ಪುರುಷ: ಸ: ಪರ: – ಹೆಚ್ಚಿನ ಓದುವಿಕೆ

Print Friendly, PDF & Email
ಪುರುಷ: ಸ: ಪರ: – ಹೆಚ್ಚಿನ ಓದುವಿಕೆ
ಪುರುಷ: ಸ: ಪರ: ಪಾರ್ಥ ಭಕ್ತ್ಯಾ ಲಭ್ಯಸ್ ತ್ವ ಅನನ್ಯಯಾ
ಯಸ್ಯ ಅಂತಸ್ಥಾನಿ ಭೂತಾನಿ ಯೇನ ಸರ್ವಮ್ ಇದಂ ತತಮ್

(ಅಧ್ಯಾಯ 8 ಶ್ಲೋಕ 22)

ಓ ಪಾರ್ಥ, ಪರಮಪುರುಷನನ್ನು ಅನನ್ಯ ಭಕ್ತಿಯಿಂದ ಪಡೆಯಲು ಸಾಧ್ಯ. ಅವನಿಂದಲೇ ಎಲ್ಲವೂ ವ್ಯಾಪ್ತವಾಗಿದೆ ಮತ್ತು ಅವನೊಳಗೇ ಎಲ್ಲ ಜೀವಗಳೂ ಇವೆ.

ಬಾಬಾರವರು ಹೇಳುತ್ತಾರೆ “ಯಾವ ಪರಮಾತ್ಮನ ಒಳಗೆ ಎಲ್ಲಾ ಜೀವಿಗಳು ವಾಸಿಸುತ್ತವೆಯೋ ಹಾಗೂ ಯಾರು ಎಲ್ಲರೊಳಗೂ ವಾಸಿಸುತ್ತಿದ್ದಾನೋ ಅವನನ್ನು ತದ್ಭಾವ ಪ್ರೇಮದಿಂದ ಪಡೆಯಬಹುದೇ ಹೊರತು ಒಣ ಆಚರಣೆಗಳಿಂದ ಪಡೆಯಲು ಸಾಧ್ಯವಿಲ್ಲ.”

ಇಡೀ ಜಗತ್ತು ಜಗದೀಶನಿಂದ ಆವರಿಸಲ್ಪಟ್ಟಿದೆ. ಭಗವಂತನು ಎಲ್ಲಾ ಸ್ಥಳಗಳಲ್ಲೂ, ಎಲ್ಲಾ ವಸ್ತುಗಳಲ್ಲೂ ನಿತ್ಯವೂ ನಿರಂತರವಾಗಿ ಇರುವುದರಿಂದ ಅವನ ಇರುವಿಕೆ ಮತ್ತು ಅವನ ಮಹಿಮೆಯನ್ನು ಅನುಭವಿಸಲು ಯಾವುದೇ ನಿರ್ದಿಷ್ಠ ಅಥವಾ ವಿಶೇಷ ಸ್ಥಳ ಎಂಬುದು ಇಲ್ಲ.”

ಗೋಪಿಕಾ ಸ್ತ್ರೀಯರ ಭಕ್ತಿ:

ಒಮ್ಮೆ ಶ್ರೀಕೃಷ್ಣನು ನಾರದರನ್ನೂ ಸೇರಿಸಿದಂತೆ ರುಕ್ಮಿಣಿ , ಸತ್ಯಭಾಮ ಇವರೆಲ್ಲರ ಭಕ್ತಿಗಿಂತ ಬೃಂದಾವನದಲ್ಲಿ ಇರುವ ಅನಕ್ಷರಸ್ಥ ದನ ಕಾಯುವ ಗೋಪಿಕಾ ಸ್ತ್ರೀಯರ ಭಕ್ತಿಯು ಶ್ರೇಷ್ಠವಾದುದು ಎಂದು ನಿರೂಪಿಸಲು ಒಂದು ಸಣ್ಣ ನಾಟಕ ಮಾಡಿದನು. ಅದರಂತೆ ಕೃಷ್ಣನು ತಾನು ವಿಪರೀತ ತಲೆನೋವಿನಿಂದ ಬಳಲುತ್ತಿರುವಂತೆ, ಹಾಗೂ ಯಾರಾದರೂ ಒಬ್ಬ ಭಕ್ತನ ಪಾದಧೂಳಿಯನ್ನು ತನ್ನ ಹಣೆಗೆ ಹಚ್ಚಿಕೊಂಡರೆ ಮಾತ್ರ ತಲೆನೋವು ವಾಸಿಯಾಗುವುದು ಎಂದೂ ತಿಳಿಸಿದನು. ಪರಮಾತ್ಮನಾದ ಶ್ರೀಕೃಷ್ಣನ ಹಣೆಗೆ ತಮ್ಮ ಪಾದಧೂಳಿ ಹಚ್ಚಿ ಅವನ ದಿವ್ಯ ಹಣೆಗೆ ಅಪವಿತ್ರ ಮಾಡಲು ಇಷ್ಟವಿಲ್ಲದ ಕಾರಣ ನಾರದರೂ ಸೇರಿದಂತೆ ರುಕ್ಮಿಣಿ, ಸತ್ಯಭಾಮರು ತಮ್ಮ ತಮ್ಮ ಪಾದಧೂಳಿಯನ್ನು ಅರ್ಪಿಸಲು ಮುಂದೆ ಬರಲಿಲ್ಲ.

ಆಗ ಕೃಷ್ಣನು ನಾರದರಲ್ಲಿ ಬೃಂದಾವನದಲ್ಲಿರುವ ಗೋಪಿಕೆಯರಿಂದ ಅವರ ಪಾದಧೂಳಿಯನ್ನು ಕೇಳಿ ಪಡೆದು ತೆಗೆದುಕೊಂಡು ಬರಲು ತಿಳಿಸುತ್ತಾನೆ. ಇದರಂತೆ ನಾರದರು ಗೋಪಿಕಾ ಸ್ತ್ರೀಯರ ಬಳಿ ಪಾದಧೂಳಿಯನ್ನು ಕೇಳಿದಾಗ ಅವರು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ತಮ್ಮ ಪಾದಧೂಳಿಯನ್ನು ತೆಗೆದುಕೊಟ್ಟರು. ಅವರ ಈ ಕಾರ್ಯದಿಂದ ಆಗಬಹುದಾದ ಕೆಟ್ಟ ಪರಿಣಾಮದ ಬಗ್ಗೆ ನಾರದರು ಎಚ್ಚರಿಕೆಕೊಟ್ಟರೂ ಅವರು ಹಿಂಜರಿಯಲಿಲ್ಲ.

ಏಕೆಂದರೆ ಅವರಿಗೆ ತಮ್ಮ ಪ್ರೀತಿಪಾತ್ರನಾದ ಶ್ರೀಕೃಷ್ಣನ ತಲೆನೋವಿಗೆ ತಕ್ಷಣದ ಪರಿಹಾರ ಒದಗಿಸಬೇಕು ಎಂಬುದೊಂದೇ ಅವರಿಗಿದ್ದ ಕಾಳಜಿಯಾಗಿತ್ತು. ಯಾವ ಕ್ಷಣದಲ್ಲಿ ಗೋಪಿಕಾ ಸ್ತ್ರೀಯರು ಅವರ ಪಾದಧೂಳಿಯನ್ನು ಕೃಷ್ಣನಿಗೋಸ್ಕರ ಅರ್ಪಿಸಿದರೋ ಆ ಕ್ಷಣದಲ್ಲಿ ಕೃಷ್ಣನ ತಲೆನೋವು ಕಡಿಮೆಯಾಯಿತು.

ಭಗವಂತನು ಎಲ್ಲಾ ವಸ್ತುಗಳಲ್ಲೂ, ಎಲ್ಲಾ ಜೀವಿಗಳಲ್ಲೂ, ಎಲ್ಲರ ಪಾದಗಳಲ್ಲೂ ಅಲ್ಲದೇ ಪ್ರತೀ ಪಾದಧೂಳಿಯಲ್ಲೂ ನೆಲೆಸಿದ್ದಾನೆ. ಗೋಪಿಕೆಯರು ಕೃಷ್ಣನನ್ನು ಎಲ್ಲೆಲ್ಲೂ ಕಂಡರು. ಅವರಪಾದಗಳಲ್ಲಷ್ಟೇ ಅಲ್ಲಪಾದಧೂಳಿಯಲ್ಲೂ ಅವನನ್ನೇಕಂಡರು. ಆದ್ದರಿಂದಅವರಿಗೆಯಾ ವುದೇರೀತಿಯಹಿಂಜರಿಕೆಯಾಗಲೀ, ಪಾಪಭೀತಿಯಾಗಲೀಕಾಡಲಿಲ್ಲ.

ಗೋಪಿಕಾ ಸ್ತ್ರೀಯರು ತೋರಿಸಿದ ಇಂತಹ ತದ್ಭಾವ ಭಕ್ತಿಯೇ ನಿಜವಾದ ಭಕ್ತಿಯ ಪರಾಕಾಷ್ಠೆ ಎಂಬುದನ್ನು ನಾರದರು ಇದರಿಂದ ಅರಿತರು.

Leave a Reply

Your email address will not be published. Required fields are marked *