ಯದಾ ಯದಾ ಹೆಚ್ಚಿನ ಓದುವಿಕೆ

Print Friendly, PDF & Email
ಯದಾ ಯದಾ ಹಿ ಧರ್ಮಸ್ಯ ಗ್ಲಾನಿಭ೵ವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||
(ಅಧ್ಯಾಯ-4 ಏಳನೇ ಶ್ಲೋಕ)

ಅರ್ಥ:
ಅಜು೵ನಾ, ಯಾವಾಗ ಧರ್ಮವು ಅವನತಿ ಗೊಳ್ಳುವುದೋ, ಅಧರ್ಮವು ಹೆಚ್ಚಾಗುವುದೋ
ಆಗ ನಾನು ಹುಟ್ಟಿ ಬರುತ್ತೇನೆ.

ದೇವರು ಸ್ವಇಚ್ಛೆಯಿಂದ ಈ ಭೂಮಂಡಲವನ್ನು ನಿರ್ಮಿಸಿದ್ದಾನೆ ಹಾಗೂ ಇದರ ಪಾಲನೆ ಮತ್ತು ಸರಿಯಾದ ನಿರ್ವಹಣೆಗಾಗಿ ಕೆಲವು ನಿಯಮಗಳನ್ನು ರೂಪಿಸಿದ್ದಾನೆ. ಇಲ್ಲಿ ಪ್ರತಿಯೊಬ್ಬರಿಗೂ ಹೇಗೆ ನಡೆದುಕೊಳ್ಳಬೇಕು ಎಂಬ ನಿಯಮಗಳನ್ನು ವಿಧಿಸಲಾಗಿದೆ. ಇದು ಧರ್ಮ. ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ವಿಶೇಷ ಧರ್ಮ ಹಾಗೂ ವಿಶಿಷ್ಟ ರೀತಿಯ ಕರ್ತವ್ಯಗಳಿವೆ. ಯಾವಾಗ ಮನುಷ್ಯನು ಧರ್ಮವನ್ನು ಪಾಲಿಸುವುದಿಲ್ಲ ವೋ ಅಥವಾ ಯಾರು ಸರಿಯಾದ ಮಾರ್ಗವನ್ನು ಅನುಸರಿಸುವುದಿಲ್ಲ ವೋ ಅದು ಅಧರ್ಮ ವಾಗುತ್ತದೆ. ಅದು ಬೆಳೆಯಲ್ಲಿ ಕಳೆ ಇದ್ದಂತೆ. ಬೆಳೆ ಚೆನ್ನಾಗಿ ಬರಬೇಕಾದರೆ ಕಳೆಯನ್ನು ತೆಗೆಯುವುದು ಅತ್ಯವಶ್ಯಕ.

ಯಾವಾಗ ನಿಯಮಗಳು ಸಡಿಲವಾಗುವುದೋ ಮತ್ತು ಬದುಕಿನ ನಿಜವಾದ ಕಾರಣ ಮರೆತು ಹೋಗುತ್ತದೋ, ಅಧರ್ಮ ಜಗತ್ತನ್ನು ಆಳುತ್ತದೆಯೋ ಆಗ ದೇವರು ತಾನಾಗಿಯೇ ಅವತಾರವೆತ್ತಿ ಬಂದು ತಪ್ಪುಗಳನ್ನು ಸರಿ ಮಾಡುತ್ತಾನೆ.

ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ ಯಾವಾಗ ಜಗತ್ತನ್ನು ಉನ್ನತಿಯತ್ತ ಕೊಂಡೊಯ್ಯುವ ಅಗತ್ಯವಿದೆಯೋ ಆಗ ಅವನು ತನಗೆ ಬೇಕಾದ ರೂಪ ಹಾಗೂ ನಾಮಗಳಲ್ಲಿ ಅವತಾರವೆತ್ತಿ ಬರುತ್ತಾನೆ.ಶ್ರೀಕೃಷ್ಣನು ಹಿರಣ್ಯಕಶಿಪುವನ್ನು ಸಂಹರಿಸಲು ನರಸಿಂಹ(ಅರ್ಧ ಮಾನವ ಹಾಗೂ ಅರ್ಧ ಸಿಂಹ) ಅವತಾರದಲ್ಲಿ ಬರುತ್ತಾನೆ. ಏಕೆಂದರೆ ಯಾವುದೇ ಮನುಷ್ಯ ಹಾಗೂ ಪ್ರಾಣಿಯಿಂದ ವಿನಾಶ ಹೊಂದಲು ಸಾಧ್ಯವಿಲ್ಲ ಎಂಬ ವರ ಅವನಿಗೆ ಇತ್ತು. ಶ್ರೀಕೃಷ್ಣನು ರಾಮನ ಅವತಾರದಲ್ಲಿ ಬಂದು ದುಷ್ಟ ರಾವಣನನ್ನು ಸಂಹರಿಸುತ್ತಾನೆ. ಅಲ್ಲದೆ ಕೃಷ್ಣನಾಗಿ ಬಂದು ದುಷ್ಟ ಕಂಸನನ್ನು ಕೊಲ್ಲುತ್ತಾನೆ ಹಾಗೂ ಕೌರವರನ್ನು ಸೋಲಿಸುತ್ತಾನೆ. ತನ್ನ ಹಿಂದಿನ ಜನ್ಮದ ಪುಣ್ಯ ಹಾಗೂ ಪಾಪಕ್ಕೆ ಅನುಗುಣವಾಗಿ ಮನುಷ್ಯನು ಜನ್ಮ ತಳೆಯುತ್ತಾನೆ. ಅದುವೇ ಕರ್ಮ ಜನ್ಮ. ದೇವರದ್ದು ಲೀಲೆಗಳ ಅವತಾರ. ದೇವರು ಅವನ ಇಷ್ಟಕ್ಕೆ ತಕ್ಕಂತೆ ಹುಟ್ಟಿ ಬರುತ್ತಾನೆ ಸಜ್ಜನರ ಪ್ರಾರ್ಥನೆಯಿಂದಲೇ ದೇವರು ಹುಟ್ಟಿ ಬರುತ್ತಾರೆ ಹಾಗೆ ದುಷ್ಟರ ಕೆಟ್ಟ ಕಾರ್ಯಗಳು ಅವರ ಅವತಾರಕ್ಕೆ ಕಾರಣವಾಗುತ್ತದೆ.

Leave a Reply

Your email address will not be published. Required fields are marked *