ಪವಿತ್ರ ಕೆಲಸದ ಪ್ರತಿಫಲ

Print Friendly, PDF & Email

ಪವಿತ್ರ ಕೆಲಸದ ಪ್ರತಿಫಲ

Father asking son to get fruits

ಒಂದು ಶನಿವಾರ ಒಬ್ಬ ತಂದೆ ಆ ದಿನದ ಪೂಜೆಗಾಗಿ ಬಾಳೆಹಣ್ಣುಗಳನ್ನು ತರುವಂತೆ ತನ್ನ ಮಗನಿಗೆ ಹಣ ಕೊಟ್ಟು ಕಳುಹಿಸುತ್ತಾನೆ. ಒಳ್ಳೆಯ ಹುಡುಗನಾದ ಅವನು ಅದರಂತೆ ಹಣ್ಣನ್ನು ಖರೀದಿಸಿ ಬರುವಾಗ ದಾರಿಯಲ್ಲಿ ಹಸಿವಿನಿಂದ ಬಳಲುತ್ತಿರುವ ಒಬ್ಬ ತಾಯಿ ಮತ್ತು ಮಗನನ್ನು ನೋಡುತ್ತಾನೆ. ಇದನ್ನು ನೋಡಿದ ಹುಡುಗ ಆ ಹಣ್ಣನ್ನು ಪೂಜೆಗೆ ಕೊಂಡು ಹೋಗುವುದರ ಬದಲಿಗೆ ಹಸಿವಿನಿಂದ ಬಳಲುತ್ತಿದ್ದ ತಾಯಿ ಮತ್ತು ಮಗನಿಗೆ ಕೊಡುವುದು ಒಳ್ಳೆಯದು ಎಂದು ಅವರಿಗೆ ಕೊಟ್ಟು, ಸ್ವಲ್ಪ ನೀರನ್ನು ಸಹ ಕೊಡುತ್ತಾನೆ. ಹಸಿವಿನಿಂದ ಪಾರಾದ ಅವರಿಬ್ಬರೂ ಆನಂದ ಬಾಷ್ಪಗಳನ್ನು ಸುರಿಸಿ, ಕೃತಜ್ಞತೆಯನ್ನು ಅರ್ಪಿಸುತ್ತಾರೆ. ಬರಿಗಯ್ಯಲ್ಲಿ ಹಿಂತಿರುಗಿದ ಅವನನ್ನು ಹಣ್ಣುಗಳನ್ನು ತಂದಿದ್ದೀಯ? ಎಂದು ತಂದೆ ಕೇಳಿದಾಗ ಎಂದಿಗೂ ಹಾಳಾಗದ ಯಾರಿಗೂ ಕಾಣದಂತ ಪುಣ್ಯಫಲವನ್ನು ತಂದಿರುವುದಾಗಿ ಹೇಳುತ್ತಾನೆ. ಮಗನು ಮಾಡಿದ ಪುಣ್ಯದ ಕೆಲಸ ತಿಳಿದಾಗ ತಂದೆಗೆ ಮಗನ ಬಗ್ಗೆ ಹೆಮ್ಮೆ ಉಂಟಾಗಿ ನನ್ನ ಪ್ರಾರ್ಥನೆಗೆ ದೇವರು ಸರಿಯಾದ ಫಲ ನೀಡಿದ್ದಾನೆ ಎಂದು ಸಮಾಧಾನಪಡುತ್ತಾನೆ.

Son giving away the fruits to hunger

ಅಂದಿನಿಂದ ತಂದೆಗೆ ಮಗನ ಮೇಲಿನ ಮಮತೆ ಹೆಚ್ಚಾಯಿತು ಹಾಗೂ ಅವರಿಬ್ಬರು ಇನ್ನೂ ಅನ್ಯೋನ್ಯರಾದರು.

ಸತ್ಕಾಯ೵ಗಳನ್ನು ಮಾಡಿದಾಗ ಭಗವಂತನು ಸಂತಸಗೊಳ್ಳುತ್ತಾನೆ.

[Source: China Katha – Part 1 Pg:5]

 Illustrations by Ms. Sainee &
Digitized by Ms.Saipavitraa
(Sri Sathya Sai Balvikas Alumni)

Leave a Reply

Your email address will not be published. Required fields are marked *