ರಾಧೆಯ ಭಕ್ತಿಯ ಬಗ್ಗೆ ಸ್ವಾಮಿ ಹೇಳಿರುವುದು ರಾಧಾ ಎಂದರೆ ಭಗವಂತನಿಗೆ ಶರಣಾದವರು; ಇದು ಸ್ತ್ರೀ / ಮಹಿಳೆ ಎನ್ನುವುದನ್ನು ಸೂಚಿಸುವುದಿಲ್ಲ
ಭಗವನರು ಹೇಳುತ್ತಾರೆ, “ಯಾವಾಗ ನೀನು ನಿನ್ನ ಕಾರ್ಯ ಮತ್ತು ವಿಚಾರಗಳನ್ನು ಕೃಷ್ಣನಿಗೆ ಸಮರ್ಪಣೆ ಮಾಡುವೆಯೋ ಅಂದೇ ನೀನು ರಾಧೆಯ ಮಟ್ಟಕ್ಕೆ ಏರುವೆ. ಆದ್ದರಿಂದ ‘ರಾಧಾ’ ಎನ್ನುವ ಪದ ಸ್ತ್ರೀಗೆ ಮಾತ್ರ ಅನ್ವಯಿಸುವುದಿಲ್ಲ. ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ ಯಾರು ಕೃಷ್ಣನಿಗೆ ತನ್ನನ್ನು ತಾನು ಸಮರ್ಪಿಸಿಕೊಳುವರೋ ಅವರೇ ರಾಧಾ ಆಗುವರು.”
ರಾಧಾ ಭೋದಿಸುವುದೇನೆಂದರೆ ನೀವು ಜ್ಞಾನ ಮತ್ತು ಬುದ್ಧಿ ಮಾತ್ರ ತುಂಬಿಸಿಕೊಳ್ಳದೆ ಹೃದಯದಲ್ಲಿ ಪ್ರೇಮವನ್ನು ತುಂಬಿಕೊಳ್ಳಿ. ಜ್ಞಾನ ತುಂಬಿಕೊಳ್ಳುವುದುಕ್ಕಿಂತ ಹೃದಯದಲ್ಲಿ ಪ್ರೇಮ ತುಂಬಿಕೊಳ್ಳುವುದು ಉತ್ತಮ. ಜಗತ್ತಿನ ಸತ್ಯವಾಗಿರುವ ವೈವಿಧ್ಯತೆಯಲ್ಲಿ ದೈವವನ್ನು ಕಾಣಿರಿ ಎಂದು ರಾಧಾ ನಮಗೆ ತಿಳಿಸುತ್ತಾಳೆ. ಅಲ್ಲದೇ ಕೃಷ್ಣನಿಗೆ ನಿಮ್ಮ ಜ್ಞಾನೇಂದ್ರಿಯಗಳನ್ನು ಸಮರ್ಪಿಸಿ, ಇಲ್ಲವಾದರೆ ಅವು ನಿಮ್ಮನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತವೆ.
ರಾಧಾ ಹೇಳುವುದೇನೆಂದರೆ ಕ್ಷಣಿಕ ಮತ್ತು ಶಾಶ್ವತವಲ್ಲದ ಪ್ರಪಂಚವನ್ನು ನಾವು ನಂಬಬಾರದು. ನಾವು ನಮ್ಮ ಗಮನವನ್ನು ಭಗವಂತನ ಶಾಶ್ವತ ಅಂಶಗಳ ಮೇಲೆ ಕೇಂದ್ರಿಕರಿಸಬೇಕು. ಅವಳು ನಮಗೆ ಹೇಳುವುದೇನೆಂದರೆ ಪ್ರಪಂಚವನ್ನು ನಂಬಬೇಡಿ, ಸಾವಿಗೆ ಹೆದರಬೇಡಿ ಮತ್ತು ಭಗವಂತನನ್ನು ಮರೆಯಬೇಡಿ. ರಾಧೆ ನಮಗೆ ಈ ಮೂರು ಅಂಶಗಳನ್ನು ತಿಳಿಸಿಕೊಟ್ಟಿದ್ದಾಳೆ.
ನಾವು ಯಾವಾಗಲೂ ಮತ್ತು ಎಲ್ಲ ಗುಣಗಳಲ್ಲೂ, ಭಗವಂತನ ಆನಂದವನ್ನು ಅನುಭವಿಸಬೇಕೆಂದು ರಾಧಾ ಹೇಳುತ್ತಾಳೆ. ನಾವು ಅಸೂಯೆಯನ್ನು ತ್ಯಜಿಸಬೇಕು, ಅದರಲ್ಲೂ ಇನ್ನೊಬ್ಬರ ಏಳಿಗೆಯನ್ನು ಕಂಡು ಎಂದು ರಾಧಾ ಉಪದೇಶಿಸುತ್ತಾಳೆ. ಗೋಪಿಕೆಯರ ಅನುಮಾನಗಳನ್ನು ಪರಿಹರಿಸಿ, ಅವರು ಅಸೂಯೆಯನ್ನು ತ್ಯಜಿಸುವಂತೆ ರಾಧಾ ಮಾಡಿದಳು.
[Source: http://sssbpt.info/summershowers/ss1978/ss1978-23.pdf]