ಪೀಟರ್
ಪೀಟರ್
ಪಶ್ಚಿಮ ಯೂರೋಪ್‌ನ ಹಾಲೆಂಡ್ ಅಥವಾ ನೆದರ್‌ಲ್ಯಾಂಡ್‌ನ ಭೂಭಾಗವು, ಸಮುದ್ರ ಮಟ್ಟಕ್ಕಿಂತ ಕೆಳಗಿದ್ದು, ಡೈಕ್ಸ್(ಬದುವು) ಎಂದು ಕರೆಯಲ್ಪಡುವ ಸಾಗರದ ಹರಿವನ್ನು ತಡೆಯುವ ತಡೆಗೋಡೆಗಳಿಂದ ರಕ್ಷಿಸಲ್ಪಟ್ಟಿತ್ತು.
ಬಹಳ ಹಿಂದೆ ಈ ‘ಡೈಕ್’ ಗಳನ್ನು ಮೊದಲು ನಿರ್ಮಾಣ ಮಾಡಿದಾಗ, ಅವುಗಳು ಈಗಿನಷ್ಟು ಭದ್ರವಾಗಿರುತ್ತಿರಲಿಲ್ಲ. ಸವೆತದಿಂದಾಗಿ ಆಗಾಗ ಈ ‘ಡೈಕ್’ ಗಳಲ್ಲಿ ಚಿಕ್ಕ ಸೋರಿಕೆಗಳು ಕಂಡುಬರುತ್ತಿದ್ದವು; ಅದನ್ನು ಆ ಕೂಡಲೆ ಸರಿಪಡಿಸದೆ ಬಿಟ್ಟರೆ, ಅದು ದೊಡ್ಡ ಬಿರುಕಾಗಿ ಬೆಳೆದು, ಸಮುದ್ರವು ಕರಾವಳಿಯ ಜನವಸತಿ ಸ್ಥಳಗಳನ್ನು ಮುಳುಗಿಸುವ ಭೀತಿ ಇತ್ತು. ಆದ್ದರಿಂದ ಅಲ್ಲಿ ಹಗಲು, ರಾತ್ರಿ ನಿರಂತರ ಕಾವಲು ಮತ್ತು ಡೈಕ್ ಗಳ ಮೇಲೆ ಕಣ್ಗಾವಲಿನ ವ್ಯವಸ್ಥೆ ಮಾಡಲಾಗಿತ್ತು.
ಒಂದು ದಿನ ಸಂಜೆ, ಸೂರ್ಯ ಮುಳುಗಿದ ನಂತರ ಪೀಟರ್ ಎಂಬ ದನಕಾಯುವ ಹುಡುಗನು ಡೈಕ್ ನಲ್ಲಿ ಒಂದು ಸೋರಿಕೆಯನ್ನು ಗಮನಿಸಿದನು. ಪಹರೆಗಿದ್ದ ರಕ್ಷಕನು ಆಗತಾನೇ ವಿಶ್ರಾಂತಿಗೆ ತೆರಳಿದ್ದು, ಅವನು ಬೇಗ ಹಿಂತಿರುಗುವ ಸಾಧ್ಯತೆ ಇರಲಿಲ್ಲ. ಹುಡುಗನು ಪರಿಸ್ಥಿತಿ ಮತ್ತು ಉಂಟಾಗುವ ಅಪಾಯವನ್ನು ಅರ್ಥಮಾಡಿಕೊಂಡನು. ಅವನು ಸಹಾಯಕ್ಕಾಗಿ ಕೂಗುತ್ತಲೇ ಇದ್ದನು ಮತ್ತು ಅದೇ ಸಮಯದಲ್ಲಿ ರಂಧ್ರವನ್ನು ಬೆರಳಿನಿಂದ ಒತ್ತಿ ಹಿಡಿದನು. ಆದರೆ ಅವನ ಕೂಗಿಗೆ ಪ್ರತಿಯಾಗಿ ಯಾವುದೇ ಶಬ್ದವಾಗಲೀ, ಯಾರಾದರೂ ಬರುವ ಸೂಚನೆಯಾಗಲಿ ಕಾಣಿಸಲಿಲ್ಲ. ಅವನನ್ನು ಸುಳಿಯುವ ಗಾಳಿ ಕೊರೆಯುತ್ತಿತ್ತು ಮತ್ತು ತಣ್ಣಗಿನ ನೀರು ಮರಗಟ್ಟಿಸುತ್ತಿತ್ತು. ಅವನು ತನ್ನ ಕೈನ ಪೂರ್ಣ ಬಲದಿಂದ ಒತ್ತಿ ಹಿಡಿದಿದ್ದರಿಂದ, ಅವನ ಧ್ವನಿ ಕ್ಷೀಣಿಸುತ್ತಾ ಬಂತು. ಆ ಕೈ ನಿಶ್ಚೇಷ್ಟಿತವಾಗಿದ್ದರಿಂದ ಅವನು ಇನ್ನೊಂದು ಕೈಯನ್ನೂ ಒತ್ತಿ ಹಿಡಿದನು. ಮಧ್ಯದಲ್ಲಿ ಮರಗಟ್ಟದಿದ್ದರೆ, ಅವನು ತನ್ನ ಪಾದವನ್ನು, ಕೊನೆಗೆ ಇಡೀ ದೇಹವನ್ನೇ ಸೋರಿಕೆಯನ್ನು ತಡೆಯಲು ಒತ್ತಿ ಹಿಡಿಯುತ್ತಿದ್ದನೇನೋ! ಆದರೆ ಅವನು ಮರಗಟ್ಟಿ ಪ್ರಜ್ಞಾ ಶೂನ್ಯನಾದನು. ಈ ಸ್ಥಿತಿಯಲ್ಲಿ, ಕರ್ತವ್ಯಕ್ಕೆ ಹಿಂದಿರುಗಿದ ಕಾವಲುಗಾರನು ಅವನನ್ನು ನೋಡಿದನು.
ಪ್ರಶ್ನೆಗಳು:
- ಧೈರ್ಯಶಾಲಿ ಪೀಟರ್‌ನ ಕತೆಯನ್ನು ನಿಮ್ಮ ವಾಕ್ಯಗಳಲ್ಲಿ ಬರೆಯಿರಿ.
- ಇದೇ ರೀತಿಯ ಇನ್ನೊಂದು ಕತೆಯನ್ನು ನೀವು ಯೋಚಿಸ ಬಲ್ಲಿರಾ?
[ಆಕರ: ಸ್ಟೋರೀಸ್ ಫಾರ್ ಚಿಲ್ಡçನ್- II
ಪ್ರಕಟಣೆ: ಶ್ರೀ ಸತ್ಯಸಾಯಿ ಬುಕ್ಸ್ & ಪಬ್ಲಿಕೇಷನ್ಸ್ ಟ್ರಸ್ಟ್, ಪ್ರಶಾಂತಿನಿಲಯಂ]