ಅಸತೋ ಮಾ – ಶ್ಲೋಕ – ಚಟುವಟಿಕೆ
ಅಸತೋ ಮಾ – ಶ್ಲೋಕ – ಚಟುವಟಿಕೆ
ಕಥೆಯನ್ನು ಹೇಳಿ – (ಚಿನ್ನ ಕಥೆಯಿಂದ) – ಕನಿಷ್ಠ ಒಂದು ಕೆಟ್ಟ ಅಭ್ಯಾಸವನ್ನು ಬಿಟ್ಟುಬಿಡಿ (ಕಥೆ ಕೆಳಗೆ ನೀಡಲಾಗಿದೆ). ಮಕ್ಕಳನ್ನು ಪಾತ್ರಾಭಿನಯ (ರೋಲ್ ಪ್ಲೇ) ಮಾಡಲು ಹೇಳಿ
ಕನಿಷ್ಠ ಒಂದು ಕೆಟ್ಟ ಅಭ್ಯಾಸ ಬಿಟ್ಟುಬಿಡಿ – ಕಥೆ
ಒಬ್ಬ ಕೆಟ್ಟ ಗುಣಗಳುಳ್ಳ ಮನುಷ್ಯ ಒಮ್ಮೆ ಆಧ್ಯಾತ್ಮಿಕ ಜೀವನದಲ್ಲಿ ದೀಕ್ಷೆಗಾಗಿ ಗುರುವಿನ ಬಳಿಗೆ ಹೋದನು. ಗುರುಗಳು ಅವನ ಕೆಟ್ಟ ಅಭ್ಯಾಸಗಳಲ್ಲಿ ಒಂದನ್ನಾದರೂ ಬಿಟ್ಟುಬಿಡುವಂತೆ ಕೇಳಿಕೊಂಡರು. ಅವನು ಸುಳ್ಳು ಹೇಳುವುದನ್ನು ಬಿಟ್ಟು ಕೊಡುವುದಾಗಿ ತಿಳಿಸಿದನು. ಆ ರಾತ್ರಿ, ಅವನು ದರೋಡೆ ಮಾಡಲು ಅರಮನೆಗೆ ಹೋದಾಗ, ಅರಮನೆಯ ಮೇಲ್ಛಾವಣಿಯಲ್ಲಿ (ಟೆರೇಸ್‌ನಲ್ಲಿ) ಇನ್ನೊಬ್ಬ ವ್ಯಕ್ತಿಯನ್ನು ಕಂಡನು. ಆತ ತಾನು ಕೂಡ ಕಳ್ಳ ಎಂದು ಪರಿಚಯಿಸಿದನು. ಅವರು ಖಜಾನೆಗೆ ನುಗ್ಗಿ ಅಲ್ಲಿ ಸಿಕ್ಕ ವಜ್ರಗಳನ್ನು ತಮ್ಮ ನಡುವೆ ಹಂಚಿಕೊಂಡರು. ಆದಾಗ್ಯೂ, ಇನ್ನೊಬ್ಬ ವ್ಯಕ್ತಿ ಬೇರೆ ಯಾರೂ ಅಲ್ಲ, ಅರಮನೆಯ ರಾಜ ಕಳ್ಳನಂತೆ ಬಂದಿದ್ದನು.
ರಾಜ ಕಳ್ಳನಂತೆ ನಟಿಸಿ ಖಜಾನೆಯ ಕೀಲಿಗಳು ಎಲ್ಲಿವೆ ಎಂದು ತನಗೆ ತಿಳಿದಿದೆ ಎಂದು ಹೇಳಿದನು. ವಜ್ರಗಳನ್ನು ಹಂಚಿಕೊಂಡಾಗ, ಪ್ರಾಮಾಣಿಕ ಕಳ್ಳನು ತನ್ನ ಸಂಪೂರ್ಣ ದಾಸ್ತಾನು ಕಳೆದುಕೊಳ್ಳುತ್ತಿದ್ದ ಸಾಮ್ರಾಜ್ಯದ ರಾಜನ ಬಗ್ಗೆ ಕರುಣೆ ತೋರಿದನು. ಒಂದು ವಜ್ರವನ್ನು ಸುರಕ್ಷಿತವಾಗಿ ಬಿಡಲು ಅವನು ತನ್ನ ಸಹಚರನನ್ನು ಕೇಳಿದನು. ಹಾಗೆಯೇ ಮಾಡಲಾಯಿತು.ಮರುದಿನ ಬೆಳಿಗ್ಗೆ, ಖಜಾನೆಯನ್ನು ಲೂಟಿ ಮಾಡಲಾಗಿದೆ ಎಂಬ ವಿಷಯ ತಿಳಿಯಿತು. ನಷ್ಟವನ್ನು ಅಂದಾಜು ಮಾಡಲು ಸಚಿವರನ್ನು ರಾಜ (ಹಿಂದಿನ ರಾತ್ರಿ ಕಳ್ಳನಾಗಿ ವರ್ತಿಸಿದ್ದ) ಕಳುಹಿಸಿದನು. ಸಚಿವರು ಕಳ್ಳರ ಕಣ್ಣು ತಪ್ಪಿದ ವಜ್ರವನ್ನು ಕಂಡರು. ಅವರು ಅದನ್ನು ಸದ್ದಿಲ್ಲದೆ ತಮ್ಮ ಜೇಬಿಗೆ ವರ್ಗಾಯಿಸಿದರು ಮತ್ತು ಎಲ್ಲಾ ವಜ್ರಗಳು ಹೋಗಿವೆ ಎಂದು ನ್ಯಾಯಾಲಯದಲ್ಲಿ ವರದಿ ಮಾಡಿದರು. ಹಿಂದಿನ ರಾತ್ರಿ ಕಳ್ಳತನದ ನಂತರ ಒಬ್ಬರನ್ನೊಬ್ಬರು ಅಗಲುವ ಮುನ್ನ, ರಾಜ ಪ್ರಾಮಾಣಿಕ ಕಳ್ಳನ ವಿಳಾಸವನ್ನು ಪಡೆದಿದ್ದರು.
ಆದ್ದರಿಂದ ರಾಜ ಅವನಿಗೆ ಕರೆ ಕಳುಹಿಸಿದರು. ಅವನು ರಾಜನ ಮುಂದೆ ನ್ಯಾಯಾಲಯದಲ್ಲಿ ನಿಂತಾಗ ವಜ್ರಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಅವನ ಮತ್ತು ಅವನ ಅಪರಿಚಿತ ಸಹವರ್ತಿ ಕದ್ದಿದ್ದಾಗಿ ಒಪ್ಪಿಕೊಂಡನು. ಕಾಣೆಯಾದ ವಜ್ರವನ್ನು ಸಚಿವರ ಜೇಬಿನಲ್ಲಿ ಪತ್ತೆ ಮಾಡಲಾಯಿತು ಮತ್ತು ರಾಜ ಅವನನ್ನು ಸುಳ್ಳು ಗಾರನೆಂದು ಸಚಿವ ಸ್ಥಾನದಿಂದ ತೆಗೆದು ಹಾಕಿದರು. ಬದಲಿಗೆ ಪ್ರಾಮಾಣಿಕ ಕಳ್ಳನನ್ನು ಮಂತ್ರಿಯಾಗಿ ನೇಮಿಸಲಾಯಿತು. ಅವರು ತಮ್ಮ ಇತರ ದುಷ್ಟ ಅಭ್ಯಾಸಗಳನ್ನು ಸಹ ತ್ಯಜಿಸಿದರು ಮತ್ತು ಸದ್ಗುಣಶೀಲ ಆಡಳಿತಗಾರರಾಗಿ ತಮ್ಮ ಗುರುಗಳ ಖ್ಯಾತಿಯನ್ನು ಕೂಡ ಹೆಚ್ಚಿಸಿದರು.
ಸಂಕ್ಷಿಪ್ತ ವಿವರ:
ದರೋಡೆಕೋರನು ಅಸತ್ಯವನ್ನು ಬಿಟ್ಟುಕೊಟ್ಟಾಗ, ಅವನು ಸತ್ಯವಂತನಾದನು. ಇದರ ಪರಿಣಾಮವಾಗಿ ದರೋಡೆಕೋರನ ಜೀವನವು ಕತ್ತಲೆಯಿಂದ ಬೆಳಕಿಗೆ ಸರಿಯಿತು ಮತ್ತು ಅವನು ಬಹಳ ಶ್ರೀಮಂತನಾದನು. ಇದರ ಪರಿಣಾಮವಾಗಿ ಅವನು ತನ್ನ ಎಲ್ಲಾ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ ಬಹಳ ಒಳ್ಳೆಯ ಮನುಷ್ಯನಾಗಿ ರೂಪಾಂತರಗೊಂಡನು. ಅನೇಕ ವರ್ಷಗಳಿಂದ ಅವರ ಉತ್ತಮ ಗುಣಗಳಿಗಾಗಿ ಅವರನ್ನು ಸ್ಮರಿಸಲಾಯಿತು. ನಾವು ಒಳ್ಳೆಯತನದ ಹಾದಿಯಲ್ಲಿ ನಡೆದಾಗ, ನಾವು ಅಮರರಾಗುತ್ತೇವೆ ಏಕೆಂದರೆ ಜನರು ನಮ್ಮನ್ನು ಅಜರಾಮರರಾಗಿ ನೆನಪಿಸಿಕೊಳ್ಳುತ್ತಾರೆ.
ಈ ಚಟುವಟಿಕೆ ಇತರ ಮೌಲ್ಯಗಳ ಅಭಿವ್ಯಕ್ತಿಗಳಿಗೂ ಉಪಯೋಗವಾಗಬಹುದು. ನಾವು ಯಾವುದೇ ಒಂದು ಉತ್ತಮ ಮೌಲ್ಯವನ್ನು ಪ್ರಾಮಾಣಿಕವಾಗಿ ಅಭ್ಯಾಸ ಮಾಡಲು ಪ್ರಾರಂಭಿಸಿದಾಗ, ಇತರ ಎಲ್ಲ ಮೌಲ್ಯಗಳು ಅನುಸರಿಸುತ್ತವೆ ಮತ್ತು ನಾವು ಅಮರರಾಗುತ್ತೇವೆ. ಉದಾಹರಣೆಗಳು – ಮಹಾತ್ಮ ಗಾಂಧೀಜಿ, ಆಲ್ಬರ್ಟ್ ಐನ್‌ಸ್ಟೈನ್, ಅಬ್ದುಲ್ ಕಲಾಂ ಇತ್ಯಾದಿ.
ಚರ್ಚೆ – ಒಂದು ತಿಂಗಳ ಕಾಲ ಸುಳ್ಳು ಹೇಳುವುದನ್ನು ಬಿಟ್ಟುಬಿಡಲು ಮಕ್ಕಳನ್ನು ಕೇಳಿ ಮತ್ತು ಪ್ರತಿ ತರಗತಿಯಲ್ಲಿ ಎಷ್ಟು ಸುಲಭ / ಕಷ್ಟ ಮತ್ತು ಅದರ ಪ್ರಯೋಜನಗಳು ಯಾವುವು ಎಂದು ಚರ್ಚಿಸಿ.