ರಾಧೆಯ ಭಕ್ತಿಯ

Print Friendly, PDF & Email

ರಾಧೆಯ ಭಕ್ತಿಯ ಬಗ್ಗೆ ಸ್ವಾಮಿ ಹೇಳಿರುವುದು

ಗೋಪಿಕೆಯರ ಭಕ್ತಿ ಶುದ್ಧ ಮತ್ತು ನಿಸ್ವಾರ್ಥವಾಗಿತ್ತು. ಅವರ ಭಕ್ತಿ ಸ್ಥಿರ, ದೃಢ ಮತ್ತು ಅಚಲವಾಗಿತ್ತು. ಅವರಲ್ಲಿ ರಾಧಾ ಪ್ರಖ್ಯಾತಳಾಗಿದ್ದಳು. ಅವಳು ಅವಳನ್ನು ಕೃಷ್ಣನೊಂದಿಗೆ ತದಾತ್ಮ, ಸಂಪೂರ್ಣ ಗುರುತಿಸಿಕೊಂಡಿದ್ದಳು. ರಾಧೆಗೆ ಕೃಷ್ಣನ ತೃಷ್ಣ, ಭಗವಂತನ ಆಸೆ ಮಾತ್ರ ಇತ್ತು. ಲೋಕಾಕರ್ಷಣೆಯಾಗಲೀ ಲೌಕಿಕ ಆಸೆಗಳಾಗಲೀ ಇರಲಿಲ್ಲ.

ಒಂದು ದಿನ ಕೃಷ್ಣ ರುಕ್ಮಿಣಿಯೊಂದಿಗೆ ಹತ್ತಿರದ ಸ್ಥಳಕ್ಕೆ ವಾಹನದಲ್ಲಿ ಹೊರಟನು. ಅಲ್ಲಿಯ ನಿವಾಸಿಗಳು ಒಗ್ಗೂಡಿ ಅತ್ಯಾನಂದದಿಂದ ಕೃಷ್ಣನನ್ನು ಸ್ವಾಗತಿಸಿದರು. ರುಕ್ಮಿಣಿಯು ತನ್ನ ಪಕ್ಕದಲ್ಲಿರುವವಳನ್ನು ಕೃಷ್ಣ ದಿಟ್ಟಿಸಿ ನೋಡುತ್ತಿರುವುದನ್ನು ಗಮನಿಸಿದಳು. ಅವಳ ನೋಟ ಸಹ ಕೃಷ್ಣನ ಮೇಲೆ ನೆಟ್ಟಿತ್ತು. ಕೃಷ್ಣ ಮೆಲ್ಲಗೆ ಮತ್ತು ಮೃದುವಾಗಿ ಹೇಳಿದನು “ರುಕ್ಮಿಣಿ! ರಾಧಾ ನಿನಗೆ ಗೊತ್ತ? ಅವಳು ನನ್ನ ಪರಮ ಭಕ್ತಳು.” ಇದನ್ನು ಕೇಳಿ, ರುಕ್ಮಿಣಿ ವಾಹನದಿಂದ ಕೆಳಗಿಳಿದು ರಾಧೆಯ ಬಳಿ ಧಾವಿಸಿದಳು. ಪರಸ್ಪರ ಪರಿಚಯಿಸಿಕೊಂಡ ನಂತರ ದ್ವಾರಕೆಯ ಅರಮನೆಯಲ್ಲಿ ತನ್ನ ಜೊತೆ ಕೆಲವು ದಿನಗಳು ಕಳೆಯಲು ಸ್ವಾಗತಿಸಿದಳು. ಅದರಂತೆ ಮರುದಿನ ರಾಧಾ ದ್ವಾರಕೆಗೆ ಹೋದಳು. ರುಕ್ಮಿಣಿ ಮುಖ್ಯ ದ್ವಾರದಲ್ಲಿ ಬರಮಾಡಿಕೊಂಡು ಅರಮನೆ ಒಳಗೆ ಕರೆದುಕೊಂಡು ಹೋದಳು. ರಾಧಾ, ಅರಮನೆಯಲ್ಲಿ ಕೆಲವು ಸಮಯ ರುಕ್ಮಿಣಿಯ ಜೊತೆ ಕೃಷ್ಣನ ಕುರಿತು ಮತ್ತು ಅವನ ಲೀಲೆಗಳನ್ನು ಹಾಡುತ್ತಾ ಕಾಲಕಳೆದಳು. ಕೃಷ್ಣನ ಜೊತೆ ಕಳೆದ ಸಂತೋಷದ ಗಳಿಗೆಗಳನ್ನು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಂಡಳು. ಅವಳ ಜೊತೆ ಇನ್ನಷ್ಟು ಕಾಲ ಕಳೆಯಲು ಮತ್ತು ಕೃಷ್ಣನ ಬಗ್ಗೆ ಮಾತನಾಡಲು ಬಯಸಿ ರುಕ್ಮಿಣಿಯು ಬಿಸಿ ಹಾಲನ್ನು ರಾಧಾಳಿಗೆ ಕೊಟ್ಟು ನಿಧಾನವಾಗಿ ಕುಡಿಯಲು ತಿಳಿಸಿದಳು. ಆದರೆ ರಾಧಾ ಒಂದೇ ಗುಟುಕಿನಲ್ಲಿ ಕುಡಿದಳು. ಅವಳು ಕೆಲವು ಕಾಲ ಮಾತುಕತೆ ಮುಂದುವರಿಸಿ ಅರಮನೆಯನ್ನು ಬಿಟ್ಟು ತನ್ನ ಹಳ್ಳಿಗೆ ಹೋದಳು.

ಕೃಷ್ಣ ಸಂಜೆ ಹಿಂದಿರುಗಿದಾಗ ತುಂಬ ಆಯಾಸಗೊಂಡಿದ್ದನು. ರುಕ್ಮಿಣಿಗೆ ಹೇಳಿದನು, “ರುಕ್ಮಿಣಿ! ನೋಡು! ನಾನು ತುಂಬಾ ಆಯಾಸಗೊಂಡಿದ್ದೇನೆ ಮತ್ತು ದಣಿದಿದ್ದೇನೆ; ನನಗೆ ನನ್ನ ಪಾದ ಸುಡುವ ಸಂವೇದನೆ ಸಹಿಸಲಾಗುತ್ತಿಲ್ಲ.” ರುಕ್ಮಿಣಿ ಪಾದಗಳಮೇಲೆ ಇರುವ ಬೊಬ್ಬೆಗಳನ್ನು ಗಮನಿಸಿದಳು. ಇದು ಹೇಗೆ ಮತ್ತು ಏಕೆ ಆಗಿದೆ ಎಂದು ಆಶ್ಚರ್ಯಪಟ್ಟಳು. ಆಗ ಕೃಷ್ಣ ಹೇಳಿದನು, “ರುಕ್ಮಿಣಿ! ಮಧ್ಯಾಹ್ನ ನಿನ್ನ ಆಹ್ವಾನಕ್ಕೆ ಓ ಗೊಟ್ಟು ಬಂದಿದ್ದ ರಾಧಗೆ ನೀನು ಬಿಸಿ ಹಾಲನ್ನು ಕೊಟ್ಟೆ. ನಿನಗದು ತಿಳಿದಿದೆಯಲ್ಲವೇ? ರಾಧಾ ಒಂದೇ ಗುಟಿಕಿನಲ್ಲಿ ಕುಡಿದು ಬಿಟ್ಟಳು. ಅವಳ ಹೃದಯದಲ್ಲಿ ನನ್ನ ಪಾದಗಳು ವಾಸವಾಗಿರುತ್ತವೆ. ಬಿಸಿ ಹಾಲು ನನ್ನ ಪಾದಗಳ ಮೇಲೆ ಚೆಲ್ಲಿತು. ಹಾಗಾಗಿ ಈಗ ನೀನು ಈ ಬೊಬ್ಬೆಗಳನ್ನು ಕಾಣುತ್ತಿದ್ದೀಯೆ. ಎಲ್ಲಿ ಬೊಬ್ಬೆಗಳಾಗಿವೆಯೋ ಅಲ್ಲಿ ನನಗೆ ಸುಡುವ ಸಂವೇದನೆ ಆಗುತ್ತಿದೆ. ಇದು ರಾಧಾಳ ಭಕ್ತಿಯ ಪರಾಕಾಷ್ಟತೆ.

ಒಂದು ದಿನ ರಾಧಾಳ ಭಕ್ತಿಯನ್ನು ಪರೀಕ್ಷಿಸಲು ಓರ್ವ ಗೋಪಿ ಯಮುನ ನದಿಯಿಂದ ನೀರು ತರಲು ರಂಧ್ರಗಳಿರುವ ಮಡಿಕೆಯನ್ನು ಕೊಟ್ಟಳು. ರಾಧ ಅದನ್ನು ಗಮನಿಸಲಿಲ್ಲ. ಮಡಿಕೆಯಲ್ಲಿ ನೀರು ತುಂಬುತ್ತಾ ನಿರಂತರ ಪವಿತ್ರವಾದ ಕೃಷ್ಣನ ನಾಮವನ್ನು ಜಪಿಸುತ್ತಿದ್ದಳು. ಅಮೂಲ್ಯವಾದ ಕೃಷ್ಣನ ನಾಮ ಜಪಿಸುತ್ತಿರುವಂತೆ ಒಂದೊಂದೇ ರಂಧ್ರಗಳು ಮುಚ್ಚಲ್ಪಟ್ಟವು. ಆ ಮಡಿಕೆ ಸೋರಲಿಲ್ಲ. ರಾಧಾ ಮನೆಗೆ ತುಂಬಿದ ಕೊಡ ತಂದಳು. ಅದೇ ಅವಳ ಭಕ್ತಿಯ ಪರಾಕಾಷ್ಟತೆ.

ರಾಧ ಎನ್ನುವ ಹೆಸರಿನಲ್ಲಿ ‘ರಾ,’ ರಾಧಾ ಎಂಬುದನ್ನು ಸೂಚಿಸುತ್ತದೆ. ‘ಆ’ ಆಧಾರ ಎಂಬುದನ್ನು ಸೂಚಿಸುತ್ತದೆ. ‘ಧಾ’ ಧಾರೆ / ನಿರಂತರ, ತಡೆರಹಿತ ಹರಿಯುವಿಕೆ ಎಂಬುದನ್ನು ಸೂಚಿಸುತ್ತದೆ. ‘ಆ’ ಪದದ ಅರ್ಥ ಆರಾಧನ. ಅವಳ ಭಕ್ತಿ ತಡೆರಹಿತ ಹರಿವು. (ರಾಧಾ ಅಕ್ಷರಗಳನ್ನು ಬಲದಿಂದ ಎಡಕ್ಕೆ ಓದಿದರೆ ಧಾರಾ ಆಗುತ್ತದೆ. ಅವಳ ಭಕ್ತಿಯು ಸಹ ತೈಲದಂತೆ ತಡೆರಹಿತ ಹರಿವು) ರಾಧಾ, ಕೃಷ್ಣನ ನಾಮ ಪುನರಾವರ್ತಿಸುವಂತೆ, ಕೃಷ್ಣನು ಸಹ ರಾಧೆಯನ್ನೇ ನೆನೆಯುವನು. ಇದೇ ಭಕ್ತ ಮತ್ತು ಭಗವಂತನ ಅನುಬಂಧ.

[ಮೂಲ: ಸತ್ಯೋಪನಿಷದ್ – ಸತ್ಯಸಾಯಿಯ ಉಪನಿಷದ್ ಭಾಗ ೨೬ ]

Leave a Reply

Your email address will not be published. Required fields are marked *

error: