ಬಾಲ್ಯದ ಕಥೆಗಳು-೧

Print Friendly, PDF & Email
ಬಾಲ್ಯದ ಕಥೆಗಳು-೧

ಇಂದೇ ಅಲ್ಲ, ಅಂದಿನ ದಿನಗಳಲ್ಲಿಯೂ ಸ್ವಾಮಿಯವರು ನಿಸ್ವಾರ್ಥ ಪ್ರೇಮ ಮತ್ತು ಅಹಿಂಸಾ ತತ್ವಗಳ ಬಗ್ಗೆ ಬೋಧಿಸುತ್ತಿದ್ದರು. ಕೊಂಡಮರಾಜುರವರ ಗಂಡು ಮಕ್ಕಳೂ ಮತ್ತು ಒಬ್ಬ ಮಗಳೂ ಅವರ ಕುಟುಂಬ ವರ್ಗದವರೂ ಎಲ್ಲರೂ ಒಟ್ಟಿಗೆ ಇದ್ದರಾದ ಕಾರಣ, ಸತ್ಯನು ಸುಮಾರು ೨೦ ಮಕ್ಕಳೊಡನೆ ಒಡನಾಡಿ ಬೆಳೆದನು. ಅವರೆಲ್ಲರಿಗೂ ಬಟ್ಟೆಗಳನ್ನು ಹೊಲಿಯಲು, ಬುಕ್ಕಪಟ್ಣಂ ಮಾರ್ಕೆಟ್‌ನಿಂದ ಬೇರೆ ಬೇರೆ ರೀತಿಯ ಬಣ್ಣ ಬಣ್ಣದ ಬಟ್ಟೆಗಳೊಡನೆ ಹೊಲಿಗೆಯವನು ಬರುತ್ತಿದ್ದನು. ಅವನು ಬಂದ ಕೂಡಲೇ ಮಕ್ಕಳು ಅವರವರಿಗಿಷ್ಟವಾದ ಬಟ್ಟೆಯನ್ನು ಆರಿಸಿಕೊಳ್ಳಲು ಮುನ್ನುಗುತ್ತಿದ್ದರು. ಆದರೆ ನಮ್ಮ ಪುಟ್ಟ ಸತ್ಯನು ಒಂದು ಪಕ್ಕದಲ್ಲಿ ನಿಲ್ಲುತ್ತಿದ್ದನು. ಅವನಿಗಿಷ್ಟವಾದುದನ್ನು ಆರಿಸಿಕೊಳ್ಳಲು ತಾಯಿಯು ಅವನನ್ನು ಒತ್ತಾಯಿಸಿದರೆ, “ಎಲ್ಲರೂ ಅವರವರಿಗಿಷ್ಟವಾದುದನ್ನು ಆರಿಸಿಕೊಳ್ಳಲಿ. ಉಳಿದದ್ದು ನನಗೆ ಸರಿ ಹೋಗುತ್ತದೆ,” ಎನ್ನುತ್ತಿದ್ದನು.

ಒಂದು ದಿನ ಸತ್ಯನು ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದನು. ಅವನ ಒಳ್ಳೆಯ ಗುಣಗಳ ಬಗ್ಗೆ ಅಸೂಯೆ ಪಡುತ್ತಿದ್ದ ಅವನ ಸಹಪಾಠಿಗಳು ಅವನನ್ನು ನೆಲದ ಮೇಲೆ ಬೀಳಿಸಿದರು. ಅವನ ಷರ್ಟನ್ನು ಹರಿದು ಹಾಕಿದರು. ಕಾಲು ಹಿಡಿದು ಎಳೆದಾಡಿದರು. ಸತ್ಯನು ನಿಶ್ಚಲನಾಗಿ ಶಾಂತನಾಗಿದ್ದನು. ಸಹಪಾಠಿಗಳು ತನ್ನನ್ನು ಆ ರೀತಿ ಒರಟಾಗಿ ನಡೆಸಿಕೊಂಡರೂ ಸಹ, ಅವನು ದೂರು ಹೇಳದೆ ಸುಮ್ಮನಿದ್ದನು. ಅವನ ತಾಯಿ ತಂದೆಯರಿಗೆ ಈ ವಿಷಯವು ಅವನ ಪುಟ್ಟ ಗೆಳೆಯರ ಮೂಲಕ ತಿಳಿದು ಬಂದಿತು.

ಏಕಾದಶಿ ಹಬ್ಬದ ದಿನ, ಚಿತ್ರಾವತೀ ನದಿಯ ಪಾತ್ರದಲ್ಲಿ ಎತ್ತಿನ ಬಂಡಿಗಳ ಓಟವನ್ನು ನಡೆಸುವುದು ಅವುಗಳ ಬಾಲ ತಿರುಚುವುದೋ ಮಾಡುತ್ತಿದ್ದರು. ಸತ್ಯನು ತನ್ನ ಗೆಳೆಯರು ಈ ಓಟವನ್ನು ನೋಡಲು ಬಿಡುತ್ತಿರಲಿಲ್ಲ. ಅವರ ಅಪ್ಪಂದಿರು, ಎತ್ತುಗಳನ್ನು ಹೊಡೆಯದಂತೆ ಒತ್ತಾಯಿಸಲು ಹೇಳುತ್ತಿದ್ದನು. ವರ್ಷಗಳ ಬಳಿಕ, ಪ್ರಶಾಂತಿ ನಿಲಯಂ ಬಿಟ್ಟು ತಮ್ಮ ಕಾರುಗಳ ಬಳಿಗೆ ಹೋಗಲು, ನದೀಪಾತ್ರವನ್ನು ದಾಟಲು ಎತ್ತಿನ ಬಂಡಿ ಕಟ್ಟಿಸುತ್ತಿದ್ದ ಕೆಲವು ಭಕ್ತರನ್ನು ವಾಪಸ್ಸು ಕರೆದು, “ಕೇಳಿ! ನದಿಯ ಮರಳು ಪ್ರದೇಶವನ್ನು ಸೇರಿದ ಕೂಡಲೇ ನೀವೆಲ್ಲರೂ ಕೆಳಗಿಳಿಯಬೇಕು. ನಡೆದು ದಾಟಬೇಕು. ಎತ್ತುಗಳು ಆ ಮರಳಿನ ಮೇಲೆ, ನಿಮ್ಮೆಲರ ತೂಕವನ್ನು ಎಳೆಯಲು ಜೋರು ಮಾಡಬೇಡಿ. ತಿಳಿಯಿತಾ?” ಎಂದು ಹೇಳುತ್ತಿದ್ದರು. ಆಗಿನ ದಿನಗಳಲ್ಲಿ ಹುಂಜಗಳ ಜಗಳವೂ ಹಳ್ಳಿಗಳಲ್ಲಿ ಸಾಮಾನ್ಯವಾಗಿದ್ದಿತು. ಹುಂಜಗಳ ಕಾಲಿಗೆ ಸಣ್ಣ ಚಾಕುವನ್ನು ಕಟ್ಟಿ ಜಗಳ ಆಡುವಂತೆ ಮಾಡುತ್ತಿದ್ದರು. ಆ ಹೋರಾಟದಲ್ಲಿ ಒಂದು ಹುಂಜವು ಕೊನೆಗೆ ಸತ್ತು ಬೀಳುತ್ತಿತ್ತು. ಇನ್ನೊಂದಕ್ಕೆ ಸಾಕಷ್ಟು ಗಾಯವಾಗಿರುತ್ತಿತ್ತು. ಅಂತಹ ಕ್ರೀಡೆಗಳನ್ನೂ ಆಟಗಳನ್ನೂ ಸತ್ಯನು ದೃಢವಾಗಿ ವಿರೋಧಿಸುತ್ತಿದ್ದನು. “ಒಳ್ಳೆಯ ಕೆಲಸ ಮಾಡುವುದಕ್ಕೆ ಸ್ಪರ್ಧೆ ಇರಬೇಕು. ಆದರೆ ಇಂತಹ ಕ್ರೂರವಾದ/ಹಿಂಸಾತ್ಮಕ ನಡೆವಳಿಕೆ ಸಲ್ಲ,” ಎಂದು ಹೇಳುತ್ತಿದ್ದನು.

[Source : Lessons from the Divine Life of Young Sai, Sri Sathya Sai Balvikas Group I, Sri Sathya Sai Education in Human Values Trust, Compiled by: Smt. Roshan Fanibunda]

Leave a Reply

Your email address will not be published. Required fields are marked *

error: