ಜಪಾನ್ ನ ಭೂವಿಜ್ಞಾನಿ
ಜಪಾನ್ ನ ಭೂವಿಜ್ಞಾನಿ
ಬಾಬಾ ಆಗಾಗ್ಗೆ “ಎಲ್ಲಾ ಹೆಸರುಗಳೂ ನನ್ನದು ಮತ್ತು ಎಲ್ಲಾ ರೂಪಗಳೂ ನನ್ನದು” ಎಂದು ಘೋಷಿಸಿದ್ದಾರೆ. ಆದುದರಿಂದ ಅವರು ತನ್ನ ಮಕ್ಕಳಾದ ಜನರಿಗೆ, ಅವರನ್ನು ನೋಡಿರದಿದ್ದರೂ ಅಥವಾ ಅವರ ಬಗ್ಗೆ ಕೇಳಿರದಿದ್ದರೂ ಅವರ ಪ್ರಾಮಾಣಿಕ ಪ್ರಾರ್ಥನೆಗಳಿಗೆ ಪ್ರತಿಕ್ರಿಯಿಸುತ್ತಾರೆ.
ಒಮ್ಮೆ ಜಪಾನಿನ ಭೂವಿಜ್ಞಾನಿ ಒಬ್ಬರು ಭಾರತಕ್ಕೆ ಭೇಟಿ ನೀಡಿದಾಗ, ಸ್ವಾಮಿಯ ಛಾಯಾಚಿತ್ರಗಳನ್ನು ಬೆಂಗಳೂರಿನ ಸಹೋದ್ಯೋಗಿಯ ಮನೆಯಲ್ಲಿ ನೋಡಿದರು. ಈ ವಿಜ್ಞಾನಿ ಬಾಬಾರನ್ನು ನೋಡಲು ಮತ್ತು ಅವನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ಸುಕರಾಗಿದ್ದರು. ಆದುದರಿಂದ ಭಕ್ತ ಸಹೋದ್ಯೋಗಿ ಅವರನ್ನು ಬೃಂದಾವನಕ್ಕೆ ಕರೆದೊಯ್ದನು, ಆ ಸಮಯದಲ್ಲಿ ಬಾಬಾ ಬೃಂದಾವನದಲ್ಲಿ ಇದ್ದರು.
ಬಾಬಾ ಅವರನ್ನು ಸಂದರ್ಶನಕ್ಕಾಗಿ ಕರೆದರು ಅಥವಾ ಅದನ್ನು ಹೆಚ್ಚು ಸೂಕ್ತವಾಗಿ ‘ಆಂತರಂಗದ ದರ್ಶನ ಎಂದು ಕರೆಯಬಹುದು!. ಅವರು ಜನಿಸಿದಾಗ ಅವರ ಮೈ ಬಣ್ಣ ನೀಲಿಯಾಗಿದ್ದು, ಅವರು ಬದುಕುಳಿಯುವುದಿಲ್ಲ ಎಂದು ವೈದ್ಯರು ಅವರ ತಂದೆಗೆ ತಿಳಿಸಿದ್ದರು ಎಂದು ಬಾಬಾ ಭೂವಿಜ್ಞಾನಿಗಳಿಗೆ ನೆನಪಿಸಿದರು. ಆಗ ತಂದೆ ಭಗವಾನ್ ಬುದ್ಧನ ದೇವಸ್ಥಾನಕ್ಕೆ ಹೋಗಿ ಮಗುವನ್ನು ಬುದ್ಧನ ಕಾಲುಗಳ ಮೇಲೆ ಇರಿಸಿ, “ಕರ್ತನೇ, ಇದು ನಿಮ್ಮ ಮಗು, ಅವನು ಬದುಕುವುದು ಅಥವಾ ಇಲ್ಲದಿರುವುದು ನಿಮ್ಮ ದೈವಿಕ ಇಚ್ಛೆಯನ್ನು ಅವಲಂಬಿಸಿರುತ್ತದೆ” ಎಂದು ಪ್ರಾರ್ಥಿಸಿದ್ದರು. ನಂತರ ಮಗುವನ್ನು ಮನೆಗೆ ಕರೆದೊಯ್ದರು. “ಅಂದಿನಿಂದ ನಾನು ನಿನ್ನನ್ನು ನೋಡಿಕೊಳ್ಳುತ್ತಿದ್ದೇನೆ” ಎಂದು ಬಾಬಾ ಹೇಳಿದರು. ನಂತರ ಬಾಬಾ ಅವರಿಗೆ ಹೃದಯ ಆಕಾರದ ಲಾಕೆಟ್ ಅನ್ನು ಸೃಷ್ಟಿಸಿದರು. ಅದನ್ನು ತೆರೆದು ಭೂವಿಜ್ಞಾನಿಗಳಿಗೆ ತೋರಿಸಿದರು. ಅದು ಕೇವಲ ಮೂರು ಕವಾಟಗಳಿರುವ ಹೃದಯವಾಗಿತ್ತು!. ಇದನ್ನು ಗಮನಿಸಿದ ಆಭೂವಿಜ್ಞಾನಿ ಸುಮ್ಮನೆ ಬೆರಗಾದ. ಬಾಬಾಗೆ ತನ್ನ ರಹಸ್ಯ ಹೇಗೆ ತಿಳಿಯಿತು ಎಂದು ಅವನು ಆಶ್ಚರ್ಯಪಟ್ಟನು. ವೈದ್ಯರು ಅವನ ತಂದೆಗೆ ಹೇಳಿದ್ದರು, ಅವನಿಗೆ ಕೇವಲ ಮೂರು ಕವಾಟಗಳಿರುವ ಹೃದಯವಿತ್ತು ಎಂದು. ಈ ವಿಷಯ ಅವನು ಯಾರಿಗೂ ಹೇಳಿರಲಿಲ್ಲ – ವಾಸ್ತವವಾಗಿ ಅದು ಅವನ ಅತ್ಯಂತ ಗೌಪ್ಯವಾದ ರಹಸ್ಯವಾಗಿತ್ತು. ಸರ್ವವ್ಯಾಪಿ, ಸರ್ವಶಕ್ತ ಮತ್ತು ಸರ್ವಜ್ಞನಾದ ಬಾಬಾರಿಂದ ಯಾವುದೇ ರಹಸ್ಯವನ್ನು ಎಂದಿಗೂ ಮರೆಮಾಡಲು ಸಾಧ್ಯವಿಲ್ಲ ಎಂದು ಭೂವಿಜ್ಞಾನಿ ಆ ದಿನ ಅರಿತುಕೊಂಡ.
ದೈವತ್ವವು ಪ್ರತ್ಯೇಕ ಮಣಿಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ದಾರದಂತೆ, ಮತ್ತು ಪ್ರತಿ ಮಣಿಯ ಒಳಭಾಗವನ್ನು ದಾರದಿಂದ ಮಾತ್ರ ತಿಳಿಯಬಹುದು.