ರಾಮೇಶ್ವರಂ

Print Friendly, PDF & Email
ರಾಮೇಶ್ವರಂ, ಇಲ್ಲಿ ಆರಾಧಕರು ಮತ್ತು ಪೂಜಿಸುವವರು ದೈವಿಕರು

ರಾಮೇಶ್ವರಂ, ದಕ್ಷಿಣದ ಕಾಶಿ ಎಂದು ಪ್ರಸಿದ್ಧವಾಗಿದೆ. ಇಲ್ಲಿ ಶಿವನು ರಾಮನಿಂದ ಪೂಜಿಸಲ್ಪಟ್ಟನು. ಸೀತೆಯನ್ನು ರಾವಣ ಅಪಹರಿಸಿದಾಗ, ರಾಮನು ತನ್ನ ಸೈನ್ಯದೊಂದಿಗೆ ಲಂಕೆಯನ್ನು ಆಕ್ರಮಿಸಲು ನಿರ್ಧರಿಸಿದನು. ಆದರೆ ಸೈನ್ಯವು ಪ್ರಬಲವಾದ ಸಾಗರವನ್ನು ದಾಟಲು ಸೇತುವೆಯನ್ನು ನಿರ್ಮಿಸಬೇಕಾಗಿತ್ತು. ವಾನರರು ಹಗಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದರು, ಆದರೆ ರಾತ್ರಿಯಲ್ಲಿ, ರಾವಣ ಅವರು ನಿರ್ಮಿಸಿದ್ದನ್ನು ಯಾವಾಗಲೂ ನಾಶಪಡಿಸುತ್ತಿದ್ದ ಮತ್ತು ಇವರ ಪ್ರಯತ್ನಗಳು ವ್ಯರ್ಥವಾಗುತಿದ್ದವು. ಅಂತಿಮವಾಗಿ, ಜಾಂಬವಂತನು ಸೇತುವೆಯ ಮೇಲೆ ಶಿವನ ದೇವಾಲಯವನ್ನು ನಿರ್ಮಿಸಲು ಸಲಹೆ ನೀಡಿದನು. ಏಕೆಂದರೆ ಶಿವನ ಪರಮ ಭಕ್ತನಾದ ರಾವಣನು ಅದನ್ನು ನಾಶಮಾಡಲು ಎಂದಿಗೂ ಧೈರ್ಯ ಮಾಡುವುದಿಲ್ಲ. ಹೀಗಾಗಿ ರಾಮೇಶ್ವರಂ ದೇವಾಲಯ ನಿರ್ಮಾಣವಾಯಿತು.

ಆದರೆ, ಮತ್ತೊಂದು ಜನಪ್ರಿಯ ದಂತಕಥೆಯ ಪ್ರಕಾರ, ರಾಮನು ಸೀತೆಯ ಜೊತೆಗೆ ಅಯೋಧ್ಯೆಗೆ ಹಿಂದಿರುಗುತ್ತಿದ್ದಾಗ ಈ ದೇವಾಲಯವನ್ನು ನಿರ್ಮಿಸಿದನು. ಕೃತಜ್ಞತೆಯ ಭಾವದಿಂದ ಮುಳುಗಿದ ರಾಮನು ಶಿವನನ್ನು ಆರಾಧಿಸಲು ನಿರ್ಧರಿಸಿದನು. ಹನುಮಂತನು ಶಿವನ ಚೈತನ್ಯದ ಪ್ರತೀಕವಾಗಿರುವ ಕಲ್ಲನ್ನು ತರಲು ಧಾವಿಸಿದನು, ಆದರೆ ಅವನು ಕಲ್ಲಿನೊಂದಿಗೆ ಹಿಂದಿರುಗುವ ಮೊದಲು, ರಾಮನು ತಾನೇ ಮಾಡಿದ ಚಿಹ್ನೆಯನ್ನು ಪೂಜಿಸಲು ಪ್ರಾರಂಭಿಸಿದನು. ಹನುಮಂತನಿಗೆ ತುಂಬಾ ದುಃಖವಾಯಿತು. ಆದರೆ ರಾಮನು, ಹನುಮನು ತಂದ ಕಲ್ಲಿಗೆ ಮೊದಲ ಪೂಜೆ ಸಲ್ಲಿಸುವುದಾಗಿ ಭರವಸೆ ನೀಡಿದನು.

ಆದ್ದರಿಂದ, ಇದು ಇಂದಿಗೂ ನಡೆಯುತ್ತಿದೆ. ಒಬ್ಬ ಭಕ್ತನು ರಾಮನಿಂದ ರೂಪುಗೊಂಡ ದೇವರಿಗೆ ತನ್ನ ಪ್ರಾರ್ಥನೆಯನ್ನು ಸಲ್ಲಿಸುವ ಮೊದಲು, ಅವನು ಹನುಮಂತನು ತಂದ ದೇವರಾದ ವಿಶ್ವೇಶ್ವರನನ್ನು ಪೂಜಿಸಬೇಕು. ಭಾರತದಾದ್ಯಂತದ ಭಕ್ತರು ಮೆಚ್ಚುವ ಈ ಯಾತ್ರಾ ಸ್ಥಳದ ವೈಭವವೇ ಅಂಥದ್ದು. ಕಾಶಿ ತೀರ್ಥಯಾತ್ರೆ ಮೋಕ್ಷವನ್ನು ನೀಡುತ್ತದೆಯಾದರೂ, ರಾಮೇಶ್ವರಂಗೆ ಭೇಟಿ ನೀಡದೆ ಅದು ಎಂದಿಗೂ ಪೂರ್ಣಗೊಳ್ಳುವುದಿಲ್ಲ ಎಂದು ಜನರು ನಂಬುತ್ತಾರೆ.

Leave a Reply

Your email address will not be published. Required fields are marked *