ಗ್ರೂಪ್-೧ ರ ತರಗತಿ ಚಟುವಟಿಕೆ ನಮೂನೆ:

Print Friendly, PDF & Email

ಈ ಚಟುವಟಿಕೆಗಳನ್ನು ತರಗತಿಯಲ್ಲಿ ಹೇಗೆ ನಡೆಸುವುದು?

Step 1- ಮೌನಾಸನದಿಂದ ಪ್ರಾರಂಭಿಸಬೇಕು. ಪ್ರಾರ್ಥನೆಯ ಮೂಲಕ, ದೃಶ್ಯೀಕರಣದಿಂದ, ಅಥವಾ ಕಣ್ಣುಮುಚ್ಚಿಕೊಂಡು ೧-೨ ನಿಮಿಷ ಕುಳಿತುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಹೇಳಬೇಕು. ಇದು ಅವರಿಗೆ ಶಾಂತವಾಗಿರಲು ಮತ್ತು ವಿಶ್ರಾಂತಿಯನ್ನು ಪಡೆಯಲು ಸಹಾಯವಾಗುತ್ತದೆ.

Step 2– ವಿಷಯವನ್ನು ಆಯ್ಕೆಮಾಡಿ. ಅದು ಒಂದು ಪದವಾಗಿರಲಿ. ಅದನ್ನು ಕಪ್ಪುಹಲಗೆಯ ಮಧ್ಯದಲ್ಲಿ ಬರೆಯಿರಿ. ಆ ಪದ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುವಂತಿರಬೇಕು. ಅವರ ವಯಸ್ಸಿಗೆ ತಕ್ಕಂತಿರಬೇಕು. ಅವರಿಗೆ ಆ ಪದದ ಅರಿವಿರಬೇಕು ಮತ್ತು ಅದರ ಅರ್ಥ ತಿಳಿದಿರಬೇಕು. ಅಮೂರ್ತ (abstract) ಪದಗಳಾದ ಪ್ರೀತಿ, ಶಾಂತಿ, ಪ್ರಾಮಾಣಿಕತೆ ಮುಂತಾದವುಗಳನ್ನು ದಯವಿಟ್ಟು ಉಪಯೋಗಿಸಬೇಡಿ. ಪದ ಮೂರ್ತರೂಪ (ವಾಸ್ತವ ವಸ್ತು – ಕಾಂಕ್ರೀಟ್) ದ್ದಾಗಿರಲಿ. ನಾವೀಗ “ಬಣ್ಣಗಳು”ಎಂಬ ಪದವನ್ನು ಆಯ್ಕೆಮಾಡೋಣ.

Step 3– “ಬಣ್ಣ” ಎಂಬ ಪದವನ್ನು ಯೋಚಿಸಿದಾಗ ಅವರ ಮನಸ್ಸಿಗೆ ಬರಬಹುದಾದ ಎಲ್ಲ ಪದಗಳನ್ನು ಹೆಸರಿಸುವಂತೆ ಮಕ್ಕಳಿಗೆ ಹೇಳಬೇಕು. ಇದನ್ನು ‘ವಿಕಿರಣ ಆಲೋಚನೆ’ (Radiant Thinking) ಎನ್ನುತ್ತಾರೆ. ಕಪ್ಪು ಹಲಗೆಯ ಮೇಲೆ ಅಥವಾ ನೋಟ್ ಪುಸ್ತಕದಲ್ಲಿ ಮಕ್ಕಳು ಹೇಳುವ ಎಲ್ಲಾ ಪದಗಳನ್ನು ಬರೆಯಿರಿ. ಅವುಗಳನ್ನು ಕ್ರಮವಾಗಿ ಅಥವಾ ಸಂಖ್ಯೆಯ ಪ್ರಕಾರ ಬರೆಯಬೇಡಿ. ಈ ಕೆಳಕಂಡ ನಮೂನೆಯಲ್ಲಿ ತೋರಿಸಿರುವಂತೆ ಮಕ್ಕಳು ‘ಬಣ್ಣಗಳು’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಪದಗಳನ್ನು ಹೇಳುತ್ತಾರೆ. ಎಲ್ಲ ಮಕ್ಕಳಿಗೂ ಭಾಗವಹಿಸುವಂತೆ ಉತ್ತೇಜಿಸಿ. ಕೆಲವೊಂದು ಪದಗಳು ಅಸಂಬದ್ಧವೆಂದು ಕಾಣಿಸಬಹುದು. ಗುರುಗಳು ಅಂತಹ ಸಂದರ್ಭದಲ್ಲಿ ನಿಧಾನವಾಗಿ, ಅವರು ಏಕೆ ಆ ಪದವನ್ನು ಬಳಸಿದ್ದಾರೆಂದು ಕೇಳಬೇಕು. ಪದಗಳು ಮಕ್ಕಳಿಂದ ಮಾತ್ರ ಬರಬೇಕೆಂಬುದನ್ನು ಗಮನಿಸಬೇಕು.

Step 4– ಮನೋನಿರೂಪಣಾ ಪಟ ಮತ್ತು ಜಾಲನಕ್ಷೆ: ಮಕ್ಕಳ ಗುಂಪುಗಳಿಗೆ ಪದಗಳನ್ನು ಕ್ರಮವಾಗಿ ಜೋಡಿಸಲು ಮತ್ತು ವರ್ಗೀಕರಿಸಲು ತಿಳಿಸಿ. ಅಂದರೆ ಮಕ್ಕಳು ಪದಗಳನ್ನು ವಿವಿಧ ಶಿರೋನಾಮೆಯಡಿಯಲ್ಲಿ ಅವರಿಗೆ ಇಷ್ಟವಾದ ರೀತಿಯಲ್ಲಿ ಕ್ರಮವಾಗಿ ಗುಂಪುಗಳನ್ನಾಗಿ ವಿಂಗಡಿಸುವಂತೆ ಮಾಡುವುದು. ಉದಾ: ಮೇಲಿನ ಅಂಕಣದಲ್ಲಿ ನಿರ್ದಿಷ್ಟ ಕ್ರಮವಿಲ್ಲದೆ ಪಟ್ಟಿಮಾಡಿದ ಪದಗಳನ್ನು ಈಕೆಳಕಂಡ ಶಿರೋನಾಮೆಗಳ ಅಡಿಯಲ್ಲಿ ಗುಂಪುಗಳನ್ನಾಗಿ ವಿಂಗಡಿಸಬಹುದಾಗಿದೆ.

  • ಈಗ, ಬಾಲವಿಕಾಸ ತರಗತಿಯ ಮಕ್ಕಳ ಸಂಖ್ಯೆಯ ಆಧಾರದ ಮೇಲೆ ೫, ೬ ಅಥವಾ ೭ ಮಕ್ಕಳುಒಂದು ಗುಂಪಿನಲ್ಲಿರುವಂತೆ, ತರಗತಿಯನ್ನು ಗುಂಪುಗಳಲ್ಲಿ ವಿಂಗಡಿಸಬೇಕು. ನಂತರ ಪ್ರತಿಯೊಂದು ಗುಂಪು, ಮೇಲೆ ನಿರ್ಧರಿಸಿದಂತೆ ವಿಭಾಗಗಳು/ಶಿರೋನಾಮೆಯ ಆಧಾರದ ಮೇಲೆ ಜಾಲನಕ್ಷೆಯನ್ನು ಸಿದ್ಧಪಡಿಸಬೇಕು.
  • ಪ್ರತಿಯೊಂದು ಗುಂಪು ತನ್ನದೇ ಆದ ಜಾಲನಕ್ಷೆಯನ್ನು ಸಿದ್ಧಪಡಿಸಿದ ನಂತರ, ಅದನ್ನು ತರಗತಿಯಲ್ಲಿ ಮಂಡಿಸುವಂತೆ ಹೇಳಿರಿ. ಈಗ ಇಡೀ ತರಗತಿಗೆ ಒಂದೇ ಜಾಲ ನಕ್ಷೆಯಿರುವಂತೆ ಚರ್ಚಿಸಿ ನಿರ್ಧಾರಕ್ಕೆ ಬನ್ನಿ. ಈ ಹಂತವು ಅನುಭವ ಜನ್ಯ ಕಲಿಕೆಯಲ್ಲಿ ಮುಂದುವರಿಯಲು ಮತ್ತು ಮುಂದಿನ ಹಂತವನ್ನು ತಲುಪಲು ಮಹತ್ವದ್ದಾಗಿದೆ. ಅಂತಿಮವಾದ ಜಾಲನಕ್ಷೆ ಈ ಕೆಳಗಿನಂತಿದೆ.

[Class activity steps: Adapted from Experiential Learning – by Dr. Pitre during ‘The Master Trainers’ Training program for GRI&II in January 2009 at P.N]

Leave a Reply

Your email address will not be published. Required fields are marked *