Public places

Print Friendly, PDF & Email
ಶೀರ್ಷಿಕೆ: ಎಲ್ಲರಲ್ಲೂ ದೇವರನ್ನು ನೋಡಿ
ಸ್ಥಳಗಳು: ಸಾರ್ವಜನಿಕ ಸ್ಥಳಗಳು (ಮಾರುಕಟ್ಟೆ, ದೇವಾಲಯ)
ಪಾತ್ರಗಳು: ರವಿ, ಅಜಿತ್, ಅವರ ತಾಯಿ ಇಬ್ಬರು ಭಿಕ್ಷುಕರು
ಸಂಬಂಧಿತ ಮೌಲ್ಯಗಳು: ಆರೈಕೆ ಮತ್ತು ಹಂಚಿಕೆ
ದೃಶ್ಯ:
ತಾಯಿ: ದೇವರ ಅರ್ಪಣೆಗಾಗಿ ಕೆಲವು ಸಿಹಿತಿಂಡಿಗಳು, ಹಣ್ಣುಗಳು ಮತ್ತು ಹೂವುಗಳನ್ನು ಖರೀದಿಸೋಣ.  ದೇವರ ಅನುಗ್ರಹದಿಂದ ನೀವು ಮುಂದಿನ ತರಗತಿಗೆ ಹೋಗುತ್ತಿದ್ದೀರಿ.
(ಖರೀದಿಸಿದ ನಂತರ ಅವರು ದೇವಾಲಯದ ದ್ವಾರವನ್ನು ತಲುಪಲಿದ್ದಾರೆ. ಒಬ್ಬ ಬಡ ಮಹಿಳೆ ತನ್ನ ಮಗನೊಂದಿಗೆ ಓಡಿ ಬರುತಿದ್ದಾಳೆ).
ರವಿ: ಅರೆ! ದೂರ ಹೋಗು, ಇವು ದೇವರ ಅರ್ಪಣೆಗಾಗಿ (ಬಡ ಮಹಿಳೆ ಅಲ್ಲೇ ನಿಂತಿದ್ದಾಳೆ)
ಅಜಿತ್: ನೀವು ಇನ್ನೂ. ಇಲ್ಲೇ ನಿಂತಿದ್ದೀರಿ. ಅಮ್ಮಾ ಅವರು ದಿಟ್ಟಿಸಿ ಹಣ್ಣುಗಳನ್ನೇ ನೋಡುತ್ತಿದ್ದಾರೆ. ಅವರನ್ನು ದೂರ ಕಳುಹಿಸಿ.
ಇಬ್ಬರು ಭಿಕ್ಷುಕರು: ನಾವು ಇಡೀ ದಿನ ಊಟ ಮಾಡಿಲ್ಲ. ಆದ್ದರಿಂದ ತುಂಬಾ ಹಸಿವಾಗಿದೆ.
ತಾಯಿ: ಈ ಹಣ್ಣುಗಳನ್ನು ತೆಗೆದುಕೊಳ್ಳಿ.
ಇಬ್ಬರು ಭಿಕ್ಷುಕರು: ದೇವರು ನಿಮ್ಮನ್ನು ಆಶೀರ್ವದಿಸಲಿ ಅಮ್ಮಾ! (ಹಣ್ಣುಗಳನ್ನು ತೆಗೆದುಕೊಂಡು ಹೊರಟರು)
ಅಜಿತ್: ಅಮ್ಮ ನೀವು ಏನು ಮಾಡಿದ್ದೀರಿ? ನೀವು ಖರೀದಿಸಿದ ಹಣ್ಣುಗಳನ್ನು ಅವರಿಗೆ ನೀಡಿದ್ದೀರಿ. ಈ ರೀತಿ ಭಿಕ್ಷೆ ಬೇಡುವುದು ಅವರ ಅಭ್ಯಾಸ.
ರವಿ: ನಮ್ಮ ಹರಕೆ ಪೂರೈಸದ ಕಾರಣ ದೇವರು ನಮ್ಮ ಮೇಲೆ ಕೋಪಗೊಳ್ಳುತ್ತಾನೆ.
ತಾಯಿ: ಇಲ್ಲ ರವಿ, ಬದಲಿಗೆ ದೇವರು ನಮ್ಮ ಬಗ್ಗೆ ಸಂತೋಷ ಪಡುತ್ತಾನೆ.
ರವಿ: ಸಂತೋಷ ಪಡುತ್ತಾನ? ನಾನು ಹಾಗೆ ಯೋಚಿಸುವುದಿಲ್ಲ, ಅದು ಹೇಗೆ ಅಮ್ಮಾ?
ತಾಯಿ: ನಾವು ಅವರನ್ನು ನಿರ್ಲಕ್ಷಿಸಿ ಈ ಹಣ್ಣುಗಳನ್ನು ದೇವಾಲಯದಲ್ಲಿ ಅರ್ಪಿಸಿದ್ದಿದ್ದರೆ, ನಾನು ಅವರನ್ನು ಅಸಮಾಧಾನಗೊಳಿಸುತ್ತಿದ್ದೆವು.
ಅಜಿತ್: ಆದರೆ ಏಕೆ?
ತಾಯಿ: ನೀನು ರವಿಯನ್ನು ನಿರ್ಲಕ್ಷಿಸಿ ಐಸ್ ಕ್ರೀಮ್ ತಿಂದರೆ, ಆವಾಗ ನಾನು ಸಂತೋಷವಾಗಿರುವೆನೇ?
ಅಜಿತ್: ಇಲ್ಲ ನೀವು ನನ್ನ ಮೇಲೆ ಕೋಪಗೊಳ್ಳುವಿರಿ.
ತಾಯಿ: ಖಂಡಿತವಾಗಿ, ದೇವರು ಕೂಡ ಹಾಗೆ. ಇದಲ್ಲದೆ, ಅವರಿಬ್ಬರೂ ತುಂಬಾ ಹಸಿದಿದ್ದರು, ನೆನಪಿಡಿ! ದೇವರು ಪ್ರತಿಯೊಬ್ಬರಲ್ಲು ವಾಸಿಸಿದ್ದಾನೆ. ಎಲ್ಲರಲ್ಲೂ ದೇವರನ್ನು ನೋಡಬೇಕು.
ರವಿ ಮತ್ತು ಅಜಿತ್: ನಿಜ ಅಮ್ಮಾ , ಪ್ರತಿಯೊಬ್ಬರಲ್ಲೂ ದೇವರನ್ನು ನೋಡಬೇಕೆಂದು ನಮಗೆ ಅರಿವಾಯಿತು.

Leave a Reply

Your email address will not be published. Required fields are marked *