ಜಯದೇವನ ಕಥೆ
ಒಂದಾನೊಂದು ಕಾಲದಲ್ಲಿ ಕೃಷ್ಣಾವರ್ತ ಎಂಬ ಪ್ರದೇಶದಲ್ಲಿ ಜಯದೇವ ಎಂಬ ಒಬ್ಬ ಹುಡುಗನಿದ್ದನು. ಅವನು ಅನಾರೋಗ್ಯದಿಂದ ಬಳಲುತ್ತಿದ್ದು, ಬಹಳ ದುರ್ಬಲನಾಗಿದ್ದನು. ಅವನ ತಂದೆಗೆ ಅವನು ಒಬ್ಬನೇ ಮಗನಾಗಿದ್ದು ಅವನ ಆರೋಗ್ಯ ಸುಧಾರಿಸಲು ಅವರು ಎಷ್ಟೇ ಪ್ರಯಾಸಪಟ್ಟರು ಅದು ಕೈಗೂಡಲಿಲ್ಲ.
ಅನಾರೋಗ್ಯದ ಕಾರಣದಿಂದ ಅವನಿಗೆ ತನ್ನ ಓದಿನಲ್ಲಿ ಹಾಗೂ ಇತರೆ ಚಟುವಟಿಕೆಯಲ್ಲಿ ಮುಂದುವರೆಯಲು ಆಗಲಿಲ್ಲ. ಜಯದೇವನಿಗೆ ಈಗ ಹತ್ತು ವರ್ಷ ವಯಸ್ಸು. ಅವನು ಶಾಲೆಗೆ ಸೇರಿದ್ದರೂ ಅನಾರೋಗ್ಯ ಹಾಗೂ ಇತರೆ ಕಾರಣದಿಂದ ಶಾಲೆಗೆ ಗೈರು ಹಾಜರಾಗುತ್ತಿದ್ದ.
ಒಂದು ಗುರುಪೂರ್ಣಿಮೆಯ ದಿನ ಜಯದೇವನು ನದಿಗೆ ಸ್ನಾನಕ್ಕಾಗಿ ಹೊರಟನು. ಅಲ್ಲಿ ನದಿ ದಂಡೆಯ ಮೇಲೆ ಒಬ್ಬ ಸಾಧುವನ್ನು ಕಂಡನು. ಅವನು ಓಂಕಾರವನ್ನು ಜೋರಾಗಿ ಉಚ್ಚರಿಸುತ್ತಿದ್ದನು. ಜಯದೇವನು ಸಾಧುವನ್ನು ಕಂಡು ಅವನ ಬಳಿಯಲ್ಲಿ ಹೋದನು.
ಜಯದೇವನು ಸಾಧುವನ್ನು ಕುರಿತು ನೀವು ಏನನ್ನು ಹೇಳುತ್ತಿದ್ದೀರಿ ಮತ್ತು ಅದರಿಂದ ಆಗುವ ಲಾಭವಾದರೂ ಏನು ಎಂದು ಕೇಳಿದನು. ಅದಕ್ಕೆ ಸಾಧುವು ಇದು ಮಂತ್ರಗಳ ರಾಜ “ಓಂಕಾರ” ಎಂದು ಹೇಳಿದನು. ಇದನ್ನು ಹೇಳುವುದರಿಂದ ಅನೇಕ ಲಾಭವೂ ಇದೆ ಎಂದು ಹೇಳಿದನು. ಜಯದೇವನು ಓಂಕಾರವನ್ನು ಸರಿಯಾಗಿ ಪಠಿಸುವ ವಿಧಾನವನ್ನು ಕಲಿತು ನಿತ್ಯವೂ ಅದನ್ನು ಪಠಿಸುತ್ತಿದ್ದನು. ಇದರ ಪರಿಣಾಮವಾಗಿ ಅವನ ಆರೋಗ್ಯ ಸುಧಾರಿಸಿ ದೇಹದಲ್ಲಿ ಉಸಿರಾಟ ಮತ್ತು ರಕ್ತಸಂಚಾರ ಚೆನ್ನಾಗಿ ಆಗತೊಡಗಿತು. ಜಯದೇವನು ಮನಸ್ಸಿಗೆ ಸ್ಥಿರತೆಯನ್ನು ನೀಡಿತು. ಶೀಘ್ರದಲ್ಲಿ ಅವನಿಗೆ ತನ್ನ ಓದಿನಲ್ಲಿ ಹಾಗೂ ಕ್ರೀಡೆಯಲ್ಲಿ ಗಮನ ಹರಿಸಲು ಶಕ್ಯವಾಯಿತು. ಅವನು ಆರೋಗ್ಯವಂತ ಮತ್ತು ಬುದ್ಧಿವಂತ ಹುಡುಗನಾಗಿ ಬೆಳೆದನು. ಈಗ ಆತ ತನ್ನ ಶಿಕ್ಷಣವನ್ನು ಮುಗಿಸಿರುವ ಒಬ್ಬ ಯುವಕ, ಆದರೂ ಈಗಲೂ ಅವನು ಓಂಕಾರವನ್ನು ಪಠಿಸುತ್ತಿದ್ದಾನೆ. ಅವನ ಜೀವನದಲ್ಲಿ ಆನಂದ ಮತ್ತು ಯಶಸ್ಸು ತುಂಬಿದೆ.
[Illustrations: Priyadarshnee, Sri Sathya Sai Balvikas Student]
[ಮೂಲ -ಶ್ರೀ ಸತ್ಯಸಾಯಿ ಬಾಲವಿಕಾಸ ಗುರುಗಳ ಕೈಪಿಡಿ ಗ್ರೂಪ್ 1 ]