ಹರಿರ್ದಾತಾ ಶ್ಲೋಕ – ಚಟುವಟಿಕೆ
ಆರೋಗ್ಯಕರ ಆಹಾರ ಮತ್ತು ಕಡಿಮೆ ಪೌಷ್ಠಿಕಾಂಶವುಳ್ಳ ಆಹಾರ (ಜಂಕ್ ಫುಡ್) – ಸಂಗೀತ ಕುರ್ಚಿಗಳ ಆಟ
ಆಟವನ್ನು ಪ್ರಾರಂಭಿಸುವ ಮೊದಲು ಮಕ್ಕಳೊಂದಿಗೆ ಆಹಾರ ಮತ್ತು ಆಹಾರ ಪದ್ಧತಿಯ ಬಗ್ಗೆ ಗುರುಗಳು ಚರ್ಚಿಸ ಬೇಕು;
ಗಮನಿಸಬೇಕಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ;
- ನೀವು ತಿನ್ನುವ ಮೊದಲು ನಿಮ್ಮ ಕೈಗಳನ್ನು ತೊಳೆಯದಿದ್ದರೆ, ನಿಮ್ಮ ಕೈಗಳಿಂದ ಕೊಳಕು ನಿಮ್ಮ ಹೊಟ್ಟೆಗೆ ಹೋಗುತ್ತದೆ. ಅದು ನಿಮ್ಮನ್ನು ಅಸ್ವಸ್ಥಗೊಳಿಸುತ್ತದೆ.
- ನಿಮ್ಮ ತಾಯಿ ಒಳ್ಳೆಯ, ಶುಚಿಯಾದ ಪೌಷ್ಟಿಕ ಆಹಾರವನ್ನು ಕೊಡುತ್ತಾರೆ. ಹಾಗಾಗಿ ನೀವು ಆರೋಗ್ಯವಂತರಾಗಿ, ದೃಢ ಕಾಯರಾಗಿ ಇದ್ದೀರಿ.
- ಅವರು ನಿಮಗೆ ಕುಡಿಯಲು ಶುದ್ಧ, ಕುದಿಸಿದ ನೀರನ್ನು ನೀಡುತ್ತಾರೆ.
- ಪರಿಶುದ್ಧತೆ ಮತ್ತು ಅಚ್ಚುಕಟ್ಟುತನ ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ.
- ನಾವು ಎಲ್ಲಾ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನಬೇಕು.
- ನಾವು ಕಡಿಮೆ ಪೌಷ್ಠಿಕಾಂಶವುಳ್ಳ ಆಹಾರ (ಜಂಕ್) ಮತ್ತು ತ್ವರಿತ ಆಹಾರ (ಫಾಸ್ಟ್ ಫುಡ್) ವನ್ನು ತಪ್ಪಿಸಬೇಕು.
- ನಾವು ತಿನ್ನುವ ಮೊದಲು ದೇವರಿಗೆ ಆಹಾರವನ್ನು ಅರ್ಪಿಸಿದಾಗ ಅದು ಪ್ರಸಾದ ಆಗುತ್ತದೆ.
- ಉತ್ತಮ ಮತ್ತು ಆರೋಗ್ಯಕರ ಆಹಾರವನ್ನು ವಿವರಿಸಲು ಹಣ್ಣು ಮತ್ತು ತರಕಾರಿಗಳ ನಕಾಶೆ (ಚಿತ್ರ) ತೋರಿಸಿ.
ಅಗತ್ಯವಿರುವ ವಸ್ತುಗಳು :ಚಿತ್ರ ಪಟ, (ಚಾರ್ಟ್) ಸ್ಕೆಚ್ ಅಥವಾ ಮಾರ್ಕರ್, ಕುರ್ಚಿಗಳು, ಸಂಗೀತ ವ್ಯವಸ್ಥೆ (ಅಥವಾ ಗುರು ಭಜನೆಗಳನ್ನು ಹಾಡಬಹುದು).
ಪೂರ್ವಸಿದ್ಧತಾ ಪ್ರಯತ್ನಗಳು :ಚಾರ್ಟ್ ಅನ್ನು 4 ಸಮಾನ ಪಟ್ಟಿಗಳಾಗಿ ಕತ್ತರಿಸಿ. ಆರೋಗ್ಯಕರ ಮತ್ತು ಕಡಿಮೆ ಪೌಷ್ಠಿಕಾಂಶವುಳ್ಳ ಆಹಾರಗಳ ಹೆಸರನ್ನು ಬರೆಯಿರಿ.
ಉದಾಹರಣೆ:
- ಆರೋಗ್ಯಕರ ಭಕ್ಷ್ಯಗಳು: ತರಕಾರಿ ರಸ (ಸೂಪ್), ಹಾಲು, ಮೊಸರು, ಕತ್ತರಿಸಿದ ಹಣ್ಣುಗಳು, ರಾಜ್ಮಾ ಪುಲಾವ್, ರೊಟ್ಟಿ, ಸಲಾಡ್, ಕಡಲೆ ಗುಗ್ಗುರಿ, ಎಳನೀರು, ಮೊಳಕೆ ಬರಿಸಿದ ಕಾಳುಗಳು, ಇತ್ಯಾದಿ
- ಕಡಿಮೆ ಪೌಷ್ಠಿಕಾಂಶವುಳ್ಳ ಆಹಾರ (ಜಂಕ್ ಫುಡ್ ಭಕ್ಷ್ಯಗಳು): ಬರ್ಗರ್, ನೂಡಲ್ಸ್, ಟಿನ್ಡ್ ಫುಡ್, ತಂಪು ಪಾನೀಯಗಳು, ಇತ್ಯಾದಿ
ಈ ಆಟವು ಸಂಗೀತ ಕುರ್ಚಿಗಳಿಗೆ (ಮ್ಯೂಸಿಕಲ್ ಚೇರ್‌ಗಳಿಗೆ) ಹೋಲುತ್ತದೆ. ಈ ಆಟದಲ್ಲಿ ಕುರ್ಚಿಗಳ ಸಂಖ್ಯೆ ಯಾವಾಗಲೂ ಆಡುವ ಮಕ್ಕಳ ಸಂಖ್ಯೆಗೆ ಸಮಾನವಾಗಿರುತ್ತದೆ. ಪ್ರತಿ ಕುರ್ಚಿಯ ಕೆಳಗೆ, ಆರೋಗ್ಯಕರ ಆಹಾರ ಅಥವಾ ಜಂಕ್ ಫುಡ್‌ನ ಹೆಸರನ್ನು ಮುಖ ಕೆಳಗೆ ಮಾಡಿ ಇಡಲಾಗುತ್ತದೆ. ಸಂಗೀತ ಪ್ರಾರಂಭವಾದಾಗ ಮಕ್ಕಳು ಓಡಲು / ನಡೆಯಲು ಪ್ರಾರಂಭಿಸುತ್ತಾರೆ. ಸಂಗೀತ ನಿಂತಾಗ ಅವರು ಕುರ್ಚಿಗಳ ಮೇಲೆ ಕುಳಿತುಕೊಳ್ಳುತ್ತಾರೆ. ಜಂಕ್ ಫುಡ್ ಮೇಲೆ ಕುಳಿತ ಮಗು ಆಟದಿಂದ ಹೊರಗಿದೆ. ಆಟ ಮುಂದುವರಿಯುತ್ತದೆ
ಸೂಚನೆ: ಚಾರ್ಟ್ ನ ಕತ್ತರಿಸಿದ ಪಟ್ಟಿಗಳ ಸಂಖ್ಯೆ ಮಕ್ಕಳ ಸಂಖ್ಯೆಗೆ ಸಮನಾಗಿರಬೇಕು.