ಸರ್ವಧರ್ಮಾನ್ – ಹೆಚ್ಚಿನ ಓದುವಿಕೆ

Print Friendly, PDF & Email
ಸರ್ವಧರ್ಮಾನ್ – ಹೆಚ್ಚಿನ ಓದುವಿಕೆ
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ
ಅಹಂತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||

(ಅಧ್ಯಾಯ ೧೮, ಶ್ಲೋಕ ೬೬)

ಎಲ್ಲಾ ಕರ್ತವ್ಯಗಳನ್ನೂ ಪರಿತ್ಯಜಿಸಿ ನನ್ನಲ್ಲೇ ಪೂರ್ಣ ಶರಣಾಗತನಾಗು, ಸರ್ವ ಪಾಪಗಳಿಂದಲೂ ನಾನು ನಿನ್ನನ್ನು ಬಿಡಿಸಿ ಉದ್ಧರಿಸುವೆನು, ದುಃಖಪಡಬೇಡ.

ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನು ಅವನ ಎದುರಿರುವ ಕೌರವ ಸೇನೆಯನ್ನು ನೋಡಿದಾಗ ದುಃಖಿಸುತ್ತಾನೆ. ಸೈನ್ಯವು ಅವನ ಬಂಧುಗಳು ಮತ್ತು ಗುರುಗಳನ್ನು ಒಳಗೊಂಡಿತ್ತು. ಅವನು ಅವರೆಲ್ಲರೂ ವಿಶೇಷವಾಗಿ ‘ತನ್ನವರು’ ಎಂಬ ಭ್ರಮೆಯಲ್ಲಿರುತ್ತಾನೆ. ಅಧರ್ಮ ಅಥವಾ ಅನ್ಯಾಯದ ವಿರುದ್ಧ ಹೋರಾಡಬೇಕಾದ ಅರ್ಜುನನು, ತನ್ನ ಕರ್ತವ್ಯದಿಂದ ವಿಮುಖನಾಗಬಾರದೆಂದು ಕೃಷ್ಣನು ಹೇಳುತ್ತಾನೆ. ಕೌರವರು ಮತ್ತು ಅವರ ಬೆಂಬಲಿಗರು ದುಷ್ಟ ಶಕ್ತಿಗಳಾಗಿದ್ದರು.

‘ಧರ್ಮ ಮತ್ತು ಅಧರ್ಮಗಳ ಬಗ್ಗೆ ಚರ್ಚೆಗಳಲ್ಲಿ ತೊಡಗಿ ನಿಷ್ಪ್ರಯೋಜಕರಾಗದೆ, ಭಗವಂತನ, ಆದೇಶಗಳನ್ನು ಪಾಲಿಸಿರಿ. ಈ ಎಲ್ಲವೂ ಪರಮಾತ್ಮನೇ ಹೊರತು ಬೇರೇನೂ ಅಲ್ಲ ಎಂಬ ನಂಬಿಕೆ ದೃಢವಾಗಿರಲಿ’ ಎಂದು ಬಾಬಾ ವಿವರಿಸುತ್ತಾರೆ.

ಆದ್ದರಿಂದ ಅವನ ಇಚ್ಛೆಗೆ ತಲೆಬಾಗುವುದು ಮತ್ತು ಅವನ ಸಂಕಲ್ಪಗಳಿಗೆ ಶರಣಾಗತರಾಗುವುದಲ್ಲದೆ ಬೇರೇನೂ ಮಾಡಬೇಕಾದ್ದಿಲ್ಲ. ಶಾಸ್ತ್ರಗಳು ಮತ್ತು ಧರ್ಮಗ್ರಂಥಗಳಲ್ಲಿ ಹೇಳಿರುವಂತೆ ಫಲಗಳ ಬಗ್ಗೆ ಅಪೇಕ್ಷೆ ಪಡದೆ ಎಲ್ಲ ಕರ್ತವ್ಯಗಳನ್ನು ಅವನಿಗೋಸ್ಕರ ನಿರ್ವಹಿಸಿರಿ. ಇದು ನಿಜವಾದ ನಿಷ್ಕಾಮ ಕರ್ಮ. ಎಲ್ಲ ಕರ್ತವ್ಯಗಳನ್ನು ಪೂಜೆ, ಹರಿಪ್ರಸಾದವೆಂಬಂತೆ ಮಾಡಿರಿ. ಇದೇ ಮುಖ್ಯವಾದ ಕೆಲಸ. ಫಲ, ಪರಿಣಾಮಗಳು ಮತ್ತು ಫಲಿತಾಂಶ ಮುಂತಾಗಿ ಉಳಿದುದನ್ನು ಅವನಿಗೆ ಬಿಡಿ. ಆಗ ನೀವು ಭಗವಂತನ ಅನುಗ್ರಹವನ್ನು ಪಡೆಯುತ್ತೀರಿ. ಮತ್ತು ಭೂಮಿಯ ಮೇಲಿನ ನಿಮ್ಮ ಬದುಕು ಪವಿತ್ರ ಗೊಂಡು ಅಮೂಲ್ಯವಾಗುತ್ತದೆ.

ಧರ್ಮ ಮಾರ್ಗವನ್ನು ಅನುಸರಿಸುವವರಿಗೆ, ಅಡ್ಡಿಯಾಗುವ ಕಷ್ಟಗಳ ಹೊರತಾಗಿಯೂ ಅಂತಿಮ ಜಯ ಖಂಡಿತವಾಗಿರುತ್ತದೆ. ಧರ್ಮ ಮಾರ್ಗದಿಂದ ದೂರ ಹೋಗುವವರಿಗೆ ಬಹಳ ಕಾಲ ಸಂಪತ್ತು ಮತ್ತು ನೆಮ್ಮದಿ ದೊರೆಯಬಹುದು. ಆದರೆ ಅಂತಿಮವಾಗಿ ಅವರು ದುರಂತಕ್ಕೆ ಒಳಗಾಗುತ್ತಾರೆ. ಪಾಂಡವರು ಮತ್ತು ಕೌರವರು ಇದಕ್ಕೆ ಉದಾಹರಣೆ.

ಭಗವಂತನು ವಿವರಿಸಿರುವಂತೆ ಈ ರೀತಿಯಲ್ಲಿ ನಾವು ನಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ, ಅವನು ಖಂಡಿತವಾಗಿಯೂ ನಮ್ಮನ್ನು ರಕ್ಷಿಸುತ್ತಾನೆ. ‘ಭಯಪಡಬೇಡಿ’ ಎಂದು ಅವನು ನಮಗೆ ಭರವಸೆ ನೀಡುತ್ತಾನೆ. ಅತ್ಯಂತ ಶಕ್ತಿಯುತವಾದ ಶಸ್ತ್ರಾಸ್ತ್ರಗಳ ಸಂಗ್ರಹವೂ ಸೇರಿದಂತೆ ಯಾವುದೂ ಭಗವಂತನ ಅನುಗ್ರಹಕ್ಕೆ ಸರಿಸಮಾನವಾದುದಲ್ಲ.

Leave a Reply

Your email address will not be published. Required fields are marked *