ್ಲದೆ, ಮತ್ತಷ್ಟು ದುಷ್ಟತೆ ಇದ್ದರೂ, ಈ ಜಗತ್ತಿನಲ್ಲಿ ಸಾಯಿಯ ಸಂಕಲ್ಪ ಮುನ್ನಡೆಯುತ್ತಿದೆ.

ಸಾಯಿ ರಾಮನು ತಮ್ಮದೇ ಆದ ಸರಳ, ಸಿಹಿ ಮತ್ತು ಸುಸ್ಥಿರ ಶೈಲಿಯಲ್ಲಿ, ತಮ್ಮದೇ ದೈವಿಕ ಜೀವನವಾದ ರಾಮನ ಕಥೆಯನ್ನು ಪುನಃ ಉಚ್ಚರಿಸಿದ್ದಾರೆ. ಈ ದೈವಿಕ ಆಖ್ಯಾನ ನಮ್ಮ ಕೈಯಲ್ಲಿದೆ, ನಮ್ಮ ಮನಸ್ಸಿನಲ್ಲಿ ಬರೆಯಲು, ನಮ್ಮ ಹೃದಯದಲ್ಲಿ ಮದ್ರೆ ಮಾಡಲು ತಯಾರಿಸಿದೆ. ಇದು ಯಾವುದೋ ದೊಡ್ಡ ಅದೃಷ್ಟವೇ ಸರಿ. ಈ ಪುಸ್ತಕದ ಅಧ್ಯಯನದಿಂದ ನಮ್ಮನ್ನು ನಾವು ಸಂಸ್ಕರಿಸಿಕೊಳ್ಳೋಣ. ಸಾಯಿಯ ಧ್ಯೇಯವಾದ, ಮಾನವಕುಲವನ್ನೇ ಒಂದು ಕುಟುಂಬವಾಗಿ ರೂಪಿಸುವುದು, ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇರುವ, ನೈಜವಾದ ವಾಸ್ತವಿಕತೆಯಾದ-ಸಾಯಿ ರಾಮನನ್ನು ಅರಿತುಕೊಳ್ಳುವಂತೆ ಮಾಡುವುದು, ಇವನ್ನು ಪೂರ್ಣಗೊಳಿಸುವ ಉತ್ಸಾಹಭರಿತ ಸಾಧನಗಳಾಗೋಣ.

ಸಾಯಿ, ಅವರ ಪೂರ್ವದ ಸಹಚರರು ಮತ್ತು ಕೆಲಸಗಾರರನ್ನು ಹುಡುಕುತ್ತಿದ್ದಾರೆ (‘ಬಂಟು’ ಎಂದು ಅವರನ್ನು ತೆಲುಗಿನಲ್ಲಿ ಬಾಬಾ ಕರೆಯುತ್ತಾರೆ) ಅವರ ಪ್ರಸ್ತುತ ಧ್ಯೇಯವಾದ ಧರ್ಮದ ಪುನರುಜ್ಜೀವನ ಮತ್ತು ಮನುಷ್ಯನನ್ನು ಶಾಂತಿಯ ಸ್ವರ್ಗಕ್ಕೆ ಕರೆದೊಯ್ಯುವುದು, ಈ ಕಾರ್ಯದಲ್ಲಿ ಪಾತ್ರಗಳನ್ನು ಹಂಚಲು ಹುಡುಕುತ್ತಿದ್ದಾರೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದಾನೊಂದು ಪಾತ್ರ ಸಿಗಲಿ ಮತ್ತು ಸಾಯಿ ಸೇವೆಯು ಪ್ರತಿಫಲವಾಗಿ ಆ ಸ್ವರ್ಗದ ದರ್ಶನವನ್ನು ನೀಡಲಿ.

[ಶ್ರೀ ನಾ. ಕಸ್ತೂರಿಯವರ ‘Forward for Ramakatha Rasavahini’ ಇಂದ]

ಈ ಕಥೆಯ ಆತಂರಿಕ ಮಹತ್ವ, ಆಂತರಿಕ ಅರ್ಥವೇನೆಂದು ನೋಡೋಣ.

ಶ್ರೀ ಕಸ್ತೂರಿ – ರಾಮ ಕಥಾ ರಸವಾಹಿನಿ:

ರಾಮನು ಪ್ರತಿಯೊಬ್ಬರ ದೇಹದ ಅಂತರವಾಸಿ, ಅವನು ಆತ್ಮ-ರಾಮ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ರಾಮನಿದ್ದಾನೆ (ಆನಂದದ ಮೂಲ). ಆತ್ಮದ ಒಳ ಚಿಲುಮೆಯಿಂದ ಚಿಮ್ಮುತ್ತಿರುವ ಆತನ ಆಶೀರ್ವಾದವು ಶಾಂತಿ ಮತ್ತು ಆನಂದವನ್ನು ನೀಡುತ್ತಿದೆ. ಅವನು ಧರ್ಮದ ಮೂರ್ತರೂಪವಾಗಿದ್ದಾನೆ, ಪ್ರೀತಿ ಮತ್ತು ಏಕತೆಯಲ್ಲಿ ಮಾನವಕುಲವನ್ನು ಒಟ್ಟಿಗೆ ಹಿಡಿದಿರುವ ನೈತಿಕತೆಯ ಮೂರ್ತರೂಪವಗಿದ್ದಾನೆ. ರಾಮಾಯಣ, ರಾಮನ ಕಥೆ ಏರಡು ಪಾಠಗಳನ್ನು ಕಲಿಸುತ್ತದೆ: ೧) ನಿರ್ಮೋಹತ್ವದ ಮೌಲ್ಯ ೨) ಪ್ರತಿಯೊಂದು ಜೀವಿಯಲ್ಲೂ ಇರುವ ದೈವಿಕತೆಯ ಅರಿವು ಮೂಡಿಸಿಕೊಳ್ಳುವ ಅವಶ್ಯಕತೆ.

ದೇವರ ಮೇಲಿನ ಶ್ರದ್ಧೆ ಮತ್ತು ಪ್ರಾಪಂಚಿಕ ಕರ್ಮಗಳ ಫಲದ ತ್ಯಾಗ, ಇವೆರಡೇ ಮಾನವ ವಿಮೋಚನೆಯ ಕೀಲಿ ಕೈಗಳಾಗಿವೆ. ಪ್ರಾಪಂಚಿಕ ವಸ್ತುಗಳನ್ನು ಬಿಟ್ಟರೆ ನೀವು ರಾಮನನ್ನು ಪಡೆಯುತ್ತೀರಿ. ಸೀತೆ ಅಯೋಧ್ಯೆಯ ಐಷರಾಮಿ ಜೀವನವನ್ನು, ರಾಮನ ಬಳಿ ಇರಲು ಬಿಟ್ಟುಕೊಟ್ಟಳು, ಆದ್ದರಿಂದ ಅವಳು “ವನವಾಸದ” ಅವಧಿಯಲ್ಲಿ ರಾಮನೊಂದಿಗೆ ಇರಲು ಸಾಧ್ಯವಯಿತು. ಅವಳು ಚಿನ್ನದ ಮಾಯಾ ಜಿಂಕೆಯನ್ನು ಆಸೆಯ ಕಣ್ಣುಗಳಿಂದ ನೋಡಿ, ಅದಕ್ಕಾಗಿ ಹಂಬಲಿಸಿದಾಗ, ಅವಳು ರಾಮನ ಉಪಸ್ಥಿತಿಯನ್ನು ಕಳೆದುಕೊಂಡಳು. ತ್ಯಾಗವು (ಪ್ರಾಪಂಚಿಕ ವಸ್ತು, ಸುಖದ ಅಪೇಕ್ಷೆಯ ತ್ಯಾಗ) ಸಂತೋಷಕ್ಕೆ ಕಾರಣವಾಗುತ್ತದೆ; ಮೋಹತ್ವವು, ಮಮತ್ವವು ದುಃಖವನ್ನು ತರುತ್ತದೆ. ಜಗತ್ತಿನಲ್ಲಿ ಇದ್ದೂ ಅದರಲ್ಲಿ ಇರದ್ದಿದ್ದ ಹಾಗೆ ಇರಬೇಕು.

ರಾಮನ ಪ್ರತಿಯೊಬ್ಬ ಸಹೋದರ, ಜೊತೆಗಾರ, ಒಡನಾಡಿ ಮತ್ತು ಗೆಳೆಯನು ಧರ್ಮದಿಂದ ತುಂಬಿ ತುಳುಕುವ ವ್ಯಕ್ತಿತ್ವದ ಉದಾಹರಣೆಯಾಗಿದ್ದಾರೆ. ದಶರಥನು ಹತ್ತು ಇಂದ್ರಿಯಗಳೊಂದಿಗೆ ಕೇವಲ ಭೌತಿಕತೆಯ ಪ್ರತಿನಿಧಿಯಾಗಿದ್ದಾನೆ. ಮೂರು ಗುಣಗಳು- ಪ್ರಶಾಂತತೆ, ಚಟುವಟಿಕೆ ಮತ್ತು ಅಜ್ಞಾನ (ಸಾತ್ವಿಕ, ರಾಜಸಿಕ, ತಾಮಸಿಕ) – ಎಂಬ ಮೂರು ರಾಣಿಯರು. ಜೀವನದ ನಾಲ್ಕು ಗುರಿಗಳು, ಪುರುಷಾರ್ಥಗಳು – ಅವು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ – ಇದೇ ನಾಲ್ಕು ಗಂಡು ಮಕ್ಕಳು. ಲಕ್ಷ್ಮಣನೇ ಬುದ್ಧಿ; ಸುಗ್ರೀವ ಎಂದರೆ ವಿವೇಕ; ವಾಲಿ ಹತಾಶೆ; ಮತ್ತು ಹನುಮಂತ ಧೈರ್ಯದ ಸಾಕಾರ ರೂಪ.

ಈ ಭ್ರಮೆಯಂತಿರುವ, ಭವ ಬಂಧನದ ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸಲಾಗಿದೆ. ಮೂರು ರಾಕ್ಷಸ ಮುಖ್ಯಸ್ಧರು, ರಾವಣ, ಕುಂಭಕರ್ಣ ಮತ್ತು ವಿಭೀಷಣ ಇವರು ರಾಜಸಿಕ, ತಾಮಸಿಕ ಮತ್ತು ಸಾತ್ವಿಕ ಗುಣಗಳ ವ್ಯಕ್ತಿತ್ವಗಳು. ಸೀತೆಯು ಸರ್ವರಲ್ಲಿ ಇರುವ ದೈವತ್ವವನ್ನು ಅರಿತುಕೊಂಡ (ಬ್ರಹ್ಮ-ಜ್ಞಾನ ಜಾಗೃತವಾಗಿಸಿಕೊಂಡ) ಜೀವ. ಈ ಜ್ಞಾನವನ್ನು ವ್ಯಕ್ತಿಯು, ಜೀವವೆಂಬ ಕುಲುಮೆಯಲ್ಲಿ ಸಂಪಾದಿಸಿ, ತೊಂದರೆಗಳನ್ನು ಅನುಭವಿಸುವಾಗ ಅದನ್ನು ಬಿಡದೆ, ಮರಳಿ ಪಡೆಯಬೇಕು. ರಾಮಯಣದ ಹಿರಿಮೆಯನ್ನು ಆಲೋಚಿಸುತ್ತಾ ನಿಮ್ಮ ಹೃದಯವನ್ನು ಶುದ್ಧ ಮತ್ತು ಸದೃಢವಾಗಿ ಮಾಡಿಕೊಳ್ಳಿರಿ. ರಾಮನೇ ನಿಮ್ಮ ಅಸ್ತಿತ್ವದ ವಾಸ್ತವತೆ ಮತ್ತು ನೈಜ ರೂಪ ಎಂಬ ಶ್ರದ್ಧೆಯಲ್ಲಿ ಧೃಢವಾಗಿರಿ.

[ಬಾಬಾ – ರಾಮಕಥ ರಸವಾಹಿನಿ]

‘ರಾಮ’ ಎಂಬ ಹೆಸರು ವೇದಗಳ ಸಾರ. ರಾಮನ ಕಥೆಯು ಹಾಲಿನ ಸಾಗರದಂತೆ ಶುದ್ಧ ಮತ್ತು ಅಗಾಧ. ಈ ಕಥೆಗೆ ಸಮಾನಾವಾದ ವೈಭವತೆ, ಸೌಂದರ್ಯತೆ ಬೇರೆ ಯಾವುದೇ ಕವಿತೆಯಲ್ಲಿ, ಇತರ ಭಾಷೆಗಳ ಅಥವಾ ಇತರ ದೇಶಗಳ ಕಥೆ, ಕವಿತೆಗಳಲ್ಲಿ ಈ ದಿನದವರೆಗೂ ಹೊರಹೊಮ್ಮಿಲ್ಲ ಎಂದು ಪ್ರತಿಪಾದಿಸಬಹುದು; ಆದರೆ ಇದು ಪ್ರತಿಯೊಂದು ಭಾಷೆ ಮತ್ತು ದೇಶದ ಕಾವ್ಯಾತ್ಮಕ ಕಲ್ಪನೆಗೆ ಸ್ಫೂರ್ತಿ ನೀಡಿದೆ. ಪ್ರತಿಯೊಬ್ಬ ಭಾರತೀಯನೂ ಅವನ ಅದೃಷ್ಟದಿಂದ ಪಾರಂಪರಿಕವಾಗಿ ಪಡೆದ ದೊಡ್ಡ ನಿಧಿ ಇದು.

ರಾಮಯಣವು ವೈಭವೀಕರಿಸುವ ಹೆಸರು (ರಾಮ), ಎಲ್ಲಾ ದುಷ್ಟತೆಗಳನ್ನು ಶುದ್ಧಗೊಳಿಸುತ್ತದೆ. ಇದು ಪಾಪಿಯನ್ನು ಪರಿವರ್ತಿಸುತ್ತದೆ; ರಾಮಯಣವು, ಹೆಸರಿನಂತೆಯೇ ಆಕರ್ಷಕವಾದ ರೂಪ ಇರುವ ಯಾವ ಹೆಸರನ್ನು ವರ್ಣಿಸುತ್ತದೆಯೋ ಆ ರೂಪವನ್ನು ಸಾಕ್ಷತ್ಕರಿಸುತ್ತದೆ. ಸಮುದ್ರವು ಭೂಮಿಯಲ್ಲಿರುವ ಎಲ್ಲಾ ನೀರಿನ ಮೂಲವಾಗಿರುವ ಹಾಗೆ, ಎಲ್ಲಾ ಜೀವಿಗಳು ‘ರಾಮ’ ನಿಂದ ಜನಿಸುತ್ತವೆ. ನೀರಿಲ್ಲದೆ ಸಮುದ್ರಕ್ಕೆ ಹೇಗೆ ಅಸ್ಧಿತ್ವವಿಲ್ಲವೋ, ಹಾಗೆಯೇ ‘ರಾಮ’ನಿಲ್ಲದೆ ಜೀವಿಗಳು ಈಗ ಅಥವಾ ಎಂದಿಗೂ ಅಸ್ತಿತ್ವದಲ್ಲಿರುವುದಿಲ್ಲ. ಮನಮೋಹಕವಾದ ನೀಲಿ ಸಾಗರ ಮತ್ತು ಸರ್ವಶಕ್ತ ಭಗವಂತನಲ್ಲಿ ಹೀಗೆ ಹೆಚ್ಚು ಸಾಮ್ಯತೆಗಳಿವೆ.

ರಾಮ-ಕಥೆಯ ಝರಿಯು ಅನೇಕ ಕಡೆ ಬಾಗಿ, ಅನೇಕ ತಿರುವುಗಳ ಮೂಲಕ ವಿಹರಿಸುತ್ತದೆ; ಅದೇನೇ ಇದ್ದರೂ, ಕರುಣೆಯ ಮಾಧುರ್ಯದ (ಮೃದುತ್ವ, ಅನುಕಂಪ ಮತ್ತು ಸಹಾನುಭೂತಿ) ನಿರೂಪಣೆಯು ಉದ್ದಕ್ಕೂ ಕಡಿಮೆಯಾಗದೆ ಮುಂದುವರಿಸುತ್ತದೆ, ದುಃಖ, ಆಶ್ಚರ್ಯ, ಅಪಹಾಸ್ಯ, ವಿಸ್ಮಯ, ಭಯ, ಪ್ರೀತಿ, ಹತಾಶೆ ಮತ್ತು ತರ್ಕದ ಮೂಲಕ ಈ ಝರಿಯು ತಿರುಗುತ್ತಾ ಪ್ರವಾಸ ಮಡುತ್ತದೆ. ಆದರೆ ಮುಖ್ಯ ಒಳಹರಿವು ಸದಾ ಧರ್ಮದ (ಸದಾಚಾರ, ನೈತಿಕತೆ) ಹರಿವು ಮತ್ತು ಅದು ಬೆಳೆಸುವ ಕರುಣೆಯದು (ಸಹಾನುಭೂತಿ).

(ಪು.೧&೨ -ರಾಮಕಥ ರಸವಾಹಿನಿ)

Leave a Reply

Your email address will not be published. Required fields are marked *