ವಿವೇಕದ ಅಗತ್ಯ

Print Friendly, PDF & Email
ವಿವೇಕದ ಅಗತ್ಯ

ಅಯೋಧ್ಯಾ ನಗರದ ರಾಜಕುಮಾರ ದಶರಥನ ಕೀತಿ೵ ದಶದಿಕ್ಕುಗಳಲ್ಲಿಯೂ ಹರಡಿತ್ತು. ಅವನು ಕತ್ತಲಿನಲ್ಲಿಯೂ ಕೇವಲ ಶಬ್ದವನ್ನು ಕೇಳಿಯೇ ಬಾಣ ಬಿಡುವ ಕೌಶಲ್ಯವನ್ನು ಸಾಧಿಸಿದ್ದನು.

ಅವನ ಶಬ್ದವೇಧಿ ವಿದ್ಯೆಯನ್ನು ಜನರು ತುಂಬಾ ಹೊಗಳುತ್ತಿದ್ದರು. ಅವನಿಗೂ ಅದು ಹೆಮ್ಮೆಯ ವಿಷಯವಾಗಿತ್ತು. ಸಂಜೆ ಕತ್ತಲು ಮುಸುಕುತ್ತಿದ್ದಂತೆ ಒಬ್ಬನೇ ರಥದಲ್ಲಿ ಕುಳಿತು ಕಾಡಿಗೆ ಹೋಗಿ ಬೇಟೆಗಾಗಿ ಕಾಯುತ್ತಿದ್ದನು. ಕಾಡುಕೋಣವೋ, ಜಿಂಕೆಯೋ, ಕಳ್ಳಹೆಜ್ಜೆ ಇಡುತ್ತಾ ಬರುವ ಹುಲಿಯೋ ನೀರು ಕುಡಿಯುವ ಸಲುವಾಗಿ ನದಿಯ ಬಳಿಗೆ ಬರುತ್ತಿದ್ದವು. ಅವುಗಳ ಹೆಜ್ಜೆಯ ಸದ್ದನ್ನೂ ಅವು ನೀರು ಕುಡಿಯುವ ಸದ್ದನ್ನೂ ಕೇಳಿ ಬಾಣ ಹೊಡೆದು ಅವುಗಳನ್ನು ಕೊಲ್ಲುತ್ತಿದ್ದನು. ಒಂದು ರಾತ್ರಿ ದಶರಥನು ಪೊದೆಯ ಮರೆಯಲ್ಲಿ ಅಡಗಿ ಕುಳಿತು ಸದ್ದಿಗಾಗಿ ಕಾಯುತ್ತಿದ್ದನು. ಸ್ವಲ್ಪ ಹೊತ್ತಿಗೆ ಸರೋವರದ ದಂಡೆಯ ಬಳಿ ಏನೋ ನಡಿಗೆಯ ಸದ್ದಾಯಿತು. ದಶರಥನು ಶಬ್ದವೇಧಿ ಬಲ್ಲವನಲ್ಲವೇ? ಅದು ಆನೆಯಿರಬೇಕು ಎಂದುಕೊಂಡು ಸದ್ದು ಬಂದ ಕಡೆಗೆ ಹರಿತವಾದ ಬಾಣ ಹೊಡೆದನು.

ಮರುಕ್ಷಣವೇ, “ಅಯ್ಯೋ ಸತ್ತೆ. ಯಾರಾದರೂ ಬನ್ನಿ, ಅಯ್ಯೋ”, ಎಂಬ ಆತ೵ನಾದ ಕೇಳಿಸಿತು. ದಶರಥನಿಗೆ ಜೀವ ಜಗ್ಗೆಂದಿತು. ಕೈಯಿಂದ ಬಿಲ್ಲು ಕೆಳಗೆ ಬಿತ್ತು. ತಲೆ ಸುತ್ತು ಬಂದಂತಾಯಿತು. “ಇದೇನು ಮಾಡಿಬಿಟ್ಟೆ ನಾನು? ಪ್ರಾಣಿಯೆಂದು ತಿಳಿದು ಮನುಷ್ಯನನ್ನು ಕೊಂದುಬಿಟ್ಟೆನೇ?,” ಎಂದುಕೊಳ್ಳುತ್ತಾ ಕೂಗು ಬಂದ ಕಡೆಗೆ ಓಡಿಹೋದನು. ಅಲ್ಲಿ ಆ ಸರೋವರದ ದಂಡೆಯ ಬಳಿ ಒಬ್ಬ ತರುಣನು ರಕ್ತದ ಮಡುವಿನಲ್ಲಿ ಬಿದ್ದು ಮರಣ ಸಂಕಟದಿಂದ ನರಳುತ್ತಿದ್ದನು. ಅವನ ಕೈಯಲ್ಲಿ ಅಧ೵ ನೀರು ತುಂಬಿದ ಒಂದು ಬಿಂದಿಗೆಯಿತ್ತು.

ದಶರಥನನ್ನು ಕಂಡು ಆ ತರುಣನು ಸಂಕಟದಿಂದ ಕೇಳಿದನು, “ಅಯ್ಯಾ, ಈ ಮರಣಾಂತಕ ಬಾಣವನ್ನು ಹೊಡೆದವನು ನೀನೇಯೇ? ನಿನಗೆ ನಾನೇನು ತಪ್ಪು ಮಾಡಿದ್ದೆ? ನಾನೊಬ್ಬ ಋಷಿಪುತ್ರ. ನನ್ನ ತಂದೆ-ತಾಯಿ ತುಂಬಾ ವಯಸ್ಸಾದವರು, ಕುರುಡರು. ಅವರಿಗೆ ಕುಡಿಯಲು ನೀರು ತೆಗೆದುಕೊಂಡು ಹೋಗಲೆಂದು ಇಲ್ಲಿಗೆ ಬಂದೆ…. ಅಯ್ಯೋ….. ಇನ್ನು ನನ್ನ ತಂದೆ ತಾಯಿಯರ ಸೇವಾ ಭಾಗ್ಯ ನನಗೆ ತಪ್ಪಿ ಹೋಯಿತಲ್ಲ! ಪುಣ್ಯಾತ್ಮ, ದಯವಿಟ್ಟು ಒಂದು ಉಪಕಾರ ಮಾಡು. ಅದೋ, ಆ ದಾರಿಯಿಂದ ಹೋಗಿ ಅಲ್ಲಿ ಮರದ ಕೆಳಗೆ ಕುಳಿತಿರುವ ವೃದ್ಧರಿಗೆ ನೀರು ಕೊಡು. ಇಲ್ಲಿ ನಡೆದದ್ದನ್ನು ತಿಳಿಸು…. ಆದರೆ ಮೊದಲು ನನ್ನ ಎದೆಯಲ್ಲಿ ನೆಟ್ಟಿರುವ ಈ ಬಾಣವನ್ನು ಕಿತ್ತು ತೆಗೆ. ಸಂಕಟವನ್ನು ಸಹಿಸಲಾರೆ.”

ದಶರಥನು ಬಾಣವನ್ನು ಹೊರಗೆ ತೆಗೆದೊಡನೆ ತರುಣನು ಕೊನೆಯುಸಿರೆಳೆದನು. ದಶರಥನಿಗೆ ದಿಕ್ಕೇ ತೋಚದ ಹಾಗಾಯಿತು. ತನ್ನ ಅವಿವೇಕದಿಂದಾದ ಅನಾಹುತವನ್ನು ಕಂಡು ಅವನು ದಿಗ್ಭ್ರಮೆಗೊಂಡಿದ್ದನು.

ಆದರೆ ಕತ೵ವ್ಯವನ್ನು ನೆರವೇರಿಸಲೇಬೇಕಲ್ಲ. ಭಾರವಾದ ಹೃದಯದಿಂದ ನೀರಿನ ಬಿಂದಿಗೆಯನ್ನು ತೆಗೆದುಕೊಂಡು ತರುಣನು ತೋರಿಸಿದ ದಾರಿಯಲ್ಲಿ ಮುಂದೆ ಹೋದನು. ಮರದ ಕೆಳಗೆ ಕುಳಿತಿದ್ದ ವೃದ್ಧ ದಂಪತಿಗಳನ್ನು ನೋಡಿದನು. ಇವನು ಹತ್ತಿರ ಹೋಗುತ್ತಿದ್ದಂತೆಯೇ ಋಷಿಯು, “ಮಗು ಇಷ್ಟೇಕೆ ತಡ ಮಾಡಿದೆ? ಸರೋವರದಲ್ಲಿ ಈಜಾಡುತ್ತಿದ್ದೆಯಾ? ನಿನಗೆ ಏನಾಯಿತೋ ಎಂದು ನಾವು ಅಂಜಿ ಬಿಟ್ಟಿದ್ದೆವು. ಏಕೆ ನೀನು ಏನೂ ಮಾತನಾಡುತ್ತಿಲ್ಲ?” ಎಂದು ಕೂಗಿ ಕೇಳಿದನು. ದಶರಥನು ನಡುಗುವ ದನಿಯಲ್ಲಿ ಮೆಲ್ಲಗೆ ನುಡಿದನು, “ಋಷಿಗಳೇ, ನಾನು ನಿಮ್ಮ ಮಗನಲ್ಲ. ನಾನೊಬ್ಬ ಕ್ಷತ್ರಿಯ. ನನ್ನ ಹೆಸರು ದಶರಥ. ನಾನು ಸಾಧಿಸಿಕೊಂಡಿದ್ದ ಶಬ್ದವೇಧೀ ವಿದ್ಯೆಯ ಬಗೆಗೆ ಇದುವರೆಗೆ ನಾನು ತುಂಬಾ ಗವ೵ ಪಡುತ್ತಿದ್ದೆ. ಇವತ್ತು ಬೇಟೆಯಾಡಲೆಂದು ಪೊದೆಯ ಹಿಂದೆ ಕಾದು ಕುಳಿತಿದ್ದೆ. ಆನೆ ನೀರು ಕುಡಿಯುತ್ತಿದ್ದಂತೆ ಸದ್ದಾಯಿತು. ಒಡನೆಯೇ ಸದ್ದಿನ ಗುರಿ ಹಿಡಿದು ಬಾಣ ಬಿಟ್ಟೆ. ಅಯ್ಯೋ ನನ್ನ ಬಾಣಕ್ಕೆ ಬಲಿಯಾದದ್ದು ಆನೆಯಲ್ಲ, ನಿಮ್ಮ ಮಗ. ನಾನು ಅವಿವೇಕದಿಂದ ಮಹಾಪರಾಧ ಮಾಡಿದೆ. ಇದಕ್ಕಾಗಿ ಯಾವ ಶಿಕ್ಷೆಯನ್ನು ಅನುಭವಿಸಲಿ, ನೀವೇ ಹೇಳಿ.”

ಆಮೇಲೆ ಆ ಋಷಿಯು ತುಂಬಿ ಬಂದ ದುಃಖ ಮತ್ತು ಕ್ರೋಧಗಳಿಂದ ದಶರಥನಿಗೆ ಶಾಪವಿತ್ತನು. “ದಶರಥನೆ, ನೀನು ಮಾಡಿದ ವಿವೇಕ ರಹಿತವಾದ ತಪ್ಪಿಗಾಗಿ ನಾನು ಮಗನನ್ನು ಕಳೆದುಕೊಂಡು ಅಳಬೇಕಾಗಿದೆ. ನೀನೂ ಹೀಗೆಯೇ ಒಂದು ದಿನ ನಿನ್ನ ಪ್ರೀತಿಯ ಮಗನಿಗೋಸ್ಕರವಾಗಿ ಅಳಬೇಕಾಗುವುದು. ಈ ಶಿಕ್ಷೆ ತಡವಾದರೂ ನಿನ್ನ ಮೇಲೆ ಎರಗುವುದೇ ನಿಶ್ಚಯ.” ಹೀಗೆ ಶಾಪಕೊಟ್ಟು ಮಗನನ್ನು ಸುಡಲು ದಶರಥನ ಸಹಾಯದಿಂದಲೇ ನಿಮಿ೵ಸಿದ್ದ ಚಿತೆಗೆ ಬಿದ್ದು ಆ ದಂಪತಿಗಳೂ ಸತ್ತುಹೋದರು. ದಶರಥನು ಕುಗ್ಗಿಹೋದ ಹೃದಯದಿಂದ ಅರಮನೆಗೆ ಹಿಂತಿರುಗಿದನು.

ಕಾಲ ಉರುಳಿತು. ರಾಜಕುಮಾರ ದಶರಥನು ಅಯೋಧ್ಯೆಯ ರಾಜನಾದನು. ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿ ಎಂಬ ರಾಜಕುಮಾರಿಯರನ್ನು ಮದುವೆಯಾದನು. ಅವರಲ್ಲಿ ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಎಂಬ ನಾಲ್ವರು ಮಕ್ಕಳನ್ನು ಪಡೆದನು. ಹಿರಿಯ ಮಗ ರಾಮ, ಕೌಸಲ್ಯೆಯ ಪುತ್ರ ಎಲ್ಲರಿಗೂ ಪ್ರಿಯವಾದವನು ಅವನು. ಆದರೆ ಕಿರಿಯ ರಾಣಿ ಕೈಕೇಯಿ ಹಾಗೂ ಅವಳ ದಾಸಿ ಮಂಥರೆಯರು ಸಂಚು ಮಾಡಿ ಪಟ್ಟಾಭಿಷೇಕವಾಗಬೇಕಾಗಿದ್ದ ರಾಮನನ್ನು ಹದಿನಾಲ್ಕು ವಷ೵ ವನವಾಸಕ್ಕೆ ಕಳಿಸಿಬಿಟ್ಟರು.

ಮಹಾರಾಜನಾಗಿ ಆಳಬೇಕಾಗಿದ್ದ ರಾಜಕುಮಾರ ರಾಮನು ಕಾಡಿಗೆ ಹೋಗಬೇಕಾದುದನ್ನು ಕಂಡು ದಶರಥನು ತುಂಬಾ ಸಂಕಟಪಟ್ಟನು. ಕಾಡಿನಲ್ಲಿ ಅಂದು ರಾತ್ರಿ ತಮ್ಮ ಮಗನನ್ನು ಕಳೆದುಕೊಂಡು ಋಷಿ ದಂಪತಿಗಳು ಅತ್ತದ್ದು ಅವನಿಗೆ ನೆನಪಾಯಿತು. ಈ ದುಃಖದಲ್ಲೇ ನರಳಿ ದಶರಥನು ಪ್ರಾಣತ್ಯಾಗ ಮಾಡಿದನು. ಋಷಿವಾಕ್ಯ ಫಲಿಸಿತು.

ಪ್ರಶ್ನೆಗಳು:
  1. ದಶರಥನಿಗೆ ‘ಶಬ್ದವೇಧಿ’ ಎಂಬ ಬಿರುದು ಹೇಗೆ ಬಂದಿತು?
  2. ದಶರಥನು ಋಷಿಕುಮಾರನ ಮೇಲೆ ಏಕೆ ಬಾಣ ಬಿಟ್ಟನು?
  3. ಅವನು ಈ ತಪ್ಪನ್ನು ಏಕೆ ಮಾಡಿದನು?
  4. ಅದಕ್ಕೆ ಹೇಗೆ ಪ್ರಾಯಶ್ಚಿತ್ತ ಪಟ್ಟನು?
  5. ಋಷಿ ದಂಪತಿಗಳು ಏಕೆ ಚಿತೆಗೆ ಬಿದ್ದು ಪ್ರಾಣ ಬಿಟ್ಟರು?
  6. ಋಷಿಯು ದಶರಥನಿಗೆ ಏನೆಂದು ಶಾಪ ಕೊಟ್ಟನು?
  7. ನೀವು ವಿವೇಕದಿಂದ ಅಥವಾ ಅವಿವೇಕದಿಂದ ವತಿ೵ಸಿದ ಘಟನೆಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಬರೆಯಿರಿ.

Leave a Reply

Your email address will not be published. Required fields are marked *