ಜೋರಾಷ್ಟ್ರ ಧರ್ಮ (ಪಾರಸಿ)– ಪ್ರಮುಖ ಬೋಧನೆಗಳು
- ದೇವರು ಸರ್ವ ವ್ಯಾಪಿ ಎಂಬುದರಲ್ಲಿ ನಂಬಿಕೆ.
- ಅಹುರ (ಮಜ್ದ) ಅತ್ಯುನ್ನತ ಸರ್ವಜ್ಞ ಹಾಗೂ ಸರ್ವಶಕ್ತ ದೇವರು ಸೃಷ್ಟಿಕರ್ತನೂ ಇವನೇ, ಲಯಕಾರಕನೂ ಇವನೇ.
- ದೇವರು ಮನುಷ್ಯನ ಹೃದಯದಲ್ಲಿ ಸತ್ಯ ಹಾಗೂ ಸದಾಚಾರನಾಗಿ ನೆಲೆಸಿರುತ್ತಾನೆ.
- ಉಭಯ ಅಸ್ತಿತ್ವದ ಮೇಲೆ ನಂಬಿಕೆ. (ಎಲ್ಲಾ ನಂಬಿಕೆಗಳನ್ನು ಗೌರವಿಸುವುದು.)
- ಪ್ರಪಂಚವು ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಎರಡು ವಿಚಾರಗಳ ಮೇಲೆ ನಿಂತಿದೆ.
- ದೇವರು ವಿಶ್ವದಲ್ಲಿರುವ ದುಷ್ಟಶಕ್ತಿಗಳ ನಿಗ್ರಹಕ್ಕೆ ಹೋರಾಡುತ್ತಾರೆ.
- ಪಾರಸಿ ಧರ್ಮದ ಮುಖ್ಯ ತತ್ವ ಏನೆಂದರೆ, ಹ್ರಮಾತಾ, ಹುಖ್ತಾ ಹಾಗೂ ಹ್ವಷ್ತ್ರಾ
- ಒಳ್ಳೆಯ ಮಾತು, ಒಳ್ಳೆಯ ಆಲೋಚನೆ ಹಾಗೂ ಒಳ್ಳೆಯ ಕೆಲಸ.’
- ಪಾವಿತ್ರ್ಯತೆಯ ಮೇಲೆ ನಂಬಿಕೆ
- ಬೆಂಕಿ, ನೀರು, ಭೂಮಿ, ಗಾಳಿ ಇವುಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ದುಷ್ಟಶಕ್ತಿಗಳು ಇವುಗಳನ್ನು ಹಾಳುಮಾಡದಂತೆ ನೋಡಿಕೊಳ್ಳಬೇಕು ಮತ್ತು ನಾವು ಸದಾಚಾರದ ಬದುಕನ್ನು ಮುನ್ನಡೆಸಬೇಕು.