ಭಾಗ – 2
ಸತ್ಯ ಕವಿಯಾಗಿ ಉತ್ತಮ ಪ್ರತಿಭೆಯನ್ನು ಹೊಂದಿದ್ದನು, ಮತ್ತು ಅಂಗಡಿಯವರು ಅವನ ಈ ಪ್ರತಿಭೆಯನ್ನು ತಮ್ಮ ಸರಕನ್ನು ಜಾಹೀರಾತು ಮಾಡಲು ಬಳಸಿ ಕೊಂಡರು. ಈ ಕವನಗಳು ತುಂಬಾ ಆಕಷಕವಾಗಿದ್ದು, ಮಕ್ಕಳು ಉತ್ಸಾಹದಿಂದ ಹಾಡಿದ್ದ ಕಾರಣ ಮಾರಾಟವು ಚೆನ್ನಾಗಿ ಆಯಿತು ಮತ್ತು ಸತ್ಯನ ಕವಿತೆಗಳಿಗೆ ಹೆಚ್ಚಿನ ಬೇಡಿಕೆ ಶುರು ಆಯಿತು. ಸತ್ಯನ ಕವನಗಳು ಸಮಾಜದಲ್ಲಿ ಪರಿವರ್ತನೆ ತರಲು ಸಂಯೋಜಿಸಲ್ಪಟ್ಟವು. ಉದಾಹರಣೆಗೆ, ಗ್ರಾಮದ ಅಕೌಂಟೆಂಟ್ ಆಗಿದ್ದ ಕರಣಂ ಅವರು ಅಕ್ರಮವಾಗಿ ಸಂಗ್ರಹಿಸಿದ್ದ ಸಂಪತ್ತು ಮತ್ತು ಹಲವಾರು ಅನೈತಿಕ ಮತ್ತು ಅನಪೇಕ್ಷಿತ ಅಭ್ಯಾಸಗಳ ಬಗ್ಗೆ ಅವರು ಹಾಡಿ ಮೆರವಣಿಗೆ ಮಾಡುತ್ತಿದ್ದರು. ಅವನ ಮೀಸೆಗೆ ‘ಹಿಟ್ಲೇರಿಯನ್ ಮೀಸೆ’ ಎಂದು ಕರೆಯುತ್ತಿದ್ದರು ಅವನು ದುಬಾರಿ ಸಿಲ್ಕೆನ್ ಧರಿಸುತ್ತಿದ್ದನು. ಸಾಂಪ್ರದಾಯಿಕ ಶೈಲಿಯ ಉಡುಪನ್ನು ಬಿಟ್ಟು, ಅವನು ತನ್ನ ಚಿನ್ನದ ಕೈಗಡಿಯಾರವನ್ನು ಮೇಲೆ ಹೊಳೆಯುವ ಪಟ್ಟಿಯೊಂದಿಗೆ ವೀಕ್ಷಿಸಿ ಹೆಮ್ಮೆಪಡುತ್ತಿದ್ದನು.
ಒಂದು ದಿನ ಸುಬ್ಬಮ್ಮ ಸತ್ಯನ ಬಳಿಗೆ ಬಂದು ನಗುತ್ತಾ ಹೇಳಿದಳು, “ರಾಜು, ನೀನು ಅನೇಕ ಜನರಿಗೆ ಸಲಹೆ ನೀಡಿ, ತಿದ್ದುತ್ತೀಯ. ಹಾಗೆ ನನ್ನ ಪತಿ (ಕರಣಂ) ತಪ್ಪು ಹಾದಿಯಲ್ಲಿದ್ದಾರೆ, ನೀನು ಏಕೆ ಅವನನ್ನು ತಿದ್ದಬಾರದು?”. ಪ್ರತಿದಿನ ಸಂಜೆ ಕರಣಂ ತನ್ನ ಮನೆಯ ಮುಂದೆ ತುಳಸಿ ಗಿಡದ ಬಳಿ ಕುಳಿತುಕೊಳ್ಳುತ್ತಿದ್ದನು. ಸತ್ಯನು ಒಳ್ಳೆಯ ರಾಗದಲ್ಲಿ ಒಂದು ಹಾಡನ್ನು ರಚಿಸಿ, ಅದನ್ನು ಮಕ್ಕಳಿಗೆ ಕಲಿಸಿದನು.
ಸಂಜೆ ಕರಣಂ ಮನೆಯೆದುರು ಹಾಡುತ್ತ ಹೋದ ಮಕ್ಕಳು, “ಏನಾಗಿದೆ ಈ ದಿನಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ?. ಪುರುಷರು ಕೆಲವು ರೀತಿಯ ಚರ್ಮದ ಪಟ್ಟಿಯನ್ನು ಅವರ ಎಡಗೈಗೆ ಧರಿಸುತ್ತಾರೆ ಮತ್ತು ಬಹಳ ಸೊಕ್ಕಿನವರಾಗಿದ್ದಾರೆ. ಪುರುಷರು ಮತ್ತು ಮಹಿಳೆಯರ ಉಡುಪಿನ ಬಗ್ಗೆ ಅಥವಾ ಅವರ ನೋಟವನ್ನು ಕುರಿತು ಗೌರವಯುತವಾಗಿ ಮಾತನಾಡಲು ನಮ್ಮಿಂದ ಸಾಧ್ಯವಿಲ್ಲ. ಒಂದು ವೇಳೆ ಅವರು ತಮ್ಮ ಅನೈತಿಕತೆಯನ್ನು ಬಿಟ್ಟುಕೊಡದಿದ್ದರೆ, ಅವರನ್ನು ಊರಿನ ಇತರ ಜನರಿಂದ ಹೊರಹಾಕಲಾಗುವುದು ಮತ್ತು ಅವರ ಸ್ನೇಹಿತರು ಅವರನ್ನು ತಮ್ಮ ಪಾದರಕ್ಷೆಯಿಂದ ಹೊಡೆಯುತ್ತಾರೆ” ಎಂದು ಹಾಡಿದರು. ಆ ಹಾಡಿನಲ್ಲಿ ಕೊನೆಗೆ ಹಿಟ್ಲರನ ಮೀಸೆಯ ಉಲ್ಲೇಖವು ಕರಣಂಗೆ ಕಿರಿಕಿರಿಯನ್ನುಂಟು ಮಾಡಿತು. ಆದ್ದರಿಂದ ಕೋಪಗೊಂಡು ಮನೆಯ ಒಳಗೆ ಹೋದರು. ನಂತರ, ಅವರು “ಆ ಹಾಡನ್ನು ಬರೆದವರು ಯಾರು?” ಎಂದು ಮಕ್ಕಳನ್ನು ಕೇಳಿದರು. “ರಾಜು ಇದನ್ನು ಬರೆದಿದ್ದಾನೆ”, ಎಂದು ಮಕ್ಕಳು ಹೇಳಿದರು. ಕರಣಂಗೆ ಈ ನಾಟಕದ ಹಿಂದೆ ಸತ್ಯನ ಕೈವಾಡ ಇದೆ ಎಂದು ಮಾತ್ರ ತಿಳಿದಿತ್ತು.
ಮರುದಿನ ಅವರು ಸತ್ಯನನ್ನು ಕರೆದು, “ರಾಜು, ದಯವಿಟ್ಟು ಅಂತಹ ಹಾಡುಗಳನ್ನು ಮಕ್ಕಳಿಗೆ ಕಲಿಸಬೇಡ” ಎಂದು ಹೇಳಿದರು, ಅದಕ್ಕೆ ಸತ್ಯನು “ಸರ್, ನೀವು ಈ ಹಳ್ಳಿಯ ಮುಖ್ಯಸ್ಥರು, ನೀವು ಅಂತಹ ಕೆಲಸಗಳನ್ನು ಮಾಡಬಾರದು” ಎಂದನು. ಕರಣಂ (ಈಗಾಗಲೇ ಅವರ “ಹಿಟ್ಲರ್ ಮೀಸೆ” ಬೋಳಿಸಿದ್ದರು) ಭವಿಷ್ಯದಲ್ಲಿ ಚೆನ್ನಾಗಿ ವರ್ತಿಸುತ್ತೇನೆ ಎಂದು ಭರವಸೆ ನೀಡಿದರು. ಸತ್ಯ ಕೂಡ ಮತ್ತೆ ಕರಣಂಗೆ ಈ ರೀತಿಯಾಗಿ ತೊಂದರೆ ಕೊಡುವುದಿಲ್ಲ ಎಂದು ಮಾತನ್ನು ಕೊಟ್ಟನು. ಸುಬ್ಬಮ್ಮ ತುಂಬಾ ಸಂತೋಷಪಟ್ಟರು.
ವಿಶಿಷ್ಟ ಕವಿತೆಗಳನ್ನು ಬರೆಯುವ ಸತ್ಯನ ಸಾಮರ್ಥ್ಯದ ಬಗ್ಗೆ ಮತ್ತೊಂದು ಮನರಂಜನೆಯ ಘಟನೆ ಇಲ್ಲಿದೆ. ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಆ ದಿನಗಳಲ್ಲಿ, ವಿವಿಧ ಸ್ಥಳಗಳಲ್ಲಿ ಸಭೆಗಳು ನಡೆಯುತ್ತಿದ್ದವು. ಬ್ರಿಟಿಷ್ ಪೊಲೀಸರು ಈ ಸಭೆಗಳಿಗೆ ಬಂದು ಜನರನ್ನು ಚದುರಿಸುತ್ತಿದರು. ಇಬ್ಬರು ಕಾಂಗ್ರೆಸ್ಸಿಗರು ಸತ್ಯನ ಬಳಿಗೆ ಬಂದು, “ನೀನು ಬೇಕಾದುದನ್ನು ಬರಿ, ಪ್ರಸ್ತುತ ಪರಿಸ್ಥಿತಿಯನ್ನು ನೀನು ಬಯಸಿದ ರೀತಿಯಲ್ಲಿ ವಿವರಿಸಿ ನಮಗೆ ಆ ಕವಿತೆಗಳನ್ನು ಬುಕ್ಕಪಟ್ಟಣಂನಲ್ಲಿ ನಡೆಯುವ ಸಭೆಯಲ್ಲಿ ಬಳಸಲು ಕೊಡು. ಎಂದು ಕೇಳೀಕೊಂಡರು. ”ಸತ್ಯ ಕವನಗಳನ್ನು ಬರೆದನು. ಕಾಂಗ್ರೆಸ್ಸಿಗರು ಈಗ ಕವಿತೆಗಳನ್ನು ಮಾತ್ರವಲ್ಲ, ಸತ್ಯನನ್ನೂ ಅವರೊಂದಿಗೆ ಕರೆದುಕೊಂಡು ಹೋಗಲು ಬಯಸಿದರು. ಅವರು ಸತ್ಯನಿಗೆ ಹುಡುಗಿಯಂತೆ ಸೀರೆ ತೊಡಿಸಿ, ಒಂದು ಸಣ್ಣ ತೊಟ್ಟಿಲು ಮಾಡಿದರು. ಅದರಲ್ಲಿ ಅವರು ಒಂದು ರಬ್ಬರ್ ಗೊಂಬೆ ಕೂರಿಸಿ, ಸತ್ಯ ವೇದಿಕೆಯ ಮೇಲೆ ನಿಂತು ‘ಮಗುವಿಗಾಗಿ ಲಾಲಿ ಹಾಡುವ ಒಂದು ಸನ್ನಿವೇಶ. ಅವನು ಹೀಗೆ ಹಾಡಿದನು, “ಮಗುವೇ ಅಳಬೇಡ, ನೀವು ಅಳುತ್ತಿದ್ದರೆ ಮತ್ತು ಹರ್ಷದಿಂದಿರಲು ಆಗದಂತೆ ತೋರಿದರೆ, ನಿನ್ನನ್ನು ಈ ಭಾರತದ ಯೋಗ್ಯ ಪುತ್ರ ಎಂದು ಜನ ಕರೆಯುತ್ತಾರೆಯೇ?”. ಈ ವಿಧವಾಗಿ ಆ ಗೊಂಬೆ-ಮಗುವಿಗೆ ವಿವಿಧ ಪ್ರಶ್ನೆಗಳನ್ನು ಹಾಡಿನಿಂದ ಕೇಳಲಾಯಿತು.
“ಮಗು, ನೀನು ಅಳುತ್ತಿರುವುದು ಹಿಟ್ಲರ್ ರಷ್ಯನ್ನರನ್ನು ಆಕ್ರಮಿಸಿದ್ದಾನೆ, ಪ್ರತಿಯಾಗಿ ರಷ್ಯನ್ನರು ಹಿಟ್ಲರನ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲವೇ ಅಂತಾದರೆ, ಇಲ್ಲ, ಅಳಬೇಡ. ಯಾವಾಗ ಸಮಯ ಬರುತ್ತದೋ ಆವಾಗ ಕೆಂಪು ಸೈನ್ಯವು ದಾಳಿ ಮಾಡಿ ಪ್ರತೀಕಾರ ತೀರಿಸಿಕೊಳ್ಳಲಿದೆ. ನಮ್ಮ ದೇಶದಲ್ಲಿ ಏಕತೆ ಇಲ್ಲದ ಕಾರಣ ನೀನು ಅಳುತ್ತಿದ್ದೀಯಾ? ಅಳಬೇಡ. ನಾವೆಲ್ಲರೂ ಒಗ್ಗೂಡುವ ಸಮಯ ಬರುತ್ತದೆ ಮತ್ತು ಭಾರತ ಏಕತೆಯ ಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಇದೆಲ್ಲದ್ದಕ್ಕೂ ಒಂದು ಪರಿಹಾರವಿದೆ. ಅಳಬೇಡ.”
ಅಲ್ಲಿ ಬಂದಿದ್ದ ಪೊಲೀಸರು ಈ ಹಾಡನ್ನು ಆನಂದಿಸುತ್ತಿದ್ದರು, ಅವರು ಚಪ್ಪಾಳೆ ತಟ್ಟಿ ಹಾಡುಗಳನ್ನು ಆನಂದಿಸಿದರು. ಸತ್ಯನ ಹಾಡುಗಳ ನಿರೂಪಣೆ ತುಂಬಾ ಸಿಹಿಯಾಗಿತ್ತು ಮತ್ತು ತೆಲುಗಿನ ಒಂದು ಪದವನ್ನು ಅರ್ಥಮಾಡಿಕೊಳ್ಳದಿದ್ದರೂ, ಬ್ರಿಟಿಷ್ ಅಧಿಕಾರಿಗಳು ಚಪ್ಪಾಳೆ ತಟ್ಟಲು ಪ್ರಾರಂಭಿಸಿದರು, ಬಹಳ ಆನಂದದೊಂದಿಗೆ ಸಂಗೀತವನ್ನು ಕೇಳುತ್ತಾ ಇದ್ದರು. ಸಭೆ ಅದ್ಭುತ ಯಶಸ್ಸಿನೊಂದಿಗೆ ಮುಕ್ತಾಯವಾಯ್ತು.
ಸತ್ಯ ಉರವಕೊಂಡ ಪ್ರೌಢಶಾಲೆಯಲ್ಲಿ ಇದ್ದಾಗ ಪ್ರಸಿದ್ಧ ನರ್ತಕಿ ಋಷ್ಯೇಂದ್ರಮಣಿಯಂತೆ ನರ್ತಿಸಿದ್ದು. ಅದು ಶಾಲಾ ವಾರ್ಷಿಕೋತ್ಸವದ ದಿನದ ಸಂದರ್ಭವಾಗಿತ್ತು. ಶಾಲೆಯ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಹಣವನ್ನು ಸಂಗ್ರಹಿಸಲು ವ್ಯವಸ್ಥಾಪಕ ವಗವು ಬಯಸಿತು. ಆದ್ದರಿಂದ ಋಷ್ಯೇಂದ್ರಮಣಿಯವರ ಅಭಿನಯವನ್ನು ಜಾಹೀರಾತು ಮಾಡಿ ಟಿಕೆಟ್ಗಳನ್ನು ಮಾರಾಟ ಮಾಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆ ನರ್ತಕಿ ಕೆಲವು ಕಾರಣಗಳಿಂದ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು. ಮುಖ್ಯ ಶಿಕ್ಷಕ ಶ್ರೀ ಲಕ್ಷ್ಮೀಪತಿ ಭಯದಿಂದ ಚಡಪಡಿಸಿದರು. ಈ ಕಾರ್ಯಕ್ರಮಕ್ಕೆ ಪ್ರಥಮ ಮಹಿಳೆ ಜಿಲ್ಲಾ ಮಂಡಳಿ ಅಧ್ಯಕ್ಷರನ್ನು ಮತ್ತು ಬ್ರಿಟಿಷ್ ಕಲೆಕ್ಟರ್ ಅವರನ್ನು ಆಹ್ವಾನಿಸಲಾಗಿತ್ತು. ಸತ್ಯ ಭಯಗ್ರಸ್ತ ಮುಖ್ಯೋಪಾಧ್ಯಾಯರ ಬಳಿಗೆ ಹೋಗಿ, “ಪ್ರೇಕ್ಷಕರು ನಿರಾಶೆಗೊಳ್ಳುವ ಬದಲು, ಸಂಜೆ ನರ್ತಕಿಯಾಗಿ ನಾನು ಅದೇ ನೃತ್ಯ ಪ್ರದರ್ಶನವನ್ನು ನೀಡುತ್ತೇನೆ” ಎಂದನು. ಋಷ್ಯೇಂದ್ರಮಣಿ ಸಾಕಷ್ಟು ನೃತ್ಯದ ಭಂಗಿಗಳನ್ನು ಮಾಡುತ್ತಿದ್ದಳು. ಅವಳು ತಲೆಯ ಮೇಲೆ ಬಾಟಲಿಯನ್ನು ಇಟ್ಟುಕೊಂಡು, ಬಾಟಲಿಯ ಬಾಯಿಯ ಮೇಲೆ ಒಂದು ತಟ್ಟೆಯನ್ನು ಇಟ್ಟು ಆ ತಟ್ಟೆಯಲ್ಲಿ ಬೆಳಗಿದ ದೀಪ ಇರುತ್ತಿತ್ತು. ಅವಳು ನಂತರ ನೃತ್ಯ ಮಾಡುತ್ತಿದ್ದಳು ಮತ್ತು ಕೆಳಗೆ ಬಾಗುತ್ತಾ ನೆಲದ ಮೇಲೆ ಇರುವ ಕರವಸ್ತ್ರವನ್ನು ತೆಗೆದುಕೊಳ್ಳುತ್ತಿದ್ದಳು. ಆಗ ಈ ಯಾವುದೂ ಅವಳ ತಲೆಯಿಂದ ಬೀಳುತ್ತಿರಲಿಲ್ಲ.
ನಂತರ ಸತ್ಯನನ್ನು ಗೆಜ್ಜೆ ಮತ್ತು ಸೀರೆ ತೊಡಿಸಿ ನರ್ತಕಿಯಾಗಿ ಅಲಂಕಾರ ಮಾಡಲಾಗಿತ್ತು. ಅವನನ್ನು ಹಳ್ಳಿಯ ಹಳೆಯ ಕಾರಿನಲ್ಲಿ ಒಳಗೆ ಕರೆತರಲಾಯಿತು ಮತ್ತು “ಋಷ್ಯೇಂದ್ರಮಣಿ ಬರುತ್ತಿದ್ದಾರೆ!” ಎಂದು ಘೋಷಣೆ ಮಾಡಲಾಯಿತು. ಎಲ್ಲಾ ಪ್ರೇಕ್ಷಕರು, ಅವರಲ್ಲಿ ಕೆಲವರು ನಿದ್ದೆ ಮಾಡುತ್ತಿದ್ದರು ಅವರೆಲ್ಲರೂ ಎಚ್ಚರಿಗೊಂಡರು.
ಸುಂದರ ಸಂಗೀತದ ಪಕ್ಕವಾದ್ಯಕ್ಕೆ ಸತ್ಯ ವೇದಿಕೆಯ ಮೇಲೆ ತನ್ನ ಗೆಜ್ಜೆಯ ಧ್ವನಿಯಿಂದ ಎಲ್ಲರ ಗಮನ ಸೆಳೆದ. ಒಬ್ಬ ಶಿಕ್ಷಕ ಅವನ ತಲೆಯ ಮೇಲೆ ಬಾಟಲಿಯನ್ನು ಇರಿಸಿದನು. ನಂತರ ಒಂದು ತಟ್ಟೆಯನ್ನು ತಂದು ಬಾಟಲಿಯ ಮೇಲೆ ಇಟ್ಟು ಕೊನೆಗೆ ಬೆಳಗಿದ ದೀಪವನ್ನು ಅದರ ಮೇಲೆ ಇರಿಸಲಾಯಿತು. ಇದೆಲ್ಲವನ್ನೂ ಎಲ್ಲರೆದುರೇ ಮಾಡಬೇಕಾಗಿತ್ತು ಇಲ್ಲದಿದ್ದರೆ ಬಾಟಲಿಯನ್ನು ತಲೆಯ ಮೇಲೆ ಅಂಟಿಸಲಾಗಿದೆ ಮತ್ತು ತಟ್ಟೆಯನ್ನು ಬಾಟಲಿಗೆ ಅಂಟಿಸಲಾಗಿದೆ ಎಂದು ಜನರು ಭಾವಿಸುತ್ತಿದ್ದರು. ಸತ್ಯ ನೃತ್ಯ ಪ್ರದರ್ಶನ ಮಾಡುವ ಮೂಲಕ, ಅಂತಿಮವಾಗಿ ಕರವಸ್ತ್ರವನ್ನು ಬಾಯಿಯಿಂದ ತೆಗೆದುಕೊಳ್ಳುವ ಬದಲು, ತನ್ನ ಕಣ್ಣ ರೆಪ್ಪೆಗಳಿಂದ ನೆಲದಿಂದ ಸೂಜಿಯನ್ನು ಎತ್ತಿಕೊಂಡು ಋಷ್ಯೇಂದ್ರಮಣಿಯನ್ನು ಮೀರಿಸಿದ!. ಜನ ದೊಡ್ಡ ಚಪ್ಪಾಳೆ ತಟ್ಟಿದರು. ಬ್ರಿಟಿಷ್ ಕಲೆಕ್ಟರ್ ವೇದಿಕೆಯಲ್ಲಿ ಬಂದು ಪದಕವನ್ನು ಉಡುಗೊರೆಯಾಗಿ ಋಷ್ಯೇಂದ್ರಮಣಿಗೆ ಕೊಡಲು ಬಯಸಿದ್ದರು. ಸತ್ಯ ಇದನ್ನು ತಪ್ಪಿಸಲು ಪ್ರಯತ್ನಿಸಿದನು. ಅವನು ತನ್ನ ಜಾಣ್ಮೆ ಬಳಸಿ ಅವರಿಗೆ ಹೀಗೆ ಹೇಳಿದನು, “ನಾನು ಮಹಿಳೆಯಾಗಿರುವುದರಿಂದ ಇದು ಸಾಂಪ್ರದಾಯಿಕವಾಗಿ ಸ್ವೀಕಾರಾರ್ಹವಲ್ಲ, ದಯವಿಟ್ಟು ಪದಕವನ್ನು ನನ್ನ ಕೈಯಲ್ಲಿ ಹಾಕಿ” ಎಂದನು.
ಬಹುಮಾನ ವಿತರಣೆಯ ಮರುದಿನ, ಜಿಲ್ಲಾ ಮಂಡಳಿಯ ಅಧ್ಯಕ್ಷರು ಅವರು ಸಂಗ್ರಹಿಸಿದ ನಿಧಿಯ ಮೆಚ್ಚುಗೆಯಾಗಿ ಋಷ್ಯೇಂದ್ರಮಣಿಯವರಿಗೆ ಸೀರೆ ನೀಡಲು ಬಯಸಿದ್ದರು. ಅವರು “ಋಷ್ಯೇಂದ್ರಮಣಿ!” ಎಂದು ಕರೆದರು. ಎಲ್ಲರೂ ಸುತ್ತಲೂ ನೋಡುತ್ತಿದ್ದರು. ಪ್ರೇಕ್ಷಕರಲ್ಲಿ ನಿಕ್ಕರ್ ಧರಿಸಿದ ಚಿಕ್ಕ ಹುಡುಗ ಬಂದನು. ಪೊಲೀಸರು ಆತನನ್ನು ಪಕ್ಕಕ್ಕೆ ತಳ್ಳಿದರು. “ದಾರಿಗೆ ಅಡ್ಡವಾಗಿ ಬರಬೇಡಿ, ಋಷ್ಯೇಂದ್ರಮಣಿ ಬರುತ್ತಿದ್ದಾರೆ” ಎಂದು ಹೇಳಿದರು. ನಂತರ ಮುಖ್ಯೋಪಾಧ್ಯಾಯರು ಸತ್ಯನನ್ನು ವೇದಿಕೆಗೆ ಕರೆತಂದರು ಮತ್ತು “ನಿನ್ನೆ ನರ್ತಿಸಿದ ಋಷ್ಯೇಂದ್ರಮಣಿ ಇವನೇ” ಎಂದು ಘೋಷಿಸಿದರು.
ಮಹಿಳಾ ಅಧ್ಯಕ್ಷೆ ತುಂಬಾ ಸಂತೋಷಪಟ್ಟರು, ಅವರು ಸತ್ಯನನ್ನು ಮೇಲಕ್ಕೆತ್ತಿದರು ಮತ್ತು “ನೀನು ಈ ಶಾಲೆಗೆ ಮಾತ್ರವಲ್ಲದೆ ದೇಶಕ್ಕೂ ದೊಡ್ಡ ಕೀರ್ತಿ ತಂದಿದ್ದೀಯ” ಎಂದು ಹೇಳಿದರು. ಆ ದಿನದಿಂದ ಅವರು ಸತ್ಯನ ಬಗ್ಗೆ ತುಂಬಾ ಗೌರವವನ್ನು ಹೊಂದಿದ್ದರು ಹಾಗೂ ಅವರು ಹೋದಲ್ಲೆಲ್ಲಾ ಈ ಘಟನೆಯನ್ನು ಉಲ್ಲೇಖಿಸುತ್ತಿದ್ದರು..