School(2)

Print Friendly, PDF & Email
ಶೀರ್ಷಿಕೆ: ಕೃತಜ್ಞತೆಯ ಮನೋಭಾವ
ಸ್ಥಿತಿ: ಮೇರಿಯ ಶಾಲೆ
ಪಾತ್ರಗಳು: ಮೇರಿ ಮತ್ತು ಅವಳ ತಾಯಿ, 2-3 ಶಿಕ್ಷಕರು
ಸಂಬಂಧಿತ ಮೌಲ್ಯಗಳು: ಕೃತಜ್ಞತೆ, ಶಿಕ್ಷಕರನ್ನು ಗೌರವಿಸುವುದು
ದೃಶ್ಯ:
(ಮೇರಿಯು ತನ್ನ ತಾಯಿಯೊಂದಿಗೆ ಶಾಲೆಯ ಆವರಣದಲ್ಲಿ ನಿಂತುಕೊಂಡಿದ್ದಾಳೆ. ಅವಳು ತನ್ನ ಶಾಲೆಯ ಶುಲ್ಕವನ್ನು ಕಟ್ಟಲು ಬಂದಿದ್ದಾಳೆ. ಆ ಸಂದಭ೵ದಲ್ಲಿ ಕೆಲವು ಶಿಕ್ಷಕರು ಅವರ ಮುಂದೆ ಹಾದು ಹೋಗುತ್ತಾರೆ.)
ಸೂಸನ್ : ಮೇರಿ, ನೀನು ಏಕೆ ಆ ಶಿಕ್ಷಕರಿಗೆ ನಿನ್ನ ಪ್ರಣಾಮಗಳನ್ನು ತಿಳಿಸಲಿಲ್ಲ.
ಮೇರಿ : ಅವರು, ನಾನು ಒಂದನೇ ತರಗತಿಯಲ್ಲಿ ಇರುವಾಗ ಕಲಿಸಿದ್ದರು. ಈಗ ಅವರು ನನಗೆ ಕಲಿಸುವುದಿಲ್ಲ.
ಮೇರಿ : ಶುಭೋದಯ ಮ್ಯಾಮ್ !
ಗಣಿತ ಶಿಕ್ಷಕರು : ಶುಭೋದಯ
ಮೇರಿ : ಅಮ್ಮಾ, ಇವರು ನನ್ನ ಈ ವಷ೵ದ ಗಣಿತ ಶಿಕ್ಷಕಿ.
ಸೂಸನ್ : ಮೇರಿ, ನೀನು ಮಾಡುತ್ತಿರುವುದು ಸರಿಯಿಲ್ಲ.
ಮೇರಿ : ಏಕೆ ಅಮ್ಮಾ?
ಸೂಸನ್ : ನಿನಗೆ ಹಿಂದೆ ಕಲಿಸುತ್ತಿದ್ದ ಗುರುಗಳಿಗೆ ನೀನು ಪ್ರಣಾಮಗಳನ್ನು ಸಲ್ಲಿಸುವುದನ್ನು ನಿಲ್ಲಿಸಿದ್ದೀಯೆ. ಮಗು….! ಅವರು ನಿನಗೆ ಮಾಡಿರುವ ಸಹಾಯವನ್ನು ನೀನು ಎಂದಿಗೂ ಮರೆಯಬಾರದು. (ಸುಸಾನ್ ಮುಂದುವರಿಸುತ್ತಾಳೆ) ನಿನಗೆ ಗೊತ್ತಿದೆಯೇ? ಒಮ್ಮೆ ಭಾರತದ ಮಾಜಿ ರಾಷ್ಟ್ರಪತಿ ಶ್ರೀ ಶಂಕರ್ ದಯಾಳ್ ಶಮ೵ರವರು ಅಧಿಕೃತ ಪ್ರವಾಸದ ಮೇಲೆ ಮಸ್ಕತ್ ಗೆ ಭೇಟಿ ನೀಡಿದ್ದರು. ಏರ್ ಇಂಡಿಯಾ ವಿಮಾನವು ಮಸ್ಕತ್ ನಲ್ಲಿ ಇಳಿದಾಗ, ಒಮನ್ ಸುಲ್ತಾನ್ ರವರು ತಾವೇ ಸ್ವತಃ ಶಂಕರ್ ದಯಾಳ್ ಶಮ೵ರವರವರನ್ನು ಬರಮಾಡಿಕೊಂಡರು. ಇದನ್ನು ನೋಡಿ ಎಲ್ಲರೂ ಆಶ್ಚಯ೵ ಚಕಿತರಾದರು.
ಮೇರಿ : ಆದರೆ, ಅವರೇಕೆ ಆಶ್ಚಯ೵ ಚಕಿತರಾದರು?
ಸುಸಾನ್ : ಏಕೆಂದರೆ, ಅವರು ಪ್ರಪ್ರಥಮ ಬಾರಿಗೆ ಒಬ್ಬ ವಿದೇಶಿಯರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗಿದ್ದರು.
ಮೇರಿ : ಆದರೆ ಅದಕ್ಕೆ ಕಾರಣವೇನಿರಬಹುದು? (ಯೋಚಿಸುತ್ತಾ) ಓಹ್! ಗೊತ್ತಾಯಿತು. ಅವರು ನಮ್ಮ ದೇಶದ ಹೆಮ್ಮೆಯ ರಾಷ್ಟ್ರಪತಿ ಎಂದು, ಅಲ್ಲವೇ?
ಸುಸಾನ್ : (ನಗುತ್ತಾ) ಒಮನ್ ರು ವಿಮಾನದ ಒಳಗೇ ಹೋಗಿ ಅವರನ್ನು ಬರಮಾಡಿಕೊಂಡರು.
ಮೇರಿ : ವಿಮಾನದ ಒಳಗೇ ಹೋದರೇ?
ಸುಸಾನ್ : ಅಷ್ಟು ಮಾತ್ರವಲ್ಲ. ವಿಮಾನದಿಂದ ಇಳಿದ ನಂತರ ರಾಷ್ಟ್ರಪತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ತಾವೇ ಕಾರನ್ನು ಚಲಾಯಿಸಿದರು!
ಮೇರಿ : ನಿಜವಾಗಿಯೂ?
ಸುಸಾನ್ : ಹೌದು ಮಗು! ವರದಿಗಾರರು ಸುಲ್ತಾನರ ಈ ವಿಚಿತ್ರ ನಡವಳಿಕೆಯ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಸುಲ್ತಾನರು, ತಾನು ಅವರನ್ನು ಭಾರತದ ರಾಷ್ಟ್ರಪತಿಯೆಂದು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗಲಿಲ್ಲ ಎಂದು ಹೇಳಿದರು.
ಮೇರಿ : ಹಾಗಾದರೆ, ಮತ್ತೇಕೆ?
ಸುಸಾನ್ : ಸುಲ್ತಾನರು ಭಾರತದಲ್ಲಿ ವ್ಯಾಸಾಂಗ ಮಾಡಿದ್ದರು. ಅವರು ಪುಣೆಯಲ್ಲಿ ಓದುತ್ತಿದ್ದಾಗ ಶ್ರೀಯುತ ಶಮಾ೵ರವರು ಅವರ ಪ್ರಾಧ್ಯಾಪಕರಾಗಿದ್ದರು!
ಮೇರಿ : ಓಹ್ ದೇವರೇ! ಸುಲ್ತಾನರಿಗೆ ಬಹಳ ಹಿಂದೆ ಕಲಿಸಿದ ತನ್ನ ಗುರುಗಳ ಮೇಲೆ ಅದೆಷ್ಟು ಗೌರವಾದರ! ಻ಅಷ್ಟಕ್ಕೂ ಅವರು ವಿದೇಶೀಯರು!
ಸುಸಾನ್ : ಈಗ ನಿನಗೆ ನಾನು ಆ ಘಟನೆಯನ್ನು ಏಕೆ ವಿವರಿಸಿದೆ ಎಂದು ಅಥ೵ವಾಯಿತೇ ಮಗು?
ಮೇರಿ : ನನಗೆ ಅಥ೵ವಾಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ ಅಮ್ಮಾ (ಒಬ್ಬ ಶಿಕ್ಷಕಿ ಅವರ ಮುಂದೆ ಹಾದು ಹೋದರು)
ಮೇರಿ : ಶುಭೋದಯ ಮ್ಯಾಮ್ !
ಶಿಕ್ಷಕಿ : ಮೇರಿ, ನಿನ್ನ ಹೊಸ ತರಗತಿ ಹೇಗಿದೆ?
ಮೇರಿ : ಚೆನ್ನಾಗಿದೆ ಮ್ಯಾಮ್! ಆದರೆ ಈ ವಷ೵ ನಿಮ್ಮ ಅನುಪಸ್ಥಿತಿ ಬೇಸರ ತಂದಿದೆ.
ಶಿಕ್ಷಕಿ : (ನಗುತ್ತಾ) ನಾನೂ ನಿನ್ನನ್ನು ಮಿಸ್ ಮಾಡಿಕೊಳ್ಳುವೆ.
ಮೇರಿ : ಅಮ್ಮಾ, ಮೇರಿ ಶಿಕ್ಷಕಿ ನನ್ನ ಕಳೆದ ವಷ೵ದ ತರಗತಿಯ ಗುರುಗಳಾಗಿದ್ದರು! 
(ಸುಸಾನ್ ನಗುತ್ತಾ ಮೇರಿಯ ಬೆನ್ನು ತಟ್ಟುತ್ತಾಳೆ)

Leave a Reply

Your email address will not be published. Required fields are marked *

error: