ಓಂ ಸರ್ವ ಮಂಗಳ ಶ್ಲೋಕ – ಹೆಚ್ಚಿನ ಓದುವಿಕೆ
ಓಂ ಸರ್ವ ಮಂಗಳ ಶ್ಲೋಕ – ಹೆಚ್ಚಿನ ಓದುವಿಕೆ
ಪಾರ್ವತಿ ದೇವಿಯು ತನ್ನ ಭಕ್ತರ ಮೇಲೆ ತಾಯಿಯ ಪ್ರೀತಿಯನ್ನು ಹೊಂದಿದ್ದಾಳೆ. ಅವಳು ಮಂಗಳಕರಳಾಗಿದ್ದು, ಮಾಯೆಯನ್ನು ಹೋಗಲಾಡಿಸಿ ತನ್ನ ಭಕ್ತರನ್ನು ರಕ್ಷಿಸುತ್ತಾಳೆ.
ಒಮ್ಮೆ ನರೇಂದ್ರನಾಥ ಎಂಬ ಬ್ರಾಹ್ಮಣ ಹುಡುಗ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದನು. ಇದ್ದಕ್ಕಿದ್ದಂತೆ ಮೊಸಳೆಯೊಂದು ಬಂದು ಹುಡುಗನನ್ನು ಹಿಡಿದುಕೊಂಡಿತು.
ಹುಡುಗ ಪಾರ್ವತಿ ದೇವಿಯನ್ನು ಕರೆಯಲಾರಂಭಿಸಿದ. ಅವನ ಆತನಾದವನ್ನು ಕೇಳಿ, ಕೈಲಾಸ ಪರ್ವತದಲ್ಲಿರುವ ದೇವಿಯ ಮನ ಕರಗಿತು. ಅವಳು ಸ್ಥಳಕ್ಕೆ ಧಾವಿಸಿ ಬಂದಳು.
ಹುಡುಗನನ್ನು ರಕ್ಷಿಸುವ ಸಲುವಾಗಿ ಅವಳು ತನ್ನ ಎಲ್ಲಾ ಶಕ್ತಿ, ಜ್ಞಾನ ಮತ್ತು ಶುಭವನ್ನು ಅವನ ಮೇಲೆ ಸುರಿಸಿದಳು. ಆಕೆಯ ತಪಸ್ಸಿನ ಬಲವು ಎಷ್ಟಿತ್ತೆಂದರೆ, ಅದರಿಂದಾಗಿ ಹುಡುಗನು ಪ್ರಕಾಶಮಾನವಾಗಿ ಹೊಳೆಯಲಾರಂಭಿಸಿದನು. ಈ ಪ್ರಕಾಶವನ್ನು ತಾಳಲಾರದೆ ಮೊಸಳೆ ನರೇಂದ್ರನಾಥನನ್ನು ಬಿಟ್ಟು ನೀರಿನಲ್ಲಿ ಮರೆಯಾಯಿತು.
ನಾವೂ ಸಹ ಈ ನರೇಂದ್ರನಾಥನಂತೆ ಪ್ರಪಂಚವೆಂಬ ಸಂಸಾರ ಸಾಗರದಲ್ಲಿ ಈಜಲಿಚ್ಛಿಸಿ ಮಾಯೆಯೆಂಬ ಮೊಸಳೆಯ ಬಾಯಿಯಲ್ಲಿ ಸಿಲುಕಿಕೊಂಡಿದ್ದೇವೆ. ಮಂಗಳಕರಳೂ ದಯಾಮಯಳೂ ಮತ್ತು ಶಾಂತಿದಾಯಕಳೂ ಆಗಿರುವ ಪಾರ್ವತಿ ದೇವಿಯನ್ನು ನಾವು ಪ್ರಾರ್ಥಿಸಿದರೆ, ಅವಳು ನಮಗೆ ಮಾಯೆಯಿಂದ ಹೊರಬಂದು ಮುಕ್ತಿ ಪಡೆಯಲು ಶಕ್ತಿಯನ್ನು ನೀಡುತ್ತಾಳೆ.
[Illustrations by Selvi. Sainee, Sri Sathya Sai Balvikas Student]
[ ಮೂಲ: ಶ್ರೀ ಸತ್ಯಸಾಯಿ ಬಾಲವಿಕಾಸ ಗುರು ಕೈಪಿಡಿ ಗ್ರೂಪ್ 1]