ಓಂ ಸರ್ವಮಂಗಲ ಶ್ಲೋಕ – ಚಟುವಟಿಕೆ
ಓಂ ಸರ್ವಮಂಗಲ ಶ್ಲೋಕ – ಚಟುವಟಿಕೆ
- ಗುರುವು ಮೊದಲು ಶ್ಲೋಕದ ಅರ್ಥವನ್ನು ಮಕ್ಕಳಿಗೆ ತಿಳಿಸಬೇಕು.
- ಗುರುವು ಶ್ಲೋಕದ ಶಬ್ದಗಳಿಗೆ ಸಂಬಂಧಿಸಿದ ಮುಖ್ಯವಾದ ಅಂಶಗಳನ್ನು ಬೋರ್ಡ್ ಮೇಲೆ ಬರೆಯಬೇಕು. ಉದಾ :- ಮಂಗಳಕರ (ಶುಭಕರ), ಎಲ್ಲ ತರಹದ ಐಶ್ವರ್ಯ, ಶಿವನ ಹೆಂಡತಿ, ವಿಷ್ಣುವಿನ ಸಹೋದರಿ, ಯಶಸ್ಸನ್ನು ಕೊಡುವವಳು ಇತ್ಯಾದಿ.
- ನಂತರ ಒಂದು ಹುಡುಗಿಗೆ ಪಾರ್ವತಿ ದೇವಿಯಂತೆ ನಟನೆ ಮಾಡಲು ತಿಳಿಸಿ (ಗುರುವು ಪಾರ್ವತಿಯಂತೆ ಉಡುಪು ಧರಿಸಲೂ ಹೇಳಬಹುದು) ಅಥವಾ ಅದಕ್ಕೆ ಬದಲಾಗಿ ಪಾರ್ವತಿಯ ಒಂದು ಚಿತ್ರಪಟವನ್ನಾದರೂ ಇಡಬಹುದು.
- ಚಿಕ್ಕ ಮಕ್ಕಳು ಒಬ್ಬೊಬ್ಬರಾಗಿ ಅಥವಾ 2, 3 ಮಕ್ಕಳು ಜೊತೆಗೂಡಿ ಬೋರ್ಡ್ ಮೇಲೆ ಬರೆದಿರುವ ಕೆಲವು ಪದಗಳನ್ನು ತೆಗೆದುಕೊಂಡು ಶ್ಲೋಕದ ಅರ್ಥ ಬರುವ ಹಾಗೆ ಸಂಯೋಜಿಸಬಹುದು.
ಉದಾ:- ಈ ಶ್ಲೋಕಕ್ಕೆ ಬೋರ್ಡಲ್ಲಿರುವ ಪದಗಳನ್ನು ಬಳಸಿ ಹೀಗೆ ಬರೆಯಬಹುದು– “ಓ ಮಾತೆಯೇ, ನೀನು ಶಿವನ ಹೆಂಡತಿ, ವಿಷ್ಣುವಿನ ಸಹೋದರಿ. ದಯವಿಟ್ಟು ನನಗೆ ಯಶಸ್ಸನ್ನು ಅನುಗ್ರಹಿಸು.”ಇನ್ನೊಂದು ಉದಾಹರಣೆ:- “ಮಂಗಳಕರಳೆ, ನಿನಗೆ ಶರಣಾಗುತ್ತಿದ್ದೇನೆ. ದಯವಿಟ್ಟು ಎಲ್ಲ ತರದ ಐಶ್ವರ್ಯಗಳನ್ನು ದಯಪಾಲಿಸು.” - ಮಕ್ಕಳಿಗೆ ಈ ಶ್ಲೋಕವನ್ನು ಕಲಿಯಲು ಹೇಳಿ. ನಂತರ ಒಬ್ಬೊಬ್ಬರಾಗಿ ಅಥವಾ ಗುಂಪುಗಳಾಗಿ ಬಂದು ಈ ಶ್ಲೋಕವನ್ನು ಭಕ್ತಿಯಿಂದ ಹೇಳುತ್ತಾ (ಅಭಿನಯಿಸುತ್ತ) ಪಾರ್ವತಿಯ ಚಿತ್ರಕ್ಕೆ ಹೂವನ್ನು ಹಾಕಬೇಕು.
ಸಂಕ್ಷಿಪ್ತ ವಿವರಣೆ:
ಶ್ಲೋಕವನ್ನು ಕಲಿಯಲು ಮತ್ತು ಅದರ ಅರ್ಥವನ್ನು ನೆನಪಿಟ್ಟುಕೊಳ್ಳಲು ಈ ಚಟುವಟಿಕೆಯು ತುಂಬಾ ಸಹಕಾರಿಯಾಗಿದೆ. ಕಲಿಯುವಾಗ ಮೋಜಿರುತ್ತದೆ ಹಾಗೂ ನಿಧಾನವಾಗಿ ಪಾರ್ವತಿಯ ಬಗ್ಗೆ ಭಕ್ತಿಯ ಬೀಜವನ್ನು ಮಕ್ಕಳ ಮನದಲ್ಲಿ ಬಿತ್ತಲು ನೆರವಾಗುತ್ತದೆ ಮತ್ತು ಈ ಶ್ಲೋಕವು ಪಾರ್ವತಿಯ ಗುಣಗಳನ್ನು ತಿಳಿಸಲು ಸಹಕಾರಿಯಾಗಿದೆ. (ಎಚ್ಚರವಿರಲಿ, ಕ್ಲಿಷ್ಟ ಪದಗಳನ್ನು ಬಳಸಿ ಮಕ್ಕಳಿಗೆ ಶ್ಲೋಕದ ಅರ್ಥ ಕಠಿಣ ಎನ್ನುವ ಹಾಗೆ ಮಾಡಬೇಡಿ.)
ಈ ಚಟುವಟಿಕೆಯ ನಂತರ ಎಲ್ಲ ಮಕ್ಕಳು ಒಟ್ಟಾಗಿ ಈ ಶ್ಲೋಕವನ್ನು ಮತ್ತು ಅದರ ಅರ್ಥವನ್ನು ಹೇಳುವಂತೆ ಹೇಳಿ.