ಆನೆ ಮತ್ತು ಕುರುಡರು

Print Friendly, PDF & Email
ಆನೆ ಮತ್ತು ಕುರುಡರು

ಮಾವುತನೊಬ್ಬ, ಅತೀ ಎತ್ತರಕ್ಕೆ ಬೆಳೆದ, ದಂತ ಹೊತ್ತ, ಸೊಂಡಿಲ ಏರಿಸಿದ ಆನೆಯನ್ನು ಅಂಧರೇ ಇದ್ದ ಒಂದು ಊರಿಗೆ ಕರೆತಂದ. ಕುರುಡರೆಲ್ಲರೂ ಆನೆಗೆ ಮುತ್ತಿಗೆ ಹಾಕಿದರು. ಆನೆಯನ್ನು ತಮಗೆಟಕಿದಷ್ಟು ಮುಟ್ಟಿ, ತಟ್ಟಿ, ಅನ್ವೇಷಣೆ ನಡೆಸಿದರು.

ಆನೆ ಆ ಊರಿಂದ ಮುಂದೆ ಸಾಗಿತು. ಕಣ್ಣಿಲ್ಲದೇ ಅದನ್ನು ಕಂಡ ಕುರುಡರೆಲ್ಲರೂ ಆನೆಯನ್ನು ತಾವು ತಿಳಿದುಕೊಂಡಂತೆ ವಿವರಿಸಿದರು. ಬಾಲವನ್ನಷ್ಟೇ ಸವರಿದ್ದ ಒಬ್ಬ ಅಂಧ, ಆನೆ ಹಾವಿನಂತೆ ಇದೆ ಎಂದ. ಕಿವಿಯನ್ನು ಹಿಡಿದವನೊಬ್ಬ ಆನೆ ‘ಮೊರ’ದಂತೆ ಇದೆ ಎಂದನು. ಸೊಂಡಿಲನ್ನಷ್ಟೇ ತಬ್ಬಿದ ಕುರುಡ, ಆನೆ ಅಲುಗುವ ಮರದಂತೆ ಎಂದು ಅನುಭವಿಸದ್ದನ್ನು ಅರುಹಿದ. ಅಗಲವಾಗಿಸಿ ತನ್ನ ತೋಳುಗಳಿಂದ ಹಿಡಿಯಲಾರದ ಅದರ ಹೊಟ್ಟೆಯನ್ನು ಮಾತ್ರ ಸ್ಪಶಿ೵ಸಿದ ಇನ್ನೊಬ್ಬ, ಆನೆ ದೊಡ್ಡ ಗುಡಾಣದಂತಿದೆ ಎಂದು ನಂಬಿದ್ದುದಾಗಿ ತಿಳಿಸಿದ. ಎತ್ತರದ ಕಂಬದ ರೀತಿಯೇ ಆನೆ ಇರುವುದಾಗಿ ಇನ್ನೊಬ್ಬ ಪಟ್ಟು ಹಿಡಿದ. ಕೊನೆಯಲ್ಲಿ ಎಲ್ಲರೂ ಕಚ್ಚಾಡಿ ತಾವೇ ಸರಿ ಎಂದು ಹೊಡೆದಾಡಿದರು. ಪ್ರತಿಯೊಬ್ಬ ಕುರುಡರೂ ಅವರ ವಾದ ವಿವಾದದಲ್ಲಿ ಪ್ರಾಮಾಣಿಕರಾಗಿದ್ದರು. ಆದರೆ ಮಾವುತನಿಗೆ ಗೊತ್ತಿತ್ತು, ಪ್ರತಿಯೊಬ್ಬರೂ ಅವರವರ ದೃಷ್ಟಿಯಲ್ಲಿ ಸರಿಯಾಗಿದ್ದರೂ ಕೂಡ, ಅವರವರ ನೋಟವೇ ಪರಮ ಸತ್ಯ ಎಂಬ ತಿಳುವಳಿಕೆ ತಪ್ಪಾಗಿತ್ತು ಎಂದು.

ಹೀಗೆ, ಆನೆಯನ್ನು ವಿವರಿಸಿದ ರೀತಿಯಲ್ಲಿ, ಬೇರೆ ಬೇರೆ ನಂಬಿಕೆ ಉಳ್ಳ ಮನುಷ್ಯರು, ಅವರವರ ತಿಳುವಳಿಕೆಗೆ ಅನುಸಾರವಾಗಿ ವಿಭಿನ್ನ ರೀತಿಗಳಲ್ಲಿ ಭಗವಂತನನ್ನು ವಣಿ೵ಸಿದ್ದಾರೆ.

“ಎಲ್ಲಾ ಮತಗಳು ಒಂದೇ ಧಮ್ಮದ ವಿಭಿನ್ನ ಮುಖಗಳು. ಈ ಕಥೆಗೆ ಆಳವಾದ ಆಧಾರವಾಗಿರುವ ವಿಷಯವಿದೆ. ಆತ್ಮವು ಒಂದೇ ಆಗಿದ್ದರೂ, ಪ್ರತಿಯೊಬ್ಬರೂ ತಾನು ತಿಳಿದುಕೊಂಡದ್ದನ್ನು ಮಾತ್ರ ತಿಳಿದಿದ್ದಾರೆ ಮತ್ತು ಅದು ಸತ್ಯವೆಂದು ಅವನು ಅರಿತುಕೊಳ್ಳುತ್ತಾನೆ. ಧಮ್ಮದ ಸಂಯೋಜಿತ ಸಾರ, ಬಹುಭುಜಾಕೃತಿಯ ಮುಖಗಳ ಸತ್ಯ ಒಂದೇ.”

[Illustrations by Mst. A.Jeyanth
(Sri Sathya Sai Balvikas Student) &
Digitized by Ms.Saipavitraa
(Sri Sathya Sai Balvikas Alumni) ]

[Source: “Sathya Sai Speaks” – Vol. VI, Chapter-44]

Leave a Reply

Your email address will not be published. Required fields are marked *