ಪರಿಕಲ್ಪನೆ

Print Friendly, PDF & Email

ಪರಿಕಲ್ಪನೆ

ಅನುಭವಜನ್ಯ ಕಲಿಕೆಯು ಬೋಧನೆಯ ಒಂದು ಸಮಗ್ರ ವಿಧಾನವಾಗಿದೆ. ಇದು ಶಿಸ್ತಿನ ಕೃತಕ ತಡೆಗೋಡೆಗಳನ್ನು ಮರೆಮಾಡಿ, ಪರಸ್ಪರ ಒಟ್ಟುಗೂಡಿಸುವಿಕೆ (ಅಂತರ್ ಏಕೀಕರಣ) ಯನ್ನು ಒದಗಿಸುತ್ತದೆ. ಇದರಿಂದ ಮಕ್ಕಳು, ವಿಷಯಗಳ ಹಿನ್ನೆಲೆಯಲ್ಲಿರುವ ವಿಜ್ಞಾನವನ್ನು ಅರಿತುಕೊಳ್ಳಬಹುದು, ಜೀವನದ ಅನುಭವಗಳೊಡನೆ ಅವುಗಳ ಸಂಬಂಧ ಕಲ್ಪಿಸಬಹುದು ಮತ್ತು ಫಲದಾಯಕವಾದ ಒಂದು ಮಾದರಿಯನ್ನು ವಿವೇಚಿಸಬಹುದು. ಹೀಗೆ, ಸತ್ಯ, ಒಳ್ಳೆಯತನ ಮತ್ತು ಸೌಂದರ್ಯ, ಅಂದರೆ “ಸತ್ಯಂ, ಶಿವಂ, ಸುಂದರಂ” ಇದು ಅನುಭವಜನ್ಯ ಕಲಿಕೆಯ ಮಾನದಂಡವಾಗಿದೆ. ಈ ಅಂತರ್ ದೃಷ್ಟಿಯು ಅಗಾಧವಾಗಿ ಮೌಲ್ಯಗಳನ್ನು ಬೇರೂರಿಸುವ ಆಯಾಮವನ್ನು ಹೊಂದಿದೆ.

ಈ ವಿಧಾನದ ಉದ್ದೇಶವು ಎರಡು ವಿಚಾರಗಳನ್ನು ಹೊಂದಿದೆ:.
  1. ಮೊದಲನೆಯದಾಗಿ, ಇದು ತರಗತಿಯ ಎಲ್ಲ ಮಕ್ಕಳನ್ನೂ ತೊಡಗಿಸಿಕೊಳ್ಳುತ್ತದೆ. ತರಗತಿಯ ಶಿಕ್ಷಕರು ‘ವಿಷಯ’ವನ್ನು ಆಯ್ಕೆಮಾಡುತ್ತಾರೆ. ವಿಷಯದ ಬಗೆಗಿನ ವಿಚಾರಗಳು ಮತ್ತು ಮಂಡನೆ ಎಲ್ಲವೂ ಮಕ್ಕಳಿಂದಲೇ ಬರುತ್ತವೆ. ಮಕ್ಕಳಿಗೆ ಒಂದು ಸಾರಿ ತಮ್ಮ ಪಾತ್ರದ ಅರಿವಾದರೆ, ತೊಡಗಿಸಬೇಕಾದ ಮಾಹಿತಿಗಳನ್ನು (ಆದಾನ- ಇನ್ ಪುಟ್) ಅವರೇ ಸಂಗ್ರಹಿಸುತ್ತಾರೆ. ಅದರ ಹೊರ ಹರಿವನ್ನು (ಪ್ರದಾನ-ಔಟ್ ಪುಟ್) ನೀವೇ ಕಣ್ಣಾರೆ ನೋಡಬಹುದು. ಮಕ್ಕಳು ಕೇವಲ ಕೇಳಿಸಿಕೊಂಡಾಗ ಗ್ರಹಿಕೆ ೨೦% ಮಾತ್ರ ಆಗಿರುತ್ತದೆ. ಆದರೆ,ಅವರು ಸಕ್ರಿಯವಾಗಿ ತೊಡಗಿಸಿಕೊಂಡು, ತಾವು ಅರ್ಥಮಾಡಿಕೊಂಡಿರುವುದರ ಬಗ್ಗೆ ಮಾತನಾಡಬಲ್ಲವರಾದಾಗ ಗ್ರಹಿಕೆಯ ಪ್ರಮಾಣ ೭೦% ಅಥವಾ ಇನ್ನೂ ಹೆಚ್ಚಿರುತ್ತದೆ. ಮಕ್ಕಳು ತಾವು ನೇರವಾಗಿ ಅನುಭವಕ್ಕೆ ಪಡೆದುದನ್ನು ಮನದಟ್ಟು ಮಾಡಿಕೊಳ್ಳುತ್ತಾರೆ. ಅವರು ಅದನ್ನು ತಮ್ಮ ಸ್ವಂತ ಜ್ಞಾನವೆಂದು ಹೇಳಬಹುದು. ಯಾವುದನ್ನು ಮನದಟ್ಟು ಮಾಡಿಕೊಳ್ಳಲು ಆಗುವುದಿಲ್ಲವೋ, ಅದು ವ್ಯವಸ್ಥೆಯಲ್ಲಿ ಒಂದಾಗುವುದಿಲ್ಲ, ಅದು ಹೊರಗೆಸೆಯಲ್ಪಡುತ್ತದೆ, ವಾಂತಿಯಾಗುತ್ತದೆ (ಈಗಿನ ಪರೀಕ್ಷೆಗಳಲ್ಲಿ ಆಗುವಂತೆ). ಶ್ರೀ ಸತ್ಯಸಾಯಿ ಬಾಬಾರವರು ಹೇಳಿರುವಂತೆ ‘ಪುಸ್ತಕಜ್ಞಾನವು ಈವರ್ಗಕ್ಕೆ ಸೇರುತ್ತದೆ. ಪ್ರಾಯೋಗಿಕ ಜ್ಞಾನ ಎಂದರೆ, ಅವರು ಗ್ರಹಿಸಿರುವ ಜ್ಞಾನ. ಇದು ಶೈಕ್ಷಣಿಕ ಲಾಭ’.
  2. ಎರಡನೆಯದಾಗಿ, ಒಂದು ವಿಷಯದ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವಾಗ ಮಕ್ಕಳು ಒಟ್ಟಾಗಿ ಕೆಲಸ ಮಾಡುತ್ತಾರೆ. ಅವರು ಸಹಕಾರ ಮತ್ತು ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳುತ್ತಾರೆ. ಕಲ್ಪನೆಗಳನ್ನು ಮತ್ತು ಕೌಶಲಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇದು ‘ಹಂಚಿಕೊಳ್ಳುವ’ ಮೌಲ್ಯವನ್ನು ಉತ್ತೇಜಿಸುತ್ತದೆ. ಅವರು ಒಮ್ಮತವನ್ನು ಬೆಳೆಸಿಕೊಂಡು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಹೀಗೆ ಗುಂಪು ಚಟುವಟಿಕೆಯು, ಬಹಳಷ್ಟು ‘ಸಮಾನ ಸ್ಕಂದ ಗುಂಪಿನ’ ಬೆಂಬಲವನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *