ಯುಕ್ತಃ ಕರ್ಮ – ಮುಂದುವರಿದ ಅಧ್ಯಯನ
ಯುಕ್ತಃ ಕರ್ಮ – ಮುಂದುವರಿದ ಅಧ್ಯಯನ
ಯಾವ ವ್ಯಕ್ತಿಯು ಕರ್ಮದ ಫಲವನ್ನು ತ್ಯಜಿಸುವನೋ ಅಂತಹವನು ಶಾಂತಿಯನ್ನು ಪಡೆಯುತ್ತಾನೆ ಮತ್ತು ಅಂತಹ ವ್ಯಕ್ತಿ ನಿಜವಾದ ಯೋಗಿ. ಚಂಚಲತೆ ಮತ್ತು ಆಸೆಗಳಿಂದ ತುಂಬಿರುವ ವ್ಯಕ್ತಿಯು ಕರ್ಮಫಲಗಳಿಗೆ ಅಂಟಿಕೊಂಡು ಬಂಧಿತನಾಗುತ್ತಾನೆ. ಜ್ಞಾನದ ಹಾದಿಯಲ್ಲಿ ಪರಿಪೂರ್ಣತೆಯು ಅಭಿವೃದ್ಧಿಯ ಕೆಳಗಿನ ಹಂತಗಳನ್ನು ಹೊಂದಿದೆ.
- ಹೃದಯ ಪರಿಶುದ್ಧತೆ
- ಜ್ಞಾನದ ಗಳಿಕೆ.
- ಕರ್ಮಫಲಗಳನ್ನು ತ್ಯಜಿಸುವುದು
- ಜ್ಞಾನದಲ್ಲಿ ಸ್ಥಿರತೆ.
ಮಹಾಭಾರತದಲ್ಲಿ ಧೃತರಾಷ್ಟ್ರ ಇದಕ್ಕೆ ಉದಾಹರಣೆ. ಆತ ಯಾವಾಗಲೂ ಪುತ್ರವ್ಯಾಮೋಹದಿಂದ ಬಂಧಿತನಾಗಿದ್ದ. ಒಬ್ಬ ರಾಜನಾಗಿ ತಾನು ನ್ಯಾಯಯುತ ಮತ್ತು ನಿಷ್ಪಕ್ಷಪಾತಿಯಾಗಿರಬೇಕು ಎಂಬುದನ್ನು ಆತ ಮರೆತಿದ್ದ. ಆತ ಯಾವುದೇ ಕಾರ್ಯ ಮಾಡಿದರೂ, ಅದನ್ನು ಯಾವುದಾದರೂ ಉದ್ದೇಶದಿಂದ ಮಾಡುತ್ತಿದ್ದ. ಯಾವಾಗಲೂ ಸ್ವಾರ್ಥಿಯಾಗಿದ್ದ.
ಭಗವಾನರು ಆತನನ್ನು ಯಾವಾಗಲೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುರುಡ ಎಂದು ಬಣ್ಣಿಸುತ್ತಾರೆ. ಅದು ಆತನ ಇಡೀ ಜನಾಂಗದ ನಾಶವನ್ನು ತಂದಿತು. ಆತ ಶಾಶ್ವತವಾಗಿ ಮಾನಸಿಕ ಶಾಂತಿಯನ್ನು ಕಳೆದುಕೊಂಡ.
ನೀವು ಶಾಶ್ವತ ಸಂತೋಷ, ಹಾಗೂ ಮುಕ್ತಿಗಾಗಿ ಹಾತೊರೆಯುತ್ತಿದ್ದರೆ, ನೀವು ತೆರಬೇಕಾದ ಬೆಲೆ ಏನೆಂದರೆ, ಆಸೆಗಳನ್ನು, ಕರ್ಮದದ ಫಲವನ್ನು ತ್ಯಜಿಸಿ, ಭಗವಂತನ ಚರಣಗಳಲ್ಲಿ ಎಲ್ಲವನ್ನೂ ಸಮರ್ಪಿಸಬೇಕಾಗುತ್ತದೆ.
ಸೂರ್ಯನು ಶ್ರೇಷ್ಠ ಕರ್ಮಯೋಗಿ. ಅವನಲ್ಲಿ ಅತುಲನೀಯ ತ್ಯಾಗಭಾವವಿದೆ. ಅವನು ತನ್ನ ಕಿರಣಗಳನ್ನು ಎಲ್ಲರಿಗೂ ಸಮಾನವಾಗಿ ಹರಡುತ್ತಾನೆ. ಅವನಿಗೆ ಯಾವುದೇ ಅಹಂಕಾರವಿಲ್ಲ. ಅದು ಅವನ ಉದ್ದೇಶ ಹಾಗೂ ಕರ್ತವ್ಯವೇ ಹೊರತು ಸೇವೆಯಲ್ಲ ಎಂದು ಅವನು ಭಾವಿಸುತ್ತಾನೆ.
ಆತ್ಮಜ್ಞಾನಿಯು ಕರ್ಮದ ಫಲಗಳಿಂದ ಬಂಧಿತನಾಗಿರುವುದಿಲ್ಲ. ಆತ್ಮದ ಅರಿವಿಲ್ಲದೆ ಕರ್ಮದಲ್ಲಿ ತೊಡಗಿದವರು ಮಾತ್ರ ಬಂಧಿಸಲ್ಪಡುತ್ತಾರೆ. ಈಜು ತಿಳಿದಿರುವ ವ್ಯಕ್ತಿಯಂತೆ, ಜ್ಞಾನಿಯು ಲೌಕಿಕ ಚಟುವಟಿಕೆಯ ಸಮುದ್ರದಲ್ಲಿ ಸುರಕ್ಷಿತವಾಗಿ ಈಜಬಹುದು.
ಯೋಗಿಯು ತನ್ನ ಇಂದ್ರಿಯಗಳನ್ನು ಮತ್ತು ಮನಸ್ಸನ್ನು ನಿಗ್ರಹಿಸಿಕೊಂಡವನು. ಅವನಲ್ಲಿರುವ ಅದೇ ಆತ್ಮವು ಎಲ್ಲರಲ್ಲಿಯೂ ಇದೆ ಎಂದು ಅವನು ಅರ್ಥಮಾಡಿಕೊಳ್ಳುತ್ತಾನೆ. ವಾಸ್ತವವಾಗಿ, ಅವನಿಗೆ ಯಾರೂ ‘ಇತರರು’ ಅಲ್ಲ. ಅವನ ಒಳಗೂ ಹೊರಗೂ ಎಲ್ಲವೂ ಪರಮಾತ್ಮ. ಎಲ್ಲ ಕೆಲಸವೂ ಭಗವಂತನ ಕೆಲಸ. ಇಂದ್ರಿಯ ವಸ್ತುಗಳನ್ನು ಪಡೆಯಲು ಮತ್ತು ಅವುಗಳನ್ನು ಏಕಾಂಗಿಯಾಗಿ ಅನುಭವಿಸಲು ಅವನು ಬಯಸುವುದಿಲ್ಲ. ಅವನು ದೃಢತೆ ಮತ್ತು ಎಲ್ಲರ ಮೇಲಿನ ಪ್ರೇಮದಿಂದ ಒಡಮೂಡಿದ ಶಾಂತಿಯನ್ನು ಪಡೆಯುತ್ತಾನೆ. ಅವನ ಮನಸ್ಸು ದೈವ-ಪ್ರಜ್ಞೆಯಲ್ಲಿ ಲೀನವಾಗಿರುತ್ತದೆ. ತರಾತುರಿಯಲ್ಲಿ ಅಥವಾ ಆತುರಾದಲ್ಲಿ ಕೆಲಸಗಳನ್ನು ಮಾಡಲು ಯಾವುದೇ ಆತಂಕ ಅಥವಾ ಚಿಂತೆ ಇರುವುದಿಲ್ಲ. ಅವನ ಮನಸ್ಸಿನಲ್ಲಿ ಶಾಂತತೆ ಮೇಲುಗೈ ಸಾಧಿಸುತ್ತದೆ, ಇದು ಮಂದತನ ಅಥವಾ ಇತರರ ಬಗ್ಗೆ ಕಾಳಜಿಯ ಕೊರತೆಯಲ್ಲ, ಬದಲಾಗಿ ಶಾಂತಿ, ಶುದ್ಧತೆ ಮತ್ತು ಕ್ರಿಯಾತ್ಮಕ ಪ್ರೇಮ. ಅವನು ತನ್ನ ಅಹಂಕಾರದ ಆಸೆಗಳಿಂದ ಅಥವಾ ಯೋಜನೆಗಳಿಂದ ದೈವೇಚ್ಛೆಗೆ ಅಡ್ಡಿಯಾಗದ ಕಾರಣ ಅವನು ದೇವರ ಕೈಯಲ್ಲಿ ಉಪಕರಣವಾಗುತ್ತಾನೆ.
ಯೋಗಿಯಲ್ಲದವನು ಕೆಲಸದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ವಿಷಯಗಳು ಅವನ ರೀತಿಯಲ್ಲಿ ನಡೆಯದಿದ್ದರೆ, ಅವನು ಕೋಪಗೊಳ್ಳುತ್ತಾನೆ ಮತ್ತು ಖಿನ್ನತೆಗೆ ಒಳಗಾಗುತ್ತಾನೆ. ಅವನು ದೂಷಿಸುವ ಮನೋಭಾವವನ್ನು ಹೊಂದಿದ್ದಾನೆ ಮತ್ತು ಅನ್ಯಾಯ ಮಾಡಿದುದಾಗಿ ದೇವರನ್ನು ಸಹ ದೂರುತ್ತಾನೆ.
ಒಳ್ಳೆಯ ಕರ್ಮದ ರಹಸ್ಯವೆಂದರೆ ಕರ್ಮವನ್ನು ಆರಾಧನೆಯ ರೂಪದಲ್ಲಿ ಮಾಡುವುದು, ಸರ್ವಶಕ್ತ ಮತ್ತು ಸರ್ವಬುದ್ಧಿವಂತಿಕೆಯ ಮೂಲಕ್ಕೆ ಸಮರ್ಪಿಸುವುದು ಮತ್ತು ಪರಿಣಾಮಗಳನ್ನು ಎಂದಿಗೂ ಹೃದಯಕ್ಕೆ ತೆಗೆದುಕೊಳ್ಳದಿರುವುದು. – ಬಾಬಾ
ಪೂರ್ಣ ಬೌದ್ಧಿಕ ಅರಿವಿನೊಂದಿಗೆ, ಕರ್ಮಫಲಗಳಿಗೆ ಅಂಟಿಕೊಳ್ಳುವುದನ್ನು ಬಿಟ್ಟುಬಿಡಿ ಮತ್ತು ಕರ್ತವ್ಯ ಅಥವಾ ಸಮರ್ಪಣಾ ಭಾವದಿಂದ ಕೆಲಸಗಳನ್ನು ಮುಂದುವರಿಸಿ. ಈ ಮನೋಭಾವವನ್ನು ಬೆಳೆಸಿಕೊಳ್ಳಿ. ಈ ಮೂಲಕ ಕರ್ಮದ ಬಂಧನದಿಂದ ನಿಮ್ಮನ್ನು ಮುಕ್ತಗೊಳಿಸಿ. – ಬಾಬಾ
ಕಥೆ- ಬಂಧನ
ಕಬೀರ್ ಸಾಹಿಬ್ ಬನಾರಸ್‌ನ ಒಂದು ಸ್ಥಳದಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ತೋಟದಲ್ಲಿ ಒಬ್ಬ ವ್ಯಕ್ತಿ ಕುಳಿತಿರುವುದನ್ನು ನೋಡಿದರು. ಒಂದು ದಿನ ಕಬೀರ್ ಸಾಹಿಬ್ ನಿಂತು ಅವನಿಗೆ ಸಲಹೆ ನೀಡಿದರು, ‘ಮಹಾಶಯರೇ, ನಿಮ್ಮ ತೋಟದಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು, ನೀವು ಆಧ್ಯಾತ್ಮಿಕ ಧ್ಯಾನದಲ್ಲಿ ಸಮಯವನ್ನು ಕಳೆಯಬಹುದು ಮತ್ತು ಇದರಿಂದ ನಿಮ್ಮನ್ನು ಸುಧಾರಿಸಿಕೊಳ್ಳಬಹುದು.
“ನನಗೆ ಚಿಕ್ಕ ಮಕ್ಕಳಿದ್ದಾರೆ. ಅವರು ಬೆಳೆದ ನಂತರವೇ ಆಧ್ಯಾತ್ಮಿಕ ಅಭ್ಯಾಸಗಳಿಗೆ ಸಮಯವನ್ನು ಮೀಸಲಿಡಲು ಸಾಧ್ಯ” ಎಂದು ಆ ವ್ಯಕ್ತಿ ಉತ್ತರಿಸಿದ.
ಮಕ್ಕಳು ದೊಡ್ಡವರಾದ ನಂತರ, ಕಬೀರರು ಅದೇ ವ್ಯಕ್ತಿಯನ್ನು ಭೇಟಿಯಾಗಿ, ‘ನನನೀಗ ಆಧ್ಯಾತ್ಮಿಕ ಅನ್ವೇಷಣೆಗೆ ಸಮಯವುಂಟೇ?’ ಎಂದು ಕೇಳಿದರು. ಅವನು ಉತ್ತರಿಸಿದ, ‘ಅಯ್ಯೋ, ಸ್ವಾಮಿ, ನನ್ನ ಮಕ್ಕಳು ಮದುವೆಯಾಗುವವರೆಗೆ ನಾನು ಕಾಯಬೇಕು, ಅದರಿಂದ ಅವರು ತಮ್ಮನ್ನು ತಾವು ಸ್ವತಂತ್ರವಾಗಿ ನೋಡಿಕೊಳ್ಳಬಹುದು. ಆಗ ನನಗೆ ದೇವರಿಗಾಗಿ ಸಮಯ ಸಿಗುತ್ತದೆ.
ಕೆಲವು ದಿನಗಳ ನಂತರ ಕಬೀರರು ಮತ್ತೆ ಆ ವ್ಯಕ್ತಿಯನ್ನು ಭೇಟಿಯಾಗಿ ಕೇಳಿದರು, ‘ಭಾಗ್ಯಶಾಲಿಯೇ, ಈಗ ನಿನ್ನ ಎಲ್ಲಾ ಮಕ್ಕಳೂ ಮದುವೆಯಾಗಿ ತಮ್ಮ ಜೀವನದಲ್ಲಿ ನೆಲೆ ನಿಂತಿದ್ದಾರೆ. ಆದ್ದರಿಂದ, ನೀವು ನಿಸ್ಸಂದೇಹವಾಗಿ ನಾಮಸ್ಮರಣೆಗೆ ಸಮರ್ಪಿಸಿಕೊಳ್ಳಬಹುದು.’
ಆ ವ್ಯಕ್ತಿ ಉತ್ತರಿಸಿದ, ‘ಓಹ್, ನನ್ನ ಮೊಮ್ಮಕ್ಕಳು ಬೆಳೆದು ಅವರು ಮದುವೆಯಾಗುವುದನ್ನು ನೋಡಲು ಉತ್ಸುಕನಾಗಿದ್ದೇನೆ.’
ಇದು ನೆರವೇರಿದಾಗ, ಕಬೀರರು ಅವನನ್ನು ಕೇಳಿದರು, “ಈಗ ನಿನ್ನ ಪರಿಸ್ಥಿತಿಯೇನು, ನನ್ನ ಸ್ನೇಹಿತ?”
‘ಅಯ್ಯೋ ಸ್ವಾಮಿ, ನನ್ನ ಮೊಮ್ಮಕ್ಕಳು ತುಂಬಾ ಅಸಡ್ಡೆವಹಿಸುತ್ತಿದ್ದಾರೆ. ರಾತ್ರಿಯಾದರೂ ನಾನು ಮನೆಗೆ ಕಾವಲು ಕಾಯುವುದು ಬಹಳ ಅವಶ್ಯಕ, ಇಲ್ಲದಿದ್ದರೆ ಕಳ್ಳರು ನಮ್ಮಲ್ಲಿರುವ ಅಲ್ಪಸ್ವಲ್ಪವನ್ನು ಕದಿಯಬಹುದು.’
ಕೆಲವು ವರ್ಷಗಳ ನಂತರ, ಕಬೀರ್ ಸಾಹಿಬ್ ಮತ್ತೆ ಅವರ ಮನೆಗೆ ಭೇಟಿ ನೀಡಿದರು, ಅವರು ನಿಧನರಾದರೆಂದು ಆ ವ್ಯಕ್ತಿಯ ಪುತ್ರರು ಮತ್ತು ಮೊಮ್ಮಕ್ಕಳು ಹೇಳಿದರು.
‘ಅಯ್ಯೋ ಪಾಪ, ತನ್ನ ಮನಸ್ಸಿನ ಆದೇಶ ಮತ್ತು ಆಜ್ಞೆಗಳನ್ನು ಅನುಸರಿಸಿದ ಅವನ ಜೀವನವು ವ್ಯರ್ಥವಾಯಿತು, ಅದರಿಂದ ಅವನು ಮಕ್ಕಳ, ಮೊಮ್ಮಕ್ಕಳ ಹಾಗೂ ಆಸ್ತಿಯೊಂದಿಗಿನ ಬಂಧನಕ್ಕೆ ಒಳಗಾದನು.ಅವನಿಗೆ ಭಗವಂತನಲ್ಲಿ ಕೆಲವು ತಿಂಗಳುಗಳಾದರೂ ಪ್ರೇಮವಿದ್ದಿದ್ದರೆ ಭೂಮಿಯ ಮೇಲಿನ ಅವನ ಸೆರೆವಾಸವನ್ನು ಕೊನೆಗೊಳಿಸಲು ಸಹಾಯವಾಗುತ್ತಿತ್ತು.
‘ಡಂ ಡಂ ಡಂ – ನಾನು ಗೂಳಿಯಾಗಿ ಹುಟ್ಟಿ, ನೇಗಿಲು ಮತ್ತು ಗಾಡಿಗೆ ಸಿಲುಕಿ, ನಂತರ ನನ್ನನ್ನು ತುಂಡು ತುಂಡು ಮಾಡಿ ಮಾಂಸ ಮಾರುತ್ತಿದ್ದ ಕಟುಕನಿಗೆ ಮಾರಿದರು. ನನ್ನ ಚರ್ಮವನ್ನು ಈಗ ಡೋಲಾಗಿ ಬಳಸುತ್ತಿದ್ದಾರೆ. ಆದ್ದರಿಂದ, ನನ್ನ ಉಳಿದ ಕರ್ಮವು ಪ್ರತಿ ನಿಮಿಷವೂ ಹೊಡೆತಗಳನ್ನು ಪಡೆಯುತ್ತಿದೆ. ನಾನು ನಿರಂತರ ದುಃಖದಲ್ಲಿದ್ದೇನೆ.