ತನ್ನ ತಲೆದಿಂಬಿನ ಕೆಳಗೆ
ತನ್ನ ತಲೆದಿಂಬಿನ ಕೆಳಗೆ
ಒಬ್ಬ ಶ್ರೀಮಂತ ವ್ಯಾಪಾರಿಯು ತೀರ್ಥಯಾತ್ರೆಯ ಸಲುವಾಗಿ ಜಾತ್ರಾ ಮಹೋತ್ಸವಕ್ಕೆ ಹೊರಟಿದ್ದನು. ಒಬ್ಬ ಕಳ್ಳನು ವ್ಯಾಪಾರಿಯ ಚೀಲವನ್ನು ಕದಿಯಲು ಅವನನ್ನು ಸಹಪ್ರಯಾಣಿಕನಂತೆ ಹಿಂಬಾಲಿಸಿದನು. ಅವರು ಒಂದು ರಾತ್ರಿ ಧರ್ಮಛತ್ರದಲ್ಲಿ ತಂಗಿದರು. ಅಲ್ಲಿ ಎಲ್ಲರು ಗಾಢ ನಿದ್ರೆಯಲ್ಲಿ ಇರುವ ಸಂದರ್ಭದಲ್ಲಿ ಕಳ್ಳನು ವ್ಯಾಪಾರಿಯ ಚೀಲವನ್ನು ಎಲ್ಲ ಕಡೆ ಹುಡುಕಲು ಪ್ರಾರಂಭಿಸಿದನು ರಾತ್ರಿ ಇಡೀ ಹುಡುಕಿದನು. ಮರುದಿನ ಬೆಳಿಗ್ಗೆ ಆ ಕಳ್ಳನು ನಯವಿನಯತೆಯಿಂದ ವ್ಯಾಪಾರಿಯ ಬಳಿ ಹೇಳಿದನು, “ಈ ಸ್ಥಳದಲ್ಲಿ ಕಳ್ಳರಿದ್ದಾರೆ. ನೀವು ನಿಮ್ಮ ಚೀಲದಲ್ಲಿರುವ ಹಣವನ್ನು ಜೋಪಾನವಾಗಿ ಇಟ್ಟಿರುವಿರೆಂದು ನನ್ನ ನಂಬಿಕೆ.” ವ್ಯಾಪಾರಿಯು ಉತ್ತರಿಸಿದನು, “ಓಹೋ ಹೌದು! ಕಳೆದ ರಾತ್ರಿ ನಾನು ನನ್ನ ಚೀಲವನ್ನು ನಿನ್ನ ತಲೆದಿಂಬಿನ ಅಡಿಯಲ್ಲಿ ಇಟ್ಟಿದ್ದೆನು. ನೋಡು ಹೇಗೆ ಜೋಪಾನವಾಗಿದೆಯಲ್ವಾ?” ಎಂದು ಹೇಳುತ್ತಾ ಆ ಕಳ್ಳನ ದಿಂಬಿನ ಅಡಿಯಿಂದ ಚೀಲವನ್ನು ಹೊರತೆಗೆದು ತೋರಿಸಿದನು.
ಭಗವಂತನು ಶ್ರೀಮಂತ ವ್ಯಾಪಾರಿಯಿದ್ದಂತೆ. ಅಂದರೆ ಭಗವಂತನು, ಮನುಷ್ಯನ ಆತ್ಮಶಾಂತಿ, ಆತ್ಮಜ್ಞಾನ, ಹಾಗು ಎಲ್ಲ ಲೌಕಿಕ ಪಾರಮಾತ್ಮಿಕ ಆನಂದವನ್ನು ಮನುಷ್ಯನ ಒಳಗೆ ಹುದುಗಿಸಿಟ್ಟಿರುವನು. ಆದರೆ, ಮಾನವನು ತನ್ನಲ್ಲೇ ಇರುವ ಅಮೂಲ್ಯ ದೈವತ್ವವನ್ನು ಹೊರಗಿನ ಪ್ರಪಂಚದಲ್ಲಿ ಹುಡುಕುತ್ತ, ತನ್ನ ಜೀವನವನ್ನೇ ವಿಫಲಗೊಳಿಸಿಕೊಳ್ಳುತ್ತಾನೆ.
ನಿಮ್ಮಲ್ಲಿಯೇ ಅಡಗಿರುವ ದಿವ್ಯತೆಯ ನಿಧಿಯನ್ನು ಹೊರಗೆಲ್ಲೋ ಹುಡುಕುವ ಬದಲು, ನಿಮ್ಮೊಳಗೇ ಹುಡುಕಿ.
[Ref: China Katha – Part 1 Pg:188]
Illustrations by Ms. Sainee
Digitized by Ms.Saipavitraa
(Sri Sathya Sai Balvikas Alumni)