ಪ್ರಾರ್ಥನೆಗೆ ಸಂಬಂಧಿಸಿದ ಕಥೆ

Print Friendly, PDF & Email
ಓಂ ಸರ್ವೇ ವೈ ಶ್ಲೋಕ – ಮುಂದುವರಿದ ಅಧ್ಯಯನ

ಯುಧಿಷ್ಠಿರನು ಧರ್ಮರಾಜನೆಂದು ಪ್ರಸಿದ್ಧನಾಗಿದ್ದನು ಮತ್ತು ಅತ್ಯಂತ ಸದ್ಗುಣಶೀಲ ಮತ್ತು ನೀತಿವಂತ ವ್ಯಕ್ತಿ. ಅವನ ಜೀವನವು ಶುದ್ಧ, ಪವಿತ್ರ ಮತ್ತು ದೈವಿಕ ಕ್ರಿಯೆಗಳಿಂದ ತುಂಬಿತ್ತು.

ಅವನು ತನ್ನ ಜೀವನದಲ್ಲಿ ಯಾವುದೇ ಪಾಪಗಳನ್ನು ಮಾಡದ ಕಾರಣ, ಅವನು ಸಾಕಷ್ಟು ಪುಣ್ಯವನ್ನು ಗಳಿಸಿದ್ದನು. ಆದರೆ ಅಯ್ಯೋ! ಅವನ ಶುದ್ಧ ಶ್ಲಾಘನೀಯ ಜೀವನದಲ್ಲಿ ಒಂದು ಸಣ್ಣ ಕಪ್ಪು ಮಚ್ಚೆ ಇತ್ತು. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ, ಪಾಂಡವರು ಕೌರವರ ವಿರುದ್ಧ ಮತ್ತು ಅವರ ಗುರು ದ್ರೋಣಾಚಾರ್ಯರ ವಿರುದ್ಧ ಹೋರಾಡಿದರು. ದ್ರೋಣಾಚಾರ್ಯರನ್ನು ಸೋಲಿಸುವುದು ಕಷ್ಟ ಎಂದು ಕೃಷ್ಣನಿಗೆ ಗೊತ್ತಿತ್ತು. ದ್ರೋಣಾಚಾರ್ಯರು ತನ್ನ ಅಸ್ತ್ರಗಳನ್ನು ಕೆಳಗೆ ಇಟ್ಟು ಯುದ್ಧ ಮಾಡಲು ನಿರಾಕರಿಸಿದರೆ ಮಾತ್ರ ಅವರನ್ನು ಸೋಲಿಸಲು ಸಾಧ್ಯವಾಗಿತ್ತು. ಆದರೆ ದ್ರೋಣರು ತನ್ನ ಅಸ್ತ್ರಗಳನ್ನು ಹೇಗೆ ಕೆಳಗೆ ಇಡಲು ಸಾಧ್ಯ? ಅವರು ತನ್ನ ಒಬ್ಬನೇ ಮಗ ಅಶ್ವತ್ಥಾಮನನ್ನು ತುಂಬಾ ಪ್ರೀತಿಸುತ್ತಿದ್ದರು.

ದ್ರೋಣನಿಗೆ ಅಶ್ವತ್ಥಾಮನು ಸತ್ತನೆಂಬ ಸುದ್ದಿ ಬಂದರೆ ಮಾತ್ರ, ಅವರು ತನ್ನ ಅಸ್ತ್ರಗಳನ್ನು ಖಿನ್ನತೆಯಲ್ಲಿ ಕೆಳಗೆ ಇಡಬಹುದು. ಆದರೆ ದ್ರೋಣರು ವದಂತಿಗಳನ್ನು ನಂಬಲಿಲ್ಲ. ಯುಧಿಷ್ಠಿರನಿಂದ ಸತ್ಯವನ್ನು ದೃಢಪಡಿಸಿದರು. ಏಕೆಂದರೆ ಯುಧಿಷ್ಠರನು ಸತ್ಯವನ್ನು ಹೊರತುಪಡಿಸಿ ಏನನ್ನೂ ಮಾತನಾಡುತ್ತಿರಲಿಲ್ಲ.

ಸುಳ್ಳು ಹೇಳಲು ಯುಧಿಷ್ಠಿರನನ್ನು ಒಪ್ಪಿಸುವುದಾದರು ಹೇಗೆ? ಶ್ರೀಕೃಷ್ಣನು ಒಂದು ಯೋಜನೆಯನ್ನು ಯೋಚಿಸಿದನು. ಅಶ್ವತ್ಥಾಮ ಎಂಬ ಆನೆಯನ್ನು ಕೊಲ್ಲಲಾಯಿತು. ನಂತರ ಕೃಷ್ಣನು ಯುಧಿಷ್ಠಿರನಿಗೆ ಹೇಳಿದನು. ಒಂದು ಬಾರಿ ದ್ರೋಣರು “ಅಶ್ವತ್ಥಾಮ ಸತ್ತನೋ?” ಎಂದು ಕೇಳಿದರೆ ಅವನು “ಹೌದು” ಎಂದು ಜೋರಾಗಿ ಹೇಳಬೇಕು ತದನಂತರ ಗೊಣಗುವ ಧ್ವನಿಯಲ್ಲಿ “ನರೋ ವಾ ಕುಂಜರೋ ವಾ” ಅದು ಆನೆಯೋ ಅಥವಾ ಮನುಷ್ಯನೋ ನನಗೆ ಗೊತ್ತಿಲ್ಲ ಎಂದು ಹೇಳಬೇಕು. ಯೋಜನೆಯ ಪ್ರಕಾರ ಎಲ್ಲವನ್ನೂ ಮಾಡಲಾಯಿತು ಮತ್ತು ಶ್ರೀಕೃಷ್ಣನು ನಿರೀಕ್ಷಿಸಿದಂತೆ ದ್ರೋಣರು ಸತ್ಯವನ್ನು ಖಚಿತಪಡಿಸಲು ಯುಧಿಷ್ಠಿರನ ಬಳಿಗೆ ಹೋದರು. ಗಿಳಿಪಾಠ ಮಾಡಿದಂತೆ ಯುಧಿಷ್ಠಿರನು ಮಾತುಗಳಿಗೆ ಉತ್ತರಿಸಿದನು. ಈಗ, ಯುಧಿಷ್ಠಿರನು ಸುಳ್ಳನ್ನು ಮಾತನಾಡದಿದ್ದರೂ, ಅದು ಭಾಗಶಃ ಸುಳ್ಳಾಗಿತ್ತು. ಏಕೆಂದರೆ ಅದು ಸತ್ತು ಹೋಗಿದ್ದು ಅಶ್ವತ್ಥಾಮ ಅಲ್ಲ, ಆನೆ ಎಂದು ಯುಧಿಷ್ಠಿರನಿಗೆ ತಿಳಿದಿತ್ತು. ಈ ಸಣ್ಣ ಕೃತ್ಯವು ಅವನ ಜೀವನದಲ್ಲಿ ಪಾಪದ ಸಣ್ಣ ಮಚ್ಚೆಯನ್ನು ಮೂಡಿಸಿತ್ತು.

ಯುಧಿಷ್ಠಿರನು ಅದಕ್ಕೆ ತಕ್ಷಣ ಒಪ್ಪಿದನು. ಅವನು ನರಕವನ್ನು ಪ್ರವೇಶಿಸಿದಾಗ, ಅಲ್ಲಿ ನರಳುತ್ತಿದ್ದವರು ಮತ್ತು ಚಿತ್ರಹಿಂಸೆ ಅನುಭವಿಸುತ್ತಿರುವವರು ಇದ್ದಕ್ಕಿದ್ದಂತೆ ಶಾಂತತೆ, ಶೀತಲತೆ ಮತ್ತು ಸಂತೋಷವನ್ನು ಧರ್ಮರಾಜನ ಆಗಮನದಿಂದ ಅನುಭವಿಸಿದರು.

ಧರ್ಮರಾಜನು ನರಕದಲ್ಲಿನ ಬದಲಾವಣೆಯನ್ನು ಗಮನಿಸಿದನು. ಅವನು ತುಂಬಾ ಪ್ರೀತಿಯುಳ್ಳವನು, ಸಹಾನುಭೂತಿ ಮತ್ತು ಕರುಣಾಮಯಿಯಾಗಿದ್ದನು. ಅವನು ಯಾವಾಗಲೂ ಇತರರ ಸಂತೋಷವನ್ನು ತನ್ನದೆಂದು ಭಾವಿಸುತ್ತಿದ್ದನು. ಅವನು ಯಮನಿಗೆ ಮೊರೆಯಿಟ್ಟು ಹೇಳಿದನು, “ಓ ಭಗವಂತನೇ ಮನುಕುಲದ ಸಹೋದರತ್ವವನ್ನು ಅರ್ಥಮಾಡಿಕೊಳ್ಳದಿದ್ದರೆ ಮಾನವ ಜೀವನದಿಂದ ಏನು ಪ್ರಯೋಜನ?” ನರಕದಲ್ಲಿರುವ ಈ ಜನರಿಗೆ ನನ್ನ ಉಪಸ್ಥಿತಿಯ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ನಾನು ಅವರಿಗೆ ನನ್ನ ಎಲ್ಲಾ ಪುಣ್ಯವನ್ನು ಅರ್ಪಿಸುತ್ತೇನೆ. ಅವರ ಸಂತೋಷಕ್ಕಾಗಿ ನಾನು ನರಕದಲ್ಲಿ ಉಳಿಯಲು ಸಿದ್ಧನಿದ್ದೇನೆ. ಎಲ್ಲರೂ ಸಂತೋಷವಾಗಿರಲಿ, ಯಾರಿಗೂ ತೊಂದರೆಯಾಗದಿರಲಿ, ಎಲ್ಲರೂ ಶಾಂತಿಯನ್ನು ಪಡೆಯಲಿ.” ಎಂತಹ ದೊಡ್ಡ ತ್ಯಾಗ! ಯಮರಾಯನು ಬಹಳ ಸಂತೋಷಪಟ್ಟನು.

ಅವನು ತಕ್ಷಣವೇ ಎಲ್ಲಾ ಜನರನ್ನು ನರಕದಿಂದ ಬಿಡುಗಡೆ ಮಾಡಿದನು. ಯುಧಿಷ್ಠರನಿಗೆ ಸಿಕ್ಕ ಬಹುಮಾನ ಏನು ಗೊತ್ತಾ? ತನ್ನ ಪುಣ್ಯವನ್ನು ಇತರರಿಗೆ ಅರ್ಪಿಸುವ ಮೂಲಕ, ಅವನು ಮೊದಲು ಹೊಂದಿದ್ದಕ್ಕಿಂತ ಸಾವಿರ ಪಟ್ಟು ಹೆಚ್ಚು ಪುಣ್ಯವನ್ನು ಗಳಿಸಿದನು. ಯುಧಿಷ್ಠಿರನಂತೆ ಎಲ್ಲರ ಒಳಿತಿಗಾಗಿ, ಎಲ್ಲಾ ಮಾನವಕುಲದ ಸುಖ ಸಂತೋಷ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸಬೇಕು. ನಾವು ನಮ್ಮ ಸ್ವಾರ್ಥಕ್ಕಾಗಿ ಪ್ರಾರ್ಥಿಸುತ್ತೇವೆ. ನಾವು ನಮ್ಮ ಸಂಬಂಧಿಕರು, ಸ್ನೇಹಿತರು ಅಥವಾ ನೆರೆಹೊರೆಯವರಿಗಾಗಿ ಪ್ರಾರ್ಥಿಸಬಹುದು. ಆದರೆ ಯುಧಿಷ್ಠಿರನು ತನಗೆ ಪರಿಚಯವಿಲ್ಲದ, ತನ್ನ ಸ್ನೇಹಿತರಾಗಲೀ ಅಥವಾ ಸಂಬಂಧಿಕರಾಗಲೀ ಅಲ್ಲದವರಿಗಾಗಿ ಪ್ರಾರ್ಥಿಸಿದನು.

[Illustrations by Haripriya, Sri Sathya Sai Balvikas Student]
(ಮೂಲ: ಶ್ರೀ ಸತ್ಯಸಾಯಿ ಬಾಲವಿಕಾಸ್ ಗುರುಗಳ ಕೈಪಿಡಿ)]

Leave a Reply

Your email address will not be published. Required fields are marked *

error: