ಸ್ವಾಮಿ ದತ್ತಾತ್ರೇಯ ರಂತೆ
ಸ್ವಾಮಿ – ತ್ರಿಮೂತಿಗಳ ಅವತಾರ
ಮಾಚ್ 7, 1978, ಗುರುವಾರ, ಶಿವರಾತ್ರಿಯ ಶುಭ ಸಂದಭ. ಈ ಪವಿತ್ರ ದಿನದಂದು ಸ್ವಾಮಿ ಎಲ್ಲರಬಹುದೆಂದು ಭಕ್ತರು ಊಹಿಸುತ್ತಿರುವಾಗ, ಮಾಚ್ 4ರಂದು ಸ್ವಾಮಿ ಕೆಲವು ಭಕ್ತರು ಮತ್ತು ವಿದ್ಯಾಥಿಗಳೊಂದಿಗೆ ಊಟಿಗೆ ಹೋದರು. ಮಾಚ್ 7ರಂದು ಸ್ವಾಮಿ, ಊಟಿಯನ್ನು ಬಿಟ್ಟು ಮೈಸೂರಿನ ಮಾಗದಲ್ಲಿ ಸಿಗುವ ಮದುಮಲೈ ಕಾಡಿನ ಕಡೆಗೆ ಹೊರಟರು. ಕಾಡಿನಲ್ಲಿ ಗುಡ್ಡದ ಮೇಲಿದ್ದ ಅತಿಥಿಗೃಹದಲ್ಲಿ ಸ್ವಾಮಿ ತಂಗಿದ್ದರು.
ಬೆಳಗಿನ ಉಪಾಹಾರದ ನಂತರ, ಅತಿಥಿಗೃಹದ ಮುಂದಿದ್ದ ಹುಲ್ಲುಗಾವಲಿನಲ್ಲಿ ನಡೆಯುತ್ತಾ ಸ್ವಾಮಿ ಭಕ್ತರೊಂದಿಗೆ ನಿಂತು ತಮ್ಮ ಭಾವಚಿತ್ರ ತೆಗೆಯಲು ಅವಕಾಶ ಮಾಡಿಕೊಟ್ಟರು. ವಿದ್ಯಾಥಿಯೊಬ್ಬ ಸ್ವಾಮಿಯ ಭಾವಚಿತ್ರಗಳನ್ನು ತೆಗೆಯಲು ಪೊಲರಾಯ್ಡ್ ಕ್ಯಾಮೆರಾ ಬಳಸುತ್ತಿದ್ದನು. ಭಾವಚಿತ್ರಗಳನ್ನು ತೆಗೆದ ತಕ್ಷಣವೇ ಅದನ್ನು ಭಕ್ತರಿಗೆ ಕೊಡಲಾಗುತ್ತಿತ್ತು. ಕೊನೆಯಲ್ಲಿ ಸ್ವಾಮಿ ತಮ್ಮ ಭಾವಚಿತ್ರ ತೆಗೆಯಲು ಒಪ್ಪಿಗೆ ನೀಡಿದರು.
ಸ್ವಾಮಿಯ ನಿಲುವಂಗಿಯ ಕೆಳಗಿನ ಭಾಗದಲ್ಲಿ ಮರದ ಕೊಂಬೆಯೊಂದು ಸಿಲುಕಿಕೊಂಡಿತ್ತು. ಶ್ರೀಮತಿ ರತನ್ ಲಾಲ್ ಅದನ್ನು ತೆಗೆಯಲೆಂದು ಮುಂದೆ ಬಂದರು. ಆಗ ಸ್ವಾಮಿ ಕೋಪದಿಂದ, “ನನ್ನನ್ನು ಮುಟ್ಟಬೇಡ,” ಎಂದು ಅವರಿಗೆ ಬೈದದ್ದನ್ನು ನೋಡಿ ಎಲ್ಲರಿಗೂ ಆಶ್ಚಯವಾಯಿತು. ಅವರು ತಕ್ಷಣವೇ ತಮ್ಮ ಜಾಗಕ್ಕೆ ಹಿಂತಿರುಗಿದರು. ಭಾವಚಿತ್ರ ತೆಗೆದ ನಂತರ ಸ್ವಾಮಿ ಅದನ್ನು ಜೋಗಾರಾವ್ ಅವರಿಗೆ ತೋರಿಸಿದರು. ಸ್ವಾಮಿಯ ಕೈಯಲ್ಲೇ ಆ ಭಾವಚಿತ್ರ ಸಂಪೂಣವಾದ ಆಕಾರ ಪಡೆಯಿತು. ಆದರೆ ಆ ಭಾವಚಿತ್ರದಲ್ಲಿ ಏನಿತ್ತು? ಕೇಸರಿ ನಿಲುವಂಗಿ ಧರಿಸಿರುವ ಸ್ವಾಮಿಯ ರೂಪ ಇರಬೇಕಾಗಿದ್ದ ಜಾಗದಲ್ಲಿ ಕಪ್ಪು ಬಿಳುಪಿನ, ಬಿಳಿಯ ವಸ್ತ್ರ ಧರಿಸಿದ್ದ ಮೂರು ತಲೆ, ಆರು ಕೈಗಳುಳ್ಳ ಯುವಕನ ಚಿತ್ರ ಮೂಡಿತ್ತು. ಪ್ರತಿಯೊಂದು ಹಸ್ತದಲ್ಲೂ ದೈವತ್ವದ ಒಂದೊಂದು ಪ್ರತೀಕಗಳಿದ್ದವು. ಕೆಳಗಿನ ಎಡ ಭುಜವು ಮಣಿಕಟ್ಟಿನ ಭಾಗದಲ್ಲಿ ಮಡಚಿ ಪುಟ್ಟ ಹಸುವೊಂದರ ಮೇಲೆ ವಿರಮಿಸಿತ್ತು. ಹಿಂದೆ ನಾಲ್ಕು ನಾಯಿಗಳಿದ್ದವು. ಮಧ್ಯದಲ್ಲಿದ್ದ ಮುಖವು ಬಾಬಾರವರನ್ನು ಹೋಲುತ್ತಿತ್ತು. ಇದು ಪುರಾಣಗಳಲ್ಲಿ ವಿವರಿಸಿರುವ ದತ್ತಾತ್ರೇಯ ದೇವರ ಭಾವಚಿತ್ರವಾಗಿತ್ತು. ಬ್ರಹ್ಮ, ವಿಷ್ಣು ಮಹೇಶ್ವರರ ಸಮ್ಮಿಳನ. ಇದೇ ಅವರ ನಿಜವಾದ ರೂಪ. ಈ ಅದ್ಭುತ ರೂಪವನ್ನು ಎಲ್ಲರೂ ಸವಿದ ನಂತರ, ಎಲ್ಲರೂ ತಮ್ಮ ಹೃದಯದಲ್ಲಿ ಇದನ್ನು ಅಚ್ಚಳಿಯದೆ ಮೂಡಿಸಿಕೊಂಡ ನಂತರ ಆ ಭಾವಚಿತ್ರ ಮಾಯವಾಯಿತು. ಮರುದಿನ ಬೃಂದಾವನದಲ್ಲಿ ಭಗವಾನರು ವಿದ್ಯಾಥಿಗಳಿಗೆ ಅದೇ ತಮ್ಮ ನಿಜವಾದ ಸ್ವರೂಪ ಎಂದು ತಿಳಿಸಿದರು ಹಾಗೂ ಶ್ರೀಮತಿ ರತನ್ ಲಾಲ್ ಆ ಸಮಯದಲ್ಲಿ ಸ್ವಾಮಿಯನ್ನು ಸ್ಪಶಿಸಿದ್ದರೆ ಉಳಿಯುತ್ತಿರಲಿಲ್ಲ ಎಂದೂ ತಿಳಿಸಿದರು.
[ಮೂಲ: http://www.saibaba.ws/articles2/jogarao.htm]