ಅನುಸಂಧಾನ:
ಅನುಸಂಧಾನ:
ಅನುಭವ ಜನ್ಯ ಕಲಿಕೆಯು ಬೋಧನೆ ಮತ್ತು ಕಲಿಕೆಯ ಒಂದು ವಿಷಯಕ್ಕಿಂತ ಮಿಗಿಲಾಗಿ, ವ್ಯಾಸಂಗ ಕ್ರಮವನ್ನು ಸಮೀಪಿಸುವ ಒಂದು ಮಾರ್ಗವಾಗಿದೆ.
- ಆದ್ದರಿಂದ ಅದಕ್ಕೆ ಯಾವುದೇ ಸ್ಪಷ್ಟವಾಗಿ ನಿರೂಪಿಸಲ್ಪಟ್ಟ ವಿಷಯ ಜ್ಞಾನದ ಭಾಗವಾಗಲಿ, ನಿಗದಿಗೊಳಿಸಿದ ಪಾಠ ಪ್ರವಚನ ಸರಣಿಯ ವಿಷಯವಾಗಲೀ ಇಲ್ಲ.
- ಯಾವುದೇ ಅಭ್ಯಾಸಕ್ಕೆ ಸಂಬಂಧಿಸಿದ ಪರಿವಿಡಿ (ವಿಷಯದ ಮಾಹಿತಿ)ಯನ್ನು ಮೊದಲೇ ನಿರ್ಧರಿಸಲು ಸಾಧ್ಯವಿಲ್ಲ. ಪ್ರಾರಂಭದಲ್ಲಿ ಪಾಠ ಪ್ರವಚನಗಳ ವಿಷಯವನ್ನು ಮಕ್ಕಳು ತಮ್ಮ ಪೂರ್ವಾನುಭವ ಮತ್ತು ಗ್ರಹಿಕೆಯ ಆಧಾರದಿಂದ ಒದಗಿಸುತ್ತಾರೆ.
- ಆದಾಗ್ಯೂ, ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅವರ ತೊಡಗಿಸಿಕೊಳ್ಳುವಿಕೆಯು ಹೆಚ್ಚಾದಂತೆ, ಪಾಠವಿಷಯ ಸರಣಿಯ ಆಳ ಮತ್ತು ವಿಸ್ತಾರಗಳು ಹೆಚ್ಚಾಗುತ್ತವೆ.
- ಹೀಗೆ, ಅನುಭವ ಜನ್ಯ ಕಲಿಕೆಯು ಕ್ರಿಯಾಶೀಲವಾದ ವಿಕಸನ ಪ್ರಕ್ರಿಯೆಯಾಗಿದೆ.
- ಅವಶ್ಯಕವಾಗಿ, ಇದೊಂದು ವಿಚಾರಣಾ ವಿಧಾನವಾಗಿದ್ದು, ಸಾಮಾಜಿಕ ಕೌಶಲಗಳು, ಅಂತರ್ ದೃಷ್ಟಿಯ ಅನುಭವ ಮತ್ತು ಸೃಜನಶೀಲ ಅಭಿವ್ಯಕ್ತಿಗೆ ಒತ್ತನ್ನು ನೀಡುತ್ತದೆ.
- ಈ ಪ್ರಕ್ರಿಯೆಯಲ್ಲಿ, ಈ ವಿಧಾನದ ವ್ಯಾಪಕ ಕಾರ್ಯವ್ಯಾಪ್ತಿಯಲ್ಲಿ, ಎಲ್ಲಾ ವಿಧದ ಅಂಕಿ, ಸಂಖ್ಯೆಗಳ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಅದನ್ನು ವಿಶ್ಲೇಷಿಸುವ, ವಿವಿಧ ರೀತಿಯಲ್ಲಿ ಸಂಪರ್ಕ ಸಾಧಿಸುವ ಮತ್ತು ಪರಸ್ಪರ ಅರಿವನ್ನು ಹೆಚ್ಚಿಸುವ ಕೌಶಲವನ್ನು ಪರಿಶೋಧಿಸುತ್ತದೆ.
- ಗುಂಪಿನಲ್ಲಿ ಕೆಲಸಮಾಡುವ ಸಾಮರ್ಥ್ಯ, ಸಲಹೆಗಳನ್ನು ನೀಡುವುದು ಮತ್ತು ಪಡೆಯುವುದು, ಇತರರನ್ನು ಮತ್ತು ಪ್ರಾಕೃತಿಕ ವಾತಾವರಣವನ್ನು ಗೌರವಿಸುವುದು ಮತ್ತು ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದು ಇವು, ಒಂದು ಸ್ಥಿರವಾದ ಮೌಲ್ಯ ವ್ಯವಸ್ಥೆಯನ್ನು ಬೇರೂರಿಸಲು ಎಚ್ಚರಿಕೆಯಿಂದ ಉತ್ತೇಜಿಸಲ್ಪಡುವ ಇತರ ಕೆಲವು ಕೌಶಲಗಳು.