ರಾವಣವಧೆ

Print Friendly, PDF & Email
ರಾವಣವಧೆ:

Ravana Meets His End

ದೊಡ್ಡ ಯುದ್ಧ ಪ್ರಾರಂಭವಾಯಿತು. ರಾವಣನ ಕಡೆಯವರು ಒಬ್ಬೊಬ್ಬರಾಗಿ ಕೊಲ್ಲಲ್ಪಟ್ಟರು. ಕ್ರಮೇಣ ಅವನು ತನ್ನ ಶಕ್ತಿಶಾಲಿ ಸೈನ್ಯವನ್ನು ಕಳೆದುಕೊಳ್ಳತೊಡಗಿದನು. ಬಹಳಷ್ಟು ಪ್ರಮುಖ ಸೇನಾನಾಯಕರೆಲ್ಲ ಕೊಲ್ಲಲ್ಪಟ್ಟಾಗ, ರಾವಣನು ಸ್ವತಃ ತಾನೇ ಸೈನ್ಯವನ್ನು ಮುನ್ನಡೆಸಿದನು. ಇದೇ ಮೊದಲ ಬಾರಿಗೆ ರಾವಣನು ರಾಮನನ್ನು ನೋಡಿದನು. ರಾಮನ ಬಗ್ಗೆ ಅವನಿಗೆ ತುಂಬ ಮೆಚ್ಚುಗೆ ಇದ್ದರೂ, ಅವನ ಅಹಂಕಾರವು ಅವನನ್ನು ಶರಣಾಗಲು ಬಿಡಲಿಲ್ಲ. ಆ ಕೂಡಲೇ ಸೀತೆಯನ್ನು ಬಿಟ್ಟು ಕಳಿಸುವಂತೆ ಪತ್ನಿ ಮಂಡೋದರಿಯೂ ಸಹ ಬುದ್ಧಿವಾದ ಹೇಳಿದಳು. ಆದರೆ, ಅಹಂಕಾರಿ ಮತ್ತು ಕಾಮುಕನಾಗಿದ್ದ ರಾವಣನು ಅವಳ ಮಾತನ್ನು ಕೇಳಲಿಲ್ಲ. ಕುಂಭಕರ್ಣನನ್ನೂ ಸಹ ಅವನು ಯುದ್ಧಮಾಡಲು ಕಳಿಸಿದನು. ಅವನೂ ಸಹ ಕೊಲ್ಲಲ್ಪಟ್ಟನು. ತನ್ನ ಎಲ್ಲ ಸೈನ್ಯವನ್ನೂ ಕಳೆದುಕೊಂಡು, ರಾವಣನು ಬಹುಪಾಲು ಏಕಾಂಗಿಯಾಗಿ ರಣರಂಗದಲ್ಲಿ ಹೀನಾಯವಾಗಿ ಉಳಿದನು. ರಾಮ, ರಾವಣರ ಮಧ್ಯೆ ಅದೊಂದು ಕಠಿಣವಾದ ಯುದ್ಧವಾಗಿತ್ತು. ಪ್ರತಿ ಸಾರಿ ರಾಮನು ರಾವಣನನ್ನು ಹೊಡೆದಾಗಲೂ ಅವನು ಮತ್ತೆ ತನ್ನ ಶಕ್ತಿಯನ್ನು ಪಡೆದುಕೊಳ್ಳುತ್ತಿದ್ದನು. ಕೊನೆಯಲ್ಲಿ ವಿಭೀಷಣನ ಸಲಹೆಯಂತೆ ಅಗಸ್ತ್ಯ ಋಷಿಗಳು ನೀಡಿದ್ದ ದಿವ್ಯ ಬಾಣವನ್ನು ರಾವಣನ ಎದೆಗೆ ಹೊಡೆದನು. ಈ ಬಲವಾದ ಹೊಡೆತದಿಂದ ರಾವಣನು ನೆಲದಮೇಲೆ ಕುಸಿದು ಬಿದ್ದನು. ತನ್ನ ಅಣ್ಣನ ದುರ್ವಿಧಿಯನ್ನು ಕಂಡು ವಿಭೀಷಣನು ಬಹಳ ದುಃಖಪಟ್ಟನು. ರಾವಣನು ಸಾಮಾನ್ಯನಾಗಿರದೆ, ಮಹಾನ್ ಶೂರ, ಬಹುದೊಡ್ಡ ವಿದ್ವಾಂಸ, ಅತ್ಯಂತ ಬುದ್ಧಿವಂತ, ಮಹಾಶಿವಭಕ್ತ ಮತ್ತು ವೀಣೆಯನ್ನು ನುಡಿಸುವುದರಲ್ಲಿ ಪರಿಣಿತನಾಗಿದ್ದನು. ಆದರೆ, ಕಾಮುಕತೆ, ಅಹಂಕಾರ ಮುಂತಾದ ದುಷ್ಟ ಗುಣಗಳಿಂದಾಗಿ ಅವನು ನಾಶಹೊಂದಿದನು.

Leave a Reply

Your email address will not be published. Required fields are marked *