ಆಕಾಶ -2
ಗುರು: ಪ್ರಿಯವಿದ್ಯಾರ್ಥಿಗಳೇ, ಇಂದು ನಾವು ಪಂಚಭೂತಗಳ ಬಗ್ಗೆ ಮಾತನಾಡೋಣ. ನಿಸರ್ಗದಲ್ಲಿರುವ ಪಂಚ ಭೂತಗಳೆಂದರೆ, ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ. ಈ ಪಂಚ ಭೂತಗಳು ದೇವರ ಸೃಷ್ಟಿ. (ಗುರು, ಮೂರು ಪಂಚ ಭೂತಗಳ ನಮೂನೆಯನ್ನು ಮಕ್ಕಳಿಗೆ ತೋರಿಸುತ್ತಾರೆ. ಭೂಮಿ: ಮಣ್ಣಿನ ಉಂಡೆ; ಜಲ: ಒಂದು ಲೋಟದಲ್ಲಿ ಶುದ್ಧ ನೀರು; ಅಗ್ನಿ: ಉರಿಯುತ್ತಿರುವ ಮೊಂಬತ್ತಿ) ಗುರು: ಪ್ರಿಯವಿದ್ಯಾರ್ಥಿಗಳೇ, ಇಂದು ನಾವು ಪಂಚಭೂತಗಳ ಬಗ್ಗೆ ಮಾತನಾಡೋಣ. ನಿಸರ್ಗದಲ್ಲಿರುವ ಪಂಚ ಭೂತಗಳೆಂದರೆ, ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ. ಈ ಪಂಚ ಭೂತಗಳು ದೇವರ ಸೃಷ್ಟಿ. (ಗುರು, ಮೂರು ಪಂಚ ಭೂತಗಳ ನಮೂನೆಯನ್ನು ಮಕ್ಕಳಿಗೆ ತೋರಿಸುತ್ತಾರೆ. ಭೂಮಿ: ಮಣ್ಣಿನ ಉಂಡೆ; ಜಲ: ಒಂದು ಲೋಟದಲ್ಲಿ ಶುದ್ಧ ನೀರು; ಅಗ್ನಿ: ಉರಿಯುತ್ತಿರುವ ಮೊಂಬತ್ತಿ)
ಗುರು
ನಾನು ನಿಮಗೆ ಪಂಚಭೂತಗಳಲ್ಲಿ ಮೂರನ್ನು ತೋರಿಸಿದ್ದೇನೆ. ಆದರೆ, ಇನ್ನೆರಡನ್ನು ತೋರಿಸಲು ಸಾಧ್ಯವಿಲ್ಲ. ಅವುಗಳನ್ನು ನಮ್ಮ ಈ ಕಣ್ಣುಗಳಿಂದ ನೋಡಲಾಗುವುದಿಲ್ಲ. ಆದರೆ ನೀವು ನಿರಾಶರಾಗಬೇಡಿ. ಅವುಗಳ ಬಗ್ಗೆಯೂ ಸಹ ನಾನು ನಿಮಗೆ ತಿಳಿಸುತ್ತೇನೆ.
ಈಗ ನಾವು ವಾಯುವಿನ ಬಗ್ಗೆ ಮಾತನಾಡೋಣ. ನಾವು ಶುದ್ಧ ಗಾಳಿಯನ್ನು ನಮ್ಮ ಉಸಿರಾಟದ ಮೂಲಕ ದೇಹದ ಒಳಕ್ಕೆ ತೆಗೆದುಕೊಳ್ಳದೆ (ಉಛ್ವಾಸ), ಹಾಗೂ ಮಲಿನಗಾಳಿಯನ್ನು ಹೊರಬಿಡದೆ (ನಿಶ್ವಾಸ) ಬದುಕುಳಿಯಲಾರೆವು. (ಉಛ್ವಾಸ ಮತ್ತು ನಿಶ್ವಾಸಗಳನ್ನು ಪ್ರದರ್ಶಿಸಿ ಮಕ್ಕಳಿಗೂ ಅಭ್ಯಾಸ ಮಾಡುವಂತೆ ಹೇಳುತ್ತಾರೆ). ನಿಶ್ವಾಸದ ಸಮಯದಲ್ಲಿ ಗಾಳಿಯು ಹೊರಬರಬೇಕಾದರೆ, ಅದು ನಿಮಗೆ ಕಾಣಿಸುವುದಿಲ್ಲ. ಆದರೆ, ಅದರ ಇರುವಿಕೆಯನ್ನು ಸ್ಪರ್ಶದ ಸಂವೇದನೆಯ ಮೂಲಕ ತಿಳಿಯುತ್ತೇವೆ. ನೀವು ತರಗತಿಯಿಂದ ಹೊರಗೆ ಹೋದಾಗ, ನಿಮ್ಮ ಮುಖ ಮತ್ತು ಕೈ ಮೇಲಿನ ಚರ್ಮ, ಇತ್ಯಾದಿಗಳ ಮೇಲೆ ಗಾಳಿಯ ಸ್ಪರ್ಶವನ್ನು ಅನುಭವಿಸುತ್ತೀರಿ.
ಈಗ ನಾವು ಆಕಾಶದ ಬಗ್ಗೆ ತಿಳಿದುಕೊಳ್ಳೋಣ. ಇದು ಪಂಚಭೂತಗಳಲ್ಲೇ ಅತ್ಯಂತ ಸೂಕ್ಷ್ಮವಾದುದು. ಎಲ್ಲಕ್ಕಿಂತ ಮೊದಲು ದೇವರು ಇದನ್ನು ಸೃಷ್ಟಿಮಾಡಿದ್ದಾರೆ. ಇದರ ಒಂದೇ ಒಂದು ಲಕ್ಷಣ “ಶಬ್ದ”. ಇದರ ಸೃಷ್ಟಿಯಲ್ಲಿ ಮೊಟ್ಟಮೊದಲ ಬಾರಿಗೆ ಹೊರಹೊಮ್ಮಿದ ಶಬ್ದವೇ “ಓಂ” . “ಓಂ”ನ್ನು ದೇವರ ಧ್ವನಿಯೆಂದು ಕರೆಯಲಾಗಿದೆ. ‘ಓಂ’ನಿಂದ ಇನ್ನಿತರ ಶಬ್ದಗಳ ಸೃಷ್ಟಿಯಾಗಿದೆ. ಪಂಚಭೂತಗಳಲ್ಲಿ ಒಂದಾದ ಆಕಾಶದಿಂದ ಇನ್ನಿತರ ಪಂಚಭೂತಗಳಾದ ವಾಯು, ಅಗ್ನಿ, ಜಲ ಮತ್ತು ಭೂಮಿಯನ್ನು ಕ್ರಮವಾಗಿ ಒಂದರನಂತರ ಒಂದರಂತೆ ಸೃಷ್ಟಿಸಲಾಗಿದೆ. ನಾನು ‘ರಾಮ’ ಎಂಬ ಶಬ್ದವನ್ನು ಜೋರಾಗಿ ಉಚ್ಚರಿಸಿದೆ ಎಂದಿಟ್ಟುಕೊಳ್ಳಿ. (ಗುರುವು ಸ್ವತಃ ಆ ಪದವನ್ನು ಹೇಳಿ ವಿರಾಮ ತೆಗೆದು ಕೊಳ್ಳುತ್ತಾರೆ). ನೀವು ಈಗಲೂ ನಾನು ಉಚ್ಚರಿಸಿದ್ದನ್ನು ಕೇಳುತ್ತಿರುವಿರಾ? ಇಲ್ಲ; ಈ ’ರಾಮ’ ಎನ್ನುವ ಶಬ್ದ ಎಲ್ಲಿ ಹೋಯಿತು? “ಇದು ಸ್ಥಳಾವಕಾಶವಿದ್ದ ಎಲ್ಲ ಕಡೆ ಹರಡಿದೆ. ಆಕಾಶ ಎಲ್ಲಕಡೆಯೂ ಇರುವುದರಿಂದ, ಶಬ್ದವನ್ನು ಆಕಾಶ ಗ್ರಹಿಸಿಕೊಳ್ಳುತ್ತದೆ. ‘ಓಂ’ ಎಂಬ ದೈವೀ ಶಬ್ದವನ್ನು ಯಾವಾಗ ಶ್ರದ್ಧೆಯಿಂದ ಪಠಣ ಮಾಡಿದರೂ ದೇವರು ಪ್ರಸನ್ನನಾಗುತ್ತಾನೆ. ಮತ್ತು ಒಳ್ಳೆಯ ದೈಹಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ನೀಡುತ್ತಾನೆ.
ಪ್ರಾರ್ಥನೆ
ಓಂಕಾರಂ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ |
ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ ||
ನಿಜವಾದ ಭಕ್ತನು ಉಚ್ಚರಿಸಿದ ದೇವರನಾಮವು ‘ಆಕಾಶ’ದಲ್ಲಿ ಸದಾ ಕಂಪನವನ್ನು ಉಂಟು ಮಾಡುತ್ತದೆ.
ಕಥೆ
ನಾನು ನಿಮಗೆ ಪಂಚಭೂತಗಳಲ್ಲೊಂದಾದ ಆಕಾಶದ ರಹಸ್ಯವನ್ನು ಕಥೆಯ ಮೂಲಕ ತಿಳಿಸುತ್ತೇನೆ.
ಜನಾಬಾಯಿಯ ಕಥೆ
ಸರಳ ವ್ಯಕ್ತಿತ್ವ ಮತ್ತು ಮೃದು ಹೃದಯದ ಜನಾಬಾಯಿ, ಪ್ರಭು ಪಾಂಡುರಂಗನ ಭಕ್ತೆಯಾಗಿದ್ದಳು. ಅವಳು ಯಾವಾಗಲೂ ಮತ್ತು ಮನೆ ಕೆಲಸಗಳನ್ನು ಮಾಡುವಾಗಲೂ ಸಹ ಭಕ್ತಿಯಿಂದ, “ರಂಗ! ರಂಗ! ಪಾಂಡುರಂಗ!”ಎಂದು ನಾಮಸ್ಮರಣೆ ಮಾಡುತ್ತಿರುತ್ತಿದ್ದಳು. ಒಂದು ದಿನ ಜನಾಬಾಯಿ, ತಾನು ಸಗಣಿಯಿಂದ ತಯಾರಿಸಿದ ಬೆರಣಿಗಳನ್ನು ಯಾರೋ ಕದ್ದಿರುವರೆಂದು ಸಂತ ನಾಮದೇವರಲ್ಲಿ ದೂರು ನೀಡಿದಳು. ನಾಮದೇವರು, ಜನಾಬಾಯಿಗೆ, “ನೀನು ತಯಾರಿಸಿದ ಬೆರಣಿಗಳನ್ನು ಹೇಗೆ ಗುರುತಿಸುವೆ?” ಎಂದು ಕೇಳಿದರು. “ನಾನು ಯಾವಾಗಲೂ ಭಗವಂತನ ನಾಮವನ್ನು ಉಚ್ಚರಿಸುತ್ತೇನೆ. ನಾನು ತಯಾರಿಸಿದ ಬೆರಣಿಗಳು ಆ ನಾಮವನ್ನು ಹೊಂದಿರುತ್ತವೆ” ಎಂದು ಜನಾಬಾಯಿ ಉತ್ತರಿಸಿದಳು. ಅವಳು ಮನೆಗೆ ಓಡಿಹೋಗಿ, ತಾನು ತಯಾರಿಸಿದ ಒಂದು ಬೆರಣಿಯನ್ನು ತಂದಳು. ಆ ಬೆರಣಿಯನ್ನು ಅವಳು ನಾಮದೇವನ ಕಿವಿಯ ಹತ್ತಿರ ಹಿಡಿದಳು. ಆ ಬೆರಣಿಯಿಂದ ಪ್ರಭುವಿನ ನಾಮವಾದ, “ರಂಗ! ರಂಗ! ಪಾಂಡುರಂಗ!” ಕೇಳಿಸಿತು. ನಿರಂತರವಾಗಿ ಈ ನಾಮವು ಆ ಬೆರಣಿಯಿಂದ ಬರುತ್ತಿರುವುದನ್ನು ನಾಮದೇವರು ಕೇಳಿಸಿಕೊಂಡರು. ನಾಮದೇವರಿಗೆ, “ಇದುನಿಜವೇ!” ಎಂದು ಇನ್ನೂ ಆಶ್ಚರ್ಯವಾಯಿತು; ಅವರಿಗೊಂದು ಅನುಮಾನವಿತ್ತು. ಸಗಣಿಯಿಂದ ಇನ್ನೊಂದು ಬೆರಣಿಯನ್ನು ಮಾಡುವಂತೆ ಅವರು ಜನಾಬಾಯಿಗೆ ಹೇಳಿದರು. ಅವಳು ಸ್ವಲ್ಪ ಸಗಣಿಯನ್ನು ತಂದು, ‘ರಂಗ!ರಂಗ! ಪಾಂಡುರಂಗ!’ ಎಂದು ಪಠಿಸುತ್ತ ಬೆರಣಿಯನ್ನು ತಯಾರಿಸಿದಳು. ನಾಮದೇವರು ಅದನ್ನು ತಮ್ಮ ಕಿವಿಯ ಹತ್ತಿರ ಹಿಡಿದುಕೊಂಡರು. ಪುನಃ ಅವರಿಗೆ ಬೆರಣಿಯಿಂದ ಹೊರಹೊಮ್ಮುತ್ತಿರುವ ಭಗವಂತನ ನಾಮ ಕೇಳಿಸಿತು. ‘ಭಗವಂತನ ನಾಮದಲ್ಲಿರುವ ಶಕ್ತಿ ಬೇರೆಲ್ಲ ಎಣಿಕೆಗಳನ್ನು ಮೀರಿದ್ದು, ಸರ್ವ ವ್ಯಾಪಿಯಾದ ಆಕಾಶದಲ್ಲಿ, ಮಾನವನ ಆಲೋಚನೆಗಳು ಮತ್ತು ಮಾತುಗಳು ಶಾಶ್ವತವಾಗಿ ಉಳಿದು, ಮಾನವನ ಅಸ್ತಿತ್ವವನ್ನೂ ಉಳಿಸುತ್ತವೆ’ ಎಂದು ಅವರು ಅರಿತುಕೊಂಡರು.
ಹಾಡು
ಪ್ರಿಯ ವಿದ್ಯಾರ್ಥಿಗಳೇ, ಈಗ ಆಕಾಶದ ಬಗ್ಗೆ ಒಂದು ಹಾಡನ್ನು ಹಾಡೋಣ. (ಗುರು, ಹಾಡನ್ನು ಕಪ್ಪು ಹಲಗೆಯಮೇಲೆ ಬರೆಯತ್ತಾರೆ ಮತ್ತು ಆ ಹಾಡನ್ನು ಹಾಡುತ್ತಾರೆ, ಮಕ್ಕಳು ಅನಸರಿಸುತ್ತಾರೆ.)
ಓಂ,.. ಓಂ,.. ಓಂ,..
ಆಕಾಶವೆಂಬ ಪಂಚಭೂತದ ಆಧಾರಸ್ತಂಭ
ಓಂ,.. ಓಂ,.. ಓಂ……
ಆಕಾಶದ ಬಗ್ಗೆ ಪಠಿಸೋಣ
ಆಕಾಶ, ಆಕಾಶ, ಆಕಾಶ,.. (1)
ಶಬ್ದಗಳನು, ಆಲೋಚನೆಗಳನು ಹೀರಿಕೊಳ್ಳುವ,
ಎಲ್ಲ ಮೂಲವಸ್ತುಗಳನ್ನು ಒಂದಾಗಿ ಬಂಧಿಸುವ,
ಆಕಾಶ, ಆಕಾಶ, ಆಕಾಶ … (2)
ಒಳ್ಳೆಯ ಆಲೋಚನೆಗಳಿರಲಿ,
ಒಳ್ಳೆಯ ಆಲೋಚನೆಗಳಿರಲಿ,
ಒಳ್ಳೆಯದನ್ನೇ ಆಲಿಸುವಂತಾಗಲಿ,
ಒಳ್ಳೆಯ ಮಾತುಗಳೇ ನಾಲಗೆಯ ಮೇಲಿರಲಿ,
ವಾತಾವರಣವು ಸದಾ ಶುದ್ಧವಾಗಿರಲಿ,
ಅಧೈರ್ಯ ಹತ್ತಿರಕೆ ಸುಳಿಯದಿರಲಿ,
ಆಕಾಶ, ಆಕಾಶ, ಆಕಾಶ … (3)
ಅಪರಿಮಿತ ಪ್ರಕಾಶದ ಮೂಲ,
ಆನಂದಹರ್ಷೋಲ್ಲಾಸಗಳ ಆಗರ,
ಆಕಾಶ, ಆಕಾಶ, ಆಕಾಶ … (4)
ಆಕಾಶ ನಮಗೆ, ದೈವವಿತ್ತಿಹ ಕೊಡುಗೆ,
ಜೀವನವು ಉಜ್ವಲವದಾಗಬೇಕೇ ಎಮಗೆ?
ಹೊರಬೇಕು ನಾವದರ ಶುದ್ಧತೆಯ ಹೊಣೆಯ,
ಆಕಾಶ, ಆಕಾಶ, ಆಕಾಶ,.. (5)
ಚಟುವಟಿಕೆ
(ಪ್ರಕೃತಿ ಚಿತ್ರ)- ಚಿತ್ರವನ್ನು ಬರೆಯುವುದು ಮತ್ತು ಬಣ್ಣ ತುಂಬುವುದು
- ಆಕಾಶ, ಮೋಡಗಳು, ಮಳೆಬಿಲ್ಲು, ಪಕ್ಷಿಗಳು, ಇತ್ಯಾದಿ;
- ಕಪ್ಪು ಆಕಾಶ, ನಕ್ಷತ್ರಗಳು, ಚಂದ್ರ
ಮೌನಾಸನ
ನೇರವಾಗಿ ಸುಖಾಸನದಲ್ಲಿ ಕುಳಿತು ಕಣ್ಣು ಮುಚ್ಚಿಕೊಳ್ಳಿರಿ. ಒಂದು ಚಿತ್ರದ ಬಗ್ಗೆ ಚಿಂತಿಸಿ. ನಿಸರ್ಗದಿಂದ ಉಲ್ಲಾಸವನ್ನು ಹೀರಿಕೊಳ್ಳಿ. “ಸೌಂದರ್ಯಯುತವಾದ ವಸ್ತುವು, ಸದಾ, ಸರ್ವದಾ ಆನಂದಮಯ.