ಖೋರ್ದಾದ್ ಸಾಲ್ – ಪ್ರವಾದಿ ಜರಾತುಷ್ಟ್ರನ ಜನನ
ಖೋರ್ದಾದ್ ಸಾಲ್ – ಪ್ರವಾದಿ ಜರಾತುಷ್ಟ್ರನ ಜನನ
ಸ್ಪಿತಾಮ (Spitama) ಎಂಬ ಪುರೋಹಿತ ಮನೆತನದಲ್ಲಿ ಜರಾತುಷ್ಟ್ರನು ಜನಿಸಿದನು. ಇವನ ತಾಯಿ ದುಘ್ದೋವಾ (Dughdova) ಮತ್ತು ಅವನ ತಂದೆಯ ಹೆಸರು ಪೌರುಶಸ್ಪಾ ಸ್ಪಿಟ್ಟಾಮಾ(Pourushaspa Spitama). ಅವನು ವೆಬ್ಡೈಟ್(Vebdait) ನದಿಯ ಬಳಿಯ ರೇ( Rae) ಪಟ್ಟಣದಲ್ಲಿರುವ, ಬ್ಯಾಕ್ಟ್ರಿಯಾದಲ್ಲಿ( Bactria) ಜನಿಸಿದನು. ಅದು ಫ್ರಾವರ್ಡಿನ್ (Fravardin) ತಿಂಗಳ ಆರನೇ ದಿನವಾದ (ಜೊರಾಸ್ಟ್ರಿಯನ್ ವರ್ಷದ ಮೊದಲ ತಿಂಗಳು) ಖೊರ್ದಾದ್ ದಿನ (KHORDAD SAL). ಜರಾತುಷ್ಟ್ರನ ಜನನದ ಮೊದಲೇ, ಅವನ ತಾಯಿ ದುಗ್ಡೋವಾ ಕನಸಿನಲ್ಲಿ ತನ್ನ ಮಗನ ದೈವಿಕ ಧ್ಯೇಯದ ಮುನ್ಸೂಚನೆಯನ್ನು ಗಮನಿಸಿದ್ದಳು. ಮಗನ ದೈವಿಕ ಧ್ಯೇಯವನ್ನು ಪೂರ್ಣಗೊಳಿಸಲು ಅವಳು ತುಂಬಾ ಉತ್ಸುಕಳಾಗಿದ್ದಳು. ಜರಾತುಷ್ಟ್ರನ (ZARATHUSHTRA) ಜನನವಾದಾಗ ಅವನ ಪ್ರಭಾವಳಿ ರೇ (Rae) ಪಟ್ಟಣದ ಎಲ್ಲೆಡೆ ಬೆಳಕನ್ನು ಪಸರಿಸಿತು ಎಂದು ಹೇಳಲಾಗುತ್ತದೆ.
“ತಮಸೋಮಾ ಜ್ಯೋತಿರ್ಗಮಯ – ಕತ್ತಲೆಯಿಂದ ಬೆಳಕಿನೆಡೆಗೆ ನನ್ನನ್ನು ಮುನ್ನಡೆಸು” ಎಂಬ ಮಾನವನ ಪ್ರಾಥನೆಗೆ ಉತ್ತರವಾಗಿ ಪ್ರವಾದಿಯ ಜನನವಾಯಿತು. “ಅಜ್ಞಾನವೆಂಬ ಅಂಧಕಾರವನ್ನು ನಾಶಮಾಡಿ, ಮನುಷ್ಯರ ಹೃದಯದಲ್ಲಿ ಪ್ರೀತಿ ಮತ್ತು ವಿವೇಕದ ಬೆಳಕನ್ನು ಹರಡುವ ವ್ಯಕ್ತಿ ಜನ್ಮ ತೆಗೆದುಕೊಂಡಿರುವುದನ್ನು ಈ ಘಟನೆಯು ಸೂಚಿಸುತ್ತದೆ.” ತಂದೆ ತಾಯಿಗಳು ಮಗುವಿಗೆ ಜರಾತುಷ್ಟ್ರ ಎಂದು ಹೆಸರಿಟ್ಟರು. ಅಂದರೆ ‘ಚಿನ್ನದಂತೆ ಹೊಳೆಯುವ ನಕ್ಷತ್ರ’ ಎಂದು ಅರ್ಥ. ಪ್ರವಾದಿಯ ಜನನವನ್ನು ಪ್ರಕೃತಿಯು ವಿಕಸನಗೊಳ್ಳುವುದರ ಮೂಲಕ ಹೇಗೆ ಸಂಭ್ರಮಿಸಿತು ಮತ್ತು ಮನುಷ್ಯನಷ್ಟೇ ಅಲ್ಲದೇ ಮೃಗ, ಖಗಗಳೂ ಕೂಡ ಹೇಗೆ ಸಂತೋಷವನ್ನು ಅನುಭವಿಸಿದವು ಎಂಬುದನ್ನು ಧಮಗ್ರಂಥಗಳು ವಿವರಿಸುತ್ತವೆ.
ದುಷ್ಟಶಕ್ತಿಗಳು ಮತ್ತು ಮಾಂತ್ರಿಕರ ಒಂದು ಗುಂಪು, ದೈವಿಕ ಮಗು ಅವರ ಅವನತಿಗೆ ಕಾರಣವಾಗಬಹುದೆಂದು ಬಹಳ ಭಯಪಟ್ಟಿತು, ಮತ್ತು ಅವರ ನಾಯಕ ದುರಾಸರುನ್ (Durasarun), ಮಗುವನ್ನು ನಾಶಮಾಡಲು ಯೋಜನೆ ಮತ್ತು ಸಂಚು ರೂಪಿಸುವಲ್ಲಿ ನಿರತನಾಗಿದ್ದನು. ಅಹುರ ಮಜ್ದಾ (Ahura Mazda) ಅವರ ಕೃಪೆ ಮತ್ತು ರಕ್ಷಣೆಯಿಂದ ಮಗು ಬದುಕಿ ಉಳಿಯಿತು.
ಜರಾತುಷ್ಟ್ರ ಬುದ್ಧಿವಂತ ಮತ್ತು ಶ್ರದ್ಧಾಭರಿತ ಯುವಕನಾಗಿ ಬೆಳೆಯುತ್ತಿದ್ದ. ಆ ಸಮಯದಲ್ಲಿಯೇ ದುರಾಸರುನ್ ಕಡೆಯಿಂದ ಒಬ್ಬ ಮನುಷ್ಯ ವೈದ್ಯರ ವೇಷ ಧರಿಸಿ ಜರಾತುಷ್ಟ್ರನಿಗೆ ಕೆಲವು ಔಷಧಗಳನ್ನು ಕೊಟ್ಟು ವಿಷಪ್ರಾಶನ ಮಾಡಿಸಲು ಕೊನೆಯ ಪ್ರಯತ್ನ ಮಾಡಿದನು. ಆದರೆ ಜರಾತುಷ್ಟ್ರ ಈ ತಂತ್ರವನ್ನು ಸುಲಭವಾಗಿ ಕಂಡುಹಿಡಿದು ಔಷಧಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ.
ಏಳನೇ ವಯಸ್ಸಿನಲ್ಲಿ, ಬೋರ್ಜಿನ್-ಖುರ್ಷ್ (Borjin-Khursh) ಎಂಬ ಬುದ್ಧಿವಂತ ವ್ಯಕ್ತಿಯ ಆರೈಕೆಯಲ್ಲಿ ಜರಾತುಷ್ಟ್ರನನ್ನು ಇರಿಸಲಾಯಿತು, ಅವರಿಂದ ಜರಾತುಷ್ಟ್ರನು ಸಾಧ್ಯವಾದಷ್ಟು ಕಲಿತನು. ಅವರು ಜರಾತುಷ್ಟ್ರನಿಗೆ ಮಜ್ದಯಸ್ನಿನ್ (Mazdayasnin) ಎಂಬ ಧರ್ಮ ದೀಕ್ಷೆ ನೀಡಿದರು ಮತ್ತು ಹದಿನೈದನೇ ವಯಸ್ಸಿನಲ್ಲಿ, ಜರಾತುಷ್ಟ್ರನಿಗೆ ನವಜೋತ್ ಸಮಯದಲ್ಲಿ ಪವಿತ್ರ ಸೊಂಟದ ಪಟ್ಟಿ ಕುಸ್ಟಿ (Khusti) ಯನ್ನು ತೊಡಿಸಿದರು. ಇಪ್ಪತ್ತೈದನೇ ವಯಸ್ಸಿನಲ್ಲಿ, ದೇವರ ಚಿಂತನೆ ಮತ್ತು ಮನುಷ್ಯನ ಜೀವನದ ಉದ್ದೇಶ ಮತ್ತು ಅರ್ಥದ ಬಗ್ಗೆ ಆಳವಾದ ಧ್ಯಾನ ಮತ್ತು ಆಲೋಚನೆಗಾಗಿ ಏಕಾಂತ ಸ್ಥಳಕ್ಕೆ ಹೋಗಬೇಕೆಂದು ಜರಾತುಷ್ಟ್ರನು ಭಾವಿಸಿದನು. ಆದ್ದರಿಂದ ಜರಾತುಷ್ಟ್ರನು ಪರ್ವತದ ತುದಿಯಲ್ಲಿರುವ ಕುರುಬನ ಗುಡಿಸಲಿನ ಬಳಿ ಇರುವ ಸ್ಥಳದಲ್ಲಿ ಉಳಿಯಲು ನಿರ್ಧರಿಸಿದನು. ಕುರುಬನು ಜರಾತುಷ್ಟ್ರನಿಗೆ ಹಾಲು ಮತ್ತು ರೊಟ್ಟಿ ನೀಡಿ ಸಹಾಯ ಮಾಡುತ್ತಿದ್ದನು. ಈ ರೀತಿಯಲ್ಲಿ ಜರಾತುಷ್ಟ್ರನು ಹತ್ತು ವರ್ಷಗಳನ್ನು ಕಳೆದನು. ಮತ್ತು ಈ ಸಮಯದಲ್ಲಿ ಗಾಥಾಗಳಲ್ಲಿ (Gaathas) (ಜರಾತುಷ್ಟ್ರನ ಪವಿತ್ರ ಗ್ರಂಥಗಳು) ಜರಾತುಷ್ಟ್ರನ ಮನಸ್ಸಿನಲ್ಲಿನ ಆಲೋಚನೆಗಳು ಬಹಿರಂಗಗೊಂಡಿವೆ. ಜರಾತುಷ್ಟ್ರರಿಗೆ ದೇವರಿಂದ ಸ್ಪಷ್ಟವಾದ ಅನುಗ್ರಹ ಸಿಕ್ಕಿತು ಎಂದು ಮನವರಿಕೆಯಾದಾಗ, ಅವರು ಪರ್ವತ ತಾಣವನ್ನು ತೊರೆದು ವಿಸ್ಟಾಸ್ಪ್ (Vistasp) ರಾಜನ ಆಸ್ಥಾನಕ್ಕೆ ತೆರಳಿದರು. ಆ ಸಮಯದಲ್ಲಿ ಅಸ್ತಿತ್ವದಲ್ಲಿರುವ ಮಜ್ದಯಸ್ನಿನ್ (Mazdayasnin faith) ನಂಬಿಕೆಯನ್ನು ಸುಧಾರಿಸುವ ಕಾರ್ಯವನ್ನು ಅವರು ಪ್ರಾರಂಭಿಸಿದರು ಮತ್ತು ವಿಸ್ಟಾಸ್ಪ್ ರಾಜನು (King Vistasp) ಜರಾತುಷ್ಟ್ರನ ಬೋಧನೆಗಳನ್ನು ಸ್ವೀಕರಿಸಿದಾಗ, “ಜರಾತುಷ್ಟ್ರಿ ಮಜ್ದಯಸ್ನಿನ್’ ನಂಬಿಕೆಯು ಇರಾನ್ನ ರಾಷ್ಟ್ರೀಯ ಧರ್ಮವಾಯಿತು.
ಖೋರ್ದಾದ್ ಸಾಲ್ನಲ್ಲಿ, ಜೊರಾಸ್ಸ್ಟ್ರಿಯನ್ನರು ಜರಾತುಷ್ಟ್ರರ ಸ್ಮರಣೆಗೆ ಗೌರವ ಸಲ್ಲಿಸುತ್ತಾರೆ, ಅವರು ಮಾನವಕುಲಕ್ಕೆ ನೀಡಿದ ಬೋಧನೆಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅಭ್ಯಾಸ ಮಾಡುತ್ತಾರೆ. ಜರಾತುಷ್ಟ್ರರ ಬೋಧನೆಗಳ ಬಗ್ಗೆ ತಿಳಿಯಲು ಅವರು ಬೋಧಿಸಿದ ಏಳು “ಅಮೆಷಾ-ಸ್ಪೆಂಟಾಸ (amesha-Spenta) ಅಥವಾ ಸತ್ಯ, ಸದಾಚಾರ, ಶಾಂತಿ ಮತ್ತು ಪ್ರೀತಿಯ ಹಾದಿಯ ಬಗ್ಗೆ ತಿಳಿಯೋಣ.
“ಸೆವೆನ್ ಅಮೆಶಾ-ಸ್ಪೆಂಟಾಸ” ಅಥವಾ “ಹೋಲಿ ಇಮ್ಮಾರ್ಟಲ್ಸ್” “Holy Immortals”
‘ಅಮೆಶಾ-ಸ್ಪೆಂಟಾ’ ಅಹುರ ಮಜ್ದಾರ ವಿಭಿನ್ನ ರೂಪಗಳಾಗಿವೆ ಮತ್ತು ಪ್ರತಿಯೊಂದೂ ಹೆಜ್ಜೆಯೂ ದೈವತ್ವದ ಹಾದಿಯಲ್ಲಿ ಅಡೆತಡೆಯಿಲ್ಲದೆ ಮುಂದೆಹೋಗುವ ಮಾರ್ಗ ತೋರಿಸುತ್ತವೆ. ಮೊದಲ ಅಮೆಶಾ-ಸ್ಪೆಂಟಾ ಸ್ವತಃ ‘ಅಹುರಾ ಮಜ್ದಾ’ನೇ ಪ್ರತಿಯೊಬ್ಬ ಮಾನವನ ಹೃದಯದಲ್ಲಿ ‘ಅಹು’ವಾಗಿ ನೆಲೆಸಿರುವವನು ಅವನೇ. “ಎಲ್ಲಾ ಸತ್ಯಗಳ ಸತ್ಯ” – ಬದಲಾಗದ ಈ ಸತ್ಯವು ನಮ್ಮ ಆಲೋಚನೆಗಳು ಮತ್ತು ಮಾತುಗಳಲ್ಲಿ ಪ್ರತಿಫಲಿಸಬೇಕು.
ಎರಡನೆಯದು ವೊಹು-ಮನೋ (Vohu-Mano) ಅಥವಾ ಮುಗ್ಧ, ಪ್ರೀತಿಯ ಮನಸ್ಸು. ದೇವರ ಪ್ರೀತಿ. ನಿಜವಾದ ಪ್ರೀತಿ ನೀಡುತ್ತದೆ ಮತ್ತು ಕ್ಷಮಿಸುತ್ತದೆ. ಬೆಳಕಿನಂತೆ, ಪ್ರೀತಿಯು ಯಾವುದೇ ಗಡಿ ಅಥವಾ ವ್ಯತ್ಯಾಸಗಳನ್ನು ತಿಳಿದಿಲ್ಲ ಮತ್ತು ಅದನ್ನು ಎಷ್ಟೇ ಹಂಚಿಕೊಂಡರೂ ಅದು ಎಂದಿಗೂ ಕಡಿಮೆಯಾಗುವುದಿಲ್ಲ. ಪ್ರೀತಿ ಕೊಡದಿದ್ದರೆ ಮತ್ತು ಕ್ಷಮಿಸದಿದ್ದರೆ, ಅದನ್ನು ಅಕೋ ಮನೋ (Ako Mano) ಅಥವಾ ಕೀಳು ಮನಸ್ಸು ಎಂದು ಕರೆಯಲಾಗುತ್ತದೆ.
ಮೂರನೆಯದು ಆಶಾ – ವಶಿಸ್ಟ್. ಇದರರ್ಥ ಅತ್ಯುನ್ನತವಾದದ್ದು. ಇದು ಜರಾತುಷ್ಟ್ರನ ಬೋಧನೆಗಳ ತಳಪಾಯವಾಗಿದೆ. ಇದು ನಮ್ಮ ಹೃದಯದಲ್ಲಿನ ಸತ್ಯವನ್ನು ಆಧರಿಸಿದ ಎಲ್ಲಾ ಸರಿಯಾದ ಕ್ರಿಯೆಗಳನ್ನು ಒಳಗೊಂಡಿದೆ.
ನಾಲ್ಕನೆಯ ಅಮೆಷಾ-ಸ್ಪೆಂಟಾವನ್ನು ವೊಹು ಕ್ಷತ್ರಂ ವೈರಮ್ (Vohu Kshathram Vairam) ಎಂದು ವಿವರಿಸಲಾಗಿದೆ. ಇದರರ್ಥ ಅಮೂಲ್ಯ, ಪ್ರೀತಿಯ, ದೈವಿಕ ಶಕ್ತಿ. ಆಶಾ ಮಾರ್ಗವನ್ನು ಅನುಸರಿಸಿದ ಪರಿಣಾಮವಾಗಿ ಬರುವ ಆಶೀರ್ವಾದ ಇದು. ಆತನ ಅನುಗ್ರಹದಿಂದ, ಅಹಂ ತುಂಬಾ ನಿಧಾನವಾಗಿ ಕಡಿಮೆಯಾಗುತ್ತದೆ ಮತ್ತು ನಾವು ಮಾಡುವ ಕೆಲಸವು ಇತರ ಸಹ ಜೀವಿಗಳಲ್ಲಿ ಮಾತ್ರವಲ್ಲದೆ ನಮ್ಮ ಸುತ್ತಲಿನ ಪಕ್ಷಿಗಳು ಮತ್ತು ಪ್ರಾಣಿಗಳಲ್ಲೂ ವಾಸಿಸುವ ಭಗವಂತನಿಗೆ ಪ್ರೀತಿಯ ಸೇವೆಯ ಅರ್ಪಣೆಯಾಗುತ್ತದೆ. ನಿಜವಾದ ಪ್ರೀತಿಯ ಮನಸ್ಸಿನ ವ್ಯಕ್ತಿಯು ಪ್ರಾಣಿಗಳಿಗೆ ಎಂದಿಗೂ.
ಹಾನಿ ಮಾಡುವುದಿಲ್ಲ. ವಾಸ್ತವವಾಗಿ, ಗಾಥಾಗಳಲ್ಲಿ, ‘ವೊಹು ಮನೋ’ (ಪ್ರೀತಿಯ ಮನಸ್ಸು) ವನ್ನು ಪ್ರಾಣಿ ಸಾಮ್ರಾಜ್ಯದ ರಕ್ಷಕ ಎಂದು ಚಿತ್ರಿಸಲಾಗಿದೆ.
ಉಳಿದ ಮೂರು ಅಮೆಶಾ-ಸ್ಪೆಂಟಾವನ್ನು ಆಶಾ ಅಥವಾ ಸದಾಚಾರದ ಮೂಲಕ ಒಬ್ಬರಿಗೆ ಬರುವ ಉಡುಗೊರೆಗಳು ಎಂದು ವಿವರಿಸಲಾಗಿದೆ. ಸ್ಪೆಂಟೊ ಅರ್ಮೈಟಿಯನ್ನು ಮಜ್ದಾ ಅವರ ಮಗಳು ಎಂದು ವರ್ಣಿಸಲಾಗಿದೆ. ಅವಳು ಬುದ್ಧಿವಂತಿಕೆಯನ್ನು ಸೂಚಿಸುತ್ತಾಳೆ. ಬುದ್ಧಿವಂತಿಕೆಯಿಂದ ಶಾಂತಿ ಅಥವಾ ನೆಮ್ಮದಿಯು ಬರುತ್ತದೆ. ಏಕೆಂದರೆ ಬುದ್ಧಿವಂತಿಕೆಯ ಮೂಲಕ ನಾವು ಸೃಷ್ಟಿಯ ಏಕತೆಯನ್ನು ಅರಿತುಕೊಳ್ಳುತ್ತೇವೆ ಮತ್ತು ತಾತ್ಕಾಲಿಕ ದುಃಖಗಳು ಮತ್ತು ಆನಂದ ಮತ್ತು ಜೀವನದ ಏರಿಳಿತಗಳಿಂದ ಪ್ರಭಾವಿತವಾಗುವುದಿಲ್ಲ.
ನಂತರ, ಆರನೆಯದು, ನಮ್ಮಲ್ಲಿ ಖುರ್ದಾದ್-ಹೌರ್ವತತ್ (Khurdad-Haurvatat) ಇದೆ, ಇದರರ್ಥ ರಕ್ಷಣೆಯ ಮಾಧುರ್ಯ, ಮತ್ತು ಕೊನೆಯದಾಗಿ ಅಮೆರೆಟಾಟ್ (Ameretat), ದೇವರೊಂದಿಗಿನ ಅಮರತ್ವ ಮತ್ತು ಅನುಗ್ರಹದ, ಅಂತಿಮ ಉಡುಗೊರೆ.
ಸತ್ಯ, ಧರ್ಮ, ಶಾಂತಿ ಮತ್ತು ಪ್ರೇಮ ಎಲ್ಲ ಧರ್ಮಗಳ ಮೂಲತತ್ವಗಳು. ಮತ್ತು ಇವುಗಳಲ್ಲಿ ಒಂದನ್ನು ನಾವು ಆಚರಣೆಗೆ ತರಲು ಪ್ರಾರಂಭಿಸಿದಾಗ, ಉಳಿದ ಮೂರು ತತ್ವಗಳು ಸ್ವಯಂಚಾಲಿತವಾಗಿ ನಮ್ಮ ಬಳಿಗೆ ಬರುತ್ತವೆ.