ತ್ವಮೇವ ಮಾತಾ ಚ – ಚಟುವಟಿಕೆ

Print Friendly, PDF & Email
ತ್ವಮೇವ ಮಾತಾ ಚ – ಶ್ಲೋಕ – ಚಟುವಟಿಕೆ
ಚಟುವಟಿಕೆ ಹಾಳೆಗಳು

ತಮ್ಮ ಮಕ್ಕಳ ಬಗ್ಗೆ ತಾಯಿ / ತಂದೆಯ ಪ್ರೀತಿಯನ್ನು ಚಿತ್ರಿಸುವ ವೀಡಿಯೊಗಳನ್ನು ಬಾಲವಿಕಾಸ ಮಕ್ಕಳಿಗೆ ತೋರಿಸಬಹುದು. ತಮ್ಮ ಎಳೆಯ ಮಕ್ಕಳ ಬಗ್ಗೆ ಪ್ರೀತಿಯನ್ನು ತೋರಿಸುವ ಪ್ರಾಣಿಗಳ ವೀಡಿಯೊಗಳನ್ನು, ವಿವಿಧ ಜಾತಿಗಳಿಗೆ ಸೇರಿದ ಸಣ್ಣ ಪ್ರಾಣಿಗಳಿಗೆ ಪ್ರೀತಿ / ಕಾಳಜಿಯನ್ನು ತೋರಿಸುವ ಪ್ರಾಣಿಗಳ ವೀಡಿಯೊಗಳನ್ನು ಸಹ ಗುರುಗಳು ತೋರಿಸಬಹುದು. ಉದಾಹರಣೆ – ನಾಯಿಯನ್ನು ನೋಡಿಕೊಳ್ಳುವ ಆನೆ, ಕರಡಿ ಮರಿಯನ್ನು ನೋಡಿಕೊಳ್ಳುವ ಕೋತಿ.

ಚರ್ಚೆಗಳಿಗಾಗಿ ಸೂಚಿಸಲಾದ ಪ್ರಶ್ನೆಗಳು:
  1. ನೋಡಿದ ವೀಡಿಯೊಗಳನ್ನು ನೀವು ಆನಂದಿಸಿದ್ದೀರಾ? ಯಾವುದನ್ನು ನೀವು ಹೆಚ್ಚು ಇಷ್ಟಪಟ್ಟಿದ್ದೀರಿ? ಏಕೆ?
  2. ನಾವು ಮನೆಯಲ್ಲಿ ಮಾತ್ರ ಪ್ರೀತಿಯನ್ನು ಪಡೆಯುತ್ತೇವೆ ಎಂದು ನೀವು ಭಾವಿಸುತ್ತೀರಾ? ಶಾಲೆಯಲ್ಲಿ ನಮಗೆ ಪ್ರೀತಿಯನ್ನು ನೀಡುವವರು ಯಾರು? ಶಾಲೆಯಲ್ಲಿ ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ?
  3. ನೀವು ಆಟವಾಡಲು ಇಷ್ಟಪಡುತ್ತೀರಾ? ನಮಗೆ ಆಟಗಳನ್ನು ಆಸಕ್ತಿದಾಯಕವಾಗಿಸುವವರು ಯಾರು?
  4. ನೀವು ಸ್ನೇಹಿತರನ್ನು ಹೊಂದಿದ್ದೀರಾ? ನೀವು ಅವರೊಂದಿಗೆ ಇರುವುದನ್ನು ಆನಂದಿಸುತ್ತೀರಾ? ಏಕೆ?
  5. ರಸ್ತೆ ದಾಟಲು ನೀವು ಭಯಪಡುತ್ತೀರಾ? ನೀವು ಎಂದಾದರೂ ಏಕಾಂಗಿಯಾಗಿ ರಸ್ತೆ ದಾಟಿದ್ದೀರಾ? ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಪಕ್ಕದಲ್ಲಿ ನಿಂತಿರುವ ವ್ಯಕ್ತಿ ನಿಮಗೆ ದಾಟಲು ಸಹಾಯ ಮಾಡಿದ್ದಾರಾ? ರಸ್ತೆ ದಾಟಲು ನೀವು ಯಾರಿಗಾದರೂ ಸಹಾಯ ಮಾಡಿದ್ದೀರಾ?
  6. ನಾವು ಯಾವಾಗಲೂ ನಮ್ಮ ಪೋಷಕರು, ಸಹೋದರರು, ಸ್ನೇಹಿತರೊಂದಿಗೆ ಇರಲು ಸಾಧ್ಯವೇ?
  7. ಪರಿಚಯ ಇಲ್ಲದವರಿಗೆ ಎಂದಾದರೂ ನೀವು ಪ್ರೀತಿಯನ್ನು ತೋರಿಸಿದ್ದೀರಾ? ಹೇಗೆ? ಅವರಿಗೆ ಹೇಗೆ ಅನಿಸಿತು? ನಿಮಗೆ ಸಂತೋಷದ ಅನುಭವ ಆಗಿದೆಯೇ?
ತೀರ್ಮಾನ:

ಮಕ್ಕಳು ತಮ್ಮ ಪೋಷಕರು, ಶಿಕ್ಷಕರು, ಸ್ನೇಹಿತರು, ಒಡಹುಟ್ಟಿದವರು, ಸಂಬಂಧಿಕರು, ಸಾಕು ಪ್ರಾಣಿಗಳು ಇತ್ಯಾದಿ ಕಡೆಗಳಿಂದ ಪಡೆಯುವ ಪ್ರೀತಿ ದೇವರ ಪ್ರೀತಿ ಎಂದು ಗುರುಗಳು ಮಕ್ಕಳಿಗೆ ವಿವರಿಸಬೇಕು, ದೇವರ ಪ್ರೀತಿ ಪ್ರತಿಯೊಬ್ಬರ ಮೂಲಕವೂ ಚಲಿಸುತ್ತದೆ. ಹಾಗೆಯೇ ನಾವು ಇತರರಿಗೆ ನೀಡುವ ಪ್ರೀತಿಯು ಕೂಡ ದೇವರ ಪ್ರೀತಿಯು ನಮ್ಮ ಮೂಲಕ ಚಲಿಸಿದ್ದಾಗಿರುತ್ತದೆ. ದೇವರು ನಮ್ಮೆಲ್ಲರನ್ನೂ ಸಮಾನವಾಗಿ ಮತ್ತು ಯಾವುದೇ ನಿರ್ಬಂಧವಿಲ್ಲದೆ ಪ್ರೀತಿಸುತ್ತಾನೆ ಮತ್ತು ಆತನ ಪ್ರೀತಿಯನ್ನು ನಮ್ಮೆಲ್ಲರ ಮೇಲೆ ಕೆಲವೊಮ್ಮೆ ತಾಯಿಯಂತೆ, ಕೆಲವೊಮ್ಮೆ ಸ್ನೇಹಿತನಂತೆ, ಕೆಲವೊಮ್ಮೆ ಸಹೋದರನಂತೆ ತೋರಿಸುತ್ತಾನೆ.

ಸ್ವಾಮಿಗೆ ಶುಭಾಶಯ ಪತ್ರ (Greeting card) ಮಾಡುವಂತೆ ಮಕ್ಕಳಿಗೆ ಹೇಳಿ, ಗುರುಗಳು ತರಗತಿಯನ್ನು ಸಮಾಪ್ತಿಗೊಳಿಸಬಹುದು.

ಸೂಚನೆ

ಗುರುಗಳು ಯುಟ್ಯೂಬ್ (Youtube) ನಲ್ಲಿ ಲಭ್ಯವಿರುವ ವೀಡಿಯೋಗಳನ್ನು ಮುಂಚಿತವಾಗಿಯೇ ನೋಡಿ, ಸಿದ್ಧಪಡಿಸಿಟ್ಟುಕೊಂಡಿರಬೇಕು. ತರಗತಿಯ ಮಧ್ಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು.

Leave a Reply

Your email address will not be published. Required fields are marked *

error: