ಆರತಿ – ಹೆಚ್ಚಿನ ಓದುವಿಕೆ

Print Friendly, PDF & Email

ಆರತಿ – ಹೆಚ್ಚಿನ ಓದುವಿಕೆ

ಆರತಿಯು ಯಾವುದೇ ಭಜನೆ, ಸತ್ಸಂಗ ಅಥವಾ ಸಾಯಿ ಚಟುವಟಿಕೆ ಕೊನೆಯಲ್ಲಿ ನಡೆಸಲಾಗುವ ಒಂದು ಮಹತ್ವದ ಆಚರಣೆ. ಆರತಿ ಆಚರಣೆಯ ಮಹತ್ವದ ಜೊತೆಗೆ ಆರತಿ ಹಾಡಿನ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಮತ್ತು ಸರಿಯಾದ ಉಚ್ಚಾರಣೆಗಳಿಗೆ ಗಮನಕೊಟ್ಟು ನಾವು ಹಾಡುವುದರಿಂದ ಗರಿಷ್ಠ ಲಾಭವನ್ನು ಪಡೆಯಬಹುದು. ಈ ಮೊದಲು, ಸ್ವಾಮಿ ಸ್ವತಃ ಆರತಿಯನ್ನು ತಮ್ಮ ಮಂದಿರದಲ್ಲಿ ತಾವೇ ಮಾಡುತ್ತಿದ್ದರು ಮತ್ತು ಅಲ್ಲಿ ಸೇರಿದ ಎಲ್ಲಾ ಭಕ್ತರಿಗೆ ಆರತಿಯ ಜ್ಯೋತಿಯನ್ನು ಹೊಂದಿರುವ ತಟ್ಟೆಯನ್ನು ತೋರಿಸುತ್ತಿದ್ದರು. ಈ ರೀತಿ ಸ್ವತಃ ಭಗವಂತ ಎಲ್ಲರಿಗೂ ಆರತಿಯ ರೀತಿಯನ್ನು ಕಲಿಸಿದರು.

ರೇಡಿಯೋ ಸಾಯಿ ಭಜನ್ ಟ್ಯುಟೋರಿಯಲ್‌ನ ಆಡಿಯೋಗಳು, ಆರತಿ ಹಾಡುಗಳನ್ನು ವಿವರಿಸಲು ಭಜನ್ ತರಗತಿ ಅವಧಿಗಳ ಆರು ಸಂಚಿಕೆಗಳನ್ನು ಮೀಸಲಿಡಲಾಗಿದೆ – ಅದರ ಭಾಗಗಳನ್ನು ಇಲ್ಲಿ ನೀಡಲಾಗಿದೆ. ಸತ್ಯಸಾಯಿ ಆರತಿ ಹಾಡಿನಲ್ಲಿ ಸ್ಪಷ್ಟತೆ, ಸರಿಯಾದ ಉಚ್ಚಾರಣೆಗಳೊಂದಿಗೆ ಮತ್ತು ಸಂಪೂರ್ಣ ತಿಳುವಳಿಕೆಯೊಂದಿಗೆ ಹಾಡಲು/ಕಲಿಸಲು ನಮಗೆ ಅನುವುಮಾಡಿಕೊಡುವುದು ಟ್ಯುಟೋರಿಯಲ್‌ನ ಉದ್ದೇಶ.

ಆರತಿ ಟ್ಯುಟೋರಿಯಲ್ – ಭಾಗ ೧

ಸತ್ಯಸಾಯಿ ಆರತಿ ಹಾಡಿನ ಮೊದಲ ಕೆಲವು ಸಾಲುಗಳನ್ನು ರಾಗ, ಸ್ವರ, ತಾಳ ಇತ್ಯಾದಿಗಳೊಂದಿಗೆ ವಿವರಿಸಲಾಗಿದೆ ಮತ್ತು ಹಾಡಿನ ಮಹತ್ವವನ್ನು ವಿವರಿಸುವುದು ಈ ಅವಧಿಯ ಮೊದಲ ಹಂತ.

ಆರತಿ ಟ್ಯುಟೋರಿಯಲ್ – ಭಾಗ ೨

ಸತ್ಯಸಾಯಿ ಆರತಿ ಹಾಡಿನ ಈ ವಿಶೇಷ ಸರಣಿಯ ಎರಡನೇ ಹಂತ, ಇಲ್ಲಿ ಆರತಿ ಆಚರಣೆಯ ಆಳವಾದ ಮಹತ್ವವನ್ನು ಮತ್ತು ಆರತಿಯನ್ನು ಏಕೆ ಮತ್ತು ಹೇಗೆ ನಡೆಸಲಾಗುತ್ತದೆ ಎಂಬುದರ ಕುರಿತು ಮೂಲಭೂತ ಸತ್ಯಗಳನ್ನು ಅರ್ಥ ಮಾಡಿಕೊಳ್ಳಲು ಚರ್ಚೆಗಳು ನಡೆಯುತ್ತವೆ.

ಆರತಿ ಟ್ಯುಟೋರಿಯಲ್- ಭಾಗ ೩

ಸತ್ಯಸಾಯಿ ಆರತಿ ಹಾಡಿನ ಈ ವಿಶೇಷ ಸರಣಿಯ ಮೂರನೇ ಹಂತ, ಇಲ್ಲಿ ಆರತಿ ಹಾಡಿನ ಮೊದಲ ಚರಣವಾದ “ಶಶಿವದನ………” ಅನ್ನು ಸುಂದರವಾಗಿ ವಿವರಿಸಲಾಗಿದೆ.

ಆರತಿ ಟ್ಯುಟೋರಿಯಲ್ – ಭಾಗ ೪

ಸತ್ಯಸಾಯಿ ಆರತಿ ಹಾಡಿನ ಈ ವಿಶೇಷ ಸರಣಿಯ ನಾಲ್ಕನೇ ಹಂತ, ಇಲ್ಲಿ ಎರಡನೇ ಚರಣದ ಅಂತರಾಳವನ್ನು “ಮಾತ ಪಿತಾ”………” ಚರ್ಚೆಗಳ ಮೂಲಕ ಅದ್ಭುತವಾಗಿ ಹೊರತರಲಾಗಿದೆ.

ಆರತಿ ಟ್ಯುಟೋರಿಯಲ್ – ಭಾಗ 5

ಸತ್ಯಸಾಯಿ ಆರತಿ ಹಾಡಿನ ಈ ವಿಶೇಷ ಸರಣಿಯ ಐದನೇ ಹಂತ, ಇಲ್ಲಿ ಕೊನೆಯ ಚರಣವಾದ “ಓಂಕಾರ ರೂಪ”……..ಅನ್ನು ವಿಸ್ತಾರವಾಗಿ ವಿವರಿಸಲಾಗಿದೆ.

ಆರತಿ ಟ್ಯುಟೋರಿಯಲ್ – ಭಾಗ 6

ಸತ್ಯಸಾಯಿ ಆರತಿ ಹಾಡಿನ ಈ ವಿಶೇಷ ಸರಣಿಯ ಅಂತಿಮ ಹಂತ, ಇಲ್ಲಿ ಆರತಿ ಹಾಡಿನ ಕೊನೆಯ ಕೆಲವು ಸಾಲುಗಳ ವಿವರವಾದ ವಿವರಣೆಗಳು, “ನಾರಾಯಣ ನಾರಾಯಣ………” ಅನ್ನು ಚರ್ಚಿಸಲಾಗಿದೆ. ಈ ಭಾಗವು “ನಾರಾಯಣ” ಎಂಬ ಪದದ ಅರ್ಥವನ್ನು ಬಹಳ ವಿಶಾಲವಾಗಿ ವಿವರಿಸುತ್ತದೆ.

Audio Source :

http://dl.radiosai.org/RADIO_SAI_BHAJAN_CLASSROOM_348_ARATI_PART_01.mp3

http://dl.radiosai.org/RADIO_SAI_BHAJAN_CLASSROOM_349_ARATI_PART_02.mp3

http://dl.radiosai.org/RADIO_SAI_BHAJAN_CLASSROOM_350_ARATI_PART_03.mp3

http://dl.radiosai.org/RADIO_SAI_BHAJAN_CLASSROOM_351_ARATI_PART_04.mp3

http://dl.radiosai.org/RADIO_SAI_BHAJAN_CLASSROOM_352_ARATI_PART_05.mp3

http://dl.radiosai.org/RADIO_SAI_BHAJAN_CLASSROOM_353_ARATI_PART_06.mp3

Leave a Reply

Your email address will not be published. Required fields are marked *