ವಂದೇ ದೇವಂ ಉಮಾಪತಿಂ – ಹೆಚ್ಚಿನ ಓದುವಿಕೆ

Print Friendly, PDF & Email
ವಂದೇ ದೇವಂ

ದೇವರು ಬ್ರಹ್ಮಾಂಡವನ್ನು ಸೃಷ್ಟಿಸುತ್ತಾನೆ, ಪೋಷಿಸುತ್ತಾನೆ ಮತ್ತು ಅದನ್ನು ಲಯವಾಗಿಸಿ ಬ್ರಹ್ಮಾಂಡವನ್ನು ಪ್ರಾಥಮಿಕ ಸ್ಥಿತಿಗೆ ತರುತ್ತಾನೆ.

ಶಿವನು ದೈವಿಕತೆಯ ಮುಖವಾಗಿದ್ದು, ಲಯ ಮತ್ತು ವಿಸಜ೵ನೆಯ ಶಕ್ತಿಗಳನ್ನು ಪ್ರತಿನಿಧಿಸುತ್ತದೆ.

ಅವನು ದೇವರ ವೈರಾಗ್ಯದ ಆಕಾರ ಹಾಗೂ ಅವನು ಸಂಪೂಣ೵ ನಿಮೋ೵ಹಿ. ತನ್ನ ಸ್ವಂತ ಇಚ್ಛೆಯಂತೆ ಬ್ರಹ್ಮಾಂಡವನ್ನು ಪ್ರಕ್ಷೇಪಿಸಿದ ಭಗವಂತ ತನ್ನ ಸೃಷ್ಟಿಯ ಒಂದು ಭಾಗ ಅಥವಾ ಸಣ್ಣ ಅಂಶಕ್ಕೂ ಹಂಬಲಿಸುವುದಿಲ್ಲ.

ಅವನನ್ನು ಶಿವ, ಶುಭ/ಮಂಗಳಕರನಾದವನು ಎಂದು ಕರೆಯಲಾಗುತ್ತದೆ. ದೇವರ ಪ್ರೇಮ, ಶಾಂತಿ ಮತ್ತು ಶಕ್ತಿಯಿಂದ ನಮ್ಮನ್ನು ಯಾವುವು ದೂರವಿಡುವುವೋ ಅವನ್ನು ನಾಶ ಮಾಡುವವನು ಶಿವನೇ. ಅಂದರೆ ಅವನು ಮನುಷ್ಯನ ಆಂತರಿಕ ಶತ್ರುಗಳಾದ ಭ್ರಮೆ (ಜಗತ್ತಿನ ಮಾಯಾಜಾಲ), ದುರಾಸೆ, ಗವ೵, ಅಸೂಯೆ ಮತ್ತು ಕೋಪ ಇವನ್ನು ನಾಶ ಮಾಡುತ್ತಾನೆ ಮತ್ತು ಶುಭವನ್ನು ಉಂಟುಮಾಡುತ್ತಾನೆ.

ಅವನು ಪ್ರಕಾಶತೆ, ನಿಮ೵ಲತೆ ಮತ್ತು ಆನಂದದಿಂದ ತುಂಬಿರುವ ಕೈಲಾಸದಲ್ಲಿ ವಾಸಿಸುತ್ತಾನೆ.

ಸಂಕೇತಗಳು:

ಶಿವನ ಸನ್ಯಾಸಿ ರೂಪವು ವೈರಾಗ್ಯವನ್ನು ಸೂಚಿಸುತ್ತದೆ. ಸಂಪೂಣ೵ವಾದ ನಿಮೋ೵ಹತ್ವ. ಅವನ ಮೂರನೇ ಕಣ್ಣು ಜ್ಞಾನದ ದೃಷ್ಟಿಯನ್ನು ಸೂಚಿಸುತ್ತದೆ. ಭಗವಂತ ಸವ೵ಜ್ಞ ಮತ್ತು ಪ್ರಪಂಚದ ಎಲ್ಲದಕ್ಕೂ ಸಾಕ್ಷೀಭೂತನಾಗಿರುತ್ತಾನೆ.

ಬೂದಿಯಿಂದ ಬಳಿದುಕೊಂಡ ದೇಹ: ಅವನು ಭಕ್ತರ ಪಾಪಗಳನ್ನು ಬೂದಿಯಾಗಿಸಿ ಅದರಿಂದಲೇ ತನ್ನನ್ನು ಅಲಂಕರಿಸಿಕೊಳ್ಳುತ್ತಾನೆ ಎಂದು ಸೂಚಿಸುತ್ತದೆ.

ಹಾವುಗಳು ಆಧ್ಯಾತ್ಮಿಕ ಶಕ್ತಿಯನ್ನು ಸಂಕೇತಿಸುತ್ತವೆ. ಅವನ ಜಟೆಯಿಂದ ಹೊರಹೊಮ್ಮುವ ಗಂಗೆಯು, ಜ್ಞಾನ ಗಂಗೆಯನ್ನು ಸಂಕೇತಿಸುತ್ತದೆ. ಋಷಿ-ಮುನಿಗಳಿಂದ ಹರಿಯುವ ಜ್ಞಾನದ ಚಿಲುಮೆ ಅದು. ಈ ಗಂಗೆಯಲ್ಲಿ ಮೀಯುವುದರಿಂದ ಅನೇಕ ಜನ್ಮಗಳ ಪಾಪಗಳು ತೊಳೆದುಹೋಗಿ ಮಂಗಳಕರವಾಗುತ್ತದೆ.

ತ್ರಿಶೂಲವು, ಶಿವನು ಕಾಲಗಳಾದ ಭೂತಕಾಲ, ವತ೵ಮಾನ ಕಾಲ ಮತ್ತು ಭವಿಷ್ಯತ್ ಕಾಲ ಈ ಮೂರರ ಒಡೆಯ ಎಂದು, ಬಾಹ್ಯಾಕಾಶದ ಮೂರು ಆಯಾಮಗಳಾದ ಭೂ, ಭುವಃ, ಸುವಃ ಲೋಕಗಳ ಒಡೆಯ ಎಂದೂ, ಪ್ರಕೃತಿಯನ್ನು ನಿಯಂತ್ರಿಸುವ ಮೂರು ಗುಣಗಳಾದ ಸಾತ್ವಿಕತೆ (ಸಮಚಿತ್ತತೆ, ಪ್ರಶಾಂತತೆ ಮತ್ತು ಸಮತೋಲನದ ಸ್ಥಿತಿ), ರಾಜಸಿಕತೆ (ಭಾವೋದ್ರೇಕ, ಮಹತ್ವಾಕಾಂಕ್ಷೆ, ಬಯಕೆ ಮತ್ತು ಚಡಪಡಿಕೆಯ ಸ್ಥಿತಿ) ಮತ್ತು ತಾಮಸಿಕತೆ (ಅಜ್ಞಾನ, ಜಡತ್ವ ಮತ್ತು ಮಂದತೆಯ ಸ್ಥಿತಿ) ಇವುಗಳ ಒಡೆಯ ಎಂದು ಸೂಚಿಸುತ್ತದೆ.

ಭಿಕ್ಷಾಟನೆಯ ಬಟ್ಟಲು: ಶಿವನು ಬ್ರಹ್ಮಾಂಡದ ಒಡೆಯನಾಗಿದ್ದರೂ, ಭಿಕ್ಷಾಟನೆಯ ಬಟ್ಟಲನ್ನು ಹಿಡಿದು ಸಾಧಕನಂತೆ ತಿರುಗುತ್ತಾನೆ. ಪ್ರತಿಯೊಬ್ಬ ಮಾನವ ಹೃದಯದ ಪ್ರೇಮದ ಭಿಕ್ಷೆಗಾಗಿ ಕೂಗುತ್ತಾನೆ.

ಹುಲಿಯ ಚಮ೵: ಉಗ್ರ ಹುಲಿಯು ಪ್ರಾಣಿಗಳ ಪ್ರವೃತ್ತಿ, ಪಶುವೃತ್ತಿಯನ್ನು ಪ್ರತಿನಿಧಿಸುತ್ತದೆ. ಶಿವ ಹುಲಿಯನ್ನು ಕೊಂದು, ಅದರ ಚಮ೵ವನ್ನು ಉಡುಪಾಗಿ ಧರಿಸಿದ್ದಾನೆ. ಇದು ಪಶುವೃತ್ತಿಯ ಮೇಲೆ ಸಂಪೂಣ೵ ಹಿಡಿತವನ್ನು ಸೂಚಿಸುತ್ತದೆ.

ಅಧ೵ಚಂದ್ರ ಎಂದರೆ ಮನಸ್ಸು. ಶಿವನು ಮನಸ್ಸಿನ ಒಡೆಯ, ಅದನ್ನು ನಿಗ್ರಹದಲ್ಲಿ ಇಟ್ಟುಕೊಂಡಿರುತ್ತಾನೆ ಎಂಬುದಾಗಿ ಸೂಚಿಸುತ್ತದೆ.

Leave a Reply

Your email address will not be published. Required fields are marked *